Skip to content

"ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದೆವು. ಆಗ ನಾವು ಪ್ರೌಢಾವಸ್ಥೆಗೆ ಹತ್ತಿರವಿರುವ (ಬಲಿಷ್ಠ) ಯುವಕರಾಗಿದ್ದೆವು. ನಾವು ಕುರ್‌ಆನ್ ಕಲಿಯುವ ಮೊದಲು 'ಈಮಾನ್' (ವಿಶ್ವಾಸ) ಅನ್ನು ಕಲಿತೆವು. ನಂತರ ನಾವು ಕುರ್‌ಆನ್ ಕಲಿತೆವು, ಅದರಿಂದ ನಮ್ಮ ಈಮಾನ್ ಅನ್ನು ಹೆಚ್ಚಿಸಿಕೊಂಡೆವು."

ಜುಂದುಬ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:

"ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದೆವು. ಆಗ ನಾವು ಪ್ರೌಢಾವಸ್ಥೆಗೆ ಹತ್ತಿರವಿರುವ (ಬಲಿಷ್ಠ) ಯುವಕರಾಗಿದ್ದೆವು. ನಾವು ಕುರ್‌ಆನ್ ಕಲಿಯುವ ಮೊದಲು 'ಈಮಾನ್' (ವಿಶ್ವಾಸ) ಅನ್ನು ಕಲಿತೆವು. ನಂತರ ನಾವು ಕುರ್‌ಆನ್ ಕಲಿತೆವು, ಅದರಿಂದ ನಮ್ಮ ಈಮಾನ್ ಅನ್ನು ಹೆಚ್ಚಿಸಿಕೊಂಡೆವು."

كُنَّا مَعَ النَّبِيِّ صَلَّى اللَّهُ عَلَيْهِ وَسَلَّمَ وَنَحْنُ فِتْيَانٌ حَزَاوِرَةٌ، فَتَعَلَّمْنَا الإِيمَانَ قَبْلَ أَنْ نَتَعَلَّمَ القُرْآنَ، ثُمَّ تَعَلَّمْنَا القُرْآنَ، فَازْدَدْنَا بِهِ إِيمَانًا.

ಇದನ್ನು ಇಬ್ನ್ ಮಾಜ ವರದಿ ಮಾಡಿದ್ದಾರೆ.
ಸಹೀಹ್
ವಿವರಣೆ

ಜುಂದುಬ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದಾಗ, ನಾವು ಪ್ರೌಢಾವಸ್ಥೆಯನ್ನು ಸಮೀಪಿಸುತ್ತಿದ್ದ ಬಲಿಷ್ಠ ಮತ್ತು ಗಟ್ಟಿಮುಟ್ಟಾದ ಯುವಕರಾಗಿದ್ದೆವು. ನಾವು ಕುರ್‌ಆನ್ ಕಲಿಯುವ ಮುನ್ನ ಪ್ರವಾದಿಯವರ ಬಳಿ ಈಮಾನ್ ಅನ್ನು ಕಲಿತೆವು. ತದನಂತರ ನಾವು ಕುರ್‌ಆನ್ ಕಲಿತೆವು; ಅದರಿಂದ ನಾವು ನಮ್ಮ ಈಮಾನ್ ಅನ್ನು ಹೆಚ್ಚಿಸಿದೆವು.

ಹದೀಸಿನ ಪ್ರಯೋಜನಗಳು

ಈಮಾನ್ (ವಿಶ್ವಾಸ) ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ ಎಂಬುದನ್ನು ಇದು ವಿವರಿಸುತ್ತದೆ.

ಯುವ ಪೀಳಿಗೆಯನ್ನು ಬೆಳೆಸುವಾಗ ಆದ್ಯತೆಗಳನ್ನು ಕ್ರಮೀಕರಿಸಬೇಕು, ಮತ್ತು ಅವರ ಹೃದಯದಲ್ಲಿ ಈಮಾನ್ ಅನ್ನು ತುಂಬಲು ಆಸಕ್ತಿ ವಹಿಸಬೇಕು.

ಕುರ್‌ಆನ್ ಈಮಾನ್ ಅನ್ನು ಹೆಚ್ಚಿಸುತ್ತದೆ, ಅದರಿಂದ ಹೃದಯವು ಪ್ರಕಾಶಮಾನವಾಗುತ್ತದೆ ಮತ್ತು ಮನಸ್ಸು ಅರಳುತ್ತದೆ.

ಉಲ್ಲೇಖಗಳು

ಸುನನ್ ಇಬ್ನ್ ಮಾಜ. (1/ 42) (61).

ಇನ್ನಷ್ಟು (2)

مشارق الأنوار الوهاجة ومطالع الأسرار البهاجة في شرح سنن الإمام ابن ماجه (2/ 255).

مرشد ذوي الحجا والحاجة إلى سنن ابن ماجه والقول المكتفى على سنن المصطفى (1/ 227).