8 : 70
يَٰٓأَيُّهَا ٱلنَّبِيُّ قُل لِّمَن فِيٓ أَيۡدِيكُم مِّنَ ٱلۡأَسۡرَىٰٓ إِن يَعۡلَمِ ٱللَّهُ فِي قُلُوبِكُمۡ خَيۡرٗا يُؤۡتِكُمۡ خَيۡرٗا مِّمَّآ أُخِذَ مِنكُمۡ وَيَغۡفِرۡ لَكُمۡۚ وَٱللَّهُ غَفُورٞ رَّحِيمٞ
ಓ ಪ್ರವಾದಿಯವರೇ! ನಿಮ್ಮ ವಶದಲ್ಲಿರುವ ಯುದ್ಧ ಖೈದಿಗಳೊಡನೆ ಹೇಳಿರಿ: “ನಿಮ್ಮ ಹೃದಯಗಳಲ್ಲಿ ಒಳಿತಿದೆಯೆಂದು ಅಲ್ಲಾಹನಿಗೆ ತಿಳಿದರೆ ನಿಮ್ಮಿಂದ ಪಡೆಯಲಾದ (ಪರಿಹಾರಕ್ಕೆ ಬದಲಿಯಾಗಿ) ಅವನು ನಿಮಗೆ ಅತ್ಯುತ್ತಮವಾದುದನ್ನು ನೀಡುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.”
Explanation & meanings · 1
- ಅಂದರೆ ನಿಮ್ಮ ಹೃದಯದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಒಲವು ಇದ್ದರೆ, ಅಥವಾ ಇಸ್ಲಾಂ ಸ್ವೀಕರಿಸುವ ಇರಾದೆಯಿದ್ದರೆ, ಅಲ್ಲಾಹು ನೀವು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಮಾಡುವನು. ನಂತರ ನಿಮ್ಮಿಂದ ಪಡೆದ ಪರಿಹಾರ ಧನಕ್ಕೆ ಬದಲಿಯಾಗಿ ನಿಮಗೆ ಐಶ್ವರ್ಯವನ್ನು ನೀಡುವನು.