Skip to content
ಸೂರಗಳ ಪಟ್ಟಿ /

المُجَادلة

المُجَادلة is chapter 58 of the Quran and has 22 verses. This page presents it in full in the Uthmani script, with a verse-by-verse translation of its meaning.

22 ಆಯತ್‌ಗಳು ಸೂರ ಸಂಖ್ಯೆ 58
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

قَدۡ سَمِعَ ٱللَّهُ قَوۡلَ ٱلَّتِي تُجَٰدِلُكَ فِي زَوۡجِهَا وَتَشۡتَكِيٓ إِلَى ٱللَّهِ وَٱللَّهُ يَسۡمَعُ تَحَاوُرَكُمَآۚ إِنَّ ٱللَّهَ سَمِيعُۢ بَصِيرٌ

(ಓ ಪ್ರವಾದಿಯವರೇ!) ನಿಮ್ಮೊಡನೆ ತನ್ನ ಗಂಡನ ವಿಷಯದಲ್ಲಿ ತರ್ಕಿಸುವ ಮತ್ತು ತನ್ನ ಅಳಲನ್ನು ಅಲ್ಲಾಹನಲ್ಲಿ ತೋಡಿಕೊಳ್ಳುವ ಒಬ್ಬ ಮಹಿಳೆಯ ಮಾತನ್ನು ಖಂಡಿತವಾಗಿಯೂ ಅಲ್ಲಾಹು ಕೇಳಿದನು. ಅಲ್ಲಾಹು ನಿಮ್ಮಿಬ್ಬರ ಸಂಭಾಷಣೆಯನ್ನು ಕೇಳುತ್ತಿದ್ದನು. ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.

Explanation & meanings · 1
  1. ಖೌಲ ಬಿನ್ತ್ ಮಾಲಿಕ್ ಬಿನ್ ಸಅಲಬ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರನ್ನು ಅವರ ಗಂಡ ಔಸ್ ಬಿನ್ ಸಾಮಿತ್ ಝಿಹಾರ್ ಮಾಡಿದ್ದರು. ಝಿಹಾರ್ ಎಂದರೆ ಪತ್ನಿಯೊಡನೆ, “ನೀನು ನನಗೆ ನನ್ನ ತಾಯಿಯ ಬೆನ್ನಿನಂತೆ” ಎಂದು ಹೇಳಿ ಅವಳೊಡನೆ ಲೈಂಗಿಕ ಸಂಪರ್ಕವನ್ನು ತೊರೆಯುವುದು. ಖೌಲ ಈ ವಿಷಯವನ್ನು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿ ಅವರೊಡನೆ ವಿಧಿ ಕೇಳಿದರು. ಆದರೆ ಈ ವಿಷಯದಲ್ಲಿ ಈ ತನಕ ಯಾವುದೇ ವಿಧಿ ಅವತೀರ್ಣವಾಗಿರಲಿಲ್ಲ.

ٱلَّذِينَ يُظَٰهِرُونَ مِنكُم مِّن نِّسَآئِهِم مَّا هُنَّ أُمَّهَٰتِهِمۡۖ إِنۡ أُمَّهَٰتُهُمۡ إِلَّا ٱلَّٰٓـِٔي وَلَدۡنَهُمۡۚ وَإِنَّهُمۡ لَيَقُولُونَ مُنكَرٗا مِّنَ ٱلۡقَوۡلِ وَزُورٗاۚ وَإِنَّ ٱللَّهَ لَعَفُوٌّ غَفُورٞ

ನಿಮ್ಮ ಪೈಕಿ ತಮ್ಮ ಪತ್ನಿಯರಿಗೆ ಝಿಹಾರ್ ಮಾಡುವವರು ಯಾರೋ—ಅವರು (ಪತ್ನಿಯರು) ಅವರ ತಾಯಂದಿರಾಗುವುದಿಲ್ಲ. ಅವರಿಗೆ ಜನ್ಮ ನೀಡಿದವರೇ ಅವರ ತಾಯಂದಿರು. ನಿಶ್ಚಯವಾಗಿಯೂ ಅವರು ಅಸಂಬದ್ಧ ಮಾತನ್ನು ಮತ್ತು ಸುಳ್ಳನ್ನು ಹೇಳುತ್ತಿದ್ದಾರೆ. ನಿಶ್ಚಯವಾಗಿಯೂ ಅಲ್ಲಾಹು ಮನ್ನಿಸುವವನು ಮತ್ತು ಕ್ಷಮಿಸುವವನಾಗಿದ್ದಾನೆ.

وَٱلَّذِينَ يُظَٰهِرُونَ مِن نِّسَآئِهِمۡ ثُمَّ يَعُودُونَ لِمَا قَالُواْ فَتَحۡرِيرُ رَقَبَةٖ مِّن قَبۡلِ أَن يَتَمَآسَّاۚ ذَٰلِكُمۡ تُوعَظُونَ بِهِۦۚ وَٱللَّهُ بِمَا تَعۡمَلُونَ خَبِيرٞ

ತಮ್ಮ ಪತ್ನಿಯರಿಗೆ ಝಿಹಾರ್ ಮಾಡುವವರು, ನಂತರ ತಾವು ಹೇಳಿದ ಮಾತನ್ನು ಹಿಂದಕ್ಕೆ ಪಡೆಯಲು ಬಯಸುವವರು ಯಾರೋ, ಅವರು ಪರಸ್ಪರ ಕೂಡುವುದಕ್ಕೆ ಮುನ್ನ ಒಬ್ಬ ಗುಲಾಮನನ್ನು ಸ್ವತಂತ್ರಗೊಳಿಸಬೇಕು. ಇದು ನಿಮಗೆ ನೀಡಲಾಗುತ್ತಿರುವ ಉಪದೇಶವಾಗಿದೆ. ಅಲ್ಲಾಹು ನೀವು ಮಾಡುವ ಕರ್ಮಗಳ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.

فَمَن لَّمۡ يَجِدۡ فَصِيَامُ شَهۡرَيۡنِ مُتَتَابِعَيۡنِ مِن قَبۡلِ أَن يَتَمَآسَّاۖ فَمَن لَّمۡ يَسۡتَطِعۡ فَإِطۡعَامُ سِتِّينَ مِسۡكِينٗاۚ ذَٰلِكَ لِتُؤۡمِنُواْ بِٱللَّهِ وَرَسُولِهِۦۚ وَتِلۡكَ حُدُودُ ٱللَّهِۗ وَلِلۡكَٰفِرِينَ عَذَابٌ أَلِيمٌ

ಯಾರಿಗೆ (ಸ್ವತಂತ್ರಗೊಳಿಸಲು ಗುಲಾಮ) ಸಿಗಲಿಲ್ಲವೋ ಅವನು—ಅವರು ಪರಸ್ಪರ ಕೂಡುವುದಕ್ಕೆ ಮುನ್ನ—ಎರಡು ತಿಂಗಳು ನಿರಂತರ ಉಪವಾಸ ಆಚರಿಸಬೇಕು. ಯಾರಿಗೆ ಇದು ಕೂಡ ಸಾಧ್ಯವಿಲ್ಲವೋ ಅವನು ಅರುವತ್ತು ಬಡವರಿಗೆ ಆಹಾರ ನೀಡಬೇಕು. ಇದು ನೀವು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಪಾಲಿಸಬೇಕೆಂಬ ಕಾರಣದಿಂದಾಗಿದೆ. ಇವು ಅಲ್ಲಾಹು ನಿಶ್ಚಯಿಸಿದ ಎಲ್ಲೆಗಳಾಗಿವೆ. ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯಿದೆ.

إِنَّ ٱلَّذِينَ يُحَآدُّونَ ٱللَّهَ وَرَسُولَهُۥ كُبِتُواْ كَمَا كُبِتَ ٱلَّذِينَ مِن قَبۡلِهِمۡۚ وَقَدۡ أَنزَلۡنَآ ءَايَٰتِۭ بَيِّنَٰتٖۚ وَلِلۡكَٰفِرِينَ عَذَابٞ مُّهِينٞ

ನಿಶ್ಚಯವಾಗಿಯೂ ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ಸಾಗುವವರು ಯಾರೋ—ಅವರ ಪೂರ್ವಜರು ಅವಮಾನಕ್ಕೊಳಗಾದಂತೆ ಇವರೂ ಅವಮಾನಕ್ಕೊಳಗಾಗುವರು. ನಾವು ಸ್ಪಷ್ಟ ವಚನಗಳನ್ನು ಅವತೀರ್ಣಗೊಳಿಸಿದ್ದೇವೆ. ಸತ್ಯನಿಷೇಧಿಗಳಿಗೆ ಅವಮಾನಕರ ಶಿಕ್ಷೆಯಿದೆ.