Skip to content
الأنفَال /

ಆಯತ್ 58

8 : 58
الأنفَال ಆಯತ್‌ಗಳು 75
ಸೂರ · الأنفَال
ಕನ್ನಡ · Hamza
8 : 58

وَإِمَّا تَخَافَنَّ مِن قَوۡمٍ خِيَانَةٗ فَٱنۢبِذۡ إِلَيۡهِمۡ عَلَىٰ سَوَآءٍۚ إِنَّ ٱللَّهَ لَا يُحِبُّ ٱلۡخَآئِنِينَ

ನೀವು ಯಾವುದೇ ಜನತೆಯಿಂದ ವಿಶ್ವಾಸದ್ರೋಹವನ್ನು ಭಯಪಡುವುದಾದರೆ, (ಎರಡು ಪಕ್ಷಗಳೂ ಕರಾರಿಲ್ಲದೆ) ಸಮಾನರಾಗಲು ಅವರ ಕರಾರನ್ನು ಅವರಿಗೆ ಎಸೆದು ಬಿಡಿ. ನಿಶ್ಚಯವಾಗಿಯೂ ಅಲ್ಲಾಹು ವಿಶ್ವಾಸದ್ರೋಹ ಮಾಡುವವರನ್ನು ಇಷ್ಟಪಡುವುದಿಲ್ಲ.

Explanation & meanings · 1
  1. ಕರಾರಿನಲ್ಲಿರುವ ಶತ್ರು ಪಕ್ಷದವರು ರಹಸ್ಯವಾಗಿ ಮುಸಲ್ಮಾನರ ಮೇಲೆ ದಾಳಿ ಮಾಡುವ ಸೂಚನೆಯೇನಾದರೂ ಸಿಕ್ಕಿದರೆ ಮುಸಲ್ಮಾನರು, “ನೀವು ಕರಾರನ್ನು ಪಾಲಿಸುವುದಿಲ್ಲವಾದರೆ ನಾವು ಕೂಡ ಪಾಲಿಸುವುದಿಲ್ಲ. ಇನ್ನು ಮುಂದೆ ನಮ್ಮ ಮತ್ತು ನಿಮ್ಮ ನಡುವೆ ಯಾವುದೇ ಕರಾರಿಲ್ಲ” ಎಂದು ಅವರಿಗೆ ಸ್ಪಷ್ಟವಾಗಿ ತಿಳಿಸಬೇಕು.