Skip to content
النِّسَاء /

ಆಯತ್ 125

4 : 125

ಆಯತ್ 125 of النِّسَاء (4 : 125). This page carries the verse in the Uthmani script with a translation of its meaning, at a stable URL that can be cited on its own.

النِّسَاء ಆಯತ್‌ಗಳು 176
ಸೂರ · النِّسَاء
ಕನ್ನಡ · Hamza
4 : 125

وَمَنۡ أَحۡسَنُ دِينٗا مِّمَّنۡ أَسۡلَمَ وَجۡهَهُۥ لِلَّهِ وَهُوَ مُحۡسِنٞ وَٱتَّبَعَ مِلَّةَ إِبۡرَٰهِيمَ حَنِيفٗاۗ وَٱتَّخَذَ ٱللَّهُ إِبۡرَٰهِيمَ خَلِيلٗا

ಒಳಿತು ಮಾಡುತ್ತಾ ತನ್ನ ಮುಖವನ್ನು ಅಲ್ಲಾಹನಿಗೆ ಶರಣಾಗಿಸುವವನು ಮತ್ತು ಏಕನಿಷ್ಠರಾದ ಇಬ್ರಾಹೀಮರ ಮಾರ್ಗವನ್ನು ಹಿಂಬಾಲಿಸುವವನಿಗಿಂತ ಧರ್ಮದ ವಿಷಯದಲ್ಲಿ ಉತ್ತಮನಾಗಿರುವವನು ಯಾರು? ಅಲ್ಲಾಹು ಇಬ್ರಾಹೀಮರನ್ನು ಆಪ್ತಮಿತ್ರನಾಗಿ ಸ್ವೀಕರಿಸಿದ್ದಾನೆ.

Explanation & meanings · 1
  1. ಇಸ್ಲಾಂ ಎಂದರೆ ಒಬ್ಬ ವ್ಯಕ್ತಿ ತನ್ನನ್ನು ತಾನೇ ಅಲ್ಲಾಹನ ಇಚ್ಛೆಗೆ ಶರಣಾಗಿಸುವುದು. ಅಂದರೆ ಅಲ್ಲಾಹನ ಆಜ್ಞೆಗಳನ್ನು ಅನುಸರಿಸುತ್ತಾ ಅವನು ವಿರೋಧಿಸಿದ ವಿಷಯಗಳಿಂದ ದೂರವಿದ್ದು ಅವನನ್ನು ಭಯಪಡುತ್ತಾ ಜೀವಿಸುವುದು. ಅಲ್ಲಾಹನ ಆಜ್ಞೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಅಕ್ಷರಶಃ ಪಾಲಿಸಿದ್ದರಿಂದ ಅಲ್ಲಾಹು ಇಬ್ರಾಹೀಮರನ್ನು (ಅವರ ಮೇಲೆ ಶಾಂತಿಯಿರಲಿ) ಆಪ್ತಮಿತ್ರನಾಗಿ ಸ್ವೀಕರಿಸಿದನು. ಅಲ್ಲಾಹು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಕೂಡ ಆಪ್ತಮಿತ್ರನಾಗಿ ಸ್ವೀಕರಿಸಿದ್ದಾನೆಂದು ಹದೀಸ್‌ಗಳಲ್ಲಿ ಉಲ್ಲೇಖವಿದೆ.