Skip to content
النِّسَاء /

ಆಯತ್ 29

4 : 29
النِّسَاء ಆಯತ್‌ಗಳು 176
ಸೂರ · النِّسَاء
ಕನ್ನಡ · Hamza
4 : 29

يَٰٓأَيُّهَا ٱلَّذِينَ ءَامَنُواْ لَا تَأۡكُلُوٓاْ أَمۡوَٰلَكُم بَيۡنَكُم بِٱلۡبَٰطِلِ إِلَّآ أَن تَكُونَ تِجَٰرَةً عَن تَرَاضٖ مِّنكُمۡۚ وَلَا تَقۡتُلُوٓاْ أَنفُسَكُمۡۚ إِنَّ ٱللَّهَ كَانَ بِكُمۡ رَحِيمٗا

ಓ ಸತ್ಯವಿಶ್ವಾಸಿಗಳೇ! ನೀವು ಒಬ್ಬರು ಇನ್ನೊಬ್ಬರ ಧನವನ್ನು ಅನ್ಯಾಯವಾಗಿ ತಿನ್ನಬೇಡಿ. ಪರಸ್ಪರ ಸಂತೃಪ್ತಿಯಿಂದ ನಡೆಸುವ ವ್ಯವಹಾರದ ಹೊರತು. ನೀವು ನಿಮ್ಮನ್ನೇ ಕೊಲ್ಲಬೇಡಿ. ನಿಶ್ಚಯವಾಗಿಯೂ ಅಲ್ಲಾಹು ನಿಮ್ಮೊಡನೆ ಅತ್ಯಂತ ದಯೆಯುಳ್ಳವನಾಗಿದ್ದಾನೆ.

Explanation & meanings · 1
  1. ಮುಸ್ಲಿಂ ಸಮುದಾಯವು ಒಂದು ದೇಹದಂತೆ. ಅದರ ಒಬ್ಬ ಸದಸ್ಯನನ್ನು ಕೊಲ್ಲುವುದು ಸಮುದಾಯವನ್ನು ಕೊಲೆ ಮಾಡುವುದಕ್ಕೆ ಸಮಾನ. ನೀವೇ ನಿಮ್ಮನ್ನು ಕೊಲ್ಲಬೇಡಿ ಎಂದು ಹೇಳಿರುವುದು ಈ ಅರ್ಥದಲ್ಲಾಗಿರಬಹುದು. ಇಲ್ಲಿ ಹೇಳಿರುವುದು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಎಂದು ಕೆಲವರು ಹೇಳಿದ್ದಾರೆ.