"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾವುದೇ ಸಮುದಾಯವನ್ನು (ಇಸ್ಲಾಮಿಗೆ) ಆಹ್ವಾನಿಸದೆ ಅವರೊಂದಿಗೆ ಎಂದಿಗೂ ಯುದ್ಧ ಮಾಡುತ್ತಿರಲಿಲ್ಲ."
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾವುದೇ ಸಮುದಾಯವನ್ನು (ಇಸ್ಲಾಮಿಗೆ) ಆಹ್ವಾನಿಸದೆ ಅವರೊಂದಿಗೆ ಎಂದಿಗೂ ಯುದ್ಧ ಮಾಡುತ್ತಿರಲಿಲ್ಲ."
مَا قَاتَلَ رَسُولُ اللهِ صَلَّى اللهُ عَلَيْهِ وَسَلَّمَ قَوْمًا قَطُّ حَتَّى يَدْعُوَهُمْ.
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು ತಿಳಿಸಿರುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾವುದೇ ಸಮುದಾಯವನ್ನು ಮೊದಲು ಇಸ್ಲಾಮಿಗೆ ಆಹ್ವಾನಿಸದೆ ಅವರೊಂದಿಗೆ ಯುದ್ಧ ಆರಂಭಿಸುತ್ತಿರಲಿಲ್ಲ. ಒಂದು ವೇಳೆ ಅವರು ಆ ಕರೆಗೆ ಸ್ಪಂದಿಸದಿದ್ದರೆ, ಆಗ ಅವರೊಂದಿಗೆ ಯುದ್ಧ ನಡೆಸುತ್ತಿದ್ದರು.
ಇಸ್ಲಾಂ ಧರ್ಮದ ಸಂದೇಶ ತಲುಪಿಲ್ಲದಿದ್ದರೆ, ಯುದ್ಧ ನಡೆಸುವ ಮೊದಲು ಅವರನ್ನು ಇಸ್ಲಾಮಿಗೆ ಆಹ್ವಾನಿಸುವುದು ಕಡ್ಡಾಯ (ಷರತ್ತು) ಆಗಿದೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರನ್ನು ಇಸ್ಲಾಮಿಗೆ ಆಹ್ವಾನಿಸುತ್ತಿದ್ದರು. ಅವರು ನಿರಾಕರಿಸಿದರೆ, 'ಜಿಝಿಯಾ' (ತೆರಿಗೆ) ಪಾವತಿಸುವ ಆಯ್ಕೆಯನ್ನು ಮುಂದಿಡುತ್ತಿದ್ದರು. ಅದನ್ನೂ ನಿರಾಕರಿಸಿದರೆ, ಅವರೊಂದಿಗೆ ಯುದ್ಧ ನಡೆಸುತ್ತಿದ್ದರು. ಈ ವಿಷಯವು ಇತರ ಹದೀಸ್‌ಗಳಲ್ಲಿ ಬಂದಿದೆ.
ಜಿಹಾದ್ (ಧರ್ಮಯುದ್ಧ) ನಡೆಸುವುದರ ಹಿಂದಿರುವ ಉದ್ದೇಶವು ಜನರು ಇಸ್ಲಾಂ ಧರ್ಮಕ್ಕೆ ಪ್ರವೇಶಿಸಲಿ ಎಂಬುದಾಗಿದೆ. ಅವರ ಪ್ರಾಣ, ಸಂಪತ್ತು ಅಥವಾ ಭೂಮಿಯ ಮೇಲಿನ ದುರಾಸೆಯಲ್ಲ.
ಮುಸ್ನದ್ ಅಹ್ಮದ್. (4/ 16) (2105).
ಬೈಹಕಿಯವರ 'ಅಸ್ಸುನನುಲ್ ಕುಬ್ರಾ'. (9/ 181) (18232).
ಇನ್ನಷ್ಟು (1)
تحفة الأحوذي (5/ 130).