"ನಮಾಝ್, ಉಪವಾಸ ಮತ್ತು ದಾನಧರ್ಮಗಳ ಪದವಿಗಿಂತಲೂ ಉತ್ತಮವಾದುದನ್ನು ನಾನು ನಿಮಗೆ ತಿಳಿಸಿಕೊಡಲೇ?"
ಅಬೂ ದರ್ದಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಮಾಝ್, ಉಪವಾಸ ಮತ್ತು ದಾನಧರ್ಮಗಳ ಪದವಿಗಿಂತಲೂ ಉತ್ತಮವಾದುದನ್ನು ನಾನು ನಿಮಗೆ ತಿಳಿಸಿಕೊಡಲೇ?" ಅವರು (ಸಹಾಬಾಗಳು) ಹೇಳಿದರು: "ಖಂಡಿತ (ತಿಳಿಸಿಕೊಡಿ)." ಅವರು (ಪ್ರವಾದಿ) ಹೇಳಿದರು: "ಜನರ ನಡುವೆ ಇರುವ ಸಂಬಂಧವನ್ನು ಸರಿಪಡಿಸುವುದು. ಏಕೆಂದರೆ, ಪರಸ್ಪರ ಸಂಬಂಧಗಳು ಹದಗೆಡುವುದು (ಧರ್ಮವನ್ನು) ಬೋಳಿಸುವಂತಹ (ನಾಶಮಾಡುವ) ಕೃತ್ಯವಾಗಿದೆ."
«أَلاَ أُخْبِرُكُمْ بِأَفْضَلَ مِنْ دَرَجَةِ الصِّيَامِ وَالصَّلاَةِ وَالصَّدَقَةِ؟» قَالُوا: بَلَى، قَالَ: «صَلاَحُ ذَاتِ البَيْنِ، فَإِنَّ فَسَادَ ذَاتِ البَيْنِ هِيَ الحَالِقَةُ».
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಾಗಳಲ್ಲಿ, "ಐಚ್ಛಿಕ (ನಫಿಲ್) ಉಪವಾಸ, ನಮಾಝ್ ಮತ್ತು ದಾನಗಳನ್ನು ಹೆಚ್ಚಾಗಿ ಮಾಡುವುದರಿಂದ ಸಿಗುವ ಪ್ರತಿಫಲಕ್ಕಿಂತಲೂ ಉತ್ತಮವಾದ ಕಾರ್ಯವನ್ನು ನಾನು ನಿಮಗೆ ತಿಳಿಸಿಕೊಡಲೇ?" ಎಂದು ಪ್ರಶ್ನಿಸಿದರು. ಅವರು (ಸಹಾಬಾಗಳು): "ಹೌದು" ಎಂದರು. ಆಗ ಅವರು ಹೇಳಿದರು: "ಜಗಳವಾಡುತ್ತಿರುವವರ ನಡುವೆ ರಾಜಿ ಮಾಡಿಸುವುದು. ಏಕೆಂದರೆ ಜಗಳವು ಜನರ ನಡುವೆ ವಿಭಜನೆ, ಒಂಟಿತನ, ದ್ವೇಷ ಮತ್ತು ಒಬ್ಬರಿಗೊಬ್ಬರು ಬೆನ್ನು ತಿರುಗಿಸುವುದನ್ನು ಉಂಟುಮಾಡುತ್ತದೆ. ಜನರ ಸಂಬಂಧಗಳು ಹದಗೆಡುವುದರಿಂದ ದ್ವೇಷ ಹುಟ್ಟುತ್ತದೆ. ಕ್ಷೌರದ ಕತ್ತಿಯು ಕೂದಲನ್ನು ಬುಡಸಹಿತ ಬೋಳಿಸುವಂತೆ, ಈ ದ್ವೇಷವು ಧರ್ಮ ಮತ್ತು ಪ್ರಾಪಂಚಿಕ ಜೀವನವನ್ನು ಬುಡಸಹಿತ ನಾಶಮಾಡುವ ಗುಣವನ್ನು ಹೊಂದಿದೆ."
ಸಹಾಬಾಗಳಲ್ಲಿ ಕುತೂಹಲ ಮೂಡಿಸಿ, ಅವರು ಉತ್ತರವನ್ನು ತಿಳಿಯಲು ಆಸಕ್ತಿ ವಹಿಸುವಂತೆ ಮಾಡಲು ಪ್ರಶ್ನೆಗಳನ್ನು ಕೇಳುವ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೋಧನಾ ಕ್ರಮವನ್ನು ತಿಳಿಸಲಾಗಿದೆ.
ಅತ್ತೀಬಿ ಹೇಳುತ್ತಾರೆ: "ಪರಸ್ಪರ ಸಂಬಂಧಗಳನ್ನು ಸರಿಪಡಿಸಲು ಪ್ರೇರೇಪಿಸುವುದು ಮತ್ತು ಅದು ಹದಗೆಡುವುದರಿಂದ ದೂರವಿರುವುದು (ಈ ಹದೀಸ್‌ನ ಉದ್ದೇಶ). ಏಕೆಂದರೆ ರಾಜಿ ಮಾಡಿಸುವುದು ಅಲ್ಲಾಹನ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಮತ್ತು ಮುಸ್ಲಿಮರ ನಡುವೆ ಒಡಕು ಮೂಡದಿರಲು ಕಾರಣವಾಗುತ್ತದೆ. ಜನರ ನಡುವಿನ ಸಂಬಂಧ ಹದಗೆಡುವುದು ಧರ್ಮದಲ್ಲಿ ಉಂಟಾಗುವ ಬಿರುಕು (ನ್ಯೂನತೆ) ಆಗಿದೆ. ಯಾರು ಅದನ್ನು ಸರಿಪಡಿಸುತ್ತಾನೋ, ಅವನು ಕೇವಲ ತನ್ನ ಸ್ವಂತಕ್ಕಾಗಿ ಉಪವಾಸ ಮತ್ತು ನಮಾಝಿನಲ್ಲಿ ತೊಡಗಿರುವವನಿಗಿಂತ ಉನ್ನತ ಪದವಿಯನ್ನು ಪಡೆಯುತ್ತಾನೆ."
ಸುನನ್ ಅಬೂ ದಾವೂದ್. (7/ 280) (4919).
ಸುನನು ತ್ತಿರ್ಮಿದಿ. (4/ 244) (2509).
ಇನ್ನಷ್ಟು (2)
تحفة الأحوذي (7/ 179).
شرح سنن أبي داود للعباد (559/ 32).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
2 ಗ್ರಂಥಗಳುಇನ್ನಷ್ಟು (2)
- قاموس الكبائرموسوعة الكبائر - المجموعة الثانية«أَلَا أُخْبِرُكُمْ بِأَفْضَلَ مِنْ دَرَجَةِ الصِّيَامِ وَالصَّلَاةِ وَالصَّدَقَةِ؟» قَالُوا: بَلَى، قَالَ: «صَلَاحُ ذَاتِ البَيْنِ؛ فَإِنَّ فَسَادَ ذَاتِ البَيْنِ هِيَ الحَالِقَةُ» [97].
- نبراس طالب (1)1«أَلَا أُخْبِرُكُمْ بِأَفْضَلَ مِنْ دَرَجَةِ الصِّيَامِ وَالصَّلَاةِ وَالصَّدَقَةِ، قَالُوا: بَلَى، قَالَ: صَلَاحُ ذَاتِ البَيْنِ»