Skip to content
الأنفَال /

ಆಯತ್ 72

8 : 72

ಆಯತ್ 72 of الأنفَال (8 : 72). This page carries the verse in the Uthmani script with a translation of its meaning, at a stable URL that can be cited on its own.

الأنفَال ಆಯತ್‌ಗಳು 75
ಸೂರ · الأنفَال
ಕನ್ನಡ · Hamza
8 : 72

إِنَّ ٱلَّذِينَ ءَامَنُواْ وَهَاجَرُواْ وَجَٰهَدُواْ بِأَمۡوَٰلِهِمۡ وَأَنفُسِهِمۡ فِي سَبِيلِ ٱللَّهِ وَٱلَّذِينَ ءَاوَواْ وَّنَصَرُوٓاْ أُوْلَٰٓئِكَ بَعۡضُهُمۡ أَوۡلِيَآءُ بَعۡضٖۚ وَٱلَّذِينَ ءَامَنُواْ وَلَمۡ يُهَاجِرُواْ مَا لَكُم مِّن وَلَٰيَتِهِم مِّن شَيۡءٍ حَتَّىٰ يُهَاجِرُواْۚ وَإِنِ ٱسۡتَنصَرُوكُمۡ فِي ٱلدِّينِ فَعَلَيۡكُمُ ٱلنَّصۡرُ إِلَّا عَلَىٰ قَوۡمِۭ بَيۡنَكُمۡ وَبَيۡنَهُم مِّيثَٰقٞۗ وَٱللَّهُ بِمَا تَعۡمَلُونَ بَصِيرٞ

ನಿಶ್ಚಯವಾಗಿಯೂ ಸತ್ಯವಿಶ್ವಾಸವಿಟ್ಟವರು, ವಲಸೆ (ಹಿಜ್ರ) ಮಾಡಿದವರು, ತಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಮತ್ತು ಆಶ್ರಯ ನೀಡಿ ಸಹಾಯ ಮಾಡಿದವರು ಯಾರೋ—ನಿಶ್ಚಯವಾಗಿಯೂ ಅವರು ಪರಸ್ಪರ ಆಪ್ತಮಿತ್ರರಾಗಿದ್ದಾರೆ. ಆದರೆ ಸತ್ಯವಿಶ್ವಾಸಿಗಳಾಗಿದ್ದೂ ಸಹ ವಲಸೆ (ಹಿಜ್ರ) ಮಾಡದವರು ಯಾರೋ—ಅವರು ವಲಸೆ (ಹಿಜ್ರ) ಮಾಡುವ ತನಕ—ಅವರೊಡನೆ ನಿಮಗೆ ಯಾವುದೇ ಮೈತ್ರಿಯಿಲ್ಲ. ಆದರೆ ಅವರು ಧರ್ಮದ ವಿಷಯದಲ್ಲಿ ನಿಮ್ಮೊಡನೆ ಸಹಾಯ ಕೇಳಿದರೆ ಅವರಿಗೆ ಸಹಾಯ ಮಾಡುವುದು ನಿಮ್ಮ ಕರ್ತವ್ಯವಾಗಿದೆ. ಆದರೆ ಯಾರೊಡನೆ ನೀವು ಕರಾರಿನಲ್ಲಿದ್ದೀರೋ ಅವರಿಗೆ ವಿರುದ್ಧವಾಗಿ ನೀವು ಅವರಿಗೆ ಸಹಾಯ ಮಾಡಬಾರದು. ಅಲ್ಲಾಹು ನೀವು ಮಾಡುವುದನ್ನು ನೋಡುತ್ತಿದ್ದಾನೆ.

Explanation & meanings · 2
  1. ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಎಂದರೆ ಮುಹಾಜಿರ್‌ಗಳು. ಇವರು ಶ್ರೇಷ್ಠತೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆಶ್ರಯ ನೀಡಿ ಸಹಾಯ ಮಾಡಿದವರು ಎಂದರೆ ಅನ್ಸಾರ್‌ಗಳು. ಇವರು ಶ್ರೇಷ್ಠತೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
  2. ಇವರು ಇಸ್ಲಾಂ ಧರ್ಮ ಸ್ವೀಕರಿಸಿದ ನಂತರ ಮದೀನಕ್ಕೆ ವಲಸೆ (ಹಿಜ್ರ) ಮಾಡದೆ ತಮ್ಮದೇ ಊರಲ್ಲಿ ವಾಸವಾಗಿದ್ದ ಮುಸಲ್ಮಾನರು. ಇವರ ರಕ್ಷಣೆ ಮಾಡುವ ಯಾವುದೇ ಹೊಣೆಗಾರಿಕೆ ಮದೀನದ ಮುಸಲ್ಮಾನರಿಗಿಲ್ಲ. ಆದರೆ ಅವರು ಸತ್ಯನಿಷೇಧಿಗಳ ವಿರುದ್ಧ ಸಹಾಯ ಕೇಳಿದರೆ ಸಹಾಯ ಮಾಡಬೇಕು. ಆದರೆ ಆ ಸತ್ಯನಿಷೇಧಿಗಳು ಮುಸಲ್ಮಾನರೊಡನೆ ಕರಾರಿನಲ್ಲಿರುವವರಾಗಿದ್ದರೆ ಅವರ ವಿರುದ್ಧ ಅವರಿಗೆ ಸಹಾಯ ಮಾಡಬಾರದು.