Skip to content
الأنفَال /

ಆಯತ್ 19

8 : 19
الأنفَال ಆಯತ್‌ಗಳು 75
ಸೂರ · الأنفَال
ಕನ್ನಡ · Hamza
8 : 19

إِن تَسۡتَفۡتِحُواْ فَقَدۡ جَآءَكُمُ ٱلۡفَتۡحُۖ وَإِن تَنتَهُواْ فَهُوَ خَيۡرٞ لَّكُمۡۖ وَإِن تَعُودُواْ نَعُدۡ وَلَن تُغۡنِيَ عَنكُمۡ فِئَتُكُمۡ شَيۡـٔٗا وَلَوۡ كَثُرَتۡ وَأَنَّ ٱللَّهَ مَعَ ٱلۡمُؤۡمِنِينَ

ನೀವು (ಸತ್ಯನಿಷೇಧಿಗಳು) ತೀರ್ಪನ್ನು ಬಯಸಿದ್ದೇ ಆದರೆ ಇಗೋ ಆ ತೀರ್ಪು (ಸೋಲು) ಬಂದುಬಿಟ್ಟಿದೆ. ನೀವು (ಯುದ್ಧವನ್ನು) ನಿಲ್ಲಿಸುವುದಾದರೆ ಅದು ನಿಮಗೇ ಒಳ್ಳೆಯದು. ನೀವು ಪುನಃ (ಯುದ್ಧಕ್ಕೆ) ಮರಳುವುದಾದರೆ ನಾವು ಕೂಡ ಮರಳುವೆವು. ನಿಮ್ಮ ಸೈನ್ಯ ಎಷ್ಟು ದೊಡ್ಡದಿದ್ದರೂ ಅದರಿಂದ ನಿಮಗೇನೂ ಪ್ರಯೋಜನವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳ ಜೊತೆಗಿದ್ದಾನೆ.

Explanation & meanings · 1
  1. ಅಬೂಜಹಲ್ ಸೇರಿದಂತೆ ಸತ್ಯನಿಷೇಧಿಗಳು ಮಕ್ಕಾದಿಂದ ಯುದ್ಧಕ್ಕೆ ಹೊರಡುವಾಗ ಕಅಬಾಲಯದ ಚಿಲಕವನ್ನು ಹಿಡಿದು ಪ್ರಾರ್ಥಿಸಿದರು: “ಓ ಅಲ್ಲಾಹ್! ನಮ್ಮಿಬ್ಬರ ಪೈಕಿ ನಿನಗೆ ಅವಿಧೇಯರಾಗಿರುವವರು ಮತ್ತು ಕುಟುಂಬ ಸಂಬಂಧಗಳನ್ನು ಕಡಿಯುವವರು ಯಾರೋ ಅವರನ್ನು ನೀನು ಈ ಯುದ್ಧದಲ್ಲಿ ಸೋಲಿಸು.” ಅವರ ದೃಷ್ಟಿಯಲ್ಲಿ ಮುಸಲ್ಮಾನರು ಅವಿಧೇಯರು ಮತ್ತು ಕುಟುಂಬ ಸಂಬಂಧ ಕಡಿಯುವವರಾಗಿದ್ದರು. ಆದರೆ ಯುದ್ಧದಲ್ಲಿ ಅಲ್ಲಾಹು ಮುಸಲ್ಮಾನರಿಗೆ ಜಯವನ್ನು ನೀಡಿ ಸತ್ಯನಿಷೇಧಿಗಳು ಏನು ಬೇಡಿದ್ದರೋ ಅದನ್ನೇ ದಯಪಾಲಿಸಿದ್ದನು.