الهندوسية في ميزان تعاليمها الأصلية والعقل والفطرة السليمة
ಹಿಂದೂ ಧರ್ಮ — ಅದರ ಮೂಲಭೂತ ಬೋಧನೆಗಳು, ತರ್ಕ ಮತ್ತು ದೋಷರಹಿತ ಸಹಜ ಮನೋಧರ್ಮದ ಬೆಳಕಿನಲ್ಲಿ
ಹಿಂದೂ ಧರ್ಮ — ಅದರ ಮೂಲಭೂತ ಬೋಧನೆಗಳು, ತರ್ಕ ಮತ್ತು ದೋಷರಹಿತ ಸಹಜ ಮನೋಧರ್ಮದ ಬೆಳಕಿನಲ್ಲಿ
ಪ್ರಶ್ನೋತ್ತರಗಳು
ಡಾ. ಹೈಸಂ ತಲ್‌ಅತ್
ಅಲ್ಲಾಹನ ನಾಮದಲ್ಲಿ, ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಅವನ ಕೃಪೆ ಮತ್ತು ಶಾಂತಿ ಪ್ರವಾದಿ ಮುಹಮ್ಮದ್‌ರವರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಂಗಡಿಗರ ಮೇಲೆ ಮತ್ತು ಅವರನ್ನು ನಿಷ್ಠೆಯಿಂದ ಅನುಸರಿಸಿದವರ ಮೇಲೆ ಸದಾ ವರ್ಷಿಸುತ್ತಿರಲಿ. ಮುಂದುವರಿದು ಹೇಳುವುದೇನೆಂದರೆ:
ಹಿಂದೂ ಧರ್ಮವನ್ನು ಒಂದು ಧರ್ಮವೆಂದು ಕರೆಯಬಹುದು; ಆದರೆ ಹೆಚ್ಚು ನಿಖರವಾಗಿ ಹೇಳುವುದಾದರೆ, ಅದೊಂದು ಜೀವನ ಮಾರ್ಗವಾಗಿದೆ.
ಹಿಂದೂ ಮತಾವಲಂಬಿಗಳು ಜಾಗತಿಕ ಜನಸಂಖ್ಯೆಯ 15% ಇದ್ದಾರೆ. ಅಂದರೆ ಸುಮಾರು 120 ಕೋಟಿಗಿಂತಲೂ ಹೆಚ್ಚು.
ಕಾಲಾಂತರದಲ್ಲಿ ಹಿಂದೂ ಧರ್ಮವು ಅನೇಕ ಬದಲಾವಣೆಗಳನ್ನು ಕಂಡಿದೆ.
ವೇದಗಳ ಕಾಲಾನಂತರ, ಹಿಂದೂ ಧರ್ಮದಲ್ಲಿ ತಾರ್ಕಿಕ, ವೈಜ್ಞಾನಿಕ ಮತ್ತು ಸಹಜ ಮನೋಧರ್ಮಕ್ಕೆ ಸಂಬಂಧಿಸಿದ ಅನೇಕ ತೊಡಕುಗಳು ತುಂಬಿಕೊಂಡವು. ಅವುಗಳಲ್ಲಿ ಕೆಲವನ್ನು ನಾವು ಮುಂದೆ ಈ ಪುಸ್ತಕದಲ್ಲಿ ವಿವರಿಸುವೆವು.
ಹೌದು!
ಹಿಂದೂ ಧರ್ಮವು ವೇದಗಳ ಮೂಲಭೂತ ಬೋಧನೆಗಳಿಂದ (ವೇದಗಳು ಹಿಂದೂ ಧರ್ಮದ ಮೂಲಭೂತ ಆಧಾರಗಳಾಗಿವೆ) ತೀವ್ರ ಸ್ವರೂಪದಲ್ಲಿ ದೂರ ಸಾಗಿ, ಮನುಷ್ಯರು, ಋಷಿಮುನಿಗಳು ಮತ್ತು ಭಗವದ್ಗೀತೆಯ (Bhagavad Gita भगवद्गीता) ಬೋಧನೆಗಳನ್ನು
ಹಾಗೂ ನಿಗೂಢ ತಂತ್ರಗಳನ್ನು (Tantras) ಹಿಂಬಾಲಿಸಿತು.
ನಾನು ಈ ಚಿಕ್ಕ ಪುಸ್ತಕದಲ್ಲಿ, ಈಗಿನ ಹಿಂದೂ ಧರ್ಮವನ್ನು ತರ್ಕ, ಆಧುನಿಕ ವಿಜ್ಞಾನ, ವೈಚಾರಿಕತೆ ಮತ್ತು ಹಿಂದೂಗಳ ಕೈಯಲ್ಲಿ ಈಗಲೂ ಅಸ್ತಿತ್ವದಲ್ಲಿರುವ ವೇದಗಳ ಮೂಲಭೂತ ಬೋಧನೆಗಳ ಆಧಾರದಲ್ಲಿ ವಿಮರ್ಶಿಸಲು ಪ್ರಯತ್ನಿಸುತ್ತೇನೆ. ವೇದಗಳಲ್ಲಿರುವ—ಮತ್ತು ಹಿಂದೂಗಳ ಸಹಜ ಮನೋಧರ್ಮದಲ್ಲಿರುವ—ಸತ್ಯದ ಅವಶೇಷಗಳು ಅವರನ್ನು ಸುರಕ್ಷಿತವಾಗಿ ಸತ್ಯಧರ್ಮಕ್ಕೆ ತಲುಪಿಸುವುದೆಂಬ ಖಾತ್ರಿ ನನಗಿದೆ.
ವೇದಗಳು: ಇವು ಹಿಂದೂ ಧರ್ಮದ ಅತ್ಯಂತ ಪವಿತ್ರ ಗ್ರಂಥಗಳು.
ಸಹಜ ಮನೋಧರ್ಮ: ಇದು ಮನುಷ್ಯನ ಅಸ್ತಿತ್ವದ ಗುರಿ ಮತ್ತು ಅವನ ಪರಿಣಾಮಗಳ ಬಗ್ಗೆ ಚಿಂತಿಸಲು ಪ್ರೇರೇಪಿಸುವ ಚಾಲಕ ಶಕ್ತಿಯಾಗಿದ್ದು, ಈ ಶಕ್ತಿಯು ಏಕದೇವನಲ್ಲಿ ನಂಬಿಕೆಯಿಡಲು ಮತ್ತು ಅವನು ರೂಪಿಸಿದ ಕಾನೂನಿನಂತೆ ಅವನನ್ನು ಪೂಜಿಸಲು ನಿರ್ದೇಶಿಸುತ್ತದೆ.
ಸತ್ಯಧರ್ಮ: ಇದು ವೇದಗಳಲ್ಲಿರುವ ಸತ್ಯದ ಅವಶೇಷಗಳನ್ನು ಒಳಗೊಂಡ ಸಂದೇಶವಾಗಿದೆ. ಇದು ಸಹಜ ಮನೋಧರ್ಮದ ಶಬ್ದವಾಗಿದೆ; ಮತ್ತು ಇದು ಸಂಪೂರ್ಣ ಮನುಕುಲಕ್ಕೆ ಅಲ್ಲಾಹು ಅವತೀರ್ಣಗೊಳಿಸಿದ ದೇವವಾಣಿಯಾಗಿದೆ. ಇದು ಉಪನಿಷತ್ತುಗಳ (Upanishad उपनिषद्) ಬೋಧನೆಗಳಲ್ಲಿರುವ ಏಕದೇವತ್ವವನ್ನು ಪ್ರತಿಬಿಂಬಿಸುವ ಸಂದೇಶವಾಗಿದೆ.
ನಾನು ಈ ಕಿರು ಪುಸ್ತಕದಲ್ಲಿ ವೇದಗಳ ಕಾಲದ ಹಿಂದೂ ಧರ್ಮ ಮತ್ತು ಈಗಿನ ಹಿಂದೂ ಧರ್ಮದ ನಡುವೆ ಒಂದು ಸಣ್ಣ ತುಲನೆ ಮಾಡಲು ಪ್ರಯತ್ನಿಸುತ್ತೇನೆ.
ಏಕೆಂದರೆ, ಹಿಂದೂ ಧರ್ಮವು ಬಹಳಷ್ಟು ಬದಲಾಗಿದೆ!
ವೇದಗಳಲ್ಲಿರುವ ಶುದ್ಧ ಮತ್ತು ಕಳಂಕರಹಿತ ಏಕದೇವತ್ವದ ಬೋಧನೆಗಳ ಅವಶೇಷಗಳಿಂದ ಹಿಂದೂ ಧರ್ಮವು ಬಹಳ ದೂರ ಸಾಗಿದೆ. ಈಗಿನ ಹಿಂದೂ ಧರ್ಮದಲ್ಲಿ ಅದ್ವೈತವಾದವಿದೆ. ಅಂದರೆ, ಸೃಷ್ಟಿಕರ್ತನು ಸೃಷ್ಟಿಯಲ್ಲಿ ಲೀನನಾಗಿದ್ದಾನೆ ಎಂಬ ವಾದ. ಈ ವಾದದ ಪ್ರಕಾರ ಸೃಷ್ಟಿ ಸ್ವತಃ ಸೃಷ್ಟಿಕರ್ತನಾಗುತ್ತಾನೆ. ಈ ವಿಚಿತ್ರ ನಂಬಿಕೆಯು ವೇದಗಳ ಸ್ಪಷ್ಟ ಬೋಧನೆಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲದೆ, ಬೌದ್ಧಿಕ ಮೂಲತತ್ವಗಳಿಗೂ ವಿರುದ್ಧವಾಗಿದೆ. ಪರಮಾತ್ಮನು ಎಲ್ಲಾ ವಸ್ತುಗಳಲ್ಲೂ ವಾಸವಾಗಿದ್ದರೆ, ನಂತರ ನೀವು ಹಿಂದೂಗಳು ಅವನನ್ನು ತಲುಪಲು ಅನೇಕ ಆಚರಣೆಗಳು ಮತ್ತು ಅನುಷ್ಠಾನಗಳನ್ನು ಮಾಡುವ ಅಗತ್ಯವೇನು? ಅವನಂತೂ ಮೂಲವಾಗಿ ನಿಮ್ಮೊಳಗೇ ವಾಸವಾಗಿದ್ದಾನಲ್ಲವೇ?
ಇದು ಸ್ಪಷ್ಟ ಬೌದ್ಧಿಕ ವಿರೋಧಾಭಾಸವಲ್ಲವೇ?
ಅಷ್ಟೇ ಅಲ್ಲ, ಈ ಅದ್ವೈತವಾದವು ಸಾಪೇಕ್ಷ ಸತ್ಯಕ್ಕೆ ಆಹ್ವಾನಿಸುತ್ತದೆ. ಅದ್ವೈತವಾದದ ಪ್ರಕಾರ ವಿಗ್ರಹಗಳನ್ನು ಮತ್ತು ಕಲ್ಲುಗಳನ್ನು ಪೂಜಿಸುವ ಧರ್ಮಗಳೆಲ್ಲವೂ ಸತ್ಯದಲ್ಲಿ ಪರಮಾತ್ಮನನ್ನು ಪೂಜಿಸುತ್ತವೆ. ಏಕೆಂದರೆ, ಈ ನಂಬಿಕೆಯ ಪ್ರಕಾರ ವಿಗ್ರಹ ಮತ್ತು ಕಲ್ಲುಗಳೆಲ್ಲವೂ ಪರಮಾತ್ಮ. ಪರಮಾತ್ಮ ಎಲ್ಲಾ ವಸ್ತುಗಳಲ್ಲೂ ವಾಸವಾಗಿದ್ದಾನೆ. ಎಲ್ಲಾ ವಸ್ತುಗಳೂ ಅವನೇ ಆಗಿದ್ದಾನೆ.
ನಾನು ಈ ಪುಸ್ತಕದಲ್ಲಿ ಮುಂದೆ ವಿವರಿಸುವಂತೆ, ಈ ಸಾಪೇಕ್ಷ ಸತ್ಯವು ಅರ್ಥ ಮತ್ತು ಮೌಲ್ಯವನ್ನು ಸರ್ವನಾಶ ಮಾಡುತ್ತದೆ.
ಸೃಷ್ಟಿಗಳಿಂದ ಸಂಪೂರ್ಣ ಬೇರೆಯಾಗಿರುವ ಒಬ್ಬ ಪರಮಾತ್ಮನಲ್ಲಿ ನಂಬಿಕೆಯಿಡುವಂತೆ ವೇದಗಳು ಸ್ಪಷ್ಟವಾಗಿ ಆಹ್ವಾನಿಸುತ್ತವೆ ಎಂಬುದನ್ನು ಇದರ ಜೊತೆಗೆ ಸೇರಿಸಿ ಓದಿರಿ. ಇಲ್ಲಿ ಸೃಷ್ಟಿಗಳು ಎಂದರೆ ಅಲ್ಲಾಹನ ಸೃಷ್ಟಿಗಳು. ಅಲ್ಲಾಹನ ಸೃಷ್ಟಿಗಳಿಗೆ ಅವನನ್ನು ಒಳಗೊಳ್ಳುವ ಶಕ್ತಿಯಿಲ್ಲ.
ವೇದ—ನಿರ್ದಿಷ್ಟವಾಗಿ ಋಗ್ವೇದ ऋग्वेद—ಹೇಳುತ್ತದೆ: “ಓ ದೇವಾ, ಸೂರ್ಯ ಮತ್ತು ಪ್ರಪಂಚ ಎರಡಕ್ಕೂ ನಿನ್ನನ್ನು ಆವರಿಸಿಕೊಳ್ಳುವ ಅಥವಾ ನಿನ್ನನ್ನು ಒಳಗೊಳ್ಳುವ ಶಕ್ತಿಯಿಲ್ಲ."[1]
http://[1]stholistic.com/prayer/hindu/hol_hindu-samsara-and-karma.htm[22] (ಈ ಜಾಲತಾಣವು ಬೌದ್ಧ ಧರ್ಮ ಮತ್ತು ಅದರ ಆಚರಣೆಗಳ ಕುರಿತು ಮಾಹಿತಿ ನೀಡುವ ಬೌದ್ಧ ಪತ್ರಿಕೆಯ ಸಹಸಂಸ್ಥೆಯಾಗಿದೆ).
ಇದು ಅದ್ವೈತವಾದ ತಪ್ಪು ಎಂಬುದಕ್ಕೆ ವೇದಗಳಲ್ಲಿರುವ ಸ್ಪಷ್ಟ ಪುರಾವೆಯಾಗಿದೆ. ಅಲ್ಲಾಹು ಅವನ ಸೃಷ್ಟಿಗಳಿಂದ ಸಂಪೂರ್ಣ ಪ್ರತ್ಯೇಕವಾಗಿದ್ದಾನೆ.
ಈಗಿನ ಹಿಂದೂ ಧರ್ಮದಲ್ಲಿ ಪುನರ್ಜನ್ಮ ನಂಬಿಕೆಯಿದೆ. ಪುನರ್ಜನ್ಮದ ಪ್ರಕಾರ ಮನುಷ್ಯರ ಸಾವಿನ ನಂತರ ಅವರ ಆತ್ಮಗಳು ಹೊಸ ಜೀವಿಯಲ್ಲಿ ಹೊಸದಾಗಿ ಹುಟ್ಟಲು ಇತರ ಜೀವಿಗಳಿಗೆ ಸಾಗುತ್ತವೆ. ಆದ್ದರಿಂದ, ಪ್ರತಿಯೊಬ್ಬ ವ್ಯಕ್ತಿಗೂ, ಅವನಿಗಿಂತ ಮುಂಚಿನ ಒಂದು ಜೀವಿಯಲ್ಲಿ ಒಂದು ಪೂರ್ವ ಜನ್ಮವಿತ್ತು. ಅದಕ್ಕೆ ಅದಕ್ಕಿಂತ ಮುಂಚಿನ ಜೀವಿಯಲ್ಲಿ ಒಂದು ಪೂರ್ವ ಜನ್ಮವಿತ್ತು...ಹೀಗೆ. ಈ ನಂಬಿಕೆಯು ಅನೇಕ ತೊಡಕುಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ಪುನರ್ಜನ್ಮವು ಸತ್ಯವಾಗಿದ್ದರೆ, ನವಜಾತ ಶಿಶುಗಳು ವಯಸ್ಕರ ಅದೇ ಬೌದ್ಧಿಕ ಸಾಮರ್ಥ್ಯಗಳೊಂದಿಗೆ ಏಕೆ ಹುಟ್ಟುವುದಿಲ್ಲ?[2]
[2] Cogan, Robert. (1998), Critical Thinking: Step by Step, University Press of America, pp. 202–203.
ಅಷ್ಟೇ ಅಲ್ಲ, ಪುನರ್ಜನ್ಮ ನಂಬಿಕೆಯು ನಿರಂತರ ಮರುಹುಟ್ಟುಗಳ ಸರಣಿಯ ಮೇಲೆ ನಿಂತಿದೆ. ಹಾಗಾದರೆ, ಸಮಕಾಲೀನ ವಿಜ್ಞಾನವು ಬದುಕಿಗೆ ಆರಂಭವಿದೆ; ಮತ್ತು ಭೂಮಿಯು ಸಹ ಒಂದು ಆರಂಭವನ್ನು ಹೊಂದಿದ್ದು ಅದು ಅನಾದಿಯಲ್ಲ ಎಂದು ಸಾಬೀತುಪಡಿಸಿರುವಾಗ ಈ ನಂಬಿಕೆ ಹೇಗೆ ಸರಿಯಾಗುತ್ತದೆ?
ಇನ್ನು, ಪುನರ್ಜನ್ಮವು ಸತ್ಯವಾಗಿದ್ದರೆ, ಜೀವಿಗಳ ಸಂಖ್ಯೆ ಸ್ಥಿರವಾಗಿರಬೇಕು. ಏಕೆಂದರೆ, ಅವು ಪರಸ್ಪರ ಒಂದು ಇನ್ನೊಂದರಲ್ಲಿ ಜನ್ಮ ತಾಳುತ್ತವೆ. ಆದರೆ ಇಂದು ಯಾವುದೇ ಮನುಷ್ಯನೂ ಈ ರೀತಿ ಹೇಳುವುದಿಲ್ಲ!
ಇದಕ್ಕಿಂತಲೂ ಪ್ರಮುಖವಾದುದು ಏನೆಂದರೆ, ವೇದಗಳು ಪುನರ್ಜನ್ಮವನ್ನು ಪ್ರತಿಪಾದಿಸುವುದಿಲ್ಲ. ಎಲ್ಲಿಯವರೆಗೆಂದರೆ, ಹಿಂದೂ ಧರ್ಮದ ಪ್ರಮುಖ ವಿದ್ವಾಂಸ ಶ್ರೀ ಸತ್ಯಕಂ ವಿದ್ಯಾಲಂಕರ್ ಹೇಳುತ್ತಾರೆ: “ಪುನರ್ಜನ್ಮ ಸಿದ್ಧಾಂತವು ವೇದಗಳಲ್ಲಿಲ್ಲ. ಇದೆಯೆಂದು ಹೇಳುವವರಿಗೆ ನಾನು ಸವಾಲು ಹಾಕುತ್ತೇನೆ.” [3]
[3] ಆವಾಗಮನ್ ಪುಟ 104; “ದಅವತುಲ್ ಹಿಂದೂಸಿ ಇಲಲ್ ಇಸ್ಲಾಂ” (ಪು. 99) ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಹಿಂದೂಗಳು ಹಿಂದಿನ ಕಾಲದಿಂದಲೂ ಮಾಡುತ್ತಾ ಬರುತ್ತಿರುವ 'ಶ್ರಾದ್ಧ’ (Śrāddha श्राद्ध) ಎಂಬ ಧಾರ್ಮಿಕ ಆಚರಣೆಯು ವಿದ್ಯಾಲಂಕರ್‌ರ ಅಭಿಪ್ರಾಯ ಸರಿ ಎಂಬುದಕ್ಕೆ ಅತ್ಯುತ್ತಮ ಪುರಾವೆಯಾಗಿದೆ. ಸತ್ತವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುವುದು ಈ ಆಚರಣೆಯ ಉದ್ದೇಶವಾಗಿದೆ.
ಆದರೆ, ಅವರು ಸತ್ತವರ ಆತ್ಮಗಳನ್ನು ಶಾಂತಗೊಳಿಸುತ್ತಿರುವಾಗ, ಆತ್ಮಗಳು ಮರುಹುಟ್ಟು ಪಡೆಯುವುದು ಹೇಗೆ?!
‘ಕರ್ಮ’ ಎಂಬುದು ಈಗಿನ ಹಿಂದೂ ಧರ್ಮದ ಇನ್ನೊಂದು ನಂಬಿಕೆ. ಕರ್ಮ ಸಿದ್ಧಾಂತದ ಪ್ರಕಾರ, ಮನುಷ್ಯರು ತಮ್ಮ ಹಿಂದಿನ ಜನ್ಮದ ಕರ್ಮಗಳ ಪರಿಣಾಮವಾಗಿ ಹುಟ್ಟುತ್ತಾರೆ. ಹಿಂದಿನ ಜನ್ಮದಲ್ಲಿ ದುಷ್ಕರ್ಮಿಯಾಗಿದ್ದವನು ಹೊಸ ಜನ್ಮದಲ್ಲಿ ಕೀಳು ಜಾತಿಯಲ್ಲ್ಲಿ ಅಥವಾ ಹೆಚ್ಚು ಯಾತನೆಗಳನ್ನು ಅನುಭವಿಸುವ ಸ್ಥಿತಿಯಲ್ಲಿ ಹುಟ್ಟುತ್ತಾನೆ.
ಇದರ ಆಧಾರದಲ್ಲಿ, ಹಿಂದೂಗಳು ಕಷ್ಟ ಅನುಭವಿಸುವ ವ್ಯಕ್ತಿಯನ್ನು ಕಂಡರೆ ಅದು ಅವನು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳ ಫಲ ಎಂದು ಪರಿಗಣಿಸುತ್ತಾರೆ. ಈ ದೋಷಪೂರಿತ ಮತ್ತು ಗೊಂದಲಪೂರ್ಣ ಕಲ್ಪನೆಯು ಮನುಷ್ಯ ಜೀವನವನ್ನು ಸಂಪೂರ್ಣವಾಗಿ ಹದೆಗೆಡಿಸುತ್ತದೆ. ಇದು ಮಾನವೀಯತೆಗೆ ಯಾವುದೇ ಒಳಿತನ್ನು ಮಾಡುವುದಿಲ್ಲ; ಬದಲಿಗೆ, ಮನುಷ್ಯರು ಅನುಭವಿಸುವ ಕಷ್ಟಗಳೆಲ್ಲವೂ ಅವರು ತಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಅಪರಾಧಗಳಿಗೆ ದೊರಕಿದ ನೈಸರ್ಗಿಕ ಶಿಕ್ಷೆ ಎಂದು ದೃಢೀಕರಿಸುತ್ತದೆ. ಇದು ಹಿಂದುಳಿಯುವಿಕೆ, ಶೋಷಣೆ ಮತ್ತು ವರ್ಣ ವ್ಯವಸ್ಥೆಯೊಂದಿಗೆ ರಾಜಿ ಮಾಡುವ ಒಂದು ವಿಧವಾಗಿದೆ..
ಆದರೆ ದೊಡ್ಡ ತೊಡಕೇನೆಂದರೆ: ಈ ‘ಕರ್ಮ’ ಸಿದ್ಧಾಂತವು ವೇದಗಳಲ್ಲಿ ಎಲ್ಲಿದೆ?
ವೇದಗಳು ಸ್ಪಷ್ಟವಾಗಿ ಹೇಳುವಂತೆ ಸ್ವರ್ಗ ಮತ್ತು ನರಕಗಳಿವೆ. ಮನುಷ್ಯರ ಕರ್ಮಗಳಿಗೆ ಅನುಗುಣವಾಗಿ ಪರಮಾತ್ಮನು ಅವುಗಳನ್ನು ಉಡುಗೊರೆಯಾಗಿ ನೀಡುತ್ತಾನೆ. ಇದಲ್ಲದೆ, ಬೇರೊಂದು ಜೀವಿಯಲ್ಲಿ ಮರುಹುಟ್ಟು ಎಂಬುದು ವೇದದಲ್ಲಿಲ್ಲ.
ಋಗ್ವೇದ ಹೇಳುತ್ತದೆ: “ಎಲ್ಲಾ ರೀತಿಯ ಆನಂದ ಮತ್ತು ಸಂತೋಷಗಳನ್ನು ನಿಕ್ಷೇಪಿಸಲಾಗುವ ಆ ಸ್ಥಳದಲ್ಲಿ ನನ್ನನ್ನು ಚಿರಂಜೀವಿಯನ್ನಾಗಿ ಮಾಡು. ಅಂದರೆ ಮನಸ್ಸು ಬಯಸುವುದೆಲ್ಲವನ್ನೂ ನೀನು ದಯಪಾಲಿಸುವ ಸ್ಥಳದಲ್ಲಿ.” [4]
[4] ಋಗ್ವೇದ ಮಂಡಲ: 9, ಸೂಕ್ತ: 113, ಮಂತ್ರ: 9-11.
ಇದಲ್ಲದೆ, ಈಗಿನ ಹಿಂದೂ ಧರ್ಮದ ಮೂಲಭೂತ ಸಿದ್ಧಾಂತಗಳಲ್ಲೊಂದು ಏನೆಂದರೆ: ನಿರಂತರ ಮರುಹುಟ್ಟಿನಿಂದ ಮತ್ತು ಪುನರ್ಜನ್ಮದಿಂದ ಮುಕ್ತಿ ಪಡೆಯಲು; ಹಾಗೂ 'ಮೋಕ್ಷ' (Moksha मोक्ष) ಎಂದು ಕರೆಯಲಾಗುವ ಹಂತಕ್ಕೆ ತಲುಪಲು ಪರಿಶ್ರಮಿಸುವುದು. ಈ ಹಂತದಲ್ಲಿ ಮನುಷ್ಯನು ಪರಮಾತ್ಮನ ಸಾರದೊಂದಿಗೆ ವಿಲೀನನಾಗುತ್ತಾನೆ. ಆದರೆ ಈ ಕಲ್ಪನೆಯು, ಅಸ್ತಿತ್ವದ ಬಗ್ಗೆ ಸಂಪೂರ್ಣ ನಿರಾಶೆಯ ದೃಷ್ಟಿಕೋನದ ಮೇಲೆ ನೆಲೆನಿಂತಿದ್ದು, ಅಸ್ತಿತ್ವದ ಉದ್ದೇಶವು ಅಸ್ತಿತ್ವದಿಂದ ಮುಕ್ತಿ ಪಡೆಯಲು ಪ್ರಯತ್ನಿಸುವುದಾಗಿ ಮಾರ್ಪಡುತ್ತದೆ!
ಈ ಸಿದ್ಧಾಂತವು ಸಮಾಜಕ್ಕೆ ಕಂಟಕವಾಗಿದೆ. ಇದು ಮನುಷ್ಯನಿಗೆ ಭಯವೆಂಬ ತಡೆಯಿಲ್ಲದಂತೆ ಮಾಡುತ್ತದೆ. ಮನುಷ್ಯನು ಎಷ್ಟೇ ನೀಚಕೃತ್ಯಗಳನ್ನು ಮಾಡಿದರೂ, ಅವನು ಮರುಹುಟ್ಟು ಪಡೆಯುವುದರಿಂದ, ತನ್ನ ಮುಂದಿನ ಯಾವುದಾದರೂ ಒಂದು ಜನ್ಮದಲ್ಲಿ ಅವನು ಶಾಶ್ವತವಾಗಿ ಮುಕ್ತಿ ಪಡೆಯುತ್ತಾನೆ.
ಇದು ಅಕ್ರಮವೆಸಗಿದವರಿಗೆ ಮತ್ತು ಪಾಪಿಗಳಿಗೆ ಒಂದು ವಿಶೇಷ ಸ್ಥಳದಲ್ಲಿ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳುವ ವೇದಗಳ ಬೋಧನೆಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಋಗ್ವೇದ ಹೇಳುತ್ತದೆ: “ಪಾಪಿಗಳಿಗೆ ಅತ್ಯಂತ ಆಳವಾದ ಪಾತಾಳದಲ್ಲಿರುವ ಸ್ಥಳವಿದೆ.”[5]
[5] ಋಗ್ವೇದ ಮಂಡಲ: 4, ಸೂಕ್ತ: 5, ಮಂತ್ರ: 5.
ಈ ಸ್ಥಳಕ್ಕೂ ಪುನರ್ಜನ್ಮಕ್ಕೂ ಏನು ಸಂಬಂಧ?
ಈಗಿನ ಹಿಂದೂ ಧರ್ಮದ ಪ್ರಮುಖ ವೈಜ್ಞಾನಿಕ ತೊಡಕುಗಳಲ್ಲಿ ಒಂದು ಏನೆಂದರೆ: ಪ್ರಪಂಚದ ಉಗಮದ ಬಗ್ಗೆ ಅದಕ್ಕಿರುವ ದೃಷ್ಟಿಕೋನ. ಪ್ರಪಂಚವು ಕರಗಿ ನಂತರ ಪುನಃ ರಚನೆಯಾಗುತ್ತದೆ ಮತ್ತು ಈ ಚಕ್ರವು ಅಂತ್ಯವಿಲ್ಲದೆ ನಡೆಯುತ್ತದೆಯೆಂದು ಈಗಿನ ಹಿಂದೂ ಧರ್ಮವು ಭಾವಿಸುತ್ತದೆ. ಇದು ಆಧುನಿಕ ವಿಜ್ಞಾನಕ್ಕೆ ವಿರುದ್ಧವಾದ ವಿಚಿತ್ರ ವೈಜ್ಞಾನಿಕ ಪ್ರಮಾದವಾಗಿದೆ.
ಈ ಪ್ರಪಂಚಕ್ಕೆ ನಿರುಪಾಧಿಕ ಆರಂಭವಿದೆ ಮತ್ತು ಈ ಪ್ರಪಂಚಕ್ಕೆ ಮೊದಲು ಬೇರೆ ಪ್ರಪಂಚಗಳಿರಲಿಲ್ಲ ಎಂದು ಆಧುನಿಕ ವಿಜ್ಞಾನವು ದೃಢೀಕರಿಸಿದೆಯೆಂದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ.
ಆದ್ದರಿಂದ, ವೈಜ್ಞಾನಿಕವಾಗಿ ಪ್ರಪಂಚವು ಸೃಷ್ಟಿಸಲ್ಪಟ್ಟಿದೆ; ಯಾವುದೇ ಪೂರ್ವ ಮಾದರಿಯಿಲ್ಲದೆ ಅಸ್ತಿತ್ವಕ್ಕೆ ಬಂದಿದೆ.
ಇದು ವೇದಗಳಲ್ಲಿರುವ ನಂಬಿಕೆಗೆ ಹೊಂದಾಣಿಕೆಯಾಗುತ್ತದೆ. ಏಕೆಂದರೆ, ವೇದದ ಪ್ರಕಾರ ಹಠಾತ್ತನೆ ಉಂಟಾದ ಇಹಲೋಕವಿದೆ ಮತ್ತು ಪರಲೋಕವೂ ಇದೆ. ಆದರೆ, ಹಿಂದೂ ಧರ್ಮದಲ್ಲಿ ಇತ್ತೀಚೆಗೆ ಹುಟ್ಟಿಕೊಂಡ ಪುರಾಣಗಳಂತಹ ತತ್ವಶಾಸ್ತ್ರಗಳಲ್ಲಿ ಪ್ರಪಂಚವು ಪುನರಾವರ್ತನೆಯಾಗುತ್ತದೆ ಮತ್ತು ಶಾಶ್ವತವಾಗಿದೆ ಎಂಬ ಅಭಿಪ್ರಾಯವನ್ನು ಸ್ಪಷ್ಟವಾಗಿ ಕಾಣಬಹುದು.
ಇಂದಿನ ಹಿಂದೂ ಧರ್ಮವು ವೇದಗಳಿಗೆ ವಿರುದ್ಧವಾಗಿದೆ; ಆಧುನಿಕ ವಿಜ್ಞಾನಕ್ಕೆ ವಿರುದ್ಧವಾಗಿದೆ; ಮತ್ತು ವೇದಗಳು ಹೇಳುವ ಸತ್ಯವನ್ನು ಎತ್ತಿಹಿಡಿಯುವ ಇಸ್ಲಾಂ ಧರ್ಮಕ್ಕೂ ವಿರುದ್ಧವಾಗಿದೆ.
ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ದೇವವಾಣಿಯಾಗಿ ಅವತೀರ್ಣಗೊಳಿಸಿದ ಮುಸಲ್ಮಾನರ ನಂಬಿಕೆಯ ಪ್ರಕಾರ, ಪ್ರಪಂಚವು ಪೂರ್ವ ಮಾದರಿಯಿಲ್ಲದೆ ಅಸ್ತಿತ್ವಕ್ಕೆ ಬಂದಿದೆ. ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ: “ಯಾವುದೇ ಪೂರ್ವ ಮಾದರಿಯಿಲ್ಲದೆ ಆಕಾಶಗಳನ್ನು ಮತ್ತು ಭೂಮಿಯನ್ನು (ಸಂಪೂರ್ಣ ವಿಶ್ವವನ್ನು) ಸೃಷ್ಟಿಸಿದವನು. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ, ಅದರೊಡನೆ ಉಂಟಾಗು ಎಂದು ಹೇಳುವನು; ಆಗ ಅದು ಉಂಟಾಗುವುದು.” [ಸೂರ ಬಕರ: 117]
ಆದ್ದರಿಂದ, ಇಸ್ಲಾಂ ಧರ್ಮದ ಪರಿಕಲ್ಪನೆಯ ಪ್ರಕಾರ, ಪ್ರಪಂಚವು ಪೂರ್ವ ಮಾದರಿಯಿಲ್ಲದೆ ಸೃಷ್ಟಿಸಲ್ಪಟ್ಟಿದೆ; ಅಂದರೆ, ಅದು ಪೂರ್ವ ಮಾದರಿಯಿಲ್ಲದೆ ಅಸ್ತಿತ್ವಕ್ಕೆ ಬಂದಿದೆ.
ಇದು ವಿಜ್ಞಾನವು ಅಂತಿಮವಾಗಿ ತಲುಪಿದ ಫಲಿತಾಂಶವಾಗಿದೆ. 1400 ವರ್ಷಗಳ ಹಿಂದೆ ಕುರಿ ಮೇಯಿಸುವ ಕೆಲಸ ಮಾಡುತ್ತಿದ್ದ, ಅಲ್ಲಾಹನ ಸಂದೇಶವಾಹಕರು ಮತ್ತು ಇಸ್ಲಾಂ ಧರ್ಮದ ಪ್ರವಾದಿಯಾದ ಅಬ್ದುಲ್ಲಾರ ಮಗ ಮುಹಮ್ಮದ್ ಎಂಬ ಹೆಸರಿನ ವ್ಯಕ್ತಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನೇ ಹೇಳಿದ್ದರು.
ನಾನು ಈ ಪುಸ್ತಕದಲ್ಲಿ ಹಿಂದೂ ಧರ್ಮವು ಎದುರಿಸುತ್ತಿರುವ ಅನೇಕ ತೊಡಕುಗಳ ಬಗ್ಗೆ ಚರ್ಚಿಸುತ್ತೇನೆ, ಮತ್ತು ಅದೇ ಸಮಯ, ಪ್ರಪಂಚ, ಜೀವನ, ಪ್ರತಿಫಲ, ಶಿಕ್ಷೆ ಹಾಗೂ ಅಸ್ತಿತ್ವದ ಗುರಿಯ ಬಗ್ಗೆ ವೇದಗಳಲ್ಲಿರುವ ಸತ್ಯದ ಅವಶೇಷಗಳು ಮತ್ತು ಸಹಜ ಮನೋಧರ್ಮದೊಂದಿಗೆ ಸಂಪೂರ್ಣ ಹೊಂದಾಣಿಕೆಯಾಗುವ ಇಸ್ಲಾಮಿನ ದೃಷ್ಟಿಕೋನವನ್ನು ತಿಳಿಸುತ್ತೇನೆ.
ನಾವು ಹೇಗೆ ಬದುಕಬೇಕು ಎಂಬುದನ್ನು ತಿಳಿಯುವ ಮನುಷ್ಯ ಕುತೂಹಲಕ್ಕೆ ಉತ್ತರ ನೀಡಲು ಮತ್ತು ಸಹಜ ಮನೋಧರ್ಮ, ತರ್ಕ ಮತ್ತು ವಿಜ್ಞಾನಕ್ಕೆ ಹೊಂದಾಣಿಕೆಯಾಗುವ ರೀತಿಯಲ್ಲಿ ಮನುಷ್ಯಾಸ್ತಿತ್ವದ ಅರ್ಥ ಮತ್ತು ಮನುಷ್ಯಾಸ್ತಿತ್ವದ ಗುರಿಯನ್ನು ವಿಶ್ಲೇಷಿಸಲು ಇಸ್ಲಾಂ ಹೇಗೆ ಅತ್ಯಂತ ನಿಖರ, ವಿಶ್ವಾಸಾರ್ಹ ಮತ್ತು ಸಮರ್ಪಕ ಮಾದರಿಯಾಗಿದೆ ಎಂಬುದನ್ನು ನಾನು ವಿವರಿಸುತ್ತೇನೆ.
ಈ ಪುಸ್ತಕವು ಇಸ್ಲಾಂ ಧರ್ಮದ ಸತ್ಯತೆಗೆ ಮತ್ತು ಈ ಧರ್ಮದ ಬಗ್ಗೆ ವೇದಗಳಲ್ಲಿರುವ ಸುವಾರ್ತೆಗಳಿಗೆ ಕೆಲವು ಪುರಾವೆಗಳನ್ನು ಸಮರ್ಪಿಸುತ್ತದೆ. ವೇದಗಳು ಇಸ್ಲಾಂ ಧರ್ಮದ ಬಗ್ಗೆ ಮತ್ತು ಪ್ರವಾದಿ ಮುಹಮ್ಮದ್‌ರವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಗ್ಗೆ ಸುವಾರ್ತೆಯನ್ನು ನೀಡುತ್ತದೆ ಮತ್ತು ಅದರಲ್ಲಿ ವಿಶ್ವಾಸವಿಡಲು ಹಿಂದೂಗಳನ್ನು ಆಹ್ವಾನಿಸುತ್ತದೆ.
ಇಸ್ಲಾಂ ಧರ್ಮವು ಭೂಮಿಯ ಮೇಲಿನ ಇತರ ಧರ್ಮಗಳಂತೆ ಒಂದು ಸಾಮಾನ್ಯ ಧರ್ಮವಲ್ಲ; ಬದಲಿಗೆ, ಅದು ಅಲ್ಲಾಹು ಎಲ್ಲಾ ಪ್ರವಾದಿಗಳನ್ನು ಕಳುಹಿಸಿದ ಏಕದೇವತ್ವದ ಆಧಾರದಲ್ಲಿರುವ ಏಕೈಕ ಧರ್ಮವಾಗಿದೆ. ಪ್ರವಾದಿಗಳೆಲ್ಲರೂ ಜನರನ್ನು ಏಕದೇವತ್ವದ ಕಡೆಗೆ ಆಹ್ವಾನಿಸಿದರು. ಆದರೆ ಇಸ್ಲಾಂ ಧರ್ಮದ ಹೊರತು ಬೇರೆ ಯಾವುದೇ ಧರ್ಮವೂ ಇಂದು ಅವರು ಬೋಧಿಸಿದ ಶುದ್ಧ ಏಕದೇವತ್ವದಲ್ಲಿ ಉಳಿದಿಲ್ಲ. ಈಮಧ್ಯೆ, ಇತರ ಎಲ್ಲಾ ಧರ್ಮಗಳೂ ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಬಹುದೇವತ್ವದ ಅಂಶಗಳನ್ನು ಒಳಗೊಂಡಿವೆ.
ಅಲ್ಲಾಹು ಮನುಷ್ಯರಿಂದ ಇಸ್ಲಾಂ ಅಲ್ಲದ ಬೇರೆ ಧರ್ಮವನ್ನು ಸ್ವೀಕರಿಸುವುದಿಲ್ಲ. ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ: “ಯಾರಾದರೂ ಇಸ್ಲಾಂ ಅಲ್ಲದ ಬೇರೆ ಧರ್ಮವನ್ನು ಹುಡುಕುವುದಾದರೆ, ಅದನ್ನು ಎಂದಿಗೂ ಅವನಿಂದ ಸ್ವೀಕರಿಸಲಾಗುವುದಿಲ್ಲ; ಮತ್ತು ಅವನು ಪರಲೋಕದಲ್ಲಿ ನಷ್ಟ ಹೊಂದಿದವರಲ್ಲಿ ಸೇರುವನು.” [ಸೂರ ಆಲು ಇಮ್ರಾನ್: 85]
ಅಲ್ಲಾಹು ಎಲ್ಲಾ ಪ್ರವಾದಿಗಳನ್ನು ಮತ್ತು ಸಂದೇಶವಾಹಕರನ್ನು ಕಳುಹಿಸಿದ ಧರ್ಮವು ಇಸ್ಲಾಂ ಧರ್ಮವಾಗಿದೆ.
ಇಸ್ಲಾಂ ಧರ್ಮದ ಮೂಲಭೂತ ಲಕ್ಷಣವೆಂದರೆ: ಅದು ಅಲ್ಲಾಹನಿಗೆ ಶರಣಾಗುವುದು ಮತ್ತು ಅಲ್ಲಾಹನನ್ನು ಮಾತ್ರ ಆರಾಧಿಸುವುದು ಎಂಬ ಅರ್ಥವನ್ನು ಹೊಂದಿರುವುದಲ್ಲದೆ; ಇಂದಿನ ಹಿಂದೂ ಧರ್ಮದಲ್ಲಿರುವಂತೆ ವಿಗ್ರಹಗಳು ಅಥವಾ ಕಲ್ಲುಗಳಲ್ಲಿ ಅಲ್ಲಾಹನ ಯಾವುದೇ ಅವತಾರವನ್ನು ಅದು ನಿಷೇಧಿಸುತ್ತದೆ.
ನಂತರ, ಒಬ್ಬ ವ್ಯಕ್ತಿ ಅಲ್ಲಾಹನಿಗೆ ಹೇಗೆ ಶರಣಾಗಬಹುದು (ಮುಸ್ಲಿಮನಾಗಬಹುದು) ಎಂಬುದನ್ನು ಮತ್ತು ಇಸ್ಲಾಂ ಧರ್ಮದ ಅರ್ಥ ಮತ್ತು ಅದರ ಜರೂರತ್ತನ್ನು ವಿವರಿಸುತ್ತಾ ಈ ಪುಸ್ತಕವನ್ನು ಕೊನೆಗೊಳಿಸುತ್ತೇನೆ.
ಈಗ ನಾವು ಅಲ್ಲಾಹನ ಆಶೀರ್ವಾದದೊಂದಿಗೆ ಈ ಪುಸ್ತಕದ ಪ್ರಯಾಣವನ್ನು ಆರಂಭಿಸೋಣ!
1. ಹಿಂದೂ ಧರ್ಮ ಎಂದರೇನು?
ಹಿಂದೂ ಧರ್ಮವು ಒಂದು ಧರ್ಮವಾಗಿದೆ. ಅಥವಾ ಹೆಚ್ಚು ನಿಖರವಾಗಿ ಹೇಳುವುದಾದರೆ—ಅದು ಅನೇಕ ಆಚರಣೆಗಳು, ಲಾಂಛನಗಳು, ಉಪಾಸನೆಗಳು, ಪವಿತ್ರ ಗ್ರಂಥಗಳು ಮತ್ತು ಪ್ರಪಂಚ ಹಾಗೂ ಅಸ್ತಿತ್ವದ ಕುರಿತಾದ ಪರಿಕಲ್ಪನೆಗಳನ್ನು ಒಳಗೊಂಡಿರುವ ಒಂದು ‘ಜೀವನ ಮಾರ್ಗ’ವಾಗಿದೆ. [6]
[6] ಹಿಂದೂ ಧರ್ಮದ ಅಧ್ಯಯನ. ಲೇ. ಅರವಿಂದ್ ಶರ್ಮಾ (ಅನುವಾದಿಸಲಾಗಿಲ್ಲ)
ಹಿಂದೂ ಧರ್ಮವು ಸುದೀರ್ಘ ಶತಮಾನಗಳಿಂದ, ವೈವಿಧ್ಯಮಯ ಮತ್ತು ಕೆಲವೊಮ್ಮೆ ವಿರೋಧಾಸ್ಪದ ನಂಬಿಕೆ ವ್ಯವಸ್ಥೆಯನ್ನು ಹೊಂದಿರುವ ಸಿದ್ಧಾಂತಗಳ ಸಂಕೀರ್ಣ ಸಂಗ್ರಹಗಳ ಮೂಲಕ ರೂಪುಗೊಂಡಿದೆ. ಆದರೆ, ಈಗಿನ ಹಿಂದೂ ಧರ್ಮವು ಇದರಲ್ಲಿ ಯಾವುದೇ ತೊಡಕನ್ನು ಕಾಣುವುದಿಲ್ಲ. ಏಕೆಂದರೆ, ಈಗಿನ ಹಿಂದೂ ಧರ್ಮವು ಏಕೈಕ ನಂಬಿಕೆಯನ್ನು, ಏಕೈಕ ಅವಲೋಕನವನ್ನು, ಅಥವಾ ತೀರ್ಪಿಗಾಗಿ ಉಲ್ಲೇಖಿಸಬಹುದಾದ ಸ್ಥಿರ ಪಠ್ಯವನ್ನು ಹೊಂದಿಲ್ಲ.
ವೇದಗಳು ಒಟ್ಟಾರೆಯಾಗಿ ಹಿಂದೂ ಧರ್ಮದ ಅತ್ಯಂತ ಪವಿತ್ರ ಗ್ರಂಥಗಳಾಗಿದ್ದರೂ ಸಹ, ಹಿಂದೂಗಳು—ನಾವು ಈ ಪುಸ್ತಕದಲ್ಲಿ ಮುಂದೆ ವಿವರಿಸುವಂತೆ—ವಿಚಿತ್ರ ಸ್ವರೂಪದಲ್ಲಿ ಅವುಗಳಿಗೆ ವಿರುದ್ಧವಾಗಿ ಬಿಟ್ಟಿದ್ದಾರೆ. ವೇದಗಳಿಗೆ ವಿರುದ್ಧವಾಗಿರುವ ಕಾರಣ, ಹಿಂದೂ ಧರ್ಮವು ಪ್ರಾಚೀನ ವೇದಗಳ ಯುಗಕ್ಕೆ ಯಾವುದೇ ಸಂಬಂಧವಿಲ್ಲದ ವಿಭಿನ್ನ ಪರಿಕಲ್ಪನೆಗಳು ಮತ್ತು ವ್ಯತಿರಿಕ್ತ ವಿಚಾರಗಳನ್ನು ಸ್ವೀಕರಿಸತೊಡಗಿದೆ.
ಹಿಂದೂ ಧರ್ಮವು ಎಲ್ಲಕ್ಕಿಂತ ಹೆಚ್ಚಾಗಿ ಯಾತನೆಗಳನ್ನು ತೊಲಗಿಸುವ ಗುರಿಯನ್ನು ಹೊಂದಿರುವುದರಿಂದ, ಅವರ ಪರಿಕಲ್ಪನೆಯ ಪ್ರಕಾರ ಯಾತನೆಗಳನ್ನು ತೊಲಗಿಸುವುದು ಹೇಗೆ, ಮತ್ತು ಮೋಕ್ಷಕ್ಕೆ ಸಂಬಂಧಿಸಿದಂತೆ ಅವರು ಹೆಚ್ಚು ಸತ್ಯದ ಅವಶೇಷಗಳನ್ನು ಹೊಂದಿರುವ ವೇದಗಳ ನಂಬಿಕೆಗೆ ಹೇಗೆ ವಿರುದ್ಧವಾದರು ಎಂಬುದನ್ನು ನಾವು ನಂತರ ವಿವರಿಸುವೆವು.[7]
[7] ಹಿಂದೂ ಧರ್ಮ: ನಂಬಿಕೆ ಮತ್ತು ಆಚರಣೆ, ಜೀನೇನ್ ಡಿ. ಫೌಲರ್ (ಅನುವಾದಿಸಲಾಗಿಲ್ಲ).
2. ಈ ಧರ್ಮವು ಇಂತಹ ಬಲೆಗಳೊಂದಿಗೆ ಹೇಗೆ ಉಗಮವಾಯಿತು?
ಹಿಂದೂ ಧರ್ಮ ಎಂದರೆ ಭಾರತ: ಭಾರತ ಎಂದರೆ ದೇಶ, ಹವೆ, ಇತಿಹಾಸ, ಹೆಣಿಗೆಗಳು ಮತ್ತು ಸಂಪ್ರದಾಯಗಳು.
ಇದು ಬಹುತೇಕ ಭಾರತಕ್ಕೆ ಸೀಮಿತವಾದ ಧರ್ಮ. ಏಕೆಂದರೆ ಪ್ರಪಂಚದ ಸುಮಾರು 95% ಹಿಂದೂಗಳು ಭಾರತದಲ್ಲಿ ನೆಲೆಸಿದ್ದಾರೆ.[8]
[8] http://www.pewforum.org/files/2012/12/globalReligion-tables.pdf
ಹಿಂದೂ ಧರ್ಮವು ಪ್ರಾಚೀನ ವೇದಗಳ ಆಧಾರದಲ್ಲಿ ಉಗಮವಾಯಿತು. ಆದರೆ ದುರದೃಷ್ಟವಶಾತ್, ಅದು ಶತಮಾನಗಳಿಂದ ರೂಪುಗೊಂಡ ಅನೇಕ ತತ್ವಶಾಸ್ತ್ರಗಳು, ನಂಬಿಕೆಗಳು, ಗ್ರಂಥಗಳು ಮತ್ತು ಪರಿಕಲ್ಪನೆಗಳೊಂದಿಗೆ ಬೆರಕೆಯಾಯಿತು. ವೇದಗಳ ನಂತರದ ಕಾಲಘಟ್ಟದಲ್ಲಿ, ಹಿಂದೂ ಧರ್ಮವು ಸನ್ಯಾಸಿಗಳ ಬೋಧನೆಗಳು, ನಿಗೂಢ ತಂತ್ರಗಳು ಮತ್ತು ಭಗವದ್ಗೀತೆಯನ್ನು ಅನುಸರಿಸಿತು.
ಕ್ರಿ.ಪೂ. ಸುಮಾರು 1500 ರಿಂದ ಕ್ರಿ.ಶ. 500 ವರೆಗೆ, ಈ ಪರಿಕಲ್ಪನೆಗಳು ಮತ್ತು ತತ್ವಶಾಸ್ತ್ರಗಳು ವೇದಗಳನ್ನು ಎಷ್ಟರಮಟ್ಟಿಗೆ ದಟ್ಟೈಸಿ ಆಕ್ರಮಿಸಿತೆಂದರೆ, ಇಂದು ನಾವು ಹಿಂದೂ ಧರ್ಮದಲ್ಲಿ ಈ ಪರಿಕಲ್ಪನೆಗಳು ಮತ್ತು ತತ್ವಶಾಸ್ತ್ರಗಳನ್ನಲ್ಲದೆ ಇನ್ನೇನನ್ನೂ ಕಾಣುವುದಿಲ್ಲ.
3. ನಿರ್ದಿಷ್ಟವಾಗಿ ಹಿಂದೂಗಳ ನಂಬಿಕೆ ಏನು?
ಈಗಿನ ಹಿಂದೂ ಧರ್ಮವು ಅಸಂಖ್ಯಾತ ದೇವ-ದೇವತೆಗಳನ್ನು ನಂಬುವ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿ ದೇವರುಗಳ ಸಂಖ್ಯೆಗೆ ಮಿತಿಯಿಲ್ಲ. ಇದರ ಜೊತೆಗೆ ಹಿಂದೂಗಳು ಏಕದೇವನಾದ ಪರಮಾತ್ಮನನ್ನೂ ನಂಬುತ್ತಾರೆ.
ಅವರು ಪವಿತ್ರವೆಂದು ಪರಿಗಣಿಸುವ ಎಲ್ಲಾ ಎರಕಗಳಲ್ಲೂ ಪರಮಾತ್ಮ ನೆಲೆಸಿದ್ದಾನೆಂಬ ಕಲ್ಪನೆ ಅವರಿಗಿದೆ.
ಕೆಲವರ ಕಲ್ಪನೆಯ ಪ್ರಕಾರ, ಹಿಂದೂಗಳು ಪರಮಾತ್ಮನಲ್ಲಿ ನಂಬಿಕೆಯಿಡುವುದು ಮತ್ತು ಅವರು ಈ ವಿಗ್ರಹಗಳು ಮತ್ತು ಎರಕಗಳನ್ನು ಪರಮಾತ್ಮನ ಪ್ರತಿಮೆಗಳೆಂದು ನಂಬುವುದು ವಿಗ್ರಹಾರಾಧನೆಯಲ್ಲ!
ಆದರೆ, ಇದೊಂದು ಘೋರ ತಪ್ಪು!
ವಿಗ್ರಹಗಳು ಪರಮಾತ್ಮನ ಪ್ರತಿಮೆಗಳಾಗಿವೆ ಎಂಬ ನಂಬಿಕೆಯು ಮಾನವ ಇತಿಹಾಸದ ಎಲ್ಲಾ ಘಟ್ಟಗಳಲ್ಲಿರುವ ಪ್ರವಾದಿಗಳ ಬೋಧನೆಗಳಿಗೆ ಮತ್ತು ವೇದಗಳ ಬೋಧನೆಗಳಿಗೆ ವಿರುದ್ಧವಾದ ವಿಗ್ರಹಾರಾಧನಾ ನಂಬಿಕೆಯ ಅಡಿಪಾಯವಾಗಿದೆ.
ಪ್ರವಾದಿಗಳ ಬೋಧನೆಗಳಿಗೆ ಮತ್ತು ವೇದಗಳ ಬೋಧನೆಗಳಿಗೆ ವಿರುದ್ಧವಾಗಿರುವ ಬಹುದೇವತಾವಾದಿಗಳೆಲ್ಲರೂ ಪರಮಾತ್ಮನನ್ನು ನಂಬುತ್ತಾರೆ. ಆದರೆ ಅವರು ವಿಗ್ರಹಗಳನ್ನು ಪರಮಾತ್ಮನ ಪ್ರತಿಮೆಯಾಗಿ ಮಾಡುತ್ತಾರೆ. ಆದ್ದರಿಂದ, ಪರಮಾತ್ಮನ ಅಸ್ತಿತ್ವದಲ್ಲಿ ಮತ್ತು ಅವನು ಏಕನೆಂಬುದರಲ್ಲಿ ಬಹುದೇವತಾವಾದಿಗಳಿಗೆ ಇರುವ ನಂಬಿಕೆಯು—ಅವರು ವಿಗ್ರಹಗಳನ್ನು ಪೂಜಿಸುತ್ತಿರುವ ತನಕ—ಅವರು ಪರಮಾತ್ಮನನ್ನು ನಿಷೇಧಿಸುತ್ತಾರೆ, ಅವನ ಪ್ರವಾದಿಗಳನ್ನು ನಿಷೇಧಿಸುತ್ತಾರೆ ಮತ್ತು ವೇದಗಳನ್ನು ಕೂಡ ನಿಷೇಧಿಸುತ್ತಾರೆ ಎಂಬುದನ್ನು ನಿಷೇಧಿಸುವುದಿಲ್ಲ.
ವೇದಗಳು ವಿಗ್ರಹ ಪೂಜೆಯನ್ನು, ಅವುಗಳಿಗೆ ಸಮೀಪವಾಗುವುದನ್ನು ಅಥವಾ ಅವುಗಳಿಗೆ ಪವಿತ್ರತೆ ಕಲ್ಪಿಸುವುದನ್ನು ಸ್ಪಷ್ಟವಾಗಿ ಮತ್ತು ಖಚಿತವಾಗಿ ನಿಷೇಧಿಸುತ್ತವೆ. ವೇದ ಹೇಳುತ್ತದೆ: "ಯಾರು ಪರಮಾತ್ಮನನ್ನು ಬಿಟ್ಟು, ಸಂಭೂತ ವಸ್ತುಗಳ ಉಪಾಸನೆ ಮಾಡುತ್ತಾನೋ ಅವನು ಕತ್ತಲೆಯ ಅಂಧಕಾರದಲ್ಲಿ ಮುಳುಗುತ್ತಾನೆ ಮತ್ತು ಯುಗಯುಗಾಂತರ ನರಕದ ಶಿಕ್ಷೆಯನ್ನು ಅನುಭವಿಸುತ್ತಾನೆ." [9] [9] ಯಜುರ್ವೇದ ಸೂಕ್ತ: 40, ಮಂತ್ರ: 9.
ಆದ್ದರಿಂದ, ಇಂದು ಹಿಂದೂ ಧರ್ಮದಲ್ಲಿ ತುಂಬಿ ತುಳುಕುತ್ತಿರುವ ಈ ವಿಗ್ರಹಗಳನ್ನು ಯಾರು ಪೂಜಿಸುತ್ತಾರೋ, ಅವರು ವೇದಗಳ ಪ್ರಕಾರ, ಶಾಶ್ವತ ನರಕವಾಸಿಗಳಾಗುತ್ತಾರೆ. ವೇದವು ಹೀಗೂ ಹೇಳುತ್ತದೆ: "ಎಲ್ಲಾ ವಸ್ತುಗಳ ಯಜಮಾನ, ಅಗೋಚರ ಜ್ಞಾನಿ ಮತ್ತು ಇತರ ದೇವರುಗಳ ಸಹಾಯದ ಅಗತ್ಯವಿಲ್ಲದವನು. ಅವನೇ ಮನುಷ್ಯನ ಆರಾಧನೆಗೆ ಅರ್ಹನಾಗಿರುವ ಪರಮಾತ್ಮ. ಯಾರು ಆ ಪರಮಾತ್ಮನನ್ನು ಬಿಟ್ಟು ಇತರ ದೇವರುಗಳನ್ನು ಪೂಜಿಸುತ್ತಾರೋ ಅವರೇ ನತದೃಷ್ಟರು. ಅವರು ನಿರಂತರ ದೊಡ್ಡ ದೊಡ್ಡ ಭಯಾನಕ ವಿಪತ್ತುಗಳನ್ನು ಅನುಭವಿಸುತ್ತಾರೆ."[10] [10] ಋಗ್ವೇದ ಮಂಡಲ: 1, ಸೂಕ್ತ: 7, ಮಂತ್ರ: 9.
ಅಷ್ಟೇ ಅಲ್ಲ; ಭಗವದ್ಗೀತೆಯಲ್ಲೂ ಹೀಗೆ ಬಂದಿದೆ: “ಯಾರು ದೇವರುಗಳನ್ನು ಪೂಜಿಸುತ್ತಾರೋ ಅವರು ದೇವರುಗಳನ್ನು ಪಡೆಯುತ್ತಾರೆ; ಯಾರು ಪೂರ್ವಜರನ್ನು ಪೂಜಿಸುತ್ತಾರೋ ಅವರು ಪೂರ್ವಜರನ್ನು ಪಡೆಯುತ್ತಾರೆ; ಯಾರು ಪಿಶಾಚಿಯನ್ನು ಪೂಜಿಸುತ್ತಾರೋ ಅವರು ಪಿಶಾಚಿಯನ್ನು ಪಡೆಯುತ್ತಾರೆ; ಯಾರು ನನ್ನನ್ನು ಪೂಜಿಸುತ್ತಾರೋ ಅವರು ನನ್ನನ್ನು ಪಡೆಯುತ್ತಾರೆ." [11]
[11] ಭಗವದ್ಗೀತೆ 9-25. ಇವು ಮತ್ತು ಇಂತಹ ಇನ್ನೂ ಅನೇಕ ಪಠ್ಯಗಳು ಏಕದೇವನನ್ನು ಪೂಜಿಸಲು ಮತ್ತು ಈ ವಿಗ್ರಹಗಳನ್ನು ತ್ಯಜಿಸಲು ಹಿಂದೂಗಳನ್ನು ಸ್ಪಷ್ಟವಾಗಿ ಆಹ್ವಾನಿಸುತ್ತವೆ. ಎಲ್ಲಿಯವರೆಗೆಂದರೆ, ಮಹರ್ಷಿ ದಯಾನಂದ ಸರಸ್ವತಿ ಹೇಳುತ್ತಾರೆ: “ಕಲ್ಲು ಮತ್ತು ಇತರ ವಸ್ತುಗಳಿಂದ ನಿರ್ಮಿಸಲಾದ ವಿಗ್ರಹಗಳನ್ನು ಪೂಜಿಸಲು ಸೂಚನೆ ನೀಡುವ ಒಂದೇ ಒಂದು ಅಕ್ಷರ ವೇದಗಳಲ್ಲಿಲ್ಲ.” ನಂತರದ ಕಾಲಘಟ್ಟದಲ್ಲಿ ಬಂದ ಸುಳ್ಳು ಬೋಧನೆಗಳಿಗೆ ಮರುಳಾಗಿಯೇ ಹೊರತು ಹಿಂದೂಗಳು ವೇದಗಳು ಬೋಧಿಸಿದ ಏಕದೇವತ್ವದ ನಂಬಿಕೆಯನ್ನು ತ್ಯಜಿಸಿರಲಿಲ್ಲ.
ವಿಗ್ರಹವನ್ನು ಪೂಜಿಸುವವರೆಲ್ಲರೂ, ನಾವು ಪರಮಾತ್ಮನನ್ನು ನಂಬುತ್ತೇವೆ ಎಂದು ವಾದಿಸುತ್ತಾರೆ; ಆದರೆ, ಈ ವಿಗ್ರಹಗಳನ್ನು ಪೂಜಿಸಿದ ಕಾರಣ ಅವರು ಪರಮಾತ್ಮನನ್ನು ನಿಷೇಧಿಸಿದವರಾಗಿದ್ದಾರೆ ಎಂದು ಅಲ್ಲಾಹು ಪ್ರವಾದಿ ಮುಹಮ್ಮದ್‌ರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವತೀರ್ಣಗೊಳಿಸಿದ ಪವಿತ್ರ ಕುರ್‌ಆನ್ ಒತ್ತುಕೊಟ್ಟು ಹೇಳುತ್ತದೆ.
ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ:
“ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ್ದು ಯಾರು ಎಂದು ನೀವು ಅವರೊಡನೆ (ವಿಗ್ರಹಾರಾಧನೆ ಮಾಡುವವರೊಡನೆ) ಕೇಳಿದರೆ, ಅವರು ಅಲ್ಲಾಹು ಎಂದು ಉತ್ತರಿಸುತ್ತಾರೆ.”
[ಸೂರ ಝುಮರ್: 38]
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನೀವು ಅವರೊಡನೆ (ವಿಗ್ರಹಾರಾಧನೆ ಮಾಡುವವರೊಡನೆ), ಅವರನ್ನು ಸೃಷ್ಟಿಸಿದ್ದು ಯಾರು? ಎಂದು ಕೇಳಿದರೆ ಅವರು ಅಲ್ಲಾಹು ಎಂದು ಉತ್ತರಿಸುತ್ತಾರೆ.”
[ಸೂರ ಝುಖ್ರುಫ್: 87]
ಆದ್ದರಿಂದ, ಕುರ್‌ಆನ್ ಮತ್ತು ವೇದಗಳ ಒಮ್ಮತಾಭಿಪ್ರಾಯದಂತೆ, ವಿಗ್ರಹ ಪೂಜೆ ಮಾಡುವ ಮನುಷ್ಯನು ಪರಮಾತ್ಮನನ್ನು ನಿಷೇಧಿಸಿದವನಾಗುತ್ತಾನೆ.
ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ:
“ನಿಶ್ಚಯವಾಗಿಯೂ, ನೀವು ಅಲ್ಲಾಹನ ಹೊರತಾಗಿ ಕೇವಲ ವಿಗ್ರಹಗಳನ್ನು ಆರಾಧಿಸುತ್ತೀರಿ ಮತ್ತು ಸುಳ್ಳು ಸೃಷ್ಟಿಸುತ್ತೀರಿ. ನಿಶ್ಚಯವಾಗಿಯೂ, ನೀವು ಅಲ್ಲಾಹನ ಹೊರತಾಗಿ ಯಾರನ್ನು ಅರಾಧಿಸುತ್ತೀರೋ ಅವರು ನಿಮಗೆ ಜೀವನಾಧಾರವನ್ನು ಅಧೀನದಲ್ಲಿಟ್ಟುಕೊಂಡಿಲ್ಲ; ಆದ್ದರಿಂದ ನೀವು ಅಲ್ಲಾಹನ ಬಳಿ ಜೀವನಾಧಾರವನ್ನು ಹುಡುಕಿರಿ; ಮತ್ತು ಅವನನ್ನು ಆರಾಧಿಸಿರಿ; ಮತ್ತು ಅವನಿಗೆ ಕೃತಜ್ಞತೆ ಸಲ್ಲಿಸಿರಿ. ನಿಮ್ಮನ್ನು ಅವನ ಬಳಿಗೆ ಮರಳಿಸಲಾಗುವುದು.”
[ಸೂರ ಅನ್ಕಬೂತ್: 17]
ಆದ್ದರಿಂದ ನೀವು ಅಲ್ಲಾಹನ ಬಳಿ ಜೀವನಾಧಾರವನ್ನು ಹುಡುಕಿರಿ ಮತ್ತು ಅವನನ್ನು ಮಾತ್ರ ಆರಾಧಿಸಿರಿ; ಏಕೆಂದರೆ ನಾವೆಲ್ಲರೂ ಮರಳಿ ಹೋಗಬೇಕಾದುದು ಅವನ ಬಳಿಗೇ ಆಗಿದೆ.
ಇಂದು ಭೂಮುಖದ ಮೇಲೆ, ಏಕದೇವತ್ವದಲ್ಲಿ ಮತ್ತು ಬಹುದೇವತ್ವದ ಎಲ್ಲಾ ರೂಪಗಳನ್ನು ತ್ಯಜಿಸಿದ ಸ್ಥಿತಿಯಲ್ಲಿ ಇಸ್ಲಾಂ ಧರ್ಮದ ಹೊರತು ಯಾವುದೇ ಧರ್ಮವೂ ಬಾಕಿಯಾಗಿ ಉಳಿದಿಲ್ಲ.
ಆದ್ದರಿಂದ ಪ್ರತಿಯೊಬ್ಬ ಹಿಂದೂ ಇಸ್ಲಾಂ ಧರ್ಮವನ್ನು ಒಳದೃಷ್ಟಿಯಿಂದ ನಿಷ್ಪಕ್ಷವಾಗಿ ವೀಕ್ಷಿಸಬೇಕಾದ, ಮತ್ತು ಈ ಧರ್ಮದಲ್ಲಿರುವ ಏಕದೇವತಾ ಸಿದ್ಧಾಂತವು ತನ್ನ ಸಹಜ ಮನೋಧರ್ಮಕ್ಕೆ ಮತ್ತು ವೇದಗಳ ಬೋಧನೆಗೆ ಹೊಂದಿಕೆಯಾಗುತ್ತದೋ ಎಂದು ನೋಡಬೇಕಾದ ಅಗತ್ಯವಿದೆ.
ಅಲ್ಲಾಹು ಜನರ ಬಳಿಗೆ ಕಳುಹಿಸಿದ ಪ್ರವಾದಿಗಳೆಲ್ಲರೂ ನೀಡಿದ ಆಹ್ವಾನವು ಆರಾಧನೆಗಳನ್ನು ಅಲ್ಲಾಹನಿಗೆ ಮಾತ್ರ ಸಮರ್ಪಿಸಿರಿ ಎಂಬುದಾಗಿತ್ತು. ಇದು ಎಲ್ಲಾ ವಿಗ್ರಹಗಳನ್ನು ಕಿತ್ತುಹಾಕಿ, ಅಲ್ಲಾಹನ ಪ್ರವಾದಿಗಳು ತಂದ ಸಂದೇಶಕ್ಕೆ; ಹಾಗೂ ಅಂತಿಮ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಂದ ಸಂದೇಶಕ್ಕೆ ಸಮರ್ಪಿಸಿಕೊಳ್ಳುವ ಮೂಲಕ ಮಾತ್ರ ಉಂಟಾಗಲು ಸಾಧ್ಯ.
4. ಹಿಂದೂ ಧರ್ಮದಲ್ಲಿ ಪರಮಾತ್ಮನನ್ನು ಹಲವಾರು ವಿಗ್ರಹಗಳ ಮೂಲಕ ಪ್ರತಿನಿಧಿಸುವ ಕಲ್ಪನೆ ಹೇಗೆ ಆರಂಭವಾಯಿತು?
ವೇದಗಳ ಕಾಲಾನಂತರದ ಈಗಿನ ಹಿಂದೂ ಧರ್ಮದಲ್ಲಿ, ಪರಮಾತ್ಮನಿಗಿರುವ ವಿಭಿನ್ನ ಗುಣಲಕ್ಷಣಗಳಿಗೆ ವಿಭಿನ್ನ ಸಾರಗಳ ಅಗತ್ಯವಿದೆ—ವಿಭಿನ್ನ ದೇವರುಗಳ ಅಗತ್ಯವಿದೆ ಎಂಬ ಭಾವನೆಯು ಪ್ರಮುಖ ತೊಡಕಾಗಿದೆ.
ಪರಮಾತ್ಮನ ಪ್ರತಿಯೊಂದು ಗುಣಲಕ್ಷಣಕ್ಕೂ ಅದನ್ನು ಪ್ರತಿನಿಧಿಸುವ ಒಂದೊಂದು ವಿಗ್ರಹದ ಅಗತ್ಯವಿದೆ ಎಂದು ಅವರು ಭಾವಿಸುತ್ತಾರೆ.
ಆದ್ದರಿಂದ, ಅವರ ಪ್ರಕಾರ ಸೃಷ್ಟಿಕರ್ತನು –
ಬ್ರಹ್ಮ: ಅವನು ಪ್ರಪಂಚವನ್ನು ಸೃಷ್ಟಿಸಿದವನು. ವಿಷ್ಣು: ಪ್ರಪಂಚವನ್ನು ಸಂರಕ್ಷಿಸುವವನು. ಶಿವ: ಪ್ರಪಂಚವನ್ನು ನಾಶ ಮಾಡುವವನು.[12]
[12] ಪೌರಾತ್ಯ ತತ್ವಶಾಸ್ತ್ರ ಮತ್ತು ಧಾರ್ಮಿಕ ವಿಶ್ವಕೋಶ, ಸ್ಟೀಫನ್ ಶೂಮೇಕರ್ (ಪು. 397).
ಈ ಭಾವನೆಯು ಬುದ್ಧಿ ಮತ್ತು ಸಹಜ ಮನೋಧರ್ಮದ ಮೂಲತತ್ವಗಳಿಗೆ ಮಾತ್ರವಲ್ಲದೆ, ವೇದಗಳಲ್ಲಿರುವ ಬೋಧನೆಗಳಿಗೂ ವಿರುದ್ಧವಾಗಿದೆ. ಏಕೆಂದರೆ, ವಿಭಿನ್ನ ಗುಣಲಕ್ಷಣಗಳಿಗೆ ವಿಭಿನ್ನ ಸಾರಗಳ ಅಗತ್ಯವಿಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿ ಬುದ್ಧಿವಂತ, ಶಕ್ತಿವಂತ ಮತ್ತು ಶಿಸ್ಸುಬದ್ಧನಾಗಿದ್ದಾನೆ. ಈ ಮೂರು ಗುಣಲಕ್ಷಣಗಳು ಅವನಿಗೆ ಮೂರು ಸಾರಗಳನ್ನು (ಪ್ರತ್ಯೇಕ ದೇಹಗಳನ್ನು) ಅನಿವಾರ್ಯಗೊಳಿಸುವುದಿಲ್ಲ.
ಏಕೆಂದರೆ, ಬುದ್ಧಿವಂತನಾಗಿರುವ ವ್ಯಕ್ತಿಯೇ ಶಕ್ತಿವಂತ ಮತ್ತು ಶಿಸ್ಸುಬದ್ಧನಾಗಿದ್ದಾನೆ.
ಅತ್ಯುತ್ತಮವಾದ ಉದಾಹರಣೆ ಅಲ್ಲಾಹನಿಗೆ ಮಾತ್ರ ಸಲ್ಲುತ್ತದೆ!
ವೇದಗಳು ಕೂಡ ಈ ಸತ್ಯವನ್ನು ಒತ್ತುಕೊಟ್ಟು ಹೇಳಿವೆ. ಋಗ್ವೇದದಲ್ಲಿ ಹೀಗೆ ಬಂದಿದೆ: “ಅವನನ್ನು ಇಂದ್ರ, ಮಿತ್ರ, ವಾಯು, ಗರುಡ ಎಂದು ಕರೆಯುತ್ತಾರೆ. ಋಷಿಗಳು ಏಕ ಪರಮಾತ್ಮನನ್ನು ವಿಭಿನ್ನ ನಾಮಗಳಿಂದ ಕರೆಯುತ್ತಾರೆ.”[13] [13] ಋಗ್ವೇದ ಮಂಡಲ: 1, ಸೂಕ್ತ: 164, ಮಂತ್ರ: 46. ವೇದಗಳ ಅನೇಕ ಶ್ಲೋಕಗಳಲ್ಲಿ ಪರಮಾತ್ಮನ ನಾಮ ಮತ್ತು ಗುಣಲಕ್ಷಣಗಳನ್ನು ತಿಳಿಸಲಾಗಿದೆ.
ಈ ನಾಮ ಮತ್ತು ಗುಣಲಕ್ಷಣಗಳೆಲ್ಲವೂ ಇರುವುದು ಒಂದೇ ಸಾರದಲ್ಲಿ.
ಪ್ರಾಚೀನ ವೇದಗಳಲ್ಲಿರುವ ಈ ನಂಬಿಕೆಯು ಇಸ್ಲಾಂ ಧರ್ಮದ ಅದೇ ನಂಬಿಕೆಯಾಗಿದೆ. ಇಸ್ಲಾಂ ಧರ್ಮದ ಪ್ರಕಾರ, ಅಲ್ಲಾಹು ಏಕೈಕನು. ಅವನಿಗೆ ಅತ್ಯುತ್ತಮ ನಾಮಗಳು ಮತ್ತು ಅತ್ಯುನ್ನತ ಗುಣಲಕ್ಷಣಗಳಿವೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ನಿಮ್ಮ ದೇವನು ಏಕೈಕ ದೇವ. ಅವನ ಹೊರತು ಆರಾಧನೆಗೆ ಅರ್ಹರಾದವರು ಯಾರೂ ಇಲ್ಲ. ಅವನು ಪರಮ ದಯಾಮಯನು ಮತ್ತು ಕರುಣಾನಿಧಿ.”
[ಸೂರ ಬಕರ: 163]
ಅಲ್ಲಾಹು ಪರಮ ದಯಾಮಯನು ಮತ್ತು ಪರಮ ಕರುಣಾಮಯಿಯಾಗಿದ್ದಾನೆ.
ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ:
“ಅವನೇ ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದವರು ಯಾರೂ ಇಲ್ಲ. ಅವನು ಸರ್ವಾಧಿಪತಿ, ಪರಮ ಪವಿತ್ರ, ಯಾವುದೇ ನ್ಯೂನತೆಗಳಿಲ್ಲದವನು, ಅಭಯ ನೀಡುವವನು, ಮೇಲ್ನೋಟ ವಹಿಸುವವನು, ಮಹಾ ಶಕ್ತಿಶಾಲಿ, ಸರ್ವಾಧಿಪತಿ ಮತ್ತು ಮಹಾತ್ಮೆಯುಳ್ಳವನು. ಅವರು ಸಹಭಾಗಿತ್ವ ಮಾಡುವ ಎಲ್ಲದರಿಂದಲೂ ಅವನು ಪರಿಶುದ್ಧನಾಗಿದ್ದಾನೆ.”
[ಸೂರ ಹಶ್ರ್: 23]
ಈ ವಿಭಿನ್ನ ನಾಮಗಳು ಮತ್ತು ಗುಣಲಕ್ಷಣಗಳು ಏಕೈಕ ದೇವನಾದ ಅಲ್ಲಾಹನಲ್ಲಿಯೇ ಅಸ್ತಿತ್ವದಲ್ಲಿವೆ.
ಪರಮಾತ್ಮನ ಗುಣಲಕ್ಷಣಗಳನ್ನು ವಿಭಿನ್ನ ವಿಗ್ರಹಗಳಲ್ಲಿ ಅವತಾರಗೊಳಿಸುವ ಈ ಕಲ್ಪನೆಯ ಎರಡನೇ ತೊಡಕೇನೆಂದರೆ, ಇಂತಹ ವಿಗ್ರಹಾರಾಧನೆಯಿಂದ ವಿಶ್ವಕ್ಕೆ ಯಾವುದೇ ಭದ್ರತೆಯಿರುವುದಿಲ್ಲ.
ಈ ಕಾರಣದಿಂದಲೇ, ಪವಿತ್ರ ಕುರ್‌ಆನ್ ಅಲ್ಲಾಹನಿಗೆ ಸಂಬಂಧಿಸಿದಂತೆ ಇಂತಹ ಎಲ್ಲಾ ರೀತಿಯ ವಿಗ್ರಹಾರಾಧನೆಯ ಪರಿಕಲ್ಪನೆಗಳನ್ನು ನಿಷೇಧಿಸುತ್ತದೆ; ಮತ್ತು ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ಸಂಕಲ್ಪಿಸಿದರೆ ಇಡೀ ವಿಶ್ವಕ್ಕೆ ಅಭದ್ರತೆಯುಂಟಾಗಬಹುದೆಂದು ಎಚ್ಚರಿಸುತ್ತದೆ.
“ಭೂಮ್ಯಾಕಾಶಗಳಲ್ಲಿ (ವಿಶ್ವದಲ್ಲಿ) ಅಲ್ಲಾಹನ ಹೊರತಾಗಿ ಬೇರೆ ದೇವರುಗಳಿರುತ್ತಿದ್ದರೆ ಅವೆರಡೂ ನಾಶವಾಗುತ್ತಿದ್ದವು; ಅರ್ಶಿನ(ಸಿಂಹಾಸನ) ಒಡೆಯನಾದ ಅಲ್ಲಾಹು ಅವರು ಆರೋಪಿಸುವ ಎಲ್ಲಾ ಆರೋಪಗಳಿಂದಲೂ ಪರಮ ಪರಿಶುದ್ಧನಾಗಿದ್ದಾನೆ.”
[ಸೂರ ಅಂಬಿಯಾ: 22]
ಅಲ್ಲಾಹನೊಂದಿಗೆ ಬೇರೆ ದೇವರುಗಳಿರುತ್ತಿದ್ದರೆ, ಭೂಮ್ಯಾಕಾಶಗಳು ನಾಶವಾಗುತ್ತಿದ್ದವು.
“ಒಂದು ವೇಳೆ ಸತ್ಯವು ಅವರ ಮೋಹಗಳನ್ನು ಹಿಂಬಾಲಿಸುತ್ತಿದ್ದರೆ, ಭೂಮ್ಯಾಕಾಶಗಳು (ವಿಶ್ವವು) ಮತ್ತು ಅವುಗಳಲ್ಲಿರುವವರೆಲ್ಲರೂ ನಾಶವಾಗುತ್ತಿದ್ದರು. ಬದಲಿಗೆ, ನಾವು ಅವರ ಬಳಿಗೆ ಅವರಿಗಿರುವ ಸ್ಮರಣೆಯೊಂದಿಗೆ ಬಂದಿದ್ದೇವೆ. ಆದರೆ ಅವರು ಅವರಿಗಿರುವ ಆ ಸ್ಮರಣೆಯಿಂದ ವಿಮುಖರಾಗುತ್ತಿದ್ದಾರೆ.”
[ಸೂರ ಮೂಮಿನೂನ್: 71]
5. ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವಿನ ಸಂಬಂಧವನ್ನು ಹಿಂದೂಗಳು ಹೇಗೆ ನೋಡುತ್ತಾರೆ?
ಈಗಿನ ಬಹುಸಂಖ್ಯಾತ ಹಿಂದೂಗಳು ಅದ್ವೈತವಾದದಲ್ಲಿ ನಂಬಿಕೆಯಿಡುತ್ತಾರೆ. ಈ ವಾದದ ಪ್ರಕಾರ ಸೃಷ್ಟಿಕರ್ತನು ಸೃಷ್ಟಿಯಲ್ಲಿ ಲೀನನಾಗುತ್ತಾನೆ. ಈಗಿನ ಹಿಂದೂ ಧರ್ಮದ ಪ್ರಕಾರ, ಪರಮಾತ್ಮನು ಅವನ ಸೃಷ್ಟಿಗಳಲ್ಲಿ ವಾಸಿಸುವ ಕಾರಣ, ಸೃಷ್ಟಿಗಳು ಮತ್ತು ಸೃಷ್ಟಿಕರ್ತ ಒಂದೇ ವಸ್ತುವಾಗಿದ್ದಾರೆ.[14]
[14] ಹಿಂದೂ ಧರ್ಮ ವಿಶ್ವಕೋಶ, ಜೋನ್ಸ್, ರಯಾನ್ ಮತ್ತು ಜೇಮ್ಸ್ ಡಿ. ಪುಟ 315. (ಅನುವಾದಿಸಲಾಗಿಲ್ಲ).
ಇದು ವಿಜ್ಞಾನ, ಬುದ್ಧಿ, ವೀಕ್ಷಣೆ ಮತ್ತು ವೇದಗಳ ಮೂಲತತ್ವಗಳಿಗೆ ವಿರುದ್ಧವಾಗಿದೆ.
ಅದ್ವೈತವಾದದಲ್ಲಿ ಅನೇಕ ವೈಜ್ಞಾನಿಕ ಮತ್ತು ಬೌದ್ಧಿಕ ತೊಡಕುಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ:
ಮೊದಲನೆಯ ತೊಡಕು: ಅವರ ಪ್ರಕಾರ ಪರಮಾತ್ಮ ಎಲ್ಲ ವಸ್ತುಗಳಲ್ಲೂ ವಾಸಿಸುತ್ತಾನೆ. ಹಾಗಾದರೆ ಪರಮಾತ್ಮನಲ್ಲಿ ಲೀನವಾಗಲು—ಮೋಕ್ಷವನ್ನು ಪಡೆಯಲು—ಅವರು ಕೆಲವು ಆಚರಣೆಗಳನ್ನು ಆಚರಿಸುವುದರ ಅಗತ್ಯವೇನು?
ನಿನ್ನೊಳಗೇ ಇರುವನವನು, ನೀನು ಅದರಲ್ಲಿ ವಾಸವಾಗಿರುವೆ ಮತ್ತು ನಿನ್ನಲ್ಲಿಯೇ ವಾಸವಾಗಿರುವ ಒಂದು ವಸ್ತುವಿನಲ್ಲಿ ನೀನು ಲೀನವಾಗುವುದು ಹೇಗೆ?
ಎರಡನೆಯ ತೊಡಕು: ಅದ್ವೈತವಾದದ ನಂಬಿಕೆಯ ಪ್ರಕಾರ ಪಾಪ ಮತ್ತು ದೋಷಗಳೆಲ್ಲವೂ ಪರಮಾತ್ಮನ ಸಾರಗಳು. ಅವರ ಪ್ರಕಾರ, ದೋಷ, ಪಾಪ, ವ್ಯಭಿಚಾರ, ಕೊಲೆ ಎಲ್ಲವೂ ಪರಮಾತ್ಮ. ಏಕೆಂದರೆ, ಅವನು ಎಲ್ಲಾ ವಸ್ತುಗಳಲ್ಲೂ ವಾಸವಾಗಿದ್ದಾನೆ. ಅವನು ಎಲ್ಲಾ ವಸ್ತುಗಳ ಸಾರವಾಗಿದ್ದಾನೆ. ಹಾಗಾದರೆ, ದೋಷ ಮತ್ತು ಪಾಪಗಳಿಂದ ಮುಕ್ತಿ ಪಡೆಯುವ ಅಗತ್ಯವೇನಿದೆ?
ಮೋಹ ಮತ್ತು ಲೌಕಿಕ ಬಯಕೆಗಳಿಂದ ದೂರವಾಗಲು ಅವರು ಅತ್ಯಾಸಕ್ತರಾಗುವುದು ಏಕೆ?
ಅದ್ವೈತವಾದದಲ್ಲಿ ಪಾಪವು ಒಳಪಡುವುದಿಲ್ಲವೇ?
ಇಹಲೋಕವು ಸ್ವತಃ ಪರಮಾತ್ಮನ ಸಾರವಲ್ಲವೇ?
ಈಗಿನ ಹಿಂದೂಗಳ ಈ ಪರಿಕಲ್ಪನೆಯ ಪ್ರಕಾರ ಒಳಿತು ಮಾಡಲು ಪ್ರೇರೇಪಿಸುವುದಕ್ಕೆ ಯಾವುದೇ ಸಮರ್ಥನೆಯಿಲ್ಲ.
ಆದರೆ, ಅವರೆಲ್ಲರೂ ಒಳಿತು ಮಾಡಲು ಅತ್ಯಾಸಕ್ತರಾಗಿದ್ದು, ಅದನ್ನು ಕಡ್ಡಾಯವೆಂದೂ ನಂಬುತ್ತಾರೆ. ಅಲ್ಲವೇ?
ವಾಸ್ತವವಾಗಿ, ಒಳಿತು ಮಾಡಬೇಕೆಂಬ ಪ್ರೇರಣೆಯು ಶುದ್ಧ ಸಹಜ ಮನೋಧರ್ಮದ ಕರೆಗೆ ಉತ್ತರಿಸುವುದಾಗಿದೆ. ಅದ್ವೈತವಾದ ತಪ್ಪು ಎಂಬುದಕ್ಕೆ ಇದು ನೇರ ಪ್ರಾಕೃತಿಕ ಪುರಾವೆಯಾಗಿದೆ.
ಮೂರನೆಯ ತೊಡಕು: ಅದ್ವೈತವಾದವು ಸಾಪೇಕ್ಷ ಸತ್ಯಕ್ಕೆ ಆಹ್ವಾನಿಸುತ್ತದೆ. ವಿಗ್ರಹಗಳನ್ನು ಮತ್ತು ಕಲ್ಲುಗಳನ್ನು ಪೂಜಿಸುವ ಧರ್ಮಗಳೆಲ್ಲವೂ ಅವರ ಪ್ರಕಾರ ಪರಮಾತ್ಮನನ್ನು ಪೂಜಿಸುತ್ತವೆ. ಏಕೆಂದರೆ, ಅವರ ಪ್ರಕಾರ ವಿಗ್ರಹ ಮತ್ತು ಕಲ್ಲುಗಳೆಲ್ಲವೂ ಪರಮಾತ್ಮ. ಪರಮಾತ್ಮನು ಎಲ್ಲಾ ವಸ್ತುಗಳಲ್ಲೂ ವಾಸವಾಗಿದ್ದಾನೆ ಮತ್ತು ಎಲ್ಲಾ ವಸ್ತುಗಳೂ ಪರಮಾತ್ಮನೇ ಆಗಿದ್ದಾನೆ.
ಈ ಸಾಪೇಕ್ಷ ಸತ್ಯವು ಅರ್ಥ ಮತ್ತು ಮೌಲ್ಯವನ್ನು ನಾಶ ಮಾಡುತ್ತದೆ. ಏಕೆಂದರೆ, ಇದರ ಪ್ರಕಾರ ಎಲ್ಲವನ್ನೂ ಸರಿಯೆಂದು ಹೇಳಬೇಕಾಗುತ್ತದೆ. ಪ್ರಪಂಚವು ಹೇಗೆ ಉಗಮವಾಯಿತು? ಎಂಬ ಪ್ರಶ್ನೆಗೆ ಅದ್ವೈತವಾದವು ಉತ್ತರಿಸುವುದಿಲ್ಲ ಎಂಬುದನ್ನು ಇದರೊಂದಿಗೆ ಸೇರಿಸಿ ಓದಿ.
ಸೃಷ್ಟಿಕರ್ತನ ಸಾರವೇ ಸೃಷ್ಟಿಯ ಸಾರ ಎಂಬ ಊಹೆಯು ಅಸಂಬದ್ಧ ಊಹೆಯಾಗಿದೆ. ಏಕೆಂದರೆ, ಅದರ ಪ್ರಕಾರ ಒಂದು ವಸ್ತುವಿನ ಉದ್ಭವವು ಸ್ವತಃ ಆದರ ಉದ್ಭವದ ಮೇಲೆ ಅವಲಂಬಿತವಾಗಿದೆಯೆಂದು ಊಹಿಸಬೇಕಾಗುತ್ತದೆ.
ಇದೊಂದು ವಿಚಿತ್ರ ವಿರೋಧಾಭಾಸ ಮತ್ತು ತಾರ್ಕಿಕ ಅಸಂಭವ್ಯತೆಯಾಗಿದೆ.
ಒಂದು ವಸ್ತು ಸ್ವತಃ ತನ್ನ ಉದ್ಭವಕ್ಕೆ ಕಾರಣವಾಗುವುದು ಹೇಗೆ? ವಾಸ್ತವವಾಗಿ, ಅದು ಆಗ ಅಸ್ತಿತ್ವದಲ್ಲೇ ಇರುವುದಿಲ್ಲ.
ನಾಲ್ಕನೆಯ ತೊಡಕು: ಪ್ರಪಂಚ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳು ಅಸ್ತಿತ್ವಕ್ಕೆ ಬಂದವುಗಳು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಬುದ್ಧಿವಂತರೆಲ್ಲರೂ ಇದನ್ನು ದೃಢೀಕರಿಸುತ್ತಾರೆ.
ಪ್ರಪಂಚವು ತನ್ನ ಎಲ್ಲಾ ಶಕ್ತಿ, ದೃವ್ಯ, ಸ್ಥಳ ಮತ್ತು ಕಾಲಗಳೊಂದಿಗೆ ಅಸ್ತಿತ್ವಕ್ಕೆ ಬಂದಿದೆ.
ಪ್ರಪಂಚಕ್ಕೆ ಆರಂಭವಿದೆ ಎಂಬುದು ಅಸಂಖ್ಯ ಪುರಾವೆಗಳ ಮೂಲಕ ಸಾಬೀತಾಗಿದೆ. ವೈಜ್ಞಾನಿಕವಾಗಿ, ಈ ಪ್ರಪಂಚವು ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ ಬೇರೆ ಪ್ರಪಂಚಗಳು ಅಸ್ತಿತ್ವದಲ್ಲಿರಲಿಲ್ಲ.
ಬೇರೆ ಪ್ರಪಂಚಗಳು ಅಸ್ತಿತ್ವದಲ್ಲಿಲ್ಲದ ಕಾಲದ ತನಕ ನಾವು ಅದ್ವೈತವಾದವನ್ನು ಸಮರ್ಥಿಸಲಾಗದು.
ಒಂದು ವೇಳೆ ಅದ್ವೈತವಾದವು ಸರಿಯಾಗಿದ್ದರೆ, ಪ್ರಪಂಚವು ಶಾಶ್ವತವಾಗಿರಬೇಕಿತ್ತು, ಅಥವಾ ಕನಿಷ್ಠ ಪಕ್ಷ ದೃವ್ಯವು ಶಾಶ್ವತವಾಗಿರಬೇಕಿತ್ತು.
ವಿಚಿತ್ರವೇನೆಂದರೆ, ಈಗಿನ ಹಿಂದೂಗಳು ಭೌತಿಕ ಪ್ರಪಂಚವು ಶಾಶ್ವತವಾಗಿದೆ ಎಂಬ ಅಭಿಪ್ರಾಯದಲ್ಲಿ ಅಚಲವಾಗಿ ನಿಲ್ಲುತ್ತಾರೆ; ಏಕೆಂದರೆ ಅದ್ವೈತವಾದವನ್ನು ಸಮರ್ಥಿಸಲು ಇದು ಅವರಿಗೆ ಅತ್ಯಗತ್ಯವಾಗಿದೆ.
ಹಿಂದೂ ವಿದ್ವಾಂಸ ವಿವೇಕಾನಂದರು ಹೇಳುತ್ತಾರೆ: “ಸ್ಥಳವು ಸಮಯ ಅಥವಾ ಘಟನೆಗೆ ಒಳಪಡುವುದಿಲ್ಲ.” [15]
[15] Hinduism, Wiwekanand, p61-63. "ದಅವತುಲ್ ಹಿಂದೂಸಿ ಇಲಲ್ ಇಸ್ಲಾಂ” ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಲೇ: ಡಾ. ಇಬ್ರಾಹೀಂ ಬಿನ್ ಅಬ್ದುಲ್ ಗಫೂರ್, ಇದು ಇವರು ಪಿ.ಎಚ್.ಡಿ. ಗಾಗಿ ಮಾಡಿದ ಸಂಶೋಧನೆ. ಪ್ರಕಾಶನ: ದಾರುಲ್ ಈಲಾಫ್ ಲಿನ್ನಶ್ರಿ ವತ್ತೌಝೀಅ್. (ಪು. 122)
ಅದ್ವೈತವಾದದ ಕಲ್ಪನೆಯೊಂದಿಗೆ ಹೊಂದಾಣಿಕೆಯಾಗುವುದಕ್ಕಾಗಿ ಈಗಿನ ಹಿಂದೂಗಳು ಪ್ರಪಂಚ ಶಾಶ್ವತವಾಗಿದೆ ಎಂದು ಹೇಳಲು ನಿರ್ಬಂಧಿತರಾಗಿದ್ದಾರೆ.
ಆದರೆ, ಅವರು ಈ ವಿಷಯದಲ್ಲಿ ಪ್ರವೇಶಿಸಬೇಕಾಗಿರಲಿಲ್ಲ; ಎಲ್ಲಕ್ಕಿಂತ ಹೆಚ್ಚಾಗಿ, ಅವರಿಗೆ ಅದ್ವೈತವಾದದ ನಂಬಿಕೆಯೇ ಇರಬೇಕಾಗಿರಲಿಲ್ಲ. ಆದರೆ ಸೈತಾನ ಆದಮರ ಸಂತಾನವನ್ನು (ಮನುಷ್ಯರನ್ನು) ದಾರಿತಪ್ಪಿಸಲು ಅವರ ಮಾರ್ಗಗಳಲ್ಲಿ ಕುಳಿತಿದ್ದಾನೆ. ಅವಕಾಶ ಸಿಕ್ಕಿದಾಗಲೆಲ್ಲಾ ಅವನು ಜನರನ್ನು ಪ್ರವಾದಿಗಳ ಮಾರ್ಗದಿಂದ ತಪ್ಪಿಸುತ್ತಾನೆ.
ಸರ್ವಶಕ್ತನಾದ ಅಲ್ಲಾಹನು ಕುದ್ಸಿ (ಪವಿತ್ರ) ಹದೀಸ್‌ನಲ್ಲಿ ಹೇಳುತ್ತಾನೆ: “ನಾನು ನನ್ನ ಎಲ್ಲಾ ದಾಸರನ್ನು ಏಕನಿಷ್ಠರಾಗಿ ಸೃಷ್ಟಿಸಿದ್ದೇನೆ. ಆದರೆ ಸೈತಾನರು ಅವರ ಬಳಿಗೆ ಬಂದು ಅವರನ್ನು ಅವರ ಧರ್ಮದಿಂದ ತಪ್ಪಿಸಿದರು. ನಾನು ಅವರಿಗೆ ಅನುಮತಿಸಿದ್ದನ್ನು ಅವರು ಅವರಿಗೆ ನಿಷೇಧಿಸಿದರು. ನಾನು ಯಾವುದೇ ಪುರಾವೆ ಅವತೀರ್ಣಗೊಳಿಸದವುಗಳನ್ನು ನನ್ನೊಂದಿಗೆ ಸಹಭಾಗಿತ್ವ ಮಾಡುವಂತೆ ಅವರು ಅವರಿಗೆ ಅದೇಶಿಸಿದರು.” [16] [16] ಸಹೀಹ್ ಮುಸ್ಲಿಂ. ಹ.ಸಂಖ್ಯೆ: 2865.
ಆದ್ದರಿಂದ, ಮನುಷ್ಯರೆಲ್ಲರೂ ಏಕದೇವತ್ವದಲ್ಲಿದ್ದರು. ನಂತರ ಸೈತಾನರು ಅವರ ಬಳಿಗೆ ಬಂದು ಇಂತಹ ಸತ್ಯನಿಷೇಧಗಳನ್ನು ಮಾಡುವಂತೆ ಆಮಿಷವೊಡ್ಡಿದರು.
ಪ್ರವಾದಿ(ಸ) ರವರು ಹೇಳುತ್ತಾರೆ: “ಸೈತಾನನು ಆದಮನ ಮಗನಿಗಾಗಿ (ಮನುಷ್ಯನಿಗಾಗಿ) ಅವನ ಎಲ್ಲಾ ಮಾರ್ಗಗಳಲ್ಲಿ ಕುಳಿತಿದ್ದಾನೆ.”[17]
[17] ಸಹೀಹ್ ಸುನನ್ ನಸಾಈ. ಹ.ಸಂಖ್ಯೆ: 3134.
ಆದ್ದರಿಂದ ಸೈತಾನನು ಮನುಷ್ಯನಿಗಾಗಿ ಎಲ್ಲಾ ವಕ್ರ ಮಾರ್ಗಗಳನ್ನು ಅನ್ವೇಷಿಸುತ್ತಾನೆ. ಪ್ರವಾದಿಗಳು ಯಾವ ಏಕದೇವತ್ವ ಮತ್ತು ಆರಾಧನೆಯಲ್ಲಿದ್ದರೋ ಅದನ್ನು ಅಂಗೀಕರಿಸುವುದಲ್ಲದೆ ಅವನಿಂದ ಪಾರಾಗಲು ಬೇರೆ ರಕ್ಷಾಮಾರ್ಗವಿಲ್ಲ.
ಪ್ರಪಂಚವು ಸೃಷ್ಟಿಯಾಗಿದೆ ಮತ್ತು ಅದಕ್ಕೆ ಆರಂಭವಿದೆ ಎಂದು ವೇದಗಳು ಸ್ಪಷ್ಟಪಡಿಸಿವೆ.
ಅದೇ ರೀತಿ, ಪರಮಾತ್ಮನು ತನ್ನ ಸೃಷ್ಟಿಗಳಿಂದ ಪ್ರತ್ಯೇಕವಾಗಿದ್ದಾನೆ ಮತ್ತು ಅವನು ಸೃಷ್ಟಿಗಳಲ್ಲಿ ವಾಸವಾಗಿಲ್ಲವೆಂದೂ ಸ್ಪಷ್ಟಪಡಿಸಿವೆ.
ಹಾಗಾದರೆ, ಹಿಂದೂಗಳು ಅದ್ವೈತವಾದ ಎಂಬ ಈ ನಂಬಿಕೆಗೆ ತಲುಪಿದ್ದು ಹೇಗೆ?
ಋಗ್ವೇದ ऋग्वेद ಹೇಳುತ್ತದೆ: “"ಓ ದೇವಾ, ಸೂರ್ಯ ಮತ್ತು ಪ್ರಪಂಚ ಎರಡಕ್ಕೂ ನಿನ್ನನ್ನು ಆವರಿಸಿಕೊಳ್ಳುವ ಅಥವಾ ನಿನ್ನನ್ನು ಒಳಗೊಳ್ಳುವ ಸಾಮರ್ಥ್ಯವಿಲ್ಲ."[18]
[18] ಋಗ್ವೇದ ಮಂಡಲ: 1, ಸೂಕ್ತ: 10, ಮಂತ್ರ: 8.
ಅದ್ವೈತವಾದವು ತಪ್ಪು ಎಂಬುದಕ್ಕೆ ಇದು ವೇದಗಳಲ್ಲಿರುವ ಸ್ಪಷ್ಟ ಪುರಾವೆಯಾಗಿದೆ. ಪರಮಾತ್ಮನು ತನ್ನ ಸೃಷ್ಟಿಗಳಿಂದ ಪ್ರತ್ಯೇಕವಾಗಿದ್ದಾನೆ. ಸೂರ್ಯ ಮತ್ತು ಚಂದ್ರರು ಪರಮಾತ್ಮರಲ್ಲ.
ಋಗ್ವೇದ ಇನ್ನೊಂದು ಕಡೆ ಹೇಳುತ್ತದೆ: “ರಾತ್ರಿ ಮತ್ತು ಹಗಲನ್ನು ಸೃಷ್ಟಿಸಿದವನು ಯಾರೋ ಅವನೇ ಪರಮಾತ್ಮ. ಅವನು ಭೂಲೋಕ ಮತ್ತು ಅದರಲ್ಲಿರುವ ವಸ್ತುಗಳ ಯಜಮಾನ. ಸೂರ್ಯ, ಚಂದ್ರ, ಭೂಮಿ ಮತ್ತು ಆಕಾಶವನ್ನು ಸೃಷ್ಟಿಸಿದ್ದು ಅವನೇ.” [19]
[19] ಋಗ್ವೇದ ಮಂಡಲ: 10, ಸೂಕ್ತ: 190, ಮಂತ್ರ: 2-3.
ಅದ್ವೈತವಾದವನ್ನು ಮತ್ತು ಭೌತಿಕ ಪ್ರಪಂಚ ಶಾಶ್ವತವಾಗಿ ಅಸ್ತಿತ್ವದಲ್ಲಿತ್ತು ಎಂಬುದನ್ನು ನಿಷೇಧಿಸಲು ಇದಕ್ಕಿಂತ ಸ್ಪಷ್ಟವಾದ ಬೇರೆ ನಂಬಿಕೆ ಯಾವುದಿದೆ?
ಯಜುರ್ವೇದ ಹೇಳುತ್ತದೆ: “ಅವನು ಯಾರೆಂದರೆ ಅವನಿಗಿಂತ ಮೊದಲು ಯಾವುದೇ ಸೃಷ್ಟಿಯಿರಲಿಲ್ಲ; ಅವನು ನಮ್ಮ ಸೃಷ್ಟಿಕರ್ತ; ಅವನು ನಮ್ಮ ಯಜಮಾನ. ಅವನು ಎಲ್ಲವನ್ನೂ ತಿಳಿಯುತ್ತಾನೆ.”[20]
[9] ಯಜುರ್ವೇದ ಸೂಕ್ತ: 32, ಮಂತ್ರ: 13.
ಆದ್ದರಿಂದ ಪರಮಾತ್ಮನಿಗಿಂತ ಮುಂಚೆ ಯಾವುದೇ ಸೃಷ್ಟಿಯು ಅಸ್ತಿತ್ವದಲ್ಲಿರಲಿಲ್ಲ. ಅವನೇ ಆದಿ. ಪ್ರಪಂಚವನ್ನು ಅವನು ಸೃಷ್ಟಿಸಿದನು. ಪ್ರಪಂಚ ಶಾಶ್ವತವಾಗಿ ಅಸ್ತಿತ್ವದಲ್ಲಿರಲಿಲ್ಲ. “ಅವನು ಪರಮೋಚ್ಛನು; ಭೂಮಿ ಮತ್ತು ಆಕಾಶದ ಯಜಮಾನನು.”[21]
[21] ಋಗ್ವೇದ ಮಂಡಲ: 1, ಸೂಕ್ತ: 100, ಮಂತ್ರ: 1.
ಈ ಸ್ಪಷ್ಟ ಸತ್ಯವನ್ನು ಪವಿತ್ರ ಕುರ್‌ಆನ್ ಕೂಡ ದೃಢೀಕರಿಸುತ್ತದೆ. ಅಲ್ಲಾಹು ತನ್ನ ಸೃಷ್ಟಿಗಳಿಂದ ಪ್ರತ್ಯೇಕವಾಗಿದ್ದಾನೆ; ಅವನು ಅರ್ಶಿನಲ್ಲಿ (ಸಿಂಹಾಸನದಲ್ಲಿ) ಆರೂಢನಾಗಿದ್ದಾನೆ; ಅವನು ಅವನ ಸೃಷ್ಟಿಗಳಲ್ಲಿ ವಾಸಿಸುವುದಿಲ್ಲ ಮತ್ತು ಅವನ ಸೃಷ್ಟಿಗಳು ಅವನಲ್ಲಿ ವಾಸಿಸುವುದಿಲ್ಲ ಎಂದು 1400 ವರ್ಷಗಳ ಹಿಂದೆಯೇ ಅಲ್ಲಾಹು ಅವನ ಪ್ರವಾದಿಯಾದ ಮುಹಮ್ಮದ್‌ರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೇವವಾಣಿಯ ಮೂಲಕ ತಿಳಿಸಿದ್ದಾನೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಆರು ದಿನಗಳಲ್ಲಿ (ಹಂತಗಳಲ್ಲಿ) ಆಕಾಶಗಳನ್ನು ಮತ್ತು ಭೂಮಿಯನ್ನು ಹಾಗೂ ಅವುಗಳ ನಡುವೆಯಿರುವ ವಸ್ತುಗಳನ್ನು ಸೃಷ್ಟಿಸಿದವನೇ ಅಲ್ಲಾಹು. ನಂತರ ಅವನು ಅರ್ಶಿನ ಮೇಲೆ ಆರೂಢನಾದನು. ಅವನ ಹೊರತು ನಿಮಗೆ ಯಾವುದೇ ಸಂರಕ್ಷಕರು ಅಥವಾ ಶಿಫಾರಸುಗಾರರಿಲ್ಲ. ನೀವು ಆಲೋಚಿಸುವುದಿಲ್ಲವೇ?”
[ಸೂರ ಸಜ್ದ: 4]
ಆದ್ದರಿಂದ, ಪ್ರವಾದಿಗಳ ವಿಶ್ವಾಸದ ಬುನಾದಿಯು ಮತ್ತು ಅವರ ಧರ್ಮ ಹಾಗೂ ಧರ್ಮಶಾಸ್ತ್ರದ ಬುನಾದಿಯು ಏಕೈಕನೂ ಸೃಷ್ಟಿಕರ್ತನೂ ಆದ ಅಲ್ಲಾಹು ಅವನ ಸೃಷ್ಟಿಗಳಿಂದ ಸಂಪೂರ್ಣ ಬೇರೆಯಾಗಿದ್ದಾನೆ ಎಂಬುದಾಗಿದೆ. ಅಂದರೆ, ಅವನು ಅವನ ಸೃಷ್ಟಿಗಳಿಂದ ಸಂಪೂರ್ಣ ಬೇರ್ಪಟ್ಟಿದ್ದಾನೆ. ಅವನು ಅವರಲ್ಲಿ ವಾಸವಾಗಿಲ್ಲ.
ಅದ್ವೈತವಾದದ ಐದನೆಯ ತೊಡಕೇನೆಂದರೆ: ಈ ವಾದವು ಈ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ: ಪ್ರಪಂಚವು ಎಲ್ಲಿಂದ ಬಂತು? ಈ ವಾದದ ಪ್ರಕಾರ ಪ್ರಪಂಚವು ಹೇಗೆ ಉಗಮವಾಯಿತು? ಮೊತ್ತಮೊದಲು ಈ ವಾದವನ್ನು ವಾದಿಸಿದ್ದು ಯಾರು?
ಅದಕ್ಕಿರುವ ಪುರಾವೆಯೇನು? ಇಂತಹ ಹಲವಾರು ಪ್ರಶ್ನೆಗಳು ಮತ್ತು ಹಲವಾರು ತೊಡಕುಗಳು ಆಧುನಿಕ ವಿಜ್ಞಾನ, ಬುದ್ಧಿ, ವೇದಗಳು ಮತ್ತು ಪ್ರವಾದಿಗಳ ಧರ್ಮಕ್ಕೆ ವಿರುದ್ಧವಾಗಿರುವ ಈ ನಂಬಿಕೆಯನ್ನು ಇನ್ನಷ್ಟು ಜಟಿಲಗೊಳಿಸುತ್ತವೆ. 6. ಹಿಂದೂ ಧರ್ಮವು ಸಾವು ಮತ್ತು ಬದುಕನ್ನು ಹೇಗೆ ಕಾಣುತ್ತದೆ?
ಈಗಿನ ಹಿಂದೂ ಧರ್ಮವು ಪುನರ್ಜನ್ಮ ಅಥವಾ ಅಂತ್ಯವಿಲ್ಲದ ಮರುಹುಟ್ಟು ಎಂಬ ಕಲ್ಪನೆಯ ಮೇಲೆ ನೆಲೆನಿಂತಿದೆ. ಹಿಂದೂ ಕಲ್ಪನೆಯ ಪ್ರಕಾರ ನಾವು ಜನನಗಳ ವೃತ್ತದಲ್ಲಿ ತಿರುಗುತ್ತಾ ಇರುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯೂ ಹಿಂದಿನ ಜನ್ಮದಲ್ಲಿ ಯಾವುದೋ ಜೀವಿಯಲ್ಲಿ ಅಸ್ತಿತ್ವದಲ್ಲಿದ್ದನು; ಮತ್ತು ಅವನ ಸಾವಿನ ಬಳಿಕ ಅವನ ಆತ್ಮವು ಬೇರೆ ಯಾವುದೋ ಜೀವಿಗೆ ವರ್ಗಾವಣೆಯಾಗುತ್ತದೆ. ಇದನ್ನು ಹಿಂದೂ ಧರ್ಮದಲ್ಲಿ ಸಂಸಾರ संसार ಎಂಬ ಪಾರಿಭಾಷಿಕ ಪದದಿಂದ ಗುರುತಿಸಲಾಗುತ್ತದೆ. ಪುನರ್ಜನ್ಮ ಸಿದ್ಧಾಂತದಲ್ಲಿ ಅನೇಕ ತಾರ್ಕಿಕ ಮತ್ತು ವೈಜ್ಞಾನಿಕ ತೊಡಕುಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ:
ಮೊದಲನೆಯ ತೊಡಕು: ಇದನ್ನು ‘ಟೆರ್ಟುಲಿಯನ್‌ನ ಆಕ್ಷೇಪಣೆ’ (Tertullian's objection) ಎಂದು ಕರೆಯುತ್ತಾರೆ. ಅದು ಹೇಳುತ್ತದೆ: “ಒಂದು ವೇಳೆ ಪುನರ್ಜನ್ಮವು ಸತ್ಯವಾಗಿದ್ದರೆ, ನವಜಾತ ಶಿಶುಗಳು ವಯಸ್ಕರ ಅದೇ ಬೌದ್ಧಿಕ ಸಾಮರ್ಥ್ಯಗಳೊಂದಿಗೆ ಏಕೆ ಹುಟ್ಟುವುದಿಲ್ಲ?”[23] [23] Cogan, Robert. (1998), Critical Thinking: Step by Step, University Press of America, pp. 202–203. ಎರಡನೆಯ ತೊಡಕು: ಪುನರ್ಜನ್ಮವು ಸತ್ಯವಾಗಿದ್ದರೆ, ಜೀವಿಗಳ ಸಂಖ್ಯೆ ಸ್ಥಿರವಾಗಿರಬೇಕು. ಏಕೆಂದರೆ, ಅವು ಪರಸ್ಪರ ಒಂದು ಇನ್ನೊಂದರಲ್ಲಿ ಜನ್ಮ ತಾಳುತ್ತವೆ. ಆದರೆ ಇಂದು ಯಾವ ಮನುಷ್ಯನೂ ಈ ರೀತಿ ಹೇಳುವುದಿಲ್ಲ!
ಭೂಮಿಯು ಅಸ್ತಿತ್ವದಲ್ಲಿಯೇ ಇರದ ಒಂದು ಕಾಲವಿತ್ತು; ಭೂಮಿಯ ಮೇಲೆ ಜೀವಿಗಳು ಅಸ್ತಿತ್ವದಲ್ಲಿಲ್ಲದ ಒಂದು ಕಾಲವಿತ್ತು; ಮತ್ತು ಜೀವಿಗಳು ಇಂದು ಇರುವ ಸಂಖ್ಯೆಯಲ್ಲಿ ಅಸ್ತಿತ್ವದಲ್ಲಿಲ್ಲದ—ಅಂದರೆ ಬಹಳ ಕಡಿಮೆ ಸಂಖ್ಯೆಯಲ್ಲಿ ಅಸ್ತಿತ್ವದಲ್ಲಿದ್ದ—ಒಂದು ಕಾಲವೂ ಇತ್ತು ಎಂದು ರುಜುವಾತಾಗಿದೆ. ನಂತರ ಕಾಲಕ್ರಮೇಣ ಜೀವಿಗಳ ಸಂಖ್ಯೆ ಹೆಚ್ಚಾಯಿತು. ಇದು ಇಂದು ಎಲ್ಲರೂ ಒಪ್ಪಿಕೊಳ್ಳುವ ವಿಚಾರವಾಗಿದೆ.
ಅಂತೆಯೇ, ಮನುಷ್ಯರ ಸಂಖ್ಯೆಯು ಇವತ್ತಿನ ಸಂಖ್ಯೆಗಿಂತ ಬಹಳ ಕಡಿಮೆಯಿದ್ದ ಒಂದು ಕಾಲವೂ ಇತ್ತು.
ಮನುಷ್ಯರ ಸಂಖ್ಯೆಯು ಇಂತಿಷ್ಟೇ ಎಂದು ಸರ್ವಾನುಮತದಿಂದ ಸಾಬೀತಾಗಿಲ್ಲ. ಹೀಗಿರುವಾಗ, ಪುನರ್ಜನ್ಮವು ನಿಶ್ಚಿತ ಚಕ್ರಗಳಲ್ಲಿ ಹೇಗೆ ಸಂಭವಿಸುತ್ತದೆ?
ಮೂರನೆಯ ತೊಡಕು: ಪುನರ್ಜನ್ಮದ ತತ್ವಶಾಸ್ತ್ರದಲ್ಲಿರುವ ಜನರನ್ನು ಹೊರತುಪಡಿಸಿದರೆ, ಯಾರೂ ತಮ್ಮ ಹಿಂದಿನ ಜನ್ಮವನ್ನು ಸ್ಮರಿಸುವುದಿಲ್ಲವೇಕೆ?
ಅಮೇರಿಕಾದಲ್ಲಿ ರುತ್ ಸಿಮನ್ಸ್ (Ruth Simmons) ಎಂಬ ಹೆಸರಿನ ಒಬ್ಬ ಮಹಿಳೆಯಿದ್ದಳು. ಹಿಂದಿನ ಜನ್ಮದಲ್ಲಿ ಬ್ರೈಡೆ ಮರ್ಫಿ (Bridey Murphy) ಆಗಿದ್ದ ಮಹಿಳೆಯ ಆತ್ಮವಾಗಿ ನಾನು ಈ ಜನ್ಮದಲ್ಲಿ ಮರುಹುಟ್ಟು ಪಡೆದಿದ್ದೇನೆ ಎಂದು ಆಕೆ ಹೇಳಿಕೊಂಡಳು. 19ನೇ ಶತಮಾನದಲ್ಲಿ ಐರ್ಲೆಂಡ್‌ನಲ್ಲಿ ಮರ್ಫಿಯಾಗಿ ಜೀವಿಸಿದ್ದ ಸಿಮನ್ಸ್ ತನ್ನ ಹಿಂದಿನ ನೆನಪುಗಳನ್ನು ಸ್ಮರಿಸಲು ಪ್ರಾರಂಭಿಸಿದಳು. ಆದರೆ, ಸಂಶೋಧಕರು ರುತ್ ಸಿಮನ್ಸ್‌ಳ ಜೀವನವನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ, ಆಕೆಗೆ ಐರ್ಲೆಂಡ್‌ನಲ್ಲಿ ಬ್ರೈಡೆ ಮರ್ಫಿ ಎಂಬ ಹಳೆಯ ನೆರೆಯಾಕೆಯಿದ್ದಳು ಎಂಬ ಸತ್ಯ ತಿಳಿದು ಬಂತು. ಆಕೆ ಐರ್ಲೆಂಡ್‌ನಲ್ಲಿದ್ದ ಬ್ರೈಡೆಯ ನೆನಪುಗಳನ್ನು ತನ್ನ ಜೀವನಕ್ಕೆ ಜೋಡಿಸಿ, ತಾನೇ ಬ್ರೈಡೆ ಎಂದು ವಾದಿಸಿದ್ದಳು.[24]
[24] ರುತ್ ಸಿಮನ್ಸ್‌ಳ ಸ್ಥಿತಿಯ ವಿವರಣೆ: https://www.ncbi.nlm.nih.gov/pubmed/12116612 (ಡಾ. ಫೌಜ್ ಕುರ್ದಿಯವರ ಜಾಲತಾಣದಿಂದ ತೆಗೆದುಕೊಳ್ಳಲಾಗಿದೆ).
ಆದ್ದರಿಂದ, ಪುನರ್ಜನ್ಮ ಸಿದ್ಧಾಂತವು ಕೇವಲ ಒಂದು ಭ್ರಮೆ ಮತ್ತು ಭ್ರಾಂತಿಯಾಗಿದೆ. ಮಾತ್ರವಲ್ಲದೆ, ಅದು ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದ ಮೂಲತತ್ವಗಳಿಗೂ ವಿರುದ್ಧವಾಗಿದೆ.
ಎನ್‌ಸೈಕ್ಲೋಪೀಡಿಯಾ ಆಫ್ ಫಿಲಾಸಫಿಯ ಪ್ರಧಾನ ಸಂಪಾದಕ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪೌಲ್ ಎಡ್ವರ್ಡ್ಸ್ ಹೇಳುತ್ತಾರೆ: “ಪುನರ್ಜನ್ಮವು ಕೇವಲ ಒಂದು ಭ್ರಮೆಯಾಗಿದ್ದು ಅದು ಆಧುನಿಕ ವಿಜ್ಞಾನಕ್ಕೆ ವಿರುದ್ಧವಾಗಿದೆ.” [25]
[25] Edwards, Paul. (2001), Reincarnation: A Critical Examination, Prometheus Books.
ಒಟ್ಟಿನಲ್ಲಿ, ಮನುಷ್ಯ ಸತ್ತರೆ, ಅವನು ಪುನಃ ಇನ್ನೊಂದು ಜನ್ಮದಲ್ಲಿ ಹುಟ್ಟುವುದಿಲ್ಲ.
ಈ ಸತ್ಯವನ್ನು ವೇದಗಳು ನಿರಂತರವಾಗಿ ಒತ್ತಿಹೇಳಿವೆ. ವೇದಗಳಲ್ಲಿ ಎಲ್ಲಿಯೂ ಪುನರ್ಜನ್ಮ ಅಥವಾ ಸಂಸಾರದ ಬಗ್ಗೆ ಉಲ್ಲೇಖಗಳಿಲ್ಲ.[26]
[26] Yuvraj Krishan: Bharatiya Vidya Bhavan, 1997.
ಎಲ್ಲಿಯವರೆಗೆಂದರೆ, ಹಿಂದೂ ವಿದ್ವಾಂಸರಾದ ಶ್ರೀ ಸತ್ಯಕಾಂ ವಿದ್ಯಾಲಂಕರ್ ಹೇಳುತ್ತಾರೆ: “ಪುನರ್ಜನ್ಮ ಸಿದ್ಧಾಂತವು ವೇದಗಳಲ್ಲಿಲ್ಲ. ಇದೆಯೆಂದು ಹೇಳುವವರಿಗೆ ನಾನು ಸವಾಲು ಹಾಕುತ್ತೇನೆ.” [27]
[27] ಆವಾಗಮನ್ ಪುಟ 104; "ದಅವತುಲ್ ಹಿಂದೂಸಿ ಇಲಲ್ ಇಸ್ಲಾಂ” ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಲೇ: ಡಾ. ಇಬ್ರಾಹೀಂ ಬಿನ್ ಅಬ್ದುಲ್ ಗಫೂರ್, ಇದು ಇವರು ಪಿ.ಎಚ್.ಡಿ. ಗಾಗಿ ಮಾಡಿದ ಸಂಶೋಧನೆ. ಪ್ರಕಾಶನ: ದಾರ್ ಈಲಾಫ್ ಲಿನ್ನಶ್ರಿ ವತ್ತೌಝೀಅ್. (ಪು. 99)
ಹಿಂದೂಗಳು ಹಿಂದಿನ ಕಾಲದಿಂದಲೂ ಮಾಡುತ್ತಾ ಬರುತ್ತಿರುವ 'ಶ್ರಾದ್ಧ’ (Śrāddha श्राद्ध) ಎಂಬ ಧಾರ್ಮಿಕ ಆಚರಣೆಯು ವಿದ್ಯಾಲಂಕರ್‌ರ ಅಭಿಪ್ರಾಯ ಸರಿ ಎಂಬುದಕ್ಕೆ ಅತ್ಯುತ್ತಮ ಪುರಾವೆಯಾಗಿದೆ. ಸತ್ತವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುವುದು ಈ ಆಚರಣೆಯ ಉದ್ದೇಶವಾಗಿದೆ.
ಹಿಂದೂಗಳು ಸತ್ತವರ ಆತ್ಮಗಳನ್ನು ಶಾಂತಗೊಳಿಸುತ್ತಿರುವಾಗ, ಆ ಆತ್ಮಗಳು ಮರುಹುಟ್ಟು ಪಡೆಯುವುದು ಹೇಗೆ?!
ಅಲ್ಲಾಹು ಪ್ರವಾದಿ ಮುಹಮ್ಮದ್‌ರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವತೀರ್ಣಗೊಳಿಸಿದ ಪವಿತ್ರ ಕುರ್‌ಆನ್ ಪುನರ್ಜನ್ಮ ಪ್ರತಿಪಾದಕರಿಗೆ ಸ್ಪಷ್ಟ ಉತ್ತರ ನೀಡುತ್ತದೆ. ಅವರಲ್ಲಿ ಕೆಲವರು ಹೀಗೆ ಹೇಳಿದ್ದರು:
“ಇದು ನಮ್ಮ ಇಹಲೋಕ ಜೀವನವಲ್ಲದೆ ಇನ್ನೇನೂ ಅಲ್ಲ. ನಾವು ಸಾಯುತ್ತೇವೆ ಮತ್ತು ಬದುಕುತ್ತೇವೆ. ನಮ್ಮನ್ನು ಪುನರುತ್ಥಾನಗೊಳಿಸಲಾಗುವುದಿಲ್ಲ.”
[ಸೂರ ಮೂಮಿನೂನ್: 37]
ಅಲ್ಲಾಹು ಅವರ ವಾದಕ್ಕೆ ಉತ್ತರ ನೀಡುತ್ತಾ ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ:
“ಅವರಿಗಿಂತ ಮುಂಚೆ ನಾವು ಎಷ್ಟು ತಲೆಮಾರುಗಳನ್ನು ನಾಶ ಮಾಡಿದ್ದೇವೆಂದು ಅವರು ನೋಡುವುದಿಲ್ಲವೇ? ಅವರಂತೂ ಇವರ ಬಳಿಗೆ ಮರಳಿ ಬರುವುದಿಲ್ಲ.” [ಸೂರ ಯಾಸೀನ್: 31] ಸತ್ತವನು ಇಹಲೋಕಕ್ಕೆ ಮರಳಿ ಬರುವುದಿಲ್ಲ; ಎರಡನೇ ಬಾರಿ ಹುಟ್ಟುವುದೂ ಇಲ್ಲ.
[28] ಇಮಾಂ ಕುರ್ತುಬಿ ತಮ್ಮ ಕುರ್‌ಆನ್ ವ್ಯಾಖ್ಯಾನ ಗ್ರಂಥದಲ್ಲಿ ಹೇಳುತ್ತಾರೆ: “ಸತ್ತ ನಂತರ ಪುನರುತ್ಥಾನ ದಿನಕ್ಕೆ ಮುಂಚೆ ಕೆಲವರು ಭೂಲೋಕಕ್ಕೆ ಮರಳಿ ಬರುತ್ತಾರೆಂದು ಹೇಳುವವರಿಗೆ ಈ ಶ್ಲೋಕವು ಉತ್ತರ ನೀಡುತ್ತದೆ.” ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಅವರು ಅಲ್ಲಿ ಮೊದಲನೇ ಮರಣವನ್ನಲ್ಲದೆ ಬೇರೆ ಮರಣವನ್ನು ಆಸ್ವಾದಿಸುವುದಿಲ್ಲ.”
[ಸೂರ ದುಖಾನ್: 56]
ಇದು ಮುಸಲ್ಮಾನರ ನಂಬಿಕೆ. ಇದು ವೇದಗಳ ನಂಬಿಕೆಯೂ ಆಗಿದೆ. ಆದರೆ ದುರದೃಷ್ಟವಶಾತ್, ಹಿಂದೂಗಳು ಈ ನಂಬಿಕೆಯನ್ನು ತೊರೆದಿದ್ದಾರೆ.
ಪುನರ್ಜನ್ಮ ಸಿದ್ಧಾಂತದ ನಾಲ್ಕನೆಯ ತೊಡಕು: ನಿರಂತರ ಮರುಹುಟ್ಟುಗಳಿಂದ ಮುಕ್ತಿ ಪಡೆದು ಪರಮಾರ್ಥದೊಂದಿಗೆ ಲೀನವಾಗುವ, ಅಥವಾ ಅವರು ಮೋಕ್ಷವೆಂದು ಕರೆಯುವ ಹಂತಕ್ಕೆ ತಲುಪುವುದೇ ಇದರ ಗುರಿಯೆಂದು ಅವರು ವಾದಿಸುತ್ತಾರೆ. ಈ ವಾದದ ಪ್ರಕಾರ ಮರುಹುಟ್ಟು ಪಡೆಯುವುದು ಶಿಕ್ಷೆಯೆಂದು ಅರ್ಥೈಸಬೇಕಾಗುತ್ತದೆ.
ಆದರೆ, ಮರುಹುಟ್ಟು ಪಡೆಯುವುದು ಶಿಕ್ಷೆ ಎಂದು ಯಾರಾದರೂ ಹೇಳಿದ್ದಾರೆಯೇ?
ಬಹುಸಂಖ್ಯಾತ ಜನರೊಡನೆ, ನೀವು ಎರಡನೇ ಬಾರಿ ಹುಟ್ಟಲು ಬಯಸುತ್ತೀರಾ, ಮತ್ತು ಜೀವನವನ್ನು ಇನ್ನೊಮ್ಮೆ ಅನುಭವಿಸಲು ಬಯಸುತ್ತೀರಾ ಎಂದು ಕೇಳಿದರೆ, ಅವರಲ್ಲಿ ಹೆಚ್ಚಿನವರೂ ಹೌದು ಎಂದು ಹೇಳಲು ಎಂದಿಗೂ ಹಿಂಜರಿಯಲಾರರು.
ಅಷ್ಟೇ ಅಲ್ಲ, ಮಾನವಾಸ್ತಿತ್ವವು ಶಿಕ್ಷೆಯಾಗಿದೆ ಎನ್ನುವ ಈ ನಿರಾಶಾಭಾವದ ಸಿದ್ಧಾಂತವು ಮಿಥ್ಯ ಸಿದ್ಧಾಂತವಾಗಿದೆ. ಏಕೆಂದರೆ, ಮಾನವಾಸ್ತಿತ್ವದಲ್ಲಿ ಅನೇಕ ಒಳಿತುಗಳಿವೆ ಮತ್ತು ಅದರಲ್ಲಿ ಅಸಂಖ್ಯಾತ ಅನುಗ್ರಹಗಳೂ ಇವೆ.
ಆದ್ದರಿಂದ, ಮೋಕ್ಷ ಎಂದರೆ ವಾಸ್ತವವಾಗಿ ಅಸ್ತಿತ್ವದಲ್ಲೇ ಇಲ್ಲದ ಒಂದು ವಸ್ತುವಿನಿಂದ ಕಾಲ್ಪನಿಕ ಮುಕ್ತಿ ಪಡೆಯುವುದಾಗಿದೆ!
ಐದನೆಯ ತೊಡಕು: ಪುನರ್ಜನ್ಮ ಸಿದ್ಧಾಂತವು ಯಾವುದೇ ಅಪರಾಧ ಅಥವಾ ಪಾಪವನ್ನು ಮಾಡುವ ವಿಷಯದಲ್ಲಿ ನಿಗಾ ವಹಿಸದಂತೆ ಉತ್ತೇಜಿಸುತ್ತದೆ. ಮಾತ್ರವಲ್ಲ, ಅದು ಅಪರಾಧವೆಸಗುವುದನ್ನು ಸಮರ್ಥಿಸುತ್ತದೆ. ಏಕೆಂದರೆ, ಮುಂದಿನ ಯಾವುದಾದರೂ ಒಂದು ಜನ್ಮದಲ್ಲಿ ಮೋಕ್ಷ ಪಡೆಯುವುದು ಶತಸಿದ್ಧವಾದ್ದರಿಂದ, ಮನುಷ್ಯನು ಈಗ ಇರುವ ಜನ್ಮವನ್ನು ಸಾಧ್ಯವಾದಷ್ಟು ಆನಂದಿಸುವಂತೆ ಮಾಡುತ್ತದೆ.
ಇದು ಅಪರಾಧವೆಸಗುವ ಮನೋಭಾವದೊಡನೆ ರಾಜಿ ಮಾಡಿಕೊಳ್ಳುವಂತಿದೆ. ಬಹುಶಃ ಈ ಕಾರಣದಿಂದಲೇ, ಅಪರಾಧವೆಸಗುವುದರಲ್ಲಿ—ವಿಶೇಷವಾಗಿ ಅತ್ಯಾಚಾರ ಅಪರಾಧಗಳಲ್ಲಿ—ಭಾರತವು ಜಾಗತಿಕ ಸೂಚ್ಯಂಕದಲ್ಲಿ ಅತ್ಯಚ್ಛ ಸ್ಥಾನದಲ್ಲಿದೆಯೆಂದು ಪರಿಗಣಿಸಲಾಗುತ್ತದೆ.[29] [29] https://en.wikipedia.org/wiki/Rape_in_India ಸಾಮೂಹಿಕ ಅತ್ಯಾಚಾರ ಅಪರಾಧಗಳಲ್ಲೂ ಭಾರತವು ಉಳಿದ ದೇಶಗಳಿಗಿಂತ ಮುಂಚೂಣಿಯಲ್ಲಿದೆ.
7. ಹಿಂದೂಗಳಲ್ಲಿರುವ ನಿರಂತರ ಮರುಹುಟ್ಟು ಮತ್ತು ಪುನರ್ಜನ್ಮ ಕಲ್ಪನೆಯ ಮೂಲ ಯಾವುದು?
ಈ ಕಲ್ಪನೆಗಳು ಎಲ್ಲಿಂದ ಉಗಮವಾದವು, ಯಾರು ಅದಕ್ಕೆ ಅಸ್ಥಿವಾರ ಹಾಕಿದರು ಮತ್ತು ಅದಕ್ಕೆ ಪುರಾವೆಗಳೇನು ಎಂಬುದು ಯಾರಿಗೂ ತಿಳಿದಿಲ್ಲ.
ನಿರಂತರ ಮರುಹುಟ್ಟು ಕಲ್ಪನೆಗೆ ವೇದಗಳಲ್ಲಿ ಯಾವುದೇ ಪುರಾವೆಯಿಲ್ಲ. ಪುನರ್ಜನ್ಮದ ಬಗ್ಗೆ ವೇದಗಳಲ್ಲಿ ಒಂದೇ ಒಂದು ಉಲ್ಲೇಖವಿಲ್ಲ. ಈ ಕಲ್ಪನೆಗಳು ಇತ್ತೀಚಿನ ಪುರಾಣಗಳಲ್ಲೇ ಹೊರತು ಕಾಣಿಸಿಕೊಂಡಿಲ್ಲ.
‘ಪ್ರಾಣಾಯಾಮ’ ಎಂದು ಕರೆಯಲಾಗುವ ಆಚರಣೆಯಲ್ಲಿ ಸಂಭವಿಸುವಂತೆ, ದೀರ್ಘ ಕಾಲ ಆಹಾರ ಪಾನೀಯಗಳನ್ನು ಸೇವಿಸದೆ ತಪಸ್ಸು ಕುಳಿತ ಪರಿಣಾಮವಾಗಿ ಹಿಂದೂ ಸನ್ಯಾಸಿಗಳ ಮನಸ್ಸಿನಲ್ಲಿ ಭ್ರಮೆಗಳ ಒಂದು ವಿಧವಾಗಿ ಈ ಕಲ್ಪನೆಗಳು ಬಂದಿರಬಹುದು ಎಂಬುದನ್ನು ನಿರಾಕರಿಸಲಾಗದು.
ಎಲ್ಲರೂ ತಿಳಿದಿರುವಂತೆ, ‘ಪ್ರಾಣಾಯಾಮ’ ಎಂದರೆ ಆಹಾರ ಪಾನೀಯ ಸೇವಿಸದೆ ದೀರ್ಘ ಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದಾಗಿದೆ.
ಹೀಗೆ ನಿಶ್ಚಿತ ಭಂಗಿಯಲ್ಲಿ, ಆಹಾರ ಪಾನೀಯ ಸೇವಿಸದೆ, ತಾಸುಗಟ್ಟಲೆ ನಿಶ್ಚಲವಾಗಿ ಕುಳಿತುಕೊಂಡರೆ, ಅದು ಕಾಲಕ್ರಮೇಣ ಮೆದುಳಿನಲ್ಲಿ ಅಯಾನುಗಳ ಕೊರತೆ ಉಂಟುಮಾಡುತ್ತದೆ. ರಕ್ತದಲ್ಲಿ ಗ್ಲುಕೋಸ್ ಅಂಶ ಕಡಿಮೆಯಾಗುವುದೇ ಇದಕ್ಕೆ ಕಾರಣ. ತತ್ಪರಿಣಾಮವಾಗಿ ಎಂಡಾರ್ಫಿನ್ ಹಾರ್ಮೋನುಗಳು ಅನಿಯಂತ್ರಿತವಾಗಿ ಸ್ರವಿಸುತ್ತವೆ, ಮತ್ತು ಮನಸ್ಸಿನಲ್ಲಿ ನಿಜವಾದ ವಿಭ್ರಾಂತಿಕಾರಿ ಭಾವನೆಗಳು ಉಂಟಾಗಲು ತೊಡಗುತ್ತವೆ.[30]
[30] https://www.ncbi.nlm.nih.gov/pubmed/8931651 (ಅಮೇರಿಕಾದ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಜಾಲತಾಣ. ಇದು ಸರ್ಕಾರಿ ಜಾಲತಾಣವಾಗಿದ್ದು ವಿಶ್ವದ ಅತಿದೊಡ್ಡ ವೈದ್ಯಕೀಯ ಸಂಶೋಧನಾ ಅವಲೋಕನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ).
ನಿರಂತರ ಮರುಹುಟ್ಟುಗಳ ಬಗ್ಗೆ ಸನ್ಯಾಸಿಗಳು ಏನು ಅನುಭವಿಸಿದರೋ ಮತ್ತು ಪುರಾಣಗಳಲ್ಲಿ ಏನು ಬರೆದಿಟ್ಟರೋ ಅದು ವಿಭ್ರಾಂತಿಯಾಗಿರಲು ಮತ್ತು ಮೆದುಳಿನ ಮರಗಟ್ಟುವಿಕೆಯಾಗಿರಲು ಹೆಚ್ಚು ಹತ್ತಿರದಲ್ಲಿದೆ.
ಇದಕ್ಕೆ ಆಧುನಿಕ ವಿಜ್ಞಾನದ ದೃಢೀಕರಣವಿದೆ. ಏಕೆಂದರೆ, ಅಮೇರಿಕದ ಸರಕಾರಿ ಜಾಲತಾಣವಾಗಿರುವ ಮತ್ತು ವಿಶ್ವದ ಅತಿದೊಡ್ಡ ವೈದ್ಯಕೀಯ ಸಂಶೋಧನೆಗಳ ಅವಲೋಕನವೆಂದು ಪರಿಗಣಿಸಲಾಗುವ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಜಾಲತಾಣವು ದೃಢೀಕರಿಸುವಂತೆ ಈ ರೀತಿಯಲ್ಲಿ ದೀರ್ಘ ಸಮಯದ ತನಕ ರಕ್ತದಲ್ಲಿ ಗ್ಲುಕೋಸ್ ಕಡಿಯಾಗುವುದು ವಿಭ್ರಾಂತಿಗೆ ಕಾರಣವಾಗುತ್ತದೆ.[31]
[31] ಮೇಲಿನ ಅದೇ ಕೊಂಡಿಯನ್ನು ನೋಡಿ.
ಇಮಾಂ ದಹಬಿ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಹೇಳುತ್ತಾರೆ: “ಜ್ಞಾನಶೂನ್ಯನಾಗಿರುವ ಒಬ್ಬ ಭಕ್ತ, ಐಹಿಕ ವಿರಕ್ತನಾಗಿ, ವಿವಾಹವಾಗದೆ, ಆಹಾರ ಸೇವಿಸದೆ, ಮಾಂಸ ಮತ್ತು ಹಣ್ಣುಗಳನ್ನು ತ್ಯಜಿಸಿ, ಕೆಲವು ತುಂಡು ಆಹಾರಗಳಿಗೆ ಮಾತ್ರ ತನ್ನನ್ನು ಸೀಮಿತಗೊಳಿಸಿ ಜೀವಿಸಿದರೆ, ಮಾನಸಿಕ ಕಲ್ಪನೆಗಳು ಅವನನ್ನು ಬೆಂಬಿಡದೆ ಕಾಡುತ್ತವೆ; ಮತ್ತು ಸೈತಾನನು ಅವನ ಒಳಗೂ ಹೊರಗೂ ಪ್ರವೇಶ ಮಾಡುತ್ತಾನೆ. ತಾನು ಜ್ಞಾನೋದಯದ ಮಟ್ಟವನ್ನು ತಲುಪಿದ್ದೇನೆ, ತನ್ನಲ್ಲಿ ಯಾರೋ ಮಾತನಾಡುತ್ತಿದ್ದಾರೆ, ಮತ್ತು ತಾನು ಅಭಿವೃದ್ದಿಹೊಂದುತ್ತಿದ್ದೇನೆಂದು ಆತ ಭಾವಿಸುತ್ತಾನೆ. ನಂತರ ಸೈತಾನನು ಅವನ ಮೇಲೆ ಹಿಡಿತವನ್ನು ಸಾಧಿಸಿ ಅವನಿಗೆ ದುರ್ಬೋಧನೆಗಳನ್ನು ನೀಡಲು ತೊಡಗುತ್ತಾನೆ.”[32]
[32] ಸಿಯರ್ ಅಅ್‌ಲಾಮಿ ನ್ನುಬಲಾ, ಅನುವಾದ: ಅಹ್ಮದ್ ಬಿನ್ ಅಬೂ ಹವಾರಿ. ಡಾ. ಫೌಝ್ ಕುರ್ದಿಯ ಜಾಲತಾಣದಿಂದ.
ಈ ಕಾರಣದಿಂದಲೇ, ಇಸ್ಲಾಂ ಧರ್ಮವು ಈ ರೀತಿಯಲ್ಲಿರುವ ವೈರಾಗ್ಯ ಮತ್ತು ಈ ರೂಪದಲ್ಲಿರುವ ಆತ್ಮಕಠೋರತೆಯ ಬಗ್ಗೆ ಎಚ್ಚರಿಕೆ ನೀಡಿದೆ.
ಈ ಆತ್ಮಕಠೋರತೆಯು ಕಲ್ಪನೆಗಳ ಕೊರತೆಗೆ ಮತ್ತು ಕಾಲಕ್ರಮೇಣ ಧಾರ್ಮಿಕ ಪತನಕ್ಕೆ ಕಾರಣವಾಗುತ್ತದೆ.
ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ:
“ಹೇಳಿರಿ: ಅಲ್ಲಾಹು ಅವನ ದಾಸರಿಗಾಗಿ ಹೊರತಂದ ಅಲಂಕಾರಗಳನ್ನು ಮತ್ತು ಶುದ್ಧವಾದ ಆಹಾರ ವಸ್ತುಗಳನ್ನು ನಿಷೇಧಿಸಿದವರು ಯಾರು?”
[ಸೂರ ಅಅ್‌ರಾಫ್: 32]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನೀವು ನಿಮ್ಮ ಮೇಲೆ ಕಠಿಣಗೊಳಿಸಬೇಡಿ. ಹಾಗೆ ಮಾಡಿದರೆ ಅಲ್ಲಾಹು ನಿಮ್ಮ ಮೇಲೆ ಕಠಿಣಗೊಳಿಸುವನು. ನಿಶ್ಚಯವಾಗಿಯೂ, ಕೆಲವು ಜನರು ಸ್ವತಃ ತಮ್ಮ ಮೇಲೆ ಕಠಿಣಗೊಳಿಸಿದರು. ಆಗ ಅಲ್ಲಾಹು ಕೂಡ ಅವರ ಮೇಲೆ ಕಠಿಣಗೊಳಿಸಿದನು. ನೀವು ಮಠಗಳಲ್ಲಿ ಮತ್ತು ಆಶ್ರಮಗಳಲ್ಲಿ ಕಾಣುತ್ತಿರುವುದು ಅವರ ಅವಶೇಷಗಳಾಗಿವೆ.”
“ಮತ್ತು ಸನ್ಯಾಸತ್ವವನ್ನು ಅವರೇ ಸ್ವತಃ ಆವಿಷ್ಕರಿಸಿದರು. ನಾವು ಅದನ್ನು ಅವರಿಗೆ ಕಡ್ಡಾಯಗೊಳಿಸಿಲ್ಲ.” [ಸೂರ ಹದೀದ್ :[27]”.[33]
[33] ಸುನನ್ ಅಬೂ ದಾವೂದ್ ಹ.ಸಂಖ್ಯೆ 4904; ಸಹೀಹ್ ಹದೀಸ್.
ಈ ಕಠೋರತೆಗಳು ವಿಭ್ರಾಂತಿಗಳನ್ನು ಹುಟ್ಟುಹಾಕಿದವು ಮತ್ತು ಈಗಿನ ಹಿಂದೂ ಧರ್ಮದ ಮೂಲ ಸಿದ್ಧಾಂತಗಳಲ್ಲಿ ಒಂದಾಗಿ ಬಿಟ್ಟ, ವೇದಕ್ಕೆ ವಿರುದ್ಧವಾದ ಇಂತಹ ಕಲ್ಪನೆಗಳನ್ನು ಮೂಡಿಸಿದವು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಅಲ್ಲಾಹು ಅವನ ಪ್ರವಾದಿಗಳನ್ನು ಬೆಂಬಲಿಸುವುದಕ್ಕಾಗಿ ತೋರಿಸುವ ನಿಜವಾದ ಪವಾಡಗಳ ಕಡೆಗೆ ನಾವು ನೋಡಿದರೆ, ಪವಾಡಗಳು ಹಠಾತ್ತಾಗಿ ಯಾವುದೇ ಪೂರ್ವಸಿದ್ಧತೆಗಳಿಲ್ಲದೆ ಸಂಭವಿಸುತ್ತವೆ. ಜನರು ಅವುಗಳನ್ನು ಕಣ್ಣಾರೆ ಕಂಡು ಅವುಗಳಿಗೆ ಸಾಕ್ಷಿಯಾಗುತ್ತಾರೆ. ಅದರಂತಿರುವ ಪವಾಡವನ್ನು ತೋರಿಸಲು ಜನರಿಗೆ ಸಾಧ್ಯವಾಗುವುದಿಲ್ಲ.
ಇದು ಅಂಬಿಯಾಗಳ ಪವಾಡಗಳು ಮತ್ತು ಹಿಂದೂ ಸನ್ಯಾಸಿಗಳು ಕಾಣುವ ವಿಭ್ರಾಂತಿಗಳಲ್ಲಿರುವ ವ್ಯತ್ಯಾಸ.
8. ಹಿಂದೂಗಳು ಪ್ರಪಂಚವನ್ನು ಹೇಗೆ ನೋಡುತ್ತಾರೆ?
ಹಿಂದೂ ತತ್ವಶಾಸ್ತ್ರದ ಪ್ರಕಾರ, ಪ್ರಪಂಚವು ಅಳಿವಿನ ಅಂಚಿನಲ್ಲಿದೆ. ನಂತರ ಅದು ಪುನಃ ಎದ್ದು ಬರುತ್ತದೆ. ಇದು ಹೀಗೆ ನಿರಂತರ ಸಂಭವಿಸುತ್ತಲೇ ಇರುತ್ತದೆ.
ಅಂದರೆ, ಪ್ರಪಂಚ ರಚನೆಯಾಗುತ್ತದೆ, ನಂತರ ನಾಶವಾಗುತ್ತದೆ, ನಂತರ ಪುನಃ ರಚನೆಯಾಗುತ್ತದೆ... ಹೀಗೆ.
ನಾಶವಾಗುತ್ತದೆ ಮತ್ತು ಪುನಃ ರಚನೆಯಾಗುತ್ತದೆ ಎಂಬ ಪ್ರಪಂಚದ ಬಗ್ಗೆಯಿರುವ ಈ ದೃಷ್ಟಿಕೋನವು ವೈಜ್ಞಾನಿಕವಾಗಿ ತಪ್ಪಾಗಿದೆ.
ವೈಜ್ಞಾನಿಕವಾಗಿ, ಈ ಪ್ರಪಂಚಕ್ಕೆ ಮುಂಚೆ ಬೇರೆ ಪ್ರಪಂಚವಿರಲಿಲ್ಲ. ಬದಲಿಗೆ, ಈ ಪ್ರಪಂಚವನ್ನು ಯಾವುದೇ ಪೂರ್ವ ಮಾದರಿಯಿಲ್ಲದೆ ಹೊಸದಾಗಿ ಸೃಷ್ಟಿಸಲಾಗಿದೆ.
ಇದು 1400 ವರ್ಷಗಳ ಹಿಂದೆ ಮಕ್ಕಾದ ಜನರಿಗಾಗಿ ತುಂಡು ಭೂಮಿಯಲ್ಲಿ ಕುರಿ ಮೇಯಿಸುತ್ತಿದ್ದ ಇಸ್ಲಾಂ ಧರ್ಮದ ಪ್ರವಾದಿಯಾದ ಮುಹಮ್ಮದ್ ಬಿನ್ ಅಬ್ದುಲ್ಲಾ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಂಬ ಹೆಸರಿನ ವ್ಯಕ್ತಿ ತಿಳಿಸಿಕೊಟ್ಟಂತೆ ಮುಸಲ್ಮಾನರ ನಂಬಿಕೆಯಾಗಿದೆ. ಈ ಪ್ರಪಂಚವನ್ನು ಯಾವುದೇ ಪೂರ್ವ ಮಾದರಿಯಿಲ್ಲದೆ ಹೊಸದಾಗಿ ಆವಿಷ್ಕರಿಸಲಾಗಿದೆ ಎಂದು ಅಲ್ಲಾಹು ಅವರಿಗೆ ದೇವವಾಣಿಯ ಮೂಲಕ ತಿಳಿಸಿದ್ದನು. ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ:
“ಯಾವುದೇ ಪೂರ್ವ ಮಾದರಿಯಿಲ್ಲದೆ ಆಕಾಶಗಳನ್ನು ಮತ್ತು ಭೂಮಿಯನ್ನು (ಸಂಪೂರ್ಣ ವಿಶ್ವವನ್ನು) ಸೃಷ್ಟಿಸಿದವನು. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ, ಅದರೊಡನೆ ಉಂಟಾಗು ಎಂದು ಹೇಳುವನು; ಆಗ ಅದು ಉಂಟಾಗುವುದು.”
[ಸೂರ ಬಕರ: 117]
9. ಹಿಂದೂ ಧರ್ಮದ ಪ್ರಕಾರ ಮನುಷ್ಯ ದೇಹವು ಯಾವುದರಿಂದ ರಚನೆಯಾಗಿದೆ?
ಹಿಂದೂ ಧರ್ಮದ ಪ್ರಕಾರ ಮಾನವ ದೇಹವು ಪಂಚಭೂತಗಳಿಂದ ರಚನೆಯಾಗಿದೆ: ಜಲ, ಪ್ರಥ್ವಿ, ವಾಯು, ಅಗ್ನಿ ಮತ್ತು ಆಕಾಶ.
ಸಂಪೂರ್ಣ ಜಗತ್ತು ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳು ಈ ಪಂಚಭೂತಗಳಿಂದಲೇ ಉಂಟಾಗಿವೆ.
ಈ ಪಂಚಭೂತಗಳಲ್ಲಿ ಪ್ರತಿಯೊಂದಕ್ಕೂ ಅದನ್ನು ಪ್ರತಿನಿಧಿಸುವ ಒಂದು ಗ್ರಹವಿದೆ. ಮಂಗಳ ಗ್ರಹವು ಅಗ್ನಿಯನ್ನು ಮತ್ತು ಶನಿ ಗ್ರಹವು ಪ್ರಥ್ವಿಯನ್ನು ಪ್ರತಿನಿಧಿಸುತ್ತದೆ. ಮನುಷ್ಯನ ಪ್ರತಿಯೊಂದು ಅಂಗವೂ ಪಂಚಭೂತಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ. ಗುಲ್ಮವು ಪ್ರಥ್ವಿಯನ್ನು ಪ್ರತಿನಿಧಿಸಿದರೆ ಹೃದಯವು ಅಗ್ನಿಯನ್ನು ಪ್ರತಿನಿಧಿಸುತ್ತದೆ.
ಅಸ್ತಿತ್ವದಲ್ಲಿರುವ ಎಲ್ಲವನ್ನೂ ಈ ಪಂಚಭೂತಗಳಿಗೆ ಅನುಗುಣವಾಗಿ ವರ್ಗೀಕರಿಸಲಾಗುತ್ತದೆ. ಕಾಲವನ್ನು ಕೂಡ. ಅವರ ಪ್ರಕಾರ ರೋಗವುಂಟಾಗುವುದು ಈ ಪಂಚಭೂತಗಳಲ್ಲಿ ಸಂಭವಿಸುವ ಏರುಪೇರಿನಿಂದ.
ತಾಸುಗಟ್ಟಲೆ ಹಸಿವನ್ನು ನಿಗ್ರಹಿಸಿ ನಿಶ್ಚಲವಾಗಿ ಕೂರುವ ‘ಪ್ರಾಣಾಯಾಮ’ದಿಂದ ಈ ಪಂಚಭೂತಗಳ ಕಲ್ಪನೆಯು ಪ್ರಚಾರ ಪಡೆದಿದೆ.
ದುರದೃಷ್ಟವಶಾತ್, ಪಂಚಭೂತಗಳ ಈ ಕಲ್ಪನೆಯು ಜಗತ್ತಿನಾದ್ಯಂತ ಪ್ರಚಾರವಾಗಿ ಅದರ ಆಧಾರದಲ್ಲಿ ಶಕ್ತಿ ಚಿಕಿತ್ಸೆಯ ಅನೇಕ ಶಾಸ್ತ್ರಗಳು ರಚನೆಯಾದವು.
ಶಕ್ತಿ ಚಿಕಿತ್ಸೆ, ಮ್ಯಾಕ್ರೋಬಯಾಟಿಕ್, ಫೆಂಗ್ ಶುಯಿ, ಬಣ್ಣ ಚಿಕಿತ್ಸೆ ಮುಂತಾದ ಚಿಕಿತ್ಸೆಗಳು ಈ ಪಂಚಭೂತಗಳ ನಿಯಂತ್ರಣದ ಮೇಲೆ ನೆಲೆನಿಂತಿವೆ.
ಪಂಚಭೂತಗಳ ನಿಯಂತ್ರಣವು ಅವರ ಪ್ರಕಾರ ಜೀವನೋಪಾಯವನ್ನು ಹೆಚ್ಚಿಸುತ್ತದೆ ಮತ್ತು ಕೆಡುಕುಗಳನ್ನು ತಡೆಗಟ್ಟುತ್ತದೆ.
ಇಂದು ಹಿಂದೂ ದೇವಾಲಯಗಳಲ್ಲಿ ಈ ಪಂಚಭೂತಗಳನ್ನು ನಿಯಂತ್ರಿಸಲು ಮಸಾಜುಗಳು ನಡೆಯುತ್ತವೆ. ಇದು ಅನೇಕ ರೋಗಗಳಿಗೆ ಚಿಕಿತ್ಸೆಯೆಂದು ಅವರು ಪರಿಗಣಿಸುತ್ತಾರೆ.
ಪಂಚಭೂತದ ಈ ಕಲ್ಪನೆಗೆ ವಿಜ್ಞಾನದೊಂದಿಗೆ ಯಾವುದೇ ಸಂಬಂಧವಿಲ್ಲ.
ಅದೇ ರೀತಿ, ಭೌತಶಾಸ್ತ್ರ ಅಥವಾ ವೈದ್ಯಕೀಯದೊಂದಿಗೂ ಸಂಬಂಧವಿಲ್ಲ.
ಬದಲಿಗೆ, ಇದು ಮತ್ತು ಇದರೊಂದಿಗೆ ಸೇರಿಕೊಂಡಿರುವ ಇತರ ಚಿಕಿತ್ಸೆಗಳು ಕೇವಲ ಮೂಢನಂಬಿಕೆ, ಭ್ರಮೆ ಮತ್ತು ವಂಚನೆಯೆಂದು ವಿಜ್ಞಾನವು ತೀರ್ಮಾನಿಸಿದೆ.
ಪಂಚಭೂತದ ಈ ಕಲ್ಪನೆಯನ್ನು ನಕಲಿ ವಿಜ್ಞಾನವೆಂದು ಈಗಾಗಲೇ ವರ್ಗೀಕರಿಸಲಾಗಿದೆ.
[34] "Energy – (according to New Age thinking)", The Skeptic's Dictionary, 2011-12-19.
ಇದರೊಂದಿಗೆ ಸೇರಿಕೊಂಡಿರುವ ಚಿಕಿತ್ಸೆಗಳು ಕೇವಲ ಭ್ರಾಂತಿ ಮತ್ತು ಭ್ರಮೆಯೆಂದು ತೀರ್ಮಾನಿಸಲಾಗಿದೆ.[35]
[35] "Some Notes on Wilhelm Reich, M.D", Quackwatch.org, 15-02-2002.
ನಿರಂತರ ಮರುಹುಟ್ಟು ಮತ್ತು ಪುನರ್ಜನ್ಮ ಕಲ್ಪನೆಗಳು ಸನ್ಯಾಸಿಗಳ ಮನಸ್ಸಿನಲ್ಲಿ ಮೂಡಿಬಂದಂತೆ ಪಂಚಭೂತಗಳ ಕಲ್ಪನೆಯು ಕೂಡ ಅವರ ಮನಸ್ಸಿಗೆ ಬಂದಿರುವ ಸಾಧ್ಯತೆಯಿದೆ. ಇದಕ್ಕೆ ಬೌದ್ಧಿಕ, ವೈಜ್ಞಾನಿಕ ಮತ್ತು ವೈಚಾರಿಕವಾದ ಯಾವುದೇ ಪುರಾವೆಯಿಲ್ಲ.
ಅದು ಕೇವಲ ಭ್ರಮಾಕಲ್ಪನೆಯಷ್ಟೇ ಆಗಿದೆ.
ಸಮಸ್ಯೆಯೇನೆಂದರೆ, ಈ ಕಲ್ಪನೆಯ ಚಿಕಿತ್ಸೆಗೆ ಬಳಸುವ ವಸ್ತುಗಳು ಕೇವಲ ಬಹುದೇವಾರಾಧನಾ ಯಂತ್ರಗಳು ಮತ್ತು ಗ್ರಹಗಳು, ಆಕೃತಿಗಳು, ಚಿಹ್ನೆಗಳು, ಬಣ್ಣಗಳು, ತಾಯಿತಗಳು ಮುಂತಾದ ಅಲ್ಲಾಹು ಯಾವುದೇ ಪುರಾವೆಯನ್ನು ಅವತೀರ್ಣಗೊಳಿಸದ ವಸ್ತುಗಳ ಮೇಲೆ ಅವಲಂಬಿತವಾಗುವುದಾಗಿದೆ.[36]
[36] ನಾನು ‘ಅಲ್-ಇಲ್ಹಾದ್ ಅರ್‍ರೂಹಿ’ (ಆಧ್ಯಾತ್ಮಿಕ ನಾಸ್ತಿಕತೆ) ಎಂಬ ಪ್ರತ್ಯೇಕ ಪುಸ್ತಕದಲ್ಲಿ ಶಕ್ತಿ ಚಿಕಿತ್ಸೆಯ ಬಗ್ಗೆ ಚರ್ಚಿಸಿದ್ದೇನೆ.
ಪಂಚಭೂತಗಳೆಂಬ ಕಲ್ಪನೆಯೊಂದಿಗೆ ಸೇರಿಕೊಂಡಿರುವ ಈ ಚಿಕಿತ್ಸೆಗಳ ಬಗ್ಗೆ ಆಧುನಿಕ ವಿಜ್ಞಾನಕ್ಕಿಂತಲೂ ಮೊದಲು ಇಸ್ಲಾಂ ಧರ್ಮವು ಎಚ್ಚರಿಕೆ ನೀಡಿದೆ. ಈ ಚಿಕಿತ್ಸೆಗಳು ಸರಿಯಾದ ಚಿಕಿತ್ಸೆ ಪಡೆಯುವುದನ್ನು ವಿಳಂಬಿಸುತ್ತದೆ ಮತ್ತು ಮನುಷ್ಯನು ವಾಸ್ತವ ಜಗತ್ತಿನೊಂದಿಗೆ ಸಮಾನಾಂತರದಲ್ಲಿ ಭ್ರಮೆಗಳೊಡನೆ ಬದುಕುವಂತೆ ಮಾಡುತ್ತದೆ. ಅದೇ ರೀತಿ, ಮನುಷ್ಯನು ಅಲ್ಲಾಹೇತರರನ್ನು ಅವಲಂಬಿಸುವಂತೆ ಮಾಡುತ್ತದೆ. ಆದ್ದರಿಂದ ಇಸ್ಲಾಂ ಧರ್ಮವು ಇಂತಹ ಚಿಕಿತ್ಸೆಗಳ ಬಗ್ಗೆ ಉಗ್ರ ಎಚ್ಚರಿಕೆಯನ್ನು ನೀಡಿದೆ. ಸರ್ವಶಕ್ತನಾದ ಅಲ್ಲಾಹು ಕುದ್ಸಿ (ಪವಿತ್ರ) ಹದೀಸ್‌ನಲ್ಲಿ ಹೇಳುತ್ತಾನೆ:
“ನನ್ನ ದಾಸರಲ್ಲಿ ಕೆಲವರು ನನ್ನಲ್ಲಿ ನಂಬಿಕೆಯಿಟ್ಟ ಸ್ಥಿತಿಯಲ್ಲಿ ಮತ್ತು ಕೆಲವರು ನನ್ನಲ್ಲಿ ಅಪನಂಬಿಕೆಯಿಟ್ಟ ಸ್ಥಿತಿಯಲ್ಲಿ ಬೆಳಗನ್ನು ಪ್ರವೇಶಿಸಿದ್ದಾರೆ. ಅಲ್ಲಾಹನ ಅನುಗ್ರಹ ಮತ್ತು ಕರುಣೆಯಿಂದ ಮಳೆ ಸುರಿಯಿತು ಎಂದು ಹೇಳಿದವನು ನನ್ನಲ್ಲಿ ನಂಬಿಕೆಯಿಟ್ಟವನು ಮತ್ತು ಗ್ರಹಗಳಲ್ಲಿ ಅಪನಂಬಿಕೆಯಿಟ್ಟವನು. ಆದರೆ ಇಂತಿಂತಹ ಗ್ರಹದಿಂದಾಗಿ ನಮಗೆ ಮಳೆ ಸುರಿದಿದೆ ಎಂದು ಹೇಳಿದವನು ನನ್ನಲ್ಲಿ ಅಪನಂಬಿಕೆಯಿಟ್ಟವನು ಮತ್ತು ಗ್ರಹಗಳಲ್ಲಿ ನಂಬಿಕೆಯಿಟ್ಟವನು.” [37]
[37] ಸಹೀಹ್ ಮುಸ್ಲಿಂ. ಹ.ಸಂಖ್ಯೆ: 71.
ಆದ್ದರಿಂದ, ಯಾರು ಗ್ರಹಗಳಲ್ಲಿ, ಅವು ಮಾನವನ ಮೇಲೆ ಪ್ರಭಾವ ಬೀರುತ್ತವೆ ಎಂಬುದರಲ್ಲಿ, ಮತ್ತು ಅವು ಮಾನವನ ಜೀವನೋಪಾಯದಲ್ಲಿ ಮಧ್ಯಪ್ರವೇಶಿಸುತ್ತದೆ ಎಂಬುದರಲ್ಲಿ ನಂಬಿಕೆಯಿಡುತ್ತಾನೋ, ಅವನು ಅಲ್ಲಾಹನನ್ನು ನಿಷೇಧಿಸಿದನು. ಯಾರು ಅಲ್ಲಾಹನಲ್ಲಿ ನಂಬಿಕೆಯಿಡುತ್ತಾನೋ ಅವನು ಮನುಷ್ಯರ ವಿಧಿನಿರ್ಣಯದಲ್ಲಿ ಗ್ರಹಗಳಿಗಿರುವ ಪಾತ್ರವನ್ನು ನಿಷೇಧಿಸುತ್ತಾನೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ನಿಶ್ಚಯವಾಗಿಯೂ ಮಂತ್ರ, ತಾಯಿತಗಳು ಮತ್ತು ವಶೀಕರಣಗಳು ಬಹುದೇವಾರಾಧನೆಯಾಗಿವೆ.” [38]
[38] ಸಹೀಹುಲ್ ಜಾಮಿಅ್. ಹ.ಸಂಖ್ಯೆ: 1632.
ಆದ್ದರಿಂದ, ಪಂಚಭೂತಗಳು ಮತ್ತು ಅದರೊಂದಿಗೆ ಸೇರಿಕೊಂಡಿರುವ ಯಂತ್ರಗಳು ಮತ್ತು ತಾಯತಗಳು ಪ್ರಭಾವ ಬೀರುತ್ತವೆ ಎಂಬ ಮೂಢನಂಬಿಕೆಯನ್ನು ಮುಸಲ್ಮಾನರು ನಂಬುವುದಿಲ್ಲ.
ಯಂತ್ರಗಳು ಮತ್ತು ಜ್ಯಾಮಿತಿಯ ಆಕೃತಿಗಳು, ಶಕ್ತಿಯ ಲೋಲಕಗಳು ಮುಂತಾದ ಪಂಚಭೂತಗಳೊಂದಿಗೆ ಸೇರಿಕೊಂಡಿರುವ ವಸ್ತುಗಳನ್ನು ತಯಾರಿಸುವುದು, ಮತ್ತು ಈ ಯಂತ್ರಗಳು ಪ್ರಯೋಜನವನ್ನು ನೀಡುತ್ತವೆ ಮತ್ತು ಹಾನಿಯನ್ನು ದೂರೀಕರಿಸುತ್ತವೆ ಎಂದು ನಂಬುವುದು ಸ್ವತಃ ಬಹುದೇವವಿಶ್ವಾಸ ಮತ್ತು ಅಲ್ಲಾಹನನ್ನು ನಿಷೇಧಿಸುವುದಾಗಿದೆ.
ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ವ್ಯಕ್ತಿಯ ಕೈಯಲ್ಲಿ ಒಂದು ಲೋಹದ ಬಳೆಯನ್ನು ನೋಡಿದರು. ಅವರು ಕೇಳಿದರು: “ಇದೇನು?” ಆ ವ್ಯಕ್ತಿ ಉತ್ತರಿಸಿದರು: “ನಿಶ್ಶಕ್ತಿಯನ್ನು ನಿವಾರಿಸಲು ಧರಿಸಿದ್ದೇನೆ.” ಪ್ರವಾದಿಯವರು ಹೇಳಿದರು: “ಅದು ನಿನಗೆ ನಿಶ್ಶಕ್ತಿಯನ್ನೇ ಹೊರತು ಇನ್ನೇನನ್ನೂ ಹೆಚ್ಚಿಸುವುದಿಲ್ಲ. ಅದನ್ನು ಎಸೆದುಬಿಡು. ಏಕೆಂದರೆ, ಅದು ನಿನ್ನ ಕೈಯಲ್ಲಿರುವ ಸ್ಥಿತಿಯಲ್ಲಿ ನೀನು ಸತ್ತರೆ, ನಿನ್ನ ವಿಷಯವನ್ನು ಅದಕ್ಕೆ ವಹಿಸಿಕೊಡಲಾಗುವುದು.” [39]
[39] ಸಹೀಹ್ ಇಬ್ನ್ ಹಿಬ್ಬಾನ್. ಹ.ಸಂಖ್ಯೆ: 6085.
ಇನ್ನೊಂದು ವರದಿಯಲ್ಲಿ ಹೀಗಿದೆ: “ಏಕೆಂದರೆ, ಅದು ನಿನ್ನ ಕೈಯಲ್ಲಿರುವ ಸ್ಥಿತಿಯಲ್ಲಿ ನೀನು ಸತ್ತರೆ ನೀನೆಂದೂ ಯಶಸ್ವಿಯಾಗಲಾರೆ.”[40]
[40] ಹೈತಮಿ ಮಕ್ಕಿಯವರ ವರದಿಯಿಂದ ಸಹೀಹ್ ಆಗಿ ವರದಿಯಾಗಿದೆ. ಅಝ್ಝವಾಜಿರ್ 1/166.
ಶೈಖುಲ್ ಇಸ್ಲಾಂ ಇಬ್ನ್ ತೈಮಿಯ್ಯ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಹೇಳುತ್ತಾರೆ: “ಪ್ರಯೋಜನವನ್ನು ನೀಡಲು ಮತ್ತು ಹಾನಿಯನ್ನು ತಡೆಗಟ್ಟಲು ಯಂತ್ರಗಳನ್ನು ಕಟ್ಟುವುದು ದೊಡ್ಡ ಬಹುದೇವಾರಾಧನೆಯಾಗಿದೆ.”[41]
[41] ಮಜ್ಮೂಉಲ್ ಫತಾವಾ 9/34.
ಇದು ಭಗವದ್ಗೀತೆಯು भगवद्गीता ದೃಢೀಕರಿಸುವ ಅದೇ ನಂಬಿಕೆಯಾಗಿದೆ. ಅದು ಹೇಳುತ್ತದೆ: “ಯಾರು ದೇವರುಗಳನ್ನು ಪೂಜಿಸುತ್ತಾರೋ ಅವರು ದೇವರುಗಳನ್ನು ಪಡೆಯುತ್ತಾರೆ; ಯಾರು ಪೂರ್ವಜರನ್ನು ಪೂಜಿಸುತ್ತಾರೋ ಅವರು ಪೂರ್ವಜರನ್ನು ಪಡೆಯುತ್ತಾರೆ; ಯಾರು ಪಿಶಾಚಿಯನ್ನು ಪೂಜಿಸುತ್ತಾರೋ ಅವರು ಪಿಶಾಚಿಯನ್ನು ಪಡೆಯುತ್ತಾರೆ; ಯಾರು ನನ್ನನ್ನು ಪೂಜಿಸುತ್ತಾರೋ ಅವರು ನನ್ನನ್ನು ಪಡೆಯುತ್ತಾರೆ.” [42]
[42] ಭಗವದ್ಗೀತೆ 9-25.
ಆದ್ದರಿಂದ, ಯಾರು ಅಲ್ಲಾಹನನ್ನು ಬಿಟ್ಟು ಇಂತಹ ಯಂತ್ರಗಳ ಮೇಲೆ ಭರವಸೆಯಿಡುತ್ತಾನೋ ಅವರು ಅಲ್ಲಾಹೇತರರನ್ನು ಆರಾಧಿಸಿದನು.
ವೇದಗಳ ಪ್ರಕಾರ ಅವನು ಶಾಶ್ವತವಾಗಿ ನರಕವಾಸಿಯಾಗುತ್ತಾನೆ. ಯಜುರ್ವೇದ ಹೇಳುತ್ತದೆ: "ಯಾರು ಪರಮಾತ್ಮನನ್ನು ಬಿಟ್ಟು, ಸಂಭೂತ ವಸ್ತುಗಳ ಉಪಾಸನೆ ಮಾಡುತ್ತಾನೋ ಅವನು ಕತ್ತಲೆಯ ಅಂಧಕಾರದಲ್ಲಿ ಮುಳುಗುತ್ತಾನೆ ಮತ್ತು ಯುಗಯುಗಾಂತರ ನರಕದ ಶಿಕ್ಷೆಯನ್ನು ಅನುಭವಿಸುತ್ತಾನೆ." [43]
[43] ಯಜುರ್ವೇದ ಸೂಕ್ತ: 40, ಮಂತ್ರ: 9. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಅಲ್ಲ, ಎಲ್ಲಾ ವಿಷಯಗಳೂ ಅಲ್ಲಾಹನಿಗೆ ಸೇರಿದ್ದು.” [ಸೂರ ರಅದ್: 31] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: “ನೀನು ಕೇಳುವುದಾದರೆ ಅಲ್ಲಾಹನಲ್ಲಿ ಕೇಳು; ನೀನು ಸಹಾಯ ಯಾಚಿಸುವುದಾದರೆ ಅಲ್ಲಾಹನಲ್ಲಿ ಸಹಾಯ ಯಾಚಿಸು.”[44]
[44] ಸುನನ್ ತಿರ್ಮಿದಿ. ಹ.ಸಂಖ್ಯೆ: 2516. ಸಹೀಹ್. ಈ ಕಾರಣದಿಂದಲೇ, ಪಂಚಭೂತಗಳು, ಗ್ರಹಗಳು, ಯಂತ್ರಗಳು ಮತ್ತು ತಾಯಿತಗಳು ಪ್ರಭಾವ ಬೀರುತ್ತವೆ ಎಂಬ ಮೂಢನಂಬಿಕೆಯಲ್ಲಿ ಮುಸಲ್ಮಾನರು ನಂಬಿಕೆಯಿಡುವುದಿಲ್ಲ. ಬದಲಿಗೆ, ಅವು ಸ್ವತಃ ಬಹುದೇವವಿಶ್ವಾಸ, ದುರ್ಮಾರ್ಗ, ಸುಳ್ಳು ಮತ್ತು ಮೂಢನಂಬಿಕೆಯೆಂದು ಅವರು ನಂಬುತ್ತಾರೆ.
10. ಹಿಂದೂಗಳ ಸಾಮಾಜಿಕ ಸ್ಥಿತಿ ಹೇಗಿದೆ? ಪುನರ್ಜನ್ಮ ಕಲ್ಪನೆ ಮತ್ತು ಕರ್ಮ ಕಲ್ಪನೆಯಲ್ಲಿ ನಂಬಿಕೆಯಿಡುವ ಕಾರಣ ಹಿಂದೂ ಸಮಾಜವು ಜಾತಿ ಆಧಾರಿತವಾಗಿದೆ ಎನ್ನುವುದು ಶತಸ್ಸಿದ್ಧ.
ಅಂದರೆ, ಒಬ್ಬ ದುಷ್ಕರ್ಮಿ ಮುಂದಿನ ಜನ್ಮದಲ್ಲಿ ಈ ಜನ್ಮಕ್ಕಿಂತಲೂ ಕೆಳಗಿನ ಜಾತಿಯಲ್ಲಿ ಹುಟ್ಟುತ್ತಾನೆ.
ಆದ್ದರಿಂದ, ಈ ಜನ್ಮದಲ್ಲಿ ಕಷ್ಟ ಅನುಭವಿಸುವವರು ಅದಕ್ಕೆ ಅರ್ಹರಾಗಿದ್ದಾರೆ. ಇದು ಬಡವರು ಮತ್ತು ಕಷ್ಟದಲ್ಲಿರುವವರ ಮೇಲೆ ನಡೆಸುವ ಪೂರ್ಣರೂಪದ ದಬ್ಬಾಳಿಕೆ ಮತ್ತು ಅವರ ವಿಷಯದಲ್ಲಿ ನಿಗಾ ವಹಿಸದಿರುವುದಾಗಿದೆ. ಇದು ದಬ್ಬಾಳಿಕೆಯ ಸಹಜೀಕರಣ ಮತ್ತು ಸ್ಥಿರೀಕರಣವಾಗಿದೆ. ಹಿಂದೂ ಧರ್ಮದಲ್ಲಿ ಮನುಷ್ಯರು ನಾಲ್ಕು ಜಾತಿಗಳಲ್ಲಿ ವಿಂಗಡನೆಯಾಗುತ್ತಾರೆ. ಅವು:
1. ಬ್ರಾಹ್ಮಣ: ಉಪನ್ಯಾಸಕಾರರು ಮತ್ತು ಪುರೋಹಿತರು.
2. ಕ್ಷತ್ರಿಯ: ಯೋಧರು ಮತ್ತು ರಾಜರು.
3. ವೈಶ್ಯ: ಕೃಷಿಕರು ಮತ್ತು ವ್ಯಾಪಾರಿಗಳು.
4. ಶೂದ್ರ: ಕಾರ್ಮಿಕರು.
ಅಸ್ಪೃಶ್ಯ ಶೂದ್ರರು ಅತ್ಯಂತ ಕೆಳಗಿನ ಜಾತಿಯಲ್ಲಿರುವವರು. ಇವರು—ಅವರ ದೃಷ್ಟಿಕೋನದಲ್ಲಿ—ಕೀಳ್ಮಟ್ಟದ ಕೆಲಸಗಳನ್ನು, ಅಂದರೆ ಶುಚಿಗೊಳಿಸುವುದು ಮತ್ತು ಮೇಲ್ಜಾತಿಯವರ ಸೇವೆ ಮಾಡುವುದು ಮುಂತಾದವುಗಳಿಗೆ ಸೀಮಿತರು.
ಮನುಷ್ಯರ ಪ್ರತಿಯೊಂದು ಜಾತಿಯು ಅವರ ಕೆಲಸ, ಉಡುಪು ಮತ್ತು ಆಹಾರವನ್ನು ನಿರ್ಧರಿಸುತ್ತದೆ.
ವಿವಾಹಗಳು ಆಯಾ ಜಾತಿಯ ಚೌಕಟ್ಟಿಗೆ ಸೀಮಿತವಾಗಿವೆ.
ಮನುಷ್ಯನು ಅವನು ಹುಟ್ಟಿದ ಜಾತಿಯಲ್ಲೇ ಸಾವಿನ ತನಕ ಇರಲು ವಿಧಿಸಲ್ಪಟ್ಟಿದ್ದಾನೆ.
ನಾನು ಈಗಾಗಲೇ ಹೇಳಿದಂತೆ, ಈ ಜಾತಿ ಪದ್ಧತಿಯು ಹುಟ್ಟಿದ್ದು ಪುನರ್ಜನ್ಮ ನಂಬಿಕೆ ಮತ್ತು ಕರ್ಮ—ಪ್ರತಿಫಲ ಮತ್ತು ಶಿಕ್ಷೆ—ನಂಬಿಕೆಯಿಂದ. ಆದ್ದರಿಂದ, ಶೂದ್ರರು ಅಸ್ಪೃಶ್ಯರಾಗಲು ಅರ್ಹರಾಗಿದ್ದಾರೆ. ಏಕೆಂದರೆ, ಹಿಂದಿನ ಜನ್ಮದಲ್ಲಿ ಅವರು ಪಾಪಿಗಳಾಗಿದ್ದರು. ಆದ್ದರಿಂದ ಅವರು ಈ ಜಾತಿಯಲ್ಲಿ ಹುಟ್ಟಿದರು.
ಈ ಗೊಂದಲಕಾರಿ ತಪ್ಪು ಕಲ್ಪನೆಯು ಜೀವನವನ್ನು ಸಂಪೂರ್ಣವಾಗಿ ಕೆಡಿಸುತ್ತದೆ. ಈ ಕಲ್ಪನೆಯಿಂದಾಗಿ, ಅಸ್ಪೃಶ್ಯರಿಗೆ ಸಹಾಯ ಮಾಡುವುದು ಕರ್ಮ ಸಿದ್ಧಾಂತಕ್ಕೆ ತೋರುವ ಅಗೌರವವಾಗಿದೆ ಎಂದು ನಾವು ಪರಿಗಣಿಸುವಂತೆ ಮಾಡುತ್ತದೆ.
ಇದು ಹಿಂದುಳಿಯುವಿಕೆ, ಅನ್ಯಾಯ, ಜಾತೀಯತೆ ಮತ್ತು ದಬ್ಬಾಳಿಕೆಯೊಂದಿಗೆ ರಾಜಿ ಮಾಡುವ ಒಂದು ವಿಧವಾಗಿದೆ. ಪುನರ್ಜನ್ಮ ಸಿದ್ಧಾಂತ ಮತ್ತು ಕರ್ಮ ಸಿದ್ಧಾಂತವು ಈ ಜಾತಿಪದ್ಧತಿಗೆ ಜನ್ಮ ನೀಡಿದೆ. ಅಂತೆಯೇ, ಈ ಎರಡು ಸಿದ್ಧಾಂತಗಳು ಕೈಯಲ್ಲಿ ಏನೂ ಇಲ್ಲದ ಬಡವರು, ರೋಗಿಗಳು ಮತ್ತು ದುರ್ಬಲರ ಬಗ್ಗೆ ತಪ್ಪುಕಲ್ಪನೆಯನ್ನು ಹುಟ್ಟುಹಾಕಿದೆ. ಇವರಿಗೆ ಸಹಾಯ ಮಾಡುವ ಮತ್ತು ಇವರಿಗೆ ನೆರವಿನ ಹಸ್ತ ಚಾಚುವ ಅವಕಾಶವು ಹಿಂದೂ ಧರ್ಮಕ್ಕೆ ನಷ್ಟವಾಗಿದೆ.
ಹಿಂದೂ ಧರ್ಮದ ಈ ದೃಷ್ಟಿಕೋನವು ಮಾನವನ ಸಹಜ ಮನೋಧರ್ಮಕ್ಕೆ, ಅಂದರೆ ದುರ್ಬಲರಿಗೆ, ಬಡವರಿಗೆ ಮತ್ತು ರೋಗಿಗಳಿಗೆ ಸಹಾನುಭೂತಿ ತೋರಲು ಉತ್ತೇಜಿಸುವ ಮತ್ತು ಅವರ ಸೇವೆ ಮಾಡುವುದು ಹಾಗೂ ಅವರ ಕಷ್ಟಗಳನ್ನು ನಿವಾರಿಸುವುದು ತನ್ನ ಕರ್ತವ್ಯವೆಂಬ ಪ್ರಜ್ಞೆಯನ್ನು ಮೂಡಿಸುವ ಮಾನವನ ಸಹಜ ಮನೋಧರ್ಮಕ್ಕೆ ವಿರುದ್ಧವಾಗಿದೆ.
ವೇದಗಳಲ್ಲಿ ಪ್ರತಿಪಾದಿಸಲಾದ ಪರಲೋಕ ನಂಬಿಕೆಯಿಂದ, ಅಂದರೆ ಮನುಷ್ಯನ ಜೀವನವನ್ನು ಮತ್ತು ಪ್ರಪಂಚದ ಕುರಿತಾದ ದೃಷ್ಟಿಕೋನವನ್ನು ಸರಿಪಡಿಸುವ ಪರಲೋಕ ನಂಬಿಕೆಯಿಂದ ಹಿಂದೂಗಳು ಹೇಗೆ ದೂರವಾದರೆಂದು ನನಗೆ ತಿಳಿಯುವುದಿಲ್ಲ. ಪರಲೋಕದಲ್ಲಿ ಪರಮಾತ್ಮನ ಮುಂದೆ ಮನುಷ್ಯನ ವಿಚಾರಣೆ ನಡೆಯುತ್ತದೆ. ಪ್ರತಿಯೊಬ್ಬ ಮನುಷ್ಯನೂ ನಿರಪರಾಧಿಯಾಗಿಯೇ ಹುಟ್ಟುತ್ತಾನೆ. ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದರಿಂದ ಪರಲೋಕದಲ್ಲಿ ಮನುಷ್ಯನಿಗೆ ಪರಮಾತ್ಮನ ಬಳಿ ಸ್ಥಾನಮಾನವು ಹೆಚ್ಚುತ್ತದೆ.
ಈ ಎರಡು ವೀಕ್ಷಣೆಗಳಲ್ಲಿ (ಪರಲೋಕ ಅಥವಾ ಕರ್ಮ) ಮನುಷ್ಯನಿಗೆ ಹೆಚ್ಚು ಯೋಗ್ಯ ಮತ್ತು ಪ್ರಯೋಜನಕರವಾಗಿರುವುದು ಹಾಗೂ ಮಾನವನ ಸಹಜ ಮನೋಧರ್ಮಕ್ಕೆ ಹೆಚ್ಚು ಸಮೀಪವಾಗಿರುವುದು ಯಾವುದು?
ಕರ್ಮ ಸಿದ್ಧಾಂತವೋ ಅಥವಾ ವೇದಗಳ ನಂಬಿಕೆಯೋ?
ಋಗ್ವೇದದಲ್ಲಿ ಹೀಗೆ ಹೇಳಲಾಗಿದೆ: “ಓ ದೇವಾ! ನೀನು ಸಜ್ಜನರಿಗೆ ಉತ್ತಮ ಪ್ರತಿಫಲವನ್ನು ನೀಡುವೆ.”[45]
[45] ಋಗ್ವೇದ ಮಂಡಲ: 1, ಸೂಕ್ತ: 1, ಮಂತ್ರ: 6. ಋಗ್ವೇದ ಹೇಳುತ್ತದೆ: “ಎಲ್ಲಾ ರೀತಿಯ ಆನಂದ ಮತ್ತು ಸಂತೋಷಗಳಿರುವ ಆ ಸ್ಥಳದಲ್ಲಿ ನನ್ನನ್ನು ಚಿರಂಜೀವಿಯನ್ನಾಗಿ ಮಾಡು. ಅಂದರೆ ಮನಸ್ಸು ಬಯಸುವುದೆಲ್ಲವನ್ನೂ ನೀನು ದಯಪಾಲಿಸುವ ಸ್ಥಳದಲ್ಲಿ.” [46] [46] ಋಗ್ವೇದ ಮಂಡಲ: 9, ಸೂಕ್ತ: 113, ಮಂತ್ರ: 9-11.
ಇದು ವೇದಗಳಲ್ಲಿರುವ ನಂಬಿಕೆ.
ಅಲ್ಲಿ ಸ್ವರ್ಗವಿದ್ದು ಸಜ್ಜನರು ಅದರಲ್ಲಿ ಆನಂದಿಸುತ್ತಾರೆ.
ಅಂತೆಯೇ, ವೇದಗಳ ಪ್ರಕಾರ, ಅಲ್ಲಿ ಪಾಪಿಗಳಿಗೆ ಸಿದ್ಧಗೊಳಿಸಲಾದ ಶಿಕ್ಷೆಯೂ ಇದೆ.
ಋಗ್ವೇದ ಹೇಳುತ್ತದೆ: “ಪಾಪಿಗಳಿಗೆ ಅತ್ಯಂತ ಆಳವಾದ ಪಾತಾಳದಲ್ಲಿರುವ ಸ್ಥಳವಿದೆ.” [47]
[47] ಋಗ್ವೇದ ಮಂಡಲ: 4, ಸೂಕ್ತ: 5, ಮಂತ್ರ: 5.
ಈ ಸ್ಥಳಗಳಿಗೂ ನಿರಂತರ ಮರುಹುಟ್ಟು ಹಾಗೂ ಪುನರ್ಜನ್ಮ ಕಲ್ಪನೆಗಳಿಗೂ ಏನು ಸಂಬಂಧ?
ಕರ್ಮ ಸಿದ್ಧಾಂತದಲ್ಲಿ ಪಾಪಿಗಳಿಗೆ ಅತ್ಯಂತ ಆಳವಾದ ಪಾತಾಳ ಎಲ್ಲಿದೆ?
ಒಟ್ಟಿನಲ್ಲಿ, ಕರ್ಮ ಸಿದ್ಧಾಂತವು ಮಾನವ ಆವಿಷ್ಕಾರವಾಗಿದ್ದು ಅದು ವೇದಗಳ ಆತ್ಮಕ್ಕೆ ವಿರುದ್ಧವಾದ ಪರಿಕಲ್ಪನೆಯಾಗಿದೆ.
ಎಲ್ಲಾ ಪ್ರವಾದಿಗಳ ನಂಬಿಕೆ ಹೀಗಿತ್ತು: ಅಂತ್ಯದಿನ ಮತ್ತು ಸ್ವರ್ಗ-ನರಕಗಳಲ್ಲಿರುವ ನಂಬಿಕೆ; ಮತ್ತು ಮನುಷ್ಯರು ಯಾವುದೇ ಪಾಪವಿಲ್ಲದೆ ನಿರಪರಾಧಿಗಳಾಗಿ ಹುಟ್ಟುತ್ತಾರೆ ಎಂಬ ನಂಬಿಕೆ.
ಈ ನಂಬಿಕೆಯು ಸಹಜ ಮನೋಧರ್ಮಕ್ಕೆ ಹೊಂದಿಕೆಯಾಗುತ್ತದೆ ಮತ್ತು ಅನ್ಯಾಯ, ಹಿಂದುಳಿಯುವಿಕೆ, ಜಾತಿಪದ್ಧತಿ ಮತ್ತು ದಬ್ಬಾಳಿಕೆಯನ್ನು ವಿರೋಧಿಸುತ್ತದೆ.
ಆದ್ದರಿಂದ, ಪ್ರವಾದಿಗಳ ಧರ್ಮವು ಮನುಷ್ಯನ ಏಳಿಗೆಗಾಗಿ ಪ್ರಯತ್ನಿಸುತ್ತದೆ ಮತ್ತು ಎಲ್ಲಾ ಮನುಷ್ಯರನ್ನು ಸಮಾನವಾಗಿ ಕಾಣುತ್ತದೆ.
ಇಸ್ಲಾಂ ಧರ್ಮದಲ್ಲಿ ಮಾನವನ ಮೌಲ್ಯವಿರುವುದು ಅವನ ಜಾತಿ, ಆಕಾರ, ಆರೋಗ್ಯ ಸ್ಥಿತಿ ಅಥವಾ ಭೌತಿಕ ಮಟ್ಟದಲ್ಲಲ್ಲ. ಬದಲಿಗೆ, ಮಾನವನ ಮೌಲ್ಯವಿರುವುದು ಅವನು ಮಾಡುವ ಸತ್ಕರ್ಮಗಳ ಪ್ರಮಾಣದಲ್ಲಿ.
ಇಸ್ಲಾಂ ಧರ್ಮವು ವಂಶ ಅಥವಾ ಸ್ಥಾನಮಾನವನ್ನು ನೋಡದೆ ಮನುಷ್ಯರೆಲ್ಲರ ಅಭ್ಯುದಯವನ್ನು ಬಯಸುತ್ತದೆ.
ಅಷ್ಟೇ ಅಲ್ಲ, ಅದು ಅಸ್ಪೃಶ್ಯತೆಯ ಕಲ್ಪನೆ ಮತ್ತು ಜಾತಿಪದ್ಧತಿಯ ಕಲ್ಪನೆಯನ್ನು ಪೂರ್ಣವಾಗಿ ನಿರಾಕರಿಸುತ್ತದೆ.
ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ:
"ಓ ಮನುಷ್ಯರೇ! ನಿಶ್ಚಯವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿದ್ದೇವೆ. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿವಿಧ ಕುಲ ಮತ್ತು ಗೋತ್ರಗಳನ್ನಾಗಿ ಮಾಡಿದ್ದೇವೆ. ಖಂಡಿತವಾಗಿಯೂ ನಿಮ್ಮಲ್ಲಿ ಅತಿಹೆಚ್ಚು ದೇವನಿಷ್ಠೆಯುಳ್ಳವನೇ ನಿಮ್ಮಲ್ಲಿ ಅತ್ಯಂತ ಗೌರವಾನ್ವಿತನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸೂಕ್ಷ್ಮ ಜ್ಞಾನಿಯಾಗಿದ್ದಾನೆ.” [ಸೂರ ಹುಜುರಾತ್: 13] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಯಾರನ್ನು ಅವನ ಕರ್ಮವು ಹಿಂದೆ ಉಳಿಸುತ್ತದೋ ಅವನನ್ನು ಅವನ ವಂಶವು ಮುಂದಕ್ಕೆ ತರುವುದಿಲ್ಲ.”[48]
[48] ಸಹೀಹ್ ಮುಸ್ಲಿಂ. ಹ.ಸಂಖ್ಯೆ: 2699.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಜನರು ನನ್ನ ಬಳಿಗೆ ಅವರ ಕರ್ಮಗಳೊಂದಿಗೆ ಬರುವಾಗ ನೀವು ನನ್ನ ಬಳಿಗೆ ನಿಮ್ಮ ವಂಶಗಳೊಂದಿಗೆ ಬರಬೇಡಿ.”[49]
[49] ಈ ಹದೀಸನ್ನು ಸಹೀಹ್ ಮುಸ್ನದ್‌ನಲ್ಲಿ ವಾದಿಈ ಹಸನ್ ಎಂದಿದ್ದಾರೆ. ಹ.ಸಂಖ್ಯೆ: 1426.
ಇಸ್ಲಾಂ ಧರ್ಮದಲ್ಲಿ ವಂಶಕ್ಕೆ ಯಾವುದೇ ಬೆಲೆ ಅಥವಾ ತೂಕವಿಲ್ಲ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಓ ಜನರೇ! ತಿಳಿಯಿರಿ, ನಿಶ್ಚಯವಾಗಿಯೂ ನಿಮ್ಮ ಪರಮಾತ್ಮನು ಒಬ್ಬನೇ ಮತ್ತು ನಿಮ್ಮ ತಂದೆ ಒಬ್ಬನೇ. ತಿಳಿಯಿರಿ, ಅರಬ್ಬನಿಗೆ ಅರಬ್ಬೇತರನಿಗಿಂತ ಶ್ರೇಷ್ಠತೆಯಿಲ್ಲ. ಅರಬ್ಬೇತರನಿಗೆ ಅರಬ್ಬನಿಗಿಂತ ಶ್ರೇಷ್ಠತೆಯಿಲ್ಲ. ಬಿಳಿಯನಿಗೆ ಕರಿಯನಿಗಿಂತ ಶ್ರೇಷ್ಠತೆಯಿಲ್ಲ. ಕರಿಯನಿಗೆ ಬಿಳಿಯನಿಗಿಂತ ಶ್ರೇಷ್ಠತೆಯಿಲ್ಲ. ದೇವನಿಷ್ಠೆಯ ಆಧಾರದಲ್ಲಿ ಹೊರತು.”[50] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ನಿಮ್ಮಲ್ಲಿನ ದುರ್ಬಲರನ್ನು ನನಗಾಗಿ ಹುಡುಕಿರಿ. ಏಕೆಂದರೆ ನಿಶ್ಚಯವಾಗಿಯೂ ನಿಮ್ಮಲ್ಲಿನ ದುರ್ಬಲರ ಕಾರಣದಿಂದಲೇ ನಿಮಗೆ ಆಹಾರ ಮತ್ತು ಸಹಾಯ ದೊರೆಯುತ್ತಿದೆ.” [51]
[50] ಈ ಹದೀಸನ್ನು ಬೈಹಕಿ ಶುಅಬುಲ್ ಈಮಾನ್‌ನಲ್ಲಿ ವರದಿ ಮಾಡಿದ್ದಾರೆ. ಈ ಹದೀಸ್ ಸಹೀಹ್ ಆಗಿದೆ. ನೋಡಿ: ಸಿಲ್ಸಿಲತು ಸ್ಸಹೀಹ ಹ.ಸಂಖ್ಯೆ: 2700.
[51] ಸುನನ್ ಅಬೂದಾವೂದ್ ಮತ್ತು ತಿರ್ಮಿದಿ ಇದನ್ನು ವರದಿ ಮಾಡಿದ್ದಾರೆ. ಅಲ್ಬಾನಿ ಸಹೀಹುಲ್ ಜಾಮಿಅ್‌ನಲ್ಲಿ ಮತ್ತು ಸಹೀಹ್ ಅಬೂದಾವೂದ್‌ನಲ್ಲಿ ಇದನ್ನು ಸಹೀಹ್ ಎಂದಿದ್ದಾರೆ. ಹ.ಸಂಖ್ಯೆ: 2594.
“ನಿಮ್ಮಲ್ಲಿನ ದುರ್ಬಲರನ್ನು ನನಗಾಗಿ ಹುಡುಕಿರಿ. ಏಕೆಂದರೆ ನಿಶ್ಚಯವಾಗಿಯೂ ನಿಮ್ಮಲ್ಲಿನ ದುರ್ಬಲರ ಕಾರಣದಿಂದಲೇ ನಿಮಗೆ ಆಹಾರ ಮತ್ತು ಸಹಾಯ ದೊರೆಯುತ್ತಿದೆ.” ಎಂಬ ದೃಷ್ಟಿಕೋನವನ್ನು ಮತ್ತು ಹಿಂದೂಗಳು ದುರ್ಬಲರನ್ನು ನೋಡುವ ದೃಷ್ಟಿಕೋನವನ್ನು ನೋಡಿರಿ.
ಬಡವರಿಗೆ, ದುರ್ಬಲರಿಗೆ, ಅಮಾಯಕರಿಗೆ ಮತ್ತು ಮಂದಬುದ್ಧಿಗಳಿಗೆ ಸಹಾನುಭೂತಿ ತೋರುವ ವಿಧದಲ್ಲಿ ಮನುಷ್ಯಾತ್ಮವನ್ನು ಸೃಷ್ಟಿಸಲಾಗಿದೆ. ಈ ಸಹಜ ಮನೋಧರ್ಮಕ್ಕೆ ಹಿಂದೂ ಧರ್ಮವು ತೋರುವ ಅಪಚಾರವು ನಿಜವಾದ ಸಮಸ್ಯೆಯಾಗಿದೆ.
11. ಹಿಂದೂಗಳು ನಿಜವಾಗಿಯೂ ಗೋವುಗಳನ್ನು ಪವಿತ್ರವೆನ್ನುತ್ತಾರೆಯೇ?
ಹಿಂದೂ ಧರ್ಮದಲ್ಲಿ ಗೋವು ಕೊಡುವ ಮೂಲವಾಗಿರುವುದರಿಂದ ಅದಕ್ಕೆ ವಿಶೇಷ ಪವಿತ್ರತೆಯಿದೆ. ಅದೇ ರೀತಿ ಇನ್ನೊಂದು ವಿಷಯವೇನೆಂದರೆ, ಪರಮಾತ್ಮನು ಸೃಷ್ಟಿಗಳಲ್ಲಿ ನೆಲೆಸುತ್ತಾನೆಂಬ ಅದ್ವೈತ ಸಿದ್ಧಾಂತ ಎಂದು ಕರೆಯುವ ಕಲ್ಪನೆ ಈಗಿನ ಹಿಂದೂ ಧರ್ಮದಲ್ಲಿದೆ. ಗೋವು ಕೂಡ ಇದರಲ್ಲಿ ಒಳಪಡುತ್ತದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಗೋವಿನ ಪವಿತ್ರತೆಯ ಬಗ್ಗೆ ವಿಭಿನ್ನ ದೃಷ್ಟಿಕೋನಗಳಿವೆ.
ಭಾರತದ ನಾನಾ ಕಡೆಗಳಲ್ಲಿ ಗೋವುಗಳಿಗೆ ನಿರಂತರ ವಿಶೇಷ ಸಮಾರಂಭಗಳನ್ನು ಏರ್ಪಡಿಸಲಾಗುತ್ತದೆ.[52]
[52] ಪವಿತ್ರ ಗೋವಿನ ಪುರಾಣ, ದ್ವಿಜೇಂದ್ರ ನಾರಾಯಣ. (ಅನುವಾದಿಸಲಾಗಿಲ್ಲ).
ಆದರೆ ಇದಕ್ಕೆ ತದ್ವಿರುದ್ಧವಾಗಿ, ವೇದಗಳು ಪರಮಾತ್ಮನನ್ನು ಪರಿಶುದ್ಧಗೊಳಿಸುತ್ತವೆ ಮತ್ತು ಎಲ್ಲಾ ವಸ್ತುಗಳಿಗಿಂತಲೂ ಮತ್ತು ಎಲ್ಲಾ ಸೃಷ್ಟಿಗಳಿಗಿಂತಲೂ ಅವನನ್ನು ಮಹತ್ವಪಡಿಸುತ್ತದೆ.
ಋಗ್ವೇದದಲ್ಲಿ ಹೀಗೆ ಬಂದಿದೆ: “ನಾನೇ ಎಲ್ಲಾ ವಸ್ತುಗಳಿಗಿಂತ ಮುಂಚೆ ಅಸ್ತಿತ್ವದಲ್ಲಿದ್ದ ಪರಮಾತ್ಮ. ನಾನು ಎಲ್ಲಾ ಲೋಕಗಳ ಯಜಮಾನ. ನಾನೇ ನಿಜವಾದ ಅನುಗ್ರಹದಾತ ಮತ್ತು ಎಲ್ಲಾ ಅನುಗ್ರಹಗಳ ಆಯ್ಕೆಗಾರ. ಆದ್ದರಿಂದ ಎಲ್ಲಾ ಆತ್ಮಗಳೂ ಸಹಾಯಕ್ಕಾಗಿ ಮತ್ತು ನೆರವಿಗಾಗಿ ನನ್ನನ್ನು ಮಾತ್ರ ಕರೆಯಬೇಕು.” [53]
[53] ಋಗ್ವೇದ ಮಂಡಲ: 10, ಸೂಕ್ತ: 48, ಮಂತ್ರ: 1.
ಇದು ಅದ್ವೈತವಾದವನ್ನು ಸೂರ್ಯ ಬೆಳಕಿನಂತೆ ಅತ್ಯಂತ ಸ್ಪಷ್ಟವಾಗಿ ನಿಷೇಧಿಸುವ ಉಲ್ಲೇಖವಾಗಿದೆ. ಪರಮಾತ್ಮನು ಪ್ರಪಂಚವನ್ನು ಸೃಷ್ಟಿಸಿದವನು ಮತ್ತು ಅವನು ಪ್ರಪಂಚದಿಂದ ಸಂಪೂರ್ಣ ಪ್ರತ್ಯೇಕವಾಗಿದ್ದಾನೆ.
ಅದೇ ರೀತಿ, ಭೌತಿಕ ಪ್ರಪಂಚವನ್ನು ಪವಿತ್ರಗೊಳಿಸುವುದು ಅಥವಾ ಸೃಷ್ಟಿಗಳೊಡನೆ ಸಹಾಯ ಬೇಡುವುದನ್ನು ಈ ಉಲ್ಲೇಖದಲ್ಲಿ ಎಚ್ಚರಿಸಲಾಗಿದೆ. ಆದ್ದರಿಂದ ಗೋವುಗಳ ಸೃಷ್ಟಿಕರ್ತ ಮತ್ತು ಇತರೆಲ್ಲಾ ವಸ್ತುಗಳ ಸೃಷ್ಟಿಕರ್ತನಾದ ಪರಮಾತ್ಮನ ಕಡೆಗಲ್ಲದೆ ಇನ್ನಾರ ಕಡೆಗೂ ಸಹಾಯಕ್ಕಾಗಿ ತಿರುಗಬಾರದು.
ಅಲ್ಲಾಹನಿಗೆ ಮಾತ್ರ ಶರಣಾಗುವುದು ಇಸ್ಲಾಂ ಧರ್ಮದ ನಂಬಿಕೆಯ ಅಡಿಪಾಯವಾಗಿದೆ.
ಗೋವುಗಳು ಮತ್ತು ನಮ್ಮ ಸುತ್ತಮುತ್ತಲಿರುವ ಎಲ್ಲಾ ಭೌತಿಕ ವಸ್ತುಗಳನ್ನು ನಮಗೆ ವಿಧೇಯಗೊಳಿಸಿಕೊಡಲಾಗಿದೆ ಎಂದು ಇಸ್ಲಾಂ ಧರ್ಮವು ಘೋಷಿಸುತ್ತದೆ. ಅಲ್ಲಾಹು ಅವನ ಔದಾರ್ಯದಿಂದಲೇ ಇವುಗಳನ್ನು ಸೃಷ್ಟಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ:
“ಮತ್ತು ಆಕಾಶಗಳಲ್ಲಿರುವ ಹಾಗೂ ಭೂಮಿಯಲ್ಲಿರುವ ಎಲ್ಲವನ್ನೂ ಅವನು ನಿಮಗೆ ವಿಧೇಯಗೊಳಿಸಿಕೊಟ್ಟನು. ಎಲ್ಲವೂ ಅವನಿಂದಲೇ ಆಗಿವೆ. ನಿಶ್ಚಯವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ಅನೇಕ ನಿದರ್ಶನಗಳಿವೆ.”
[ಸೂರ ಜಾಸಿಯ: 13]
ಇಸ್ಲಾಂ ಧರ್ಮದ ಈ ನಂಬಿಕೆಯು ಮಾನವನ ಸಹಜ ಮನೋಧರ್ಮವಾಗಿದೆ. ವೇದಗಳು ಬೋಧಿಸುವ ಏಕದೇವವಿಶ್ವಾಸಕ್ಕೆ ಮತ್ತು ಪರಮಾತ್ಮನಿಗಿರುವ ಸಂಪೂರ್ಣ ಶರಣಾಗತಿಗೆ ಮರಳಲು ಹಿಂದೂಗಳಿಗೆ ಇಸ್ಲಾಂ ಧರ್ಮದ ಮೂಲಕವಲ್ಲದೆ ಸಾಧ್ಯವಿಲ್ಲ. ವೇದಗಳಲ್ಲಿರುವ ಎಲ್ಲಾ ಸತ್ಯಗಳನ್ನು ಇಸ್ಲಾಂ ಹೇಳುತ್ತದೆ. ಇಸ್ಲಾಂ ಮನುಕುಲದ ಎಲ್ಲಾ ಪ್ರಮಾದಗಳನ್ನು ಸರಿಪಡಿಸುತ್ತದೆ ಮತ್ತು ದೇವವಾಣಿಯಲ್ಲಿ ಮನುಷ್ಯರು ಮಾಡಿದ ಎಲ್ಲಾ ತಿದ್ದುಪಡಿಗಳನ್ನು ನಿಷೇಧಿಸುತ್ತದೆ. 12. ಆದರೆ ಹಿಂದೂ ಧರ್ಮದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಯಮ, ಪಾಪಗಳಿಂದ ದೂರವಾಗುವ ಪ್ರಯತ್ನ ಇದೆಯಲ್ಲವೇ? ಇವು ವಿಶಿಷ್ಟ ಲಕ್ಷಣವಲ್ಲವೇ? ನಾನು ಸ್ವಲ್ಪ ಮುಂಚೆ ಹಿಂದೂ ಧರ್ಮದಲ್ಲಿರುವ ಹೆಚ್ಚುವರಿ ಕಠೋರತೆಯ ಬಗ್ಗೆ ಸೂಚಿಸಿದ್ದೆ. ಆದರೆ ಇಲ್ಲಿ ನಾನು ಹೇಳಲು ಬಯಸುವುದೇನೆಂದರೆ, ಪಾಪಗಳು ಮನವನ್ನು ಕುಟುಕುವುದು ಮತ್ತು ಆತ್ಮಸಾಕ್ಷಿಯು ನಮ್ಮನ್ನು ಟೀಕಿಸುವುದು ಸಹಜ ಮನೋಧರ್ಮವಾಗಿದ್ದು ಅದು ದೈವಿಕ ನಿಯಮಗಳ ಬದ್ಧತೆಯೊಂದಿಗೆ ಸೇರಿಕೊಂಡದ್ದಾಗಿದೆ.
ನಾವು ದೈವಿಕ ನಿಯಮಗಳಿಗೆ ಬದ್ಧರಾಗಿರುವುದರಿಂದ, ನಾವು ಯಾವುದೇ ತಪ್ಪು ಮಾಡುವಾಗಲೂ ನಾವು ನಮ್ಮ ಆತ್ಮಸಾಕ್ಷಿಯ ಟೀಕೆಯನ್ನು ಅನುಭವಿಸುತ್ತೇವೆ.
ಇದು ಸಹಜ ಮನೋಧರ್ಮವಾಗಿದೆ. ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ: “ಅಲ್ಲಾಹು ಮನುಷ್ಯನನ್ನು ಸೃಷ್ಟಿಸಿದ ಸಹಜ ಮನೋಧರ್ಮ.” [ಸೂರ ರೂಮ್: 30] ಈ ಸಹಜ ಮನೋಧರ್ಮದಿಂದಾಗಿ ಮನುಷ್ಯನು ಒಳಿತು ಮತ್ತು ಸತ್ಯದ ಮೌಲ್ಯಗಳಿಗೆ ವಿರುದ್ಧವಾದ ಏನಾದರೂ ಮಾಡುವಾಗ ಅವನ ಆತ್ಮಸಾಕ್ಷಿಯು ಅವನನ್ನು ಚುಚ್ಚುವುದನ್ನು ಅನುಭವಿಸುತ್ತಾನೆ. ಒಳಿತು ಮತ್ತು ಸತ್ಯದ ಮೌಲ್ಯಗಳಿಗೆ ವಿರುದ್ಧವಾಗಿ ವರ್ತಿಸಿದರೆ ಕ್ಷಮೆಯಾಚನೆ ಮಾಡುವ ಮತ್ತು ಪಶ್ಚಾತ್ತಾಪಪಡುವ ಮಾರ್ಗವೇನೆಂದು ಸರ್ವಶಕ್ತನಾದ ಅಲ್ಲಾಹು ತನ್ನ ಕೊನೆಯ ಸಂದೇಶದಲ್ಲಿ—ಇಸ್ಲಾಂ ಧರ್ಮದಲ್ಲಿ—ನಿರ್ದೇಶಿಸಿದ್ದಾನೆ. ಆದರೆ, ಹಿಂದೂ ಧರ್ಮದಲ್ಲಿ ಪಾಪಗಳನ್ನು ನಿಗ್ರಹಿಸಲು ನಾವು ಬೇರೊಂದು ವಿಧಾನವನ್ನು—ಅಂದರೆ, ಅತಿಯಾದ ಆತ್ಮಕಠೋರತೆಯನ್ನು ಕಾಣುತ್ತೇವೆ. ಇದರೊಂದಿಗೆ ಮನುಷ್ಯನನ್ನು ಸಂಪೂರ್ಣ ನಿಶ್ಶಬ್ದಗೊಳಿಸುವ ಧ್ಯಾನಗಳು, ತಪಸ್ಸುಗಳು ಮುಂತಾದ ಅನೇಕ ಆಚರಣೆಗಳಿವೆ. 13. ಆದರೆ ಹಿಂದೂ ಧರ್ಮದಲ್ಲಿರುವ ತಪಸ್ಸು ಮತ್ತು ಧ್ಯಾನ ಭಂಗಿಗಳು ಒಳ್ಳೆಯದಲ್ಲವೇ? ಇತ್ತೀಚಿನ ಪ್ರಾಣಾಯಾಮ ಸಿದ್ಧಾಂತದ ಮೂಲಕ ಉಗಮವಾದ ಯೋಗ ಭಂಗಿಗಳಲ್ಲಿರುವಂತೆ, ಹಿಂದೂ ಧರ್ಮದ ಪ್ರಕಾರ ಧ್ಯಾನ ಎಂದರೆ, ಪರಮಾತ್ಮನ ಸೃಷ್ಟಿ ಮತ್ತು ಅವನ ಜಾಣ್ಮೆಯ ಬಗ್ಗೆ ಯೋಚಿಸುವುದಲ್ಲ. ಹಾಗೆಯೇ, ಅವನ ಅಪ್ರತಿಮ ಸೃಷ್ಟಿ ವೈಚಿತ್ರ್ಯ ಮತ್ತು ಅವನ ಅನುಗ್ರಹಗಳನ್ನು ವೀಕ್ಷಿಸುವುದಲ್ಲ. ಬದಲಿಗೆ, ಅವರ ಪ್ರಕಾರ ಧ್ಯಾನವೆಂದರೆ, ಸಂಪೂರ್ಣ ನಿಶ್ಚಲವಾಗುವುದು ಮತ್ತು ಮನಸ್ಸನ್ನು ಎಲ್ಲಾ ರೀತಿಯ ಆಲೋಚನೆಗಳಿಂದ ಮುಕ್ತಗೊಳಿಸುವುದು. ಅದು ಶವದಂತಿರುವ ಸಂಪೂರ್ಣ ನಿಶ್ಚಲತೆಯಾಗಿದೆ. ಅದರಲ್ಲಿ ಮನಸ್ಸನ್ನು ಆಲೋಚನೆ ಮಾಡದಂತೆ ನಿಶ್ಶಬ್ದಗೊಳಿಸಲಾಗುತ್ತದೆ. Silence your Mind During Yoga.
ವೇದಗಳ ನಂತರ ಉಗಮವಾದ ಈ ವಿಚಿತ್ರ ನಿಶ್ಚಲ ಧ್ಯಾನ ಭಂಗಿಗಳು ಅವರ ಆಲೋಚನೆಗಳ ಮೇಲೆ ಪ್ರಭಾವ ಬೀರಿದವು. ಇದರಿಂದ ಅವರಿಗೆ ವಿಭ್ರಾಂತಿಗಳು ಮತ್ತು ಭ್ರಮೆಗಳು ಬರಲು ಆರಂಭವಾದವು. ಸೈತಾನನು ಅವರ ಬುದ್ಧಿಗಳಲ್ಲಿ ಆಟವಾಡಲು ಶುರು ಮಾಡಿದನು.
ಅವರಲ್ಲಿ ಕೆಲವರು ತಮಗೆ ಜ್ಞಾನೋದಯವಾಗಿದೆಯೆಂದು ಭಾವಿಸುತ್ತಾರೆ. ಆದರೆ, ನಾನು ಈಗಾಗಲೇ ವಿವರಿಸಿದಂತೆ, ಅವನಿಗೆ ಸಂಭವಿಸಿದ್ದು ನಿರಾಹಾರ ಮತ್ತು ನಿಶ್ಚಲತೆಯ ಜೊತೆಗೆ ಅವನ ಮೆದುಳಿನಲ್ಲಿ ಅಯಾನುಗಳ ಕೊರತೆಯಿಂದ ಉಂಟಾದ ವಿಭ್ರಾಂತಿಗಳಿಗಿಂತ ಹೆಚ್ಚೇನೂ ಅಲ್ಲ.
[54] https://www.ncbi.nlm.nih.gov/pubmed/8931651
ಸುದೀರ್ಘ ಸಮಯದ ನಿಶ್ಚಲ ಧ್ಯಾನ ಮತ್ತು ಕಠೋರ ಹಸಿವು ಇಂತಹ ವಿಭ್ರಾಂತಿಗಳಿಗೆ ಕಾರಣವಾಗುತ್ತವೆ. ಜಾಗತಿಕ ನಿಶ್ಚಲ ಧ್ಯಾನ ಕೇಂದ್ರಗಳ ಸ್ಥಾಪಕರಲ್ಲಿ ಪ್ರಖ್ಯಾತರಾದ Mikao Usui ಇದನ್ನು ಒಪ್ಪಿಕೊಳ್ಳುತ್ತಾರೆ.
ಹಲವಾರು ತಾಸುಗಳ ದೀರ್ಘ ಹಸಿವು ಮತ್ತು ನಿಷೇಧದ ಕಾರಣದಿಂದ ನನಗೆ ಪ್ರಜ್ಞೆ ಕಳೆದುಹೋಗತೊಡಗಿತು ಮತ್ತು ವಿಭ್ರಾಂತಿಗಳು ಬರತೊಡಗಿದವು ಎಂದು ಅವರು ದೃಢೀಕರಿಸಿದ್ದಾರೆ. ಈ ಹಂತದಲ್ಲಿ ಅವರಿಗೆ ಕಲ್ಪನೆಗಳು ಬರತೊಡಗಿದವು.[55]
[55] ಆರಂಭಿಕ ಹಂತದಲ್ಲಿರುವವರಿಗೆ ರೈಕಿ (Reiki). ಡೇವಿಡ್ ಎಫ್ ವೆನಲ್ಸ್, ಪುಟ 30-35, (ಡಾ. ಹೈಫ ಬಿಂತ್ ನಾಸಿರ್ ರಶೀದ್ ವಿರಚಿತ “ಅತ್ತತ್ಬೀಕಾತು ಮುಆಸಿರ ಲಿ ಫಲ್ಸಫತಿಲ್ ಇಸ್ತಿಶ್ಫಾಇ ಶ್ಶರ್ಕಿಯ್ಯ” ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ).
ಮಾನಸಿಕ ರೋಗ ತಜ್ಞ ಡೋನೋವಾನ್ ರಾಕ್ಲಿಫ್ Donovan Rawcliffe ಒಂದು ಪ್ರತ್ಯೇಕ ಸಂಶೋಧನೆಯಲ್ಲಿ, ಇಂತಹ ಆಚರಣೆಗಳಿಂದ ಬರುವ ಕಲ್ಪನೆಗಳಿಗೂ ವಿಭ್ರಾಂತಿಗಳಿಂದ ಉದ್ಭವವಾಗುವ ಭ್ರಮಾರೋಗಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಒತ್ತಿ ಹೇಳಿದ್ದಾರೆ. [56]
[56] Rawcliffe, Donovan, (1988), Occult and Supernatural phenomena, Dover Publications, p. 123
ಹೆಚ್ಚಿನ ಯೋಗ ಭಂಗಿಗಳು ಆರೋಗ್ಯಕ್ಕೆ ದೋಷಕರವಾಗಿವೆ ಮತ್ತು ದೀರ್ಘಕಾಲ ಅವುಗಳನ್ನು ರೂಢಿಸಿಕೊಳ್ಳುವುದು ಅವ್ಯವಸ್ಥೆ, ಗೊಂದಲ ಮತ್ತು ಸಮಯ ಹಾಗೂ ಸ್ಥಳದ ಬಗ್ಗೆ ಪ್ರಜ್ಞೆ ಕಳಕೊಳ್ಳುವುದು ಮುಂತಾದವುಗಳಿಗೆ ಕಾರಣವಾಗುತ್ತವೆ. ಇವು ಜ್ಞಾಪಕಶಕ್ತಿಯನ್ನು ಕುಂದಿಸುತ್ತವೆ ಮತ್ತು ಆಲ್ಝೈಮರ್ ಕಾಯಿಲೆಯನ್ನು ಆಹ್ವಾನಿಸುತ್ತವೆ.[57]
[57] An introduction to complementary medicine, Simon Borg Olivier, p.290 (ಡಾ. ಹೈಫ ಬಿಂತ್ ನಾಸಿರ್ ರಶೀದ್‌ರವರ “ಹರಕತುಲ್ ಅಸ್ರಿಲ್ ಜದೀದ್” ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ). ಈ ಆಚರಣೆಗಳ ಮೂಲಕ ಹಿಂದೂ ಧರ್ಮವು ವೇದಗಳಿಂದ ಮತ್ತು ಪ್ರವಾದಿಗಳ ಬೋಧನೆಗಳಿಂದ ದೂರವಾಗಿದೆ. ಪರಮಾತ್ಮನ ಸೃಷ್ಟಿಗಳ ಬಗ್ಗೆ ಯೋಚಿಸಲು, ಚಿಂತಿಸಲು ಮತ್ತು ಧ್ಯಾನ ಮಾಡಲು ಇಸ್ಲಾಂ ಕರೆ ನೀಡುತ್ತದೆ. ಈ ಆಲೋಚನೆ, ಚಿಂತನೆ ಮತ್ತು ಧ್ಯಾನವು ಕರ್ಮವೆಸಗಲು, ವಿಧೇಯತೆ ತೋರಲು, ಪರಮಾತ್ಮನಿಗೆ ಕೃತಜ್ಞತೆ ಸಲ್ಲಿಸಲು ಮತ್ತು ಜೀವನದಲ್ಲಿ ಪರಿಶ್ರಮ ಪಡಲು ಕಾರಣವಾಗುತ್ತದೆಯೇ ವಿನಾ ನಿಷ್ಕ್ರಿಯತೆಗೆ ಮತ್ತು ನಿಷ್ಕ್ರಿಯತೆಗೆ ಕಾರಣವಾಗುವ ಬುದ್ಧಿಯನ್ನು ನಿಶ್ಶಬ್ದಗೊಳಿಸುವುದಕ್ಕೆ ಕಾರಣವಾಗುವುದಿಲ್ಲ.
ವಿಧೇಯತೆ ಮತ್ತು ಪರಮಾತ್ಮನ ಕಡೆಗೆ ಮರಳುವತ್ತ ಸಾಗಿಸುವುದೇ ನಿಜವಾದ ಕಲ್ಪನೆ. “ನಿಂತುಕೊಂಡು, ಕುಳಿತುಕೊಂಡು ಮತ್ತು ತಮ್ಮ ಪಾರ್ಶ್ವಗಳ ಮೇಲೆ (ಮಲಗಿಕೊಂಡು) ಅಲ್ಲಾಹನನ್ನು ಸ್ಮರಿಸುವವರು ಮತ್ತು ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯ ಬಗ್ಗೆ ಯೋಚಿಸುವವರು. (ಅವರು ಹೇಳುತ್ತಾರೆ:) ಓ ನಮ್ಮ ಸಂರಕ್ಷಕನೇ! ನೀನು ಇದನ್ನು ವ್ಯರ್ಥವಾಗಿ ಸೃಷ್ಟಿಸಿಲ್ಲ. ನೀನು ಪರಿಶುದ್ಧನು. ಆದ್ದರಿಂದ ನಮ್ಮನ್ನು ನರಕ ಶಿಕ್ಷೆಯಿಂದ ಪಾರು ಮಾಡು.” [ಸೂರ ಆಲು ಇಮ್ರಾನ್: 191]
ಇದು ಇಸ್ಲಾಂ ಧರ್ಮವು ಪರಿಚಯಿಸುವ ಕಲ್ಪನೆ. ಇದು ಮನುಷ್ಯನ ಸಹಜ ಮನೋಧರ್ಮಕ್ಕೆ ಹೊಂದಾಣಿಕೆಯಾಗುತ್ತದೆ ಮತ್ತು ತನ್ನನ್ನು ಆವರಿಸಿಕೊಂಡಿರುವ ಪರಮಾತ್ಮನ ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸಲು ಮತ್ತು ಆ ಅನುಗ್ರಹಗಳನ್ನು ವೀಕ್ಷಿಸಲು ಸಹಾಯ ಮಾಡುತ್ತದೆ.
ಆದರೆ, ಈಗಿನ ಹಿಂದೂ ಧರ್ಮದಲ್ಲಿರುವ ಸಂಪೂರ್ಣ ನಿಶ್ಚಲ ಭಂಗಿಗಳು ಸೈತಾನನ ಕೊಟ್ಟಿಗೆಗಳಾಗಿವೆ. ಇಂತಹ ನಿಶ್ಚಲ ಧ್ಯಾನ ಭಂಗಿಗಳಲ್ಲಿರುವಾಗ ಸೈತಾನನು ಅವರಿಗೆ ಸಹಾಯಗಳನ್ನು ಮಾಡುತ್ತಾನೆ ಮತ್ತು ಕೆಲವು ದೃಶ್ಯಗಳನ್ನು ಹಾಗೂ ಪ್ರಕಟಣೆಗಳನ್ನು ಒದಗಿಸುತ್ತಾನೆ. ಆಗ ಅವರ ಮನದಲ್ಲಿ ನಿರಂತರ ಮರುಹುಟ್ಟುಗಳ ಕಲ್ಪನೆಗಳು, ಪುನರ್ಜನ್ಮಗಳ ಕಲ್ಪನೆಗಳು, ಅದ್ವೈತ ಸಿದ್ಧಾಂತದ ಕಲ್ಪನೆಗಳು, ದೇವನು ವಿಗ್ರಹಗಳಲ್ಲಿ ಅವತಾರವಾಗುವ ಕಲ್ಪನೆಗಳು ಮೂಡುತ್ತವೆ. ನಂತರ ಸನ್ಯಾಸಿಗಳು ತಮ್ಮ ಶಿಷ್ಯರಿಗೆ ಇಂತಹ ಕಲ್ಪನೆಗಳನ್ನು ಮತ್ತು ಬೋಧನೆಗಳನ್ನು ನೀಡಿ ಸ್ವತಃ ದಾರಿ ತಪ್ಪುವುದರೊಂದಿಗೆ ಅವರನ್ನೂ ದಾರಿ ತಪ್ಪಿಸುತ್ತಾರೆ.
14. ಈಗಿನ ಹಿಂದೂ ಧರ್ಮದಲ್ಲಿರುವಂತೆ ಊರು ಬಿಟ್ಟು ಪಾಳು ಪ್ರದೇಶಗಳಿಗೆ ತೆರಳುವುದರಲ್ಲಿ ತಪ್ಪೇನಿದೆ?
ಹಿಂದೂ ಧರ್ಮವು ಸಹಜ ಒಲವು ಮತ್ತು ಮೋಹಗಳ ವಿರುದ್ಧ ಹೋರಾಡುವುದು, ಇಸ್ಲಾಮೀ ನಿಯಮದಂತೆ ಅವುಗಳನ್ನು ಸಂಸ್ಕರಿಸುವುದಕ್ಕಲ್ಲ, ಬದಲಿಗೆ ದೇಹವನ್ನು ಸುಡುವುದಕ್ಕೆ. ಈಗಿನ ಹಿಂದೂ ಧರ್ಮವು ಮನುಷ್ಯನನ್ನು ವೈರಾಗ್ಯ ಮತ್ತು ಐಹಿಕ ವಿರಕ್ತಿಯ ಕಡೆಗೆ ಒಯ್ಯುತ್ತದೆ.
ಹಿಂದೂ ಧರ್ಮದ ದೃಷ್ಟಿಕೋನದಲ್ಲಿ ದೇಹವನ್ನು ಮರೆಯುವುದರಿಂದ ಸಹಜ ಒಲವು ಮರೆತುಹೋಗುತ್ತದೆ.
ಆದ್ದರಿಂದ ಒಬ್ಬ ಹಿಂದೂ ಮೋಕ್ಷವನ್ನು ಬಯಸುತ್ತಾ ತನ್ನ ದೇಹವನ್ನು ಕೊಳೆಯುವಂತೆ ಮಾಡಲು ಪಾಳು ಪ್ರದೇಶಕ್ಕೆ ಹೋಗುತ್ತಾನೆ; ಮತ್ತು ತನ್ನ ಉಳಿದ ಆಯುಷ್ಯವನ್ನು ಸಾವಿನ ತನಕ ಭಿಕ್ಷೆ ಬೇಡುತ್ತಾ ಕಳೆಯುತ್ತಾನೆ.
ಇದು ವ್ಯಕ್ತಿ, ಕುಟುಂಬ ಮತ್ತು ಸಮಾಜವನ್ನು ಧ್ವಂಸ ಮಾಡುವ ದುರಂತಮಯ ಒಡಕಾಗಿದೆ.
ಸಹಜ ಒಲವು ಮತ್ತು ಮೋಹವು ಕುಟುಂಬ ನಿರ್ಮಾಣಕ್ಕೆ, ಸಮಾಜ ಸ್ಥಾಪನೆಗೆ, ಪರಿಶ್ರಮ, ದುಡಿಮೆ ಮತ್ತು ಬದುಕಿನ ನಿರ್ಮಾಣಕ್ಕಿರುವ ದೈವಿಕ ಉಡುಗೊರೆಯಾಗಿದೆ.
ಸಹಜ ಒಲವನ್ನು ಸಂಸ್ಕರಿಸುವ ಮೂಲಕ ಮತ್ತು ಅದನ್ನು ನೈಸರ್ಗಿಕ ದಾರಿಗೆ ತರುವ ಮೂಲಕ ಸರಿಪಡಿಸಬೇಕಾಗಿದೆಯೇ ಹೊರತು ದೇಹವನ್ನು ಸುಡುವುದರಿಂದಲ್ಲ.
ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡಿ, ನಂತರ ದಿನದ ಉಳಿದ ಭಾಗವನ್ನು ಪಾಳು ಪ್ರದೇಶದಲ್ಲಿ ಕಳೆದು ಸಾವಿನ ತನಕ ಜೀವಿಸುವುದರಲ್ಲಿ ನಮ್ಮ ಜೀವನದ ಗುರಿ ಅಡಗಿದೆಯೆಂದು ಹೇಳಿದ್ದು ಯಾರು?
ಒಂದು ತುಂಡು ಕೇಸರಿ ಬಟ್ಟೆಯನ್ನು ಧರಿಸಿ, ನಂತರ ಜಗತ್ತನ್ನು ತೊರೆದು ಏಕಾಂಗಿಯಾಗಿ ಸಾವಿನ ತನಕ ಜೀವಿಸಲು ನಾವು ಈ ಜಗತ್ತಿಗೆ ಬಂದಿದ್ದೇವೆಂದು ಹೇಳಿದ್ದು ಯಾರು?
ಅತ್ಯಂತ ಸಣ್ಣ ಕೀಟಗಳು ಕೂಡ ಅಸ್ತಿತ್ವದ ಗುರಿಯ ಬಗ್ಗೆ, ಭೂಮಿಯಲ್ಲಿ ವಾಸಿಸುವ ಬಗ್ಗೆ ಮತ್ತು ಜೀವನವನ್ನು ಸುಧಾರಿಸುವ ಬಗ್ಗೆ ನಮಗಿಂತಲೂ ಹೆಚ್ಚು ಪ್ರಜ್ಞಾವಂತಿಕೆಯನ್ನು ಹೊಂದಿವೆ. ಜೇನು ನೊಣಗಳ ಹಿಂಡುಗಳು ಅವುಗಳ ಮತ್ತು ಅವುಗಳ ಮರಿಗಳ ಕ್ಷೇಮಕ್ಕಾಗಿ ಶ್ರಮಶೀಲವಾಗಿ ಮತ್ತು ವ್ಯವಸ್ಥಿತವಾಗಿ ದುಡಿಯುವುದನ್ನು ನೀವು ಕಾಣುತ್ತೀರಿ. ಅತ್ಯಂತ ಸೂಕ್ಷ್ಮ ಬ್ಯಾಕ್ಟೀರಿಯಾಗಳನ್ನು ಪ್ರಯೋಜನ ನೀಡಲು ಮತ್ತು ಪ್ರಯೋಜನ ಪಡೆಯಲು ಕರಳುಗಳಲ್ಲಿ ವ್ಯವಸ್ಥೆಗೊಳಿಸಿರುವುದನ್ನು ನೀವು ನೋಡುತ್ತೀರಿ.
ಒಟ್ಟಿನಲ್ಲಿ, ಜೀವನವು ಕೆಲವು ನಿಯಮ ಸಂಹಿತೆಗಳು ಮತ್ತು ಕಾರ್ಯವೈಖರಿಗಳಿಗೆ ಅನುಗುಣವಾಗಿ ಚಲಿಸುತ್ತಿದೆ.
ಈಗಿನ ಹಿಂದೂ ಧರ್ಮವು ಆಲಸ್ಯ, ನಿರ್ಲಕ್ಷ್ಯ ಮತ್ತು ಭಿಕ್ಷೆಯ ಕಡೆಗೆ ಆಮಂತ್ರಿಸುತ್ತದೆ. ಹಿಂದೂ ಧರ್ಮದಲ್ಲಿ ಭಿಕ್ಷೆ ಬೇಡುವುದು ಜೀವನ ಪದ್ಧತಿಯಾಗಿ ಮಾರ್ಪಟ್ಟಿದೆ.
ಇಲ್ಲಿ ನಮ್ಮ ಪ್ರಶ್ನೆಯೇನೆಂದರೆ: ಒಬ್ಬ ಹಿಂದೂ ಮನುಷ್ಯರಿಂದ ದೂರವಾಗಿ, ಬೆಟ್ಟಗಳ ಮೇಲೆ ಅಥವಾ ಜನವಾಸವಿಲ್ಲದ ಸ್ಥಳಗಳಲ್ಲಿ ವಾಸಿಸುವುದರ ಅರ್ಥವೇನು? ಇದರಿಂದ ಜನರಿಗೆ ಉಂಟಾಗುವ ಲಾಭವೇನು?
ದುಡಿಮೆ, ಉಪದೇಶ, ಜನರೊಡನೆ ಬೆರೆಯುವುದು, ಜನರನ್ನು ಸುಧಾರಿಸುವುದು ಮತ್ತು ಅವರ ಕಿರುಕುಳಗಳನ್ನು ಸಹಿಸುವುದು ಸತ್ಯ ಧರ್ಮ ಮತ್ತು ಸರಿಯಾದ ಜೀವನ ಮಾರ್ಗವಾಗಿದೆ. ಇದರ ಹೊರತು ಜನರನ್ನು ಬಿಟ್ಟು ಓಡಿ ಹೋಗಿ ಕಣಿವೆಗಳಲ್ಲಿ ಮತ್ತು ಮರುಭೂಮಿಗಳಲ್ಲಿ ವಾಸಿಸುವುದಲ್ಲ!
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಜನರೊಡನೆ ಬೆರೆತು, ಅವರ ಕಿರುಕುಳಗಳನ್ನು ಸಹಿಸುವ ಮುಸಲ್ಮಾನನು ಜನರೊಡನೆ ಬೆರೆಯದ, ಅವರ ಕಿರುಕುಳಗಳನ್ನು ಸಹಿಸದ ಮುಸಲ್ಮಾನನಿಗಿಂತ ಶ್ರೇಷ್ಠ.” [58]
[58] ಸಹೀಹ್ ಸುನನ್ ತಿರ್ಮಿದಿ. ಹ.ಸಂಖ್ಯೆ: 2507. 15. ಮೋಹವನ್ನು ನಿಗ್ರಹಿಸಲು ಮತ್ತು ಪಾಪಗಳಿಂದ ಮುಕ್ತಿ ಪಡೆಯಲು ಅತ್ಯುತ್ತಮ ಮಾರ್ಗ ಯಾವುದು? ಮೋಹ ಹಾಗೂ ಸಹಜ ಒಲವನ್ನು ನಿಗ್ರಹಿಸುವುದರ ಬೇರು ಮತ್ತು ಸಹಜ ಮನೋಧರ್ಮ ಹಾಗೂ ಧಾರ್ಮಿಕ ಬದ್ಧತೆಗಳ ಬೇರು ಒಂದೇ. ಮುಸಲ್ಮಾನರು ದೇವವಾಣಿಯು ಆದೇಶಿಸುವಂತೆ ಮೋಹವನ್ನು ಸಂಸ್ಕರಿಸುವ ವಿಧಾನವನ್ನು ಮೈಗೂಡಿಸಿಕೊಳ್ಳುತ್ತಾರೆ.
ಇಸ್ಲಾಂ ಧರ್ಮದಲ್ಲಿ ಉತ್ತಮ ವಿವಾಹವಿದೆ, ದೃಷ್ಟಿ ತಗ್ಗಿಸುವುದು ಇದೆ, ರಹಸ್ಯದಲ್ಲೂ ಬಹಿರಂಗದಲ್ಲೂ ಅಲ್ಲಾಹನನ್ನು ಭಯಪಡುವುದು ಇದೆ ಮತ್ತು ಪಾಪವೆಸಗಿದರೆ ಅದರ ಶಿಕ್ಷೆಯ ಬಗ್ಗೆ ದೈವಿಕ ಎಚ್ಚರಿಕೆಯೂ ಇದೆ. ಮನುಷ್ಯನು ತಪ್ಪೆಸಗಿದಾಗ ಮತ್ತು ಅವನ ಮನಸ್ಸು ದುರ್ಬಲವಾದಾಗ ಪಶ್ಚಾತ್ತಾಪಪಡಬೇಕಾದ ಮಾರ್ಗವಿದೆ. ಆದರೆ ಹಿಂದೂ ಧರ್ಮದಲ್ಲಿ, ಮೋಕ್ಷಕ್ಕೆ ತಲುಪಲು ಬಯಸುವ ಹಿಂದೂ ತನ್ನ ಪತ್ನಿ-ಮಕ್ಕಳನ್ನು ಮತ್ತು ಉದ್ಯೋಗವನ್ನು ತೊರೆಯುತ್ತಾನೆ, ಕಾಲುದಾರಿಗಳಲ್ಲಿ ಮತ್ತು ಪಾಳು ಪ್ರದೇಶಗಳಲ್ಲಿ ಮಲಗುತ್ತಾನೆ, ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡುತ್ತಾನೆ; ಹೀಗೆ ಸಾಯುವ ತನಕ ಈ ವಿಧಾನದಲ್ಲಿ ತನ್ನ ದೇಹವನ್ನು ಸುಡುತ್ತಾ ಕಾಲ ಕಳೆಯುವುದನ್ನು ನಾವು ಕಾಣುತ್ತೇವೆ. ಇದು ಆತ್ಮ ಸಂಸ್ಕರಣೆಯ ಸರಿಯಾದ ಮಾರ್ಗವೇ?
ಇಂದು ಭಾರತದಲ್ಲಿ ಐದು ದಶಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದೂ ಸನ್ಯಾಸಿಗಳು ತಮ್ಮ ಆಶ್ರಯದಲ್ಲಿ ಬದುಕುವ ತಮ್ಮ ಕುಟುಂಬದವರನ್ನು ನಿರ್ಲಕ್ಷಿಸುವುದಕ್ಕೆ ತಮ್ಮನ್ನು ಸೀಮಿತಗೊಳಿಸುವುದಿಲ್ಲ; ಬದಲಿಗೆ, ಅವರು ಸ್ವತಃ ತಮ್ಮ ಅನ್ನ ಮತ್ತು ಆಹಾರಕ್ಕಾಗಿ ಇತರರನ್ನು ಆಶ್ರಯಿಸುತ್ತಿದ್ದಾರೆ. ಇಸ್ಲಾಂ ಧರ್ಮವು ಶ್ರೇಷ್ಠ ಮತ್ತು ವಿವೇಚನಾಯುಕ್ತ ವಿಧಾನದ ಮೂಲಕ ಮಾನವನ ಆತ್ಮವನ್ನು ಸಂಸ್ಕರಿಸುತ್ತದೆ. ತನ್ನ ಆಶ್ರಯದಲ್ಲಿ ಜೀವಿಸುವವರ ಹಕ್ಕುಗಳಲ್ಲಿ ಚ್ಯುತಿಯುಂಟು ಮಾಡುವುದು ನಿಷಿದ್ಧವೆಂದು ಇಸ್ಲಾಂ ಘೋಷಿಸಿದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ತಾನು ಆಹಾರ ನೀಡಬೇಕಾದವರನ್ನು ನಿರ್ಲಕ್ಷಿಸುವುದು ಮನುಷ್ಯನಿಗೆ ಪಾಪವಾಗಿ ಯಥೇಷ್ಟ ಸಾಕು.”[59]
[59] ಸಹೀಹ್ ಸುನನ್ ಅಬೂದಾವೂದ್ ಹ.ಸಂಖ್ಯೆ 1692; ಸಹೀಹ್ ಹದೀಸ್.
ಪ್ರಪಂಚವನ್ನು ತೊರೆಯದೆ, ಸತ್ಕರ್ಮಗಳನ್ನು ಮಾಡುವ ಮೂಲಕ ಮತ್ತು ಮೋಹವನ್ನು ನಿಗ್ರಹಿಸುವ ಮೂಲಕ ಆತ್ಮವನ್ನು ಸುಧಾರಿಸಬಹುದು ಮತ್ತು ಸಂಸ್ಕರಿಸಬಹುದೆಂದು ಇಸ್ಲಾಂ ಘೋಷಿಸಿದೆ. ಇಸ್ಲಾಂ ಧರ್ಮದಲ್ಲಿ ಮನುಷ್ಯನಿಗೆ ಸಮಾಜದಲ್ಲಿ ಬದುಕುತ್ತಾ ಇರಲು, ಅದನ್ನು ನಿರ್ಮಾಣ ಮಾಡುತ್ತಾ ಇರಲು, ಮತ್ತು ಅದೇ ಸಮಯ ಅಲ್ಲಾಹನ ಶಿಕ್ಷೆಯಿಂದ ಪಾರಾಗಲು ಸಾಧ್ಯವಿದೆ. ಅದಕ್ಕೆ ಹಿಂದೂ ಧರ್ಮದಲ್ಲಿರುವಂತೆ ಈ ಸ್ವರೂಪದಲ್ಲಿ ಆತ್ಮವನ್ನು ಸುಡಬೇಕಾದ ಅಗತ್ಯವಿಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಮತ್ತು ಯಾರು ತನ್ನ ಸಂರಕ್ಷಕನ (ಅಲ್ಲಾಹನ) ಮುಂದೆ ನಿಲ್ಲುವುದನ್ನು ಭಯಪಡುತ್ತಾನೋ ಮತ್ತು ತನ್ನ ಆತ್ಮವನ್ನು ಮೋಹದಿಂದ ದೂರವಿಡುತ್ತಾನೋ, ನಿಶ್ಚಯವಾಗಿಯೂ ಅವನ ವಾಸಸ್ಥಳವು ಸ್ವರ್ಗವಾಗಿದೆ.” (41) [ಸೂರ ನಾಝಿಆತ್].
ಅಲ್ಲಾಹನನ್ನು ಭಯಪಡುವುದು ಮತ್ತು ಸತ್ಕರ್ಮವೆಸಗುವುದು ಸ್ವರ್ಗದ ದಾರಿಯಾಗಿದೆ. ನೀನು ಜೀವಿಸುತ್ತಿರುವುದು ಯಾವುದೇ ಅರಮನೆಯಲ್ಲಾದರೂ ಸರಿ.
ಆದ್ದರಿಂದ ಆತ್ಮ ಸಂಸ್ಕರಣೆಗೆ ದೇಹವನ್ನು ಸುಡಬೇಕಾದ ಅನಿವಾರ್ಯತೆಯಿಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಅವನು ಕಡಿದಾದ ದಾರಿಯನ್ನು ಪ್ರವೇಶಿಸಿಲ್ಲ. (11)
ಕಡಿದಾದ ದಾರಿಯೆಂದರೆ ಏನೆಂದು ತಮಗೇನು ಗೊತ್ತು? (12)
ಅದು ಒಬ್ಬ ಗುಲಾಮನನ್ನು ಸ್ವತಂತ್ರಗೊಳಿಸುವುದು. (13)
ಅಥವಾ ಹಸಿವಿನ ದಿನದಲ್ಲಿ ಅನ್ನದಾನ ಮಾಡುವುದು. (14)
ಸಂಬಂಧಿಕನಾದ ಅನಾಥನಿಗೆ. (15)
ಅಥವಾ ಕಡುಬಡತನದಲ್ಲಿರುವ ಬಡವನಿಗೆ. (16)
ನಂತರ ಸತ್ಯವಿಶ್ವಾಸಿಗಳಲ್ಲಿ ಮತ್ತು ಪರಸ್ಪರ ತಾಳ್ಮೆಯನ್ನು ಉಪದೇಶಿಸುವರು ಹಾಗೂ ಪರಸ್ಪರ ದಯೆಯನ್ನು ಉಪದೇಶಿಸುವವರಲ್ಲಿ ಸೇರುವುದು.
ಅವರೇ ಬಲಭಾಗದವರು.”
ಸೂರ ಬಲದ್. ಆದ್ದರಿಂದ, ಸ್ವರ್ಗವನ್ನು ಪಡೆಯಬೇಕಾದರೆ ನೀನು ಗುಲಾಮರನ್ನು ಸ್ವತಂತ್ರಗೊಳಿಸಬೇಕು, ಬಡವರಿಗೆ ಅನ್ನ ನೀಡಬೇಕು, ಸತ್ಕರ್ಮ ಮಾಡಬೇಕು ಮತ್ತು ಜನರಿಗೆ ಒಳಿತನ್ನು ಉಪದೇಶಿಸಬೇಕು. ಇದರಿಂದ ನೀನು ಮೋಕ್ಷವನ್ನು ಪಡೆಯುವೆ.
ಇದಕ್ಕಾಗಿ ನೀನು ಜನರಿಂದ ದೂರವಾಗಬೇಕಾಗಿಲ್ಲ ಮತ್ತು ನಿನ್ನ ಉಳಿದ ಆಯುಷ್ಯವನ್ನು ಭಿಕ್ಷೆ ಬೇಡುತ್ತಾ ಕಳೆಯಬೇಕಾಗಿಲ್ಲ!
16. ಇಸ್ಲಾಂ ಧರ್ಮವು ಹಿಂದೂ ಧರ್ಮವನ್ನು ತಿರಸ್ಕರಿಸುವುದೇಕೆ?
ಈಗಿನ ಹಿಂದೂ ಧರ್ಮವು ಧರ್ಮವೋ, ತತ್ವಸಿದ್ಧಾಂತವೋ, ವಿಶ್ವಾಸದ ಒಲವೋ ಅಲ್ಲ. ಬದಲಿಗೆ, ಅದು ವೇದಗಳೊಡನೆ ಸನ್ಯಾಸಿಗಳ ತತ್ವಗಳು ಮತ್ತು ಬೋಧನೆಗಳು, ನಿಗೂಢ ತಂತ್ರಗಳು ಹಾಗೂ ಅಸಂಖ್ಯ ಆಚರಣೆಗಳ ಒಂದು ಮಿಶ್ರಣವಾಗಿದೆ.
ಈ ಕಾರಣದಿಂದಲೇ, ಹಿಂದೂ ಧರ್ಮಕ್ಕೆ ಒಂದು ನಿಶ್ಚಿತ ದೇವಾರಾಧನಾ ವ್ಯವಸ್ಥೆಯೋ, ಸ್ಪಷ್ಟ ನಿರ್ದಿಷ್ಟ ಆಚರಣೆಗಳ ವ್ಯವಸ್ಥೆಯೋ, ಸ್ಥಿರ ಧಾರ್ಮಿಕ ಪದ್ಧತಿಯೋ, ಅಥವಾ ಹಿಂದೂಗಳನ್ನು ಒಗ್ಗೂಡಿಸುವ ಕೇಂದ್ರೀಯ ಧಾರ್ಮಿಕ ಕಟ್ಟಡವೋ ಇಲ್ಲ. ಇಂದು ನೀವು ಇವುಗಳಲ್ಲಿ ಯಾವುದನ್ನೂ ಕಾಣುವುದಿಲ್ಲ. ನೀವು ಈಗ ಅಕ್ಷರಶಃ ಸಂಪೂರ್ಣ ದೇವಶಾಸ್ತ್ರೀಯವಾದ ಸಾವಿರಾರು ಸ್ವತಂತ್ರ ಧಾರ್ಮಿಕ ಗುಂಪುಗಳ ಮುಂದೆ ನಿಂತಿದ್ದೀರಿ.[60]
[60] ಹಿಂದೂಗಳು: ಅವರ ಧಾರ್ಮಿಕ ವಿಶ್ವಾಸ ಮತ್ತು ಆಚರಣೆಗಳು, ಜೂಲಿಯಸ್ ಜೆ ಲಿಪ್ನರ್, ಪುಟ 8.
ಪರಮಾತ್ಮನು ಯಾವುದೇ ಪುರಾವೆ ಅವತೀರ್ಣಗೊಳಿಸದ ಇಂತಹ ಸಂಪೂರ್ಣ ಗೊಂದಲಮಯ ಆಚರಣೆಗಳ ಮೂಲಕ ಪರಮಾತ್ಮನನ್ನು ಆರಾಧಿಸುವುದು ಹೇಗೆ?
ಇಂತಹ ಗೊಂದಲಮಯ ಪರಿಕಲ್ಪನೆಗಳ ಮಿಶ್ರಣವನ್ನು ಜೀವನದ ಗುರಿಯೆಂದು ಸ್ವೀಕರಿಸುವುದು ಹೇಗೆ?
ಅಷ್ಟೇ ಅಲ್ಲ, ಈಗಿನ ಹಿಂದೂಗಳು ವಿಗ್ರಹಗಳನ್ನು ಪರಮಾತ್ಮನ ಅವತಾರವಾಗಿ ಸ್ವೀಕರಿಸಿಕೊಂಡದ್ದನ್ನು ನೋಡಿ!
ತನ್ನ ಅವತಾರವಾಗಿ ಮತ್ತು ತನ್ನ ಸಾಮೀಪ್ಯವನ್ನು ಪಡೆಯುವುದಕ್ಕಾಗಿ ವಿಗ್ರಹಗಳನ್ನು ಸ್ವೀಕರಿಸುವವರನ್ನು ಸರ್ವಶಕ್ತನಾದ ಅಲ್ಲಾಹು ಸತ್ಯನಿಷೇಧಿಗಳೆಂದು ಬಣ್ಣಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ತಿಳಿಯಿರಿ! ನಿಷ್ಕಳಂಕವಾದ ಶರಣಾಗತಿಯು ಅಲ್ಲಾಹನಿಗೆ ಮಾತ್ರ ಅರ್ಹವಾದುದು. ಅವನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಂಡವರು (ಹೇಳುವರು): “ನಮ್ಮನ್ನು ಅಲ್ಲಾಹನೆಡೆಗೆ ಹತ್ತಿರಗೊಳಿಸುವುದಕ್ಕಾಗಿಯೇ ಹೊರತು ನಾವು ಅವರನ್ನು ಪೂಜಿಸುವುದಿಲ್ಲ”. ಅವರು ಯಾವ ವಿಷಯದಲ್ಲಿ ಭಿನ್ನಮತದಲ್ಲಿದ್ದಾರೋ ಆ ವಿಷಯದಲ್ಲಿ ನಿಶ್ಚಯವಾಗಿಯೂ ಅಲ್ಲಾಹು ಅವರ ಮಧ್ಯೆ ತೀರ್ಪು ನೀಡುವನು. ನಿಶ್ಚಯವಾಗಿಯೂ ಅಲ್ಲಾಹು ಸುಳ್ಳು ನುಡಿಯುವ, ಕೃತಘ್ನನಾದ ಯಾರನ್ನೂ ಸನ್ಮಾರ್ಗದಲ್ಲಿ ಮಾಡುವುದಿಲ್ಲ.”
[ಸೂರ ಝುಮರ್: 3]
ಈಗಾಗಲೇ ಹೇಳಿದಂತೆ, ಈ ವಿಗ್ರಹಗಳನ್ನು ಸ್ವೀಕರಿಸುವ ಮೂಲಕ ಹಿಂದೂಗಳು ವೇದಗಳಿಗೆ ವಿರುದ್ಧವಾಗಿದ್ದಾರೆ ಮತ್ತು ತಮ್ಮ ಸಹಜ ಮನೋಧರ್ಮಕ್ಕೆ ವಿರುದ್ಧವಾಗಿದ್ದಾರೆ. ವಿಗ್ರಹಗಳನ್ನು ಪರಮಾತ್ಮನ ಅವತಾರವಾಗಿ ಮಾಡುವುದಕ್ಕೆ ತಮ್ಮ ಬಳಿ ಯಾವುದೇ ನೈತಿಕ ಪುರಾವೆಯಿಲ್ಲವೆಂದು ಅವರಿಗೆ ಚೆನ್ನಾಗಿ ತಿಳಿದಿದೆ.
“ಅಥವಾ, ಸೃಷ್ಟಿಯನ್ನು ಆರಂಭಿಸಿ ನಂತರ ಅದನ್ನು ಪುನರಾವರ್ತಿಸುವವನು ಮತ್ತು ಆಕಾಶದಿಂದ ಹಾಗೂ ಭೂಮಿಯಿಂದ ನಿಮಗೆ ಜೀವನೋಪಾಯವನ್ನು ಒದಗಿಸುವವನು ಉತ್ತಮನೋ? (ಅಥವಾ ಅವರ ಆರಾಧ್ಯರೋ?) ಅಲ್ಲಾಹನೊಂದಿಗೆ ಬೇರೆ ದೇವರುಗಳಿದ್ದಾರೆಯೇ? ಹೇಳಿರಿ: “ನೀವು ಸತ್ಯವಂತರಾಗಿದ್ದರೆ ನಿಮ್ಮಲ್ಲಿರುವ ಪುರಾವೆಯನ್ನು ತನ್ನಿರಿ”.”
[ಸೂರ ನಮ್ಲ್: 64]
ಆದರೆ ಅವರಲ್ಲಿ ಪುರಾವೆ ಎಲ್ಲಿದೆ!
ಆದರೆ ಅವರಲ್ಲಿ ಪುರಾವೆ ಎಲ್ಲಿದೆ!
ಆದ್ದರಿಂದ, ವಿಗ್ರಹಾರಾಧನೆಯನ್ನು ವೈಭವೀಕರಿಸಿ, ಅದನ್ನು ಧರ್ಮದ ಸ್ತಂಭಗಳಲ್ಲೊಂದಾಗಿ ಮಾಡಿಕೊಳ್ಳುತ್ತಿರುವುದೇ ಈಗಿನ ಹಿಂದೂ ಧರ್ಮದ ಸಮಸ್ಯೆಯಾಗಿದೆ.
ಎಲ್ಲಾ ಕಡೆಯೂ ವಿಗ್ರಹಗಳಿವೆ.
ಪರಮಾತ್ಮನು ವಿಗ್ರಹದಲ್ಲಿ ಅವತಾರವಾಗುತ್ತಾನೆ.
ಹಿಂದೂ ಧರ್ಮದಲ್ಲಿ ಸಾವಿರಾರು ಆಕಾರಗಳ ವಿಗ್ರಹಗಳು, ಚಿತ್ರಗಳು ಮತ್ತು ಪ್ರತಿಮೆಗಳಿವೆ.
ಹಿಂದೂ ಧರ್ಮವು ವಿಗ್ರಹಗಳು, ಮಾನವ ಎರಕಗಳು ಮತ್ತು ಪ್ರತಿಮೆಗಳ ಧರ್ಮವಾಗಿ ಮಾರ್ಪಟ್ಟಿದೆ.
ಅದಲ್ಲದೆ, ಈಗಿನ ಹಿಂದೂ ಧರ್ಮವು ಅದ್ವೈತವಾದವನ್ನು ಪ್ರತಿಪಾದಿಸುತ್ತದೆ.
ಈಗಿನ ಹಿಂದೂ ಧರ್ಮವು ಪ್ರಪಂಚವು ಶಾಶ್ವತವಾಗಿ ಅಸ್ತಿತ್ವದಲ್ಲಿತ್ತೆಂದು ಪ್ರತಿಪಾದಿಸುತ್ತದೆ.
ಅದಲ್ಲದೆ, ಅದು ಜಾತಿಪದ್ಧತಿಗೆ ಅಸ್ತಿವಾರವನ್ನು ಹಾಕುತ್ತದೆ.
ಈಗಿನ ಹಿಂದೂ ಧರ್ಮವು ಪರಮಾತ್ಮನು ಮನುಷ್ಯ ರೂಪದಲ್ಲಿ ಅವತಾರವಾಗುತ್ತಾನೆಂದು ಪ್ರತಿಪಾದಿಸುತ್ತದೆ.
ಪರಮಾತ್ಮನು ವಿಗ್ರಹಗಳು ಮತ್ತು ಪ್ರತಿಮೆಗಳಲ್ಲಿ ಅವತಾರವಾಗುತ್ತಾನೆಂದು (ಶಕ್ತಿ) ಪ್ರತಿಪಾದಿಸುತ್ತದೆ.
ಈಗಿನ ಹಿಂದೂ ಧರ್ಮವು ಪುನರ್ಜನ್ಮವನ್ನು ಪ್ರತಿಪಾದಿಸುತ್ತದೆ. ನಿರಂತರ ಮರುಹುಟ್ಟು ಪಡೆಯುವುದನ್ನು ಪ್ರತಿಪಾದಿಸುತ್ತದೆ. ಪಂಚಭೂತಗಳು ಮತ್ತು ಅದರೊಂದಿಗೆ ಸೇರಿಕೊಂಡಿರುವ ಯಂತ್ರಗಳು, ತಾಯಿತಗಳು ಮತ್ತು ಪರಮಾತ್ಮನ ಹೊರತು ಇತರರನ್ನು ಅವಲಂಬಿಸುವುದನ್ನು ಪ್ರತಿಪಾದಿಸುತ್ತದೆ.
ಇವೆಲ್ಲಾ ಕಾರಣಗಳಿಂದಾಗಿ ಇಸ್ಲಾಂ ಧರ್ಮವು ಹಿಂದೂ ಧರ್ಮವನ್ನು ತಿರಸ್ಕರಿಸುತ್ತದೆ. ಏಕೆಂದರೆ ಅದು ಪ್ರವಾದಿಗಳ ಬೋಧನೆಗಳಿಗೆ ವಿರುದ್ಧವಾಗಿ ಸಾಗಿದೆ ಮತ್ತು ಏಕದೇವತ್ವವನ್ನು ಮರೆತುಬಿಟ್ಟಿದೆ.
ಇಸ್ಲಾಂ ಧರ್ಮವು ಪ್ರತಿಯೊಬ್ಬ ಹಿಂದೂವನ್ನು ಇಸ್ಲಾಂ ಧರ್ಮದ ಮೂಲಕ ಪರಮಾತ್ಮನ ಕಡೆಗೆ ಮರಳಲು ಆಮಂತ್ರಿಸುತ್ತದೆ. ಏಕೆಂದರೆ, ಪರಮಾತ್ಮನ ಬಳಿ ಇದರ ಮೂಲಕವಲ್ಲದೆ ಬೇರೆ ರಕ್ಷೆಯಿಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನಿಶ್ಚಯವಾಗಿಯೂ ಅಲ್ಲಾಹನ ಬಳಿ ಸ್ವೀಕಾರವಾಗುವ ಧರ್ಮ ಇಸ್ಲಾಂ ಮಾತ್ರ.”
[ಸೂರ ಆಲು ಇಮ್ರಾನ್: 19]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
“ಯಾರಾದರೂ ಇಸ್ಲಾಂ ಅಲ್ಲದ ಬೇರೆ ಧರ್ಮವನ್ನು ಹುಡುಕುವುದಾದರೆ, ಅದನ್ನು ಎಂದಿಗೂ ಅವನಿಂದ ಸ್ವೀಕರಿಸಲಾಗುವುದಿಲ್ಲ; ಮತ್ತು ಅವನು ಪರಲೋಕದಲ್ಲಿ ನಷ್ಟ ಹೊಂದಿದವರಲ್ಲಿ ಸೇರುವನು.”
[ಸೂರ ಆಲು ಇಮ್ರಾನ್: 85]
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತಿಗೊಳಿಸಿಕೊಟ್ಟಿದ್ದೇನೆ, ನನ್ನ ಅನುಗ್ರಹವನ್ನು ನಾನು ನಿಮಗೆ ಪೂರ್ಣಗೊಳಿಸಿದ್ದೇನೆ; ಮತ್ತು ಇಸ್ಲಾಮನ್ನು ಧರ್ಮವಾಗಿ ನಾನು ನಿಮಗೆ ತೃಪ್ತಿಪಟ್ಟಿದ್ದೇನೆ.”
[ಸೂರ ಮಾಇದ: 3]
ಆದ್ದರಿಂದ ಈ ಧರ್ಮದ—ಇಸ್ಲಾಂ ಧರ್ಮದ—ಮೂಲಕವಲ್ಲದೆ ಹಿಂದೂಗಳಿಗೆ ಅಥವಾ ಇತರ ಯಾವುದೇ ಮನುಷ್ಯರಿಗೆ ಮೋಕ್ಷ ದೊರೆಯಲು ಸಾಧ್ಯವಿಲ್ಲ. ಇಸ್ಲಾಂ ಧರ್ಮವು ಭೂಮಿಯ ಮೇಲಿನ ಇತರ ಧರ್ಮಗಳಂತೆ ಒಂದು ಸಾಮಾನ್ಯ ಧರ್ಮವಲ್ಲ; ಬದಲಿಗೆ, ಅದು ಸರ್ವಶಕ್ತನಾದ ಅಲ್ಲಾಹು ಎಲ್ಲಾ ಪ್ರವಾದಿಗಳನ್ನು ಕಳುಹಿಸಿದ ಏಕದೇವತ್ವದ ಆಧಾರದಲ್ಲಿರುವ ಏಕೈಕ ಧರ್ಮವಾಗಿದೆ. ಏಲ್ಲಾ ಪ್ರವಾದಿಗಳೂ ಜನರನ್ನು ಏಕದೇವತ್ವದ ಕಡೆಗೆ ಆಮಂತ್ರಿಸಿದರು. ಆದರೆ ಇಸ್ಲಾಂ ಧರ್ಮದ ಹೊರತು ಯಾವುದೂ ಇಂದು ಅವರು ಬೋಧಿಸಿದ ಶುದ್ಧ ಏಕದೇವತ್ವದಲ್ಲಿಲ್ಲ. ಇತರ ಎಲ್ಲಾ ಧರ್ಮಗಳೂ ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಬಹುದೇವತ್ವದ ಅಂಶಗಳನ್ನು ಹೊಂದಿವೆ. ಇಸ್ಲಾಂ ಎಂದರೆ ಇತರೆಲ್ಲಾ ದೇವರುಗಳ ಹೊರತಾಗಿ ಕೇವಲ ಅಲ್ಲಾಹನನ್ನು ಮಾತ್ರ ಆರಾಧಿಸುವ, ಅವನ ಆಜ್ಞಾಪಾಲನೆ ಮಾಡುವ, ಅವನು ವಿರೋಧಿಸಿದ್ದನ್ನು ತೊರೆಯುವ, ಅವನ ನಿಯಮಗಳನ್ನು ಪಾಲಿಸುವ, ಅವನು ತಿಳಿಸಿದ ಎಲ್ಲಾ ವಿಷಯಗಳಲ್ಲೂ—ಈಗಾಗಲೇ ಜರುಗಿದ ಮತ್ತು ಮುಂದೆ ಜರುಗಲಿರುವ ಎಲ್ಲಾ ವಿಷಯಗಳಲ್ಲೂ ವಿಶ್ವಾಸವಿಡುವ ಮತ್ತು ಎಲ್ಲಾ ರೀತಿಯ ವಿಗ್ರಹಗಳು, ಚಿತ್ರಗಳು ಮತ್ತು ಪ್ರತಿಮೆಗಳಿಂದ ದೂರವಾಗುವ ಧರ್ಮವಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಪ್ರತಾಪದ ಒಡೆಯನಾದ ತಮ್ಮ ಸಂರಕ್ಷಕನು (ಅಲ್ಲಾಹು) ಅವರು ಆರೋಪಿಸುವ ಎಲ್ಲದ್ದರಿಂದಲೂ ಪರಿಶುದ್ಧನಾಗಿದ್ದಾನೆ.”
[ಸೂರ ಸಾಫ್ಫಾತ್: 180]
ಅಲ್ಲಾಹು ವಿಗ್ರಹಗಳಲ್ಲಿ ಅವತಾರವಾಗುತ್ತಾನೆಂದು ಹಿಂದೂಗಳು ಆರೋಪಿಸುವ ಎಲ್ಲಾ ಆರೋಪಗಳಿಂದಲೂ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.
“ಮತ್ತು ಸಂದೇಶವಾಹಕರುಗಳ ಮೇಲೆ ಶಾಂತಿಯಿರಲಿ.”
[ಸೂರ ಸಾಫ್ಫಾತ್: 181]
ಮನುಷ್ಯರಿಗೆ ಅವರ ಪರಮಾತ್ಮನನ್ನು ಪರಿಚಯಿಸಿಕೊಡುವ ಮತ್ತು (ಜನರು ಆರೋಪಿಸುವ) ಎಲ್ಲಾ ರೀತಿಯ ಅಪೂರ್ಣತೆಗಳಿಂದ ಅವನನ್ನು ಶುದ್ಧೀಕರಿಸುವ ಸಂದೇಶವಾಹಕರುಗಳ ಮೇಲೆ ಶಾಂತಿಯಿರಲಿ.
17. ಹಿಂದೂಗಳು ಇಸ್ಲಾಂ ಧರ್ಮವನ್ನು ಏಕೆ ಸ್ವೀಕರಿಸಬೇಕು?
ಇಸ್ಲಾಂ ಧರ್ಮವು ಅಲ್ಲಾಹು ತನ್ನ ದಾಸರಿಗೆ ದೃಢೀಕರಿಸಿದ ಮತ್ತು ಅವನು ಸ್ವೀಕರಿಸುವ ಏಕೈಕ ಧರ್ಮಸಂಹಿತೆಯಾಗಿರುವುದರ ಜೊತೆಗೆ, ಹಿಂದೂ ಧರ್ಮಗ್ರಂಥಗಳು—ಬಹುಶಃ ಅವುಗಳಲ್ಲಿ ಪ್ರವಾದಿಗಳ ಮಾತಿನ ಅವಶೇಷಗಳು ಇರುವ ಸಾಧ್ಯತೆಯೂ ಇರಬಹುದು—ಇಸ್ಲಾಂ ಧರ್ಮದ ಬಗ್ಗೆ ಮತ್ತು ಇಸ್ಲಾಂ ಧರ್ಮದ ಪ್ರವಾದಿಯಾದ ಮುಹಮ್ಮದ್‌ರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಗ್ಗೆ ಅನೇಕ ಸುವಾರ್ತೆಗಳನ್ನು ಒಳಗೊಂಡಿರುವುದು, ಹಿಂದೂಗಳು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಮತ್ತು ಪುನರುತ್ಥಾನ ದಿನ ಅಲ್ಲಾಹನ ಬಳಿ ಮೋಕ್ಷಕ್ಕಿರುವ ಏಕೈಕ ಮಾರ್ಗವನ್ನು (ಇಸ್ಲಾಂ ಧರ್ಮವನ್ನು) ಹಿಂಜರಿಕೆಯಿಲ್ಲದೆ ಅನುಸರಿಸಲು ಬಲವಾದ ಕಾರಣವಾಗಿದೆ.
ಇಸ್ಲಾಂ ಧರ್ಮದ ಬಗ್ಗೆ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿರುವ ಕೆಲವು ಸುವಾರ್ತೆಗಳನ್ನು ಇಲ್ಲಿ ನಾನು ಉಲ್ಲೇಖಿಸುತ್ತೇನೆ.
ಆದರೆ, ಹಿಂದೂಗಳ ಧರ್ಮಗ್ರಂಥಗಳಲ್ಲಿರುವ ಸುವಾರ್ತೆಗಳನ್ನು ಉಲ್ಲೇಖಿಸುವುದಕ್ಕೆ ಮೊದಲು, ಹಿಂದೂಗಳ ಧಾರ್ಮಿಕ ನಿಯಮಗಳ ಅವಸ್ಥೆಯನ್ನು ಮತ್ತು ತಮ್ಮನ್ನು ಶುದ್ಧೀಕರಿಸುವುದಕ್ಕಾಗಿ ಹಿಂದೂಗಳು ಹೇಗೆ ತಮ್ಮ ದೇಹವನ್ನು ಸುಡುತ್ತಾರೆ ಎಂಬುದರ ಬಗ್ಗೆ ನಾವು ತಿಳಿಯಬೇಕಾಗಿದೆ.
ಹಾಗೆಯೇ, ಹಿಂದೂಗಳು ಅನೈಸರ್ಗಿಕವಾದ ಸನ್ಯಾಸತ್ವವನ್ನು ಹೇಗೆ ಆಚರಿಸುತ್ತಾರೆಂದೂ ನಾವು ತಿಳಿಯಬೇಕಾಗಿದೆ.
ಇವರ ಸ್ಥಿತಿಯು ಗ್ರಂಥ ನೀಡಲಾದವರ ಸ್ಥಿತಿಗಿಂತ ಭಿನ್ನವಲ್ಲ. ಗ್ರಂಥ ನೀಡಲಾದವರಿಗೆ—ವಿಶೇಷವಾಗಿ ಯಹೂದಿಗಳಿಗೆ ಶುದ್ಧೀಕರಣದ ವಿಷಯದಲ್ಲಿ ಅನೇಕ ಸಂಕೋಲೆಗಳಿದ್ದವು (ನಿರ್ಬಂಧಗಳಿದ್ದವು) ಮತ್ತು ಆಹಾರದ ವಿಷಯದಲ್ಲಿ ಕಠಿಣ ಪರಿಮಿತಿಗಳಿದ್ದವು. ಹಾಗೆಯೇ, ಅವರ ಅಕ್ರಮ, ಅತಿರೇಕ ಮತ್ತು ಭ್ರಷ್ಟತೆಯ ಕಾರಣ ಶಾಸನಾತ್ಮಕ ನಿಯಮಗಳಲ್ಲೂ ಅವರಿಗೆ ವಿಶೇಷ ಸಂಕೋಲೆಗಳನ್ನು ಹೇರಲಾಗಿತ್ತು.
ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ:
“ಯಹೂದಿಗಳ ಅಕ್ರಮ ನಿಮಿತ್ತ ಮತ್ತು ಅವರು ಹೇರಳವಾಗಿ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದ ಕಾರಣದಿಂದ ಅವರಿಗೆ ಅನುಮತಿಸಲಾದ ಅನೇಕ ಶುದ್ಧ ವಸ್ತುಗಳನ್ನು ನಾವು ಅವರಿಗೆ ನಿಷೇಧಿಸಿದೆವು.”
[ಸೂರ ನಿಸಾ: 160]
ಯಹೂದಿ ಮಹಿಳೆಯ ಋತುಸ್ರಾವ ನಿಯಮಗಳ ಬಗ್ಗೆ ತೋರಾದ ಯಾಜಕಕಾಂಡ ಪುಸ್ತಕದಲ್ಲಿರುವುದನ್ನು ಓದಿದರೆ ನಿಮಗೆ ಇದು ಅರ್ಥವಾಗಬಹುದು. ತೋರಾ ಹೇಳುತ್ತದೆ:
“ಅವಳು ಮುಟ್ಟಾದಾಗ ಅವಳು ಮಲಗುವ ಪ್ರತಿಯೊಂದು ವಸ್ತುವು ಅಶುದ್ಧವಾಗುವುದು, ಅವಳು ಕೂತುಕೊಳ್ಳುವ ಪ್ರತಿಯೊಂದು ವಸ್ತುವು ಅಶುದ್ಧವಾಗುವುದು. ಅವಳ ಹಾಸಿಗೆಯನ್ನು ಮುಟ್ಟುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು; ಸಾಯಂಕಾಲದವರೆಗೆ ಅವನು ಅಶುದ್ಧನಾಗಿರುವನು. ಅವಳು ಕೂತುಕೊಂಡಿರುವ ಯಾವುದನ್ನಾದರೂ ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಅವನು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು. ಇದಲ್ಲದೆ ಅವಳ ಹಾಸಿಗೆಯ ಮೇಲಾಗಲಿ ಇಲ್ಲವೆ ಅವಳು ಕೂತುಕೊಂಡ ಯಾವುದರ ಮೇಲಾಗಲಿ ಇರುವುದನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು. ಯಾವನಾದರೂ ಅವಳೊಂದಿಗೆ ಮಲಗಿದರೆ ಅವಳ ಸಾರವು (ಹೊಲೆ) ಅವನಿಗೆ ತಗಲಿದರೆ ಅವನು ಏಳು ದಿವಸ ಅಶುದ್ಧನಾಗಿರಬೇಕು; ಅವನು ಮಲಗಿಕೊಳ್ಳುವ ಹಾಸಿಗೆಯೆಲ್ಲಾ ಅಶುದ್ಧವಾಗಿರುವುದು.”[61]
[60] ಯಾಜಕಕಾಂಡ 15:20-24.
ಇಸ್ರಾಯೇಲ್ ಮಕ್ಕಳ ಕಠೋರತೆ ಮತ್ತು ಅವರ ಹೃದಯದ ಕಾಠಿಣ್ಯತೆಯಿಂದಾಗಿ ಈ ಕಠೋರ ನಿಯಮಗಳನ್ನು ಅವರ ಮೇಲೆ ಹೇರಲಾಗಿತ್ತು.
ಈ ಎಲ್ಲಾ ಸಂಕೋಲೆಗಳನ್ನು ಅವರಿಂದ ಕಳಚಿ ಹಾಕುವ ಒಬ್ಬ ಪ್ರವಾದಿಯನ್ನು ನಾನು ಕಳುಹಿಸುವೆನು ಎಂದು ಅಲ್ಲಾಹು ಅವರಿಗೆ ತೋರಾದಲ್ಲಿ ತಿಳಿಸಿದ್ದನು.
ಪ್ರವಾದಿ ಯಾಕೂಬರು (ಅವರ ಮೇಲೆ ಶಾಂತಿಯಿರಲಿ) ಮರಣಾಸನ್ನರಾದಾಗ ತಮ್ಮ ಹನ್ನೆರಡು ಮಕ್ಕಳನ್ನು ಕೂಡಿಸಿ ಅವರಿಗೆ ಉಪದೇಶ ನೀಡಿದರೆಂದು ತೋರಾ ಹೇಳುತ್ತದೆ. ತೋರದಲ್ಲಿರುವ ಯಾಕೂಬರ ಪ್ರಸಿದ್ಧ ಉಪದೇಶವು ಹೀಗಿದೆ:
“ಆಗ ಯಾಕೂಬನು ತನ್ನ ಕುಮಾರರನ್ನು ಕರೆಯಿಸಿ ಅವರಿಗೆ ನೀವೆಲ್ಲರೂ ಕೂಡಿಕೊಳ್ಳಿರಿ, ಅಂತ್ಯದಿನಗಳಲ್ಲಿ ಸಂಭವಿಸುವುದನ್ನು ನಿಮಗೆ ತಿಳಿಸುತ್ತೇನೆ. ಯಾಕೂಬನ ಕುಮಾರರೇ, ನೀವು ಒಟ್ಟಿಗೆ ಕೂಡಿಕೊಂಡು ಕೇಳಿರಿ; ನಿಮ್ಮ ತಂದೆಯಾದ ಇಸ್ರಾಯೇಲನಿಗೆ ಕಿವಿಗೊಡಿರಿ.
...
ನಂತರ ಯಾಕೋಬರು ಯೆಹೋದನಿಗೆ ಹೇಳಿದರು. ಯೆಹೋದ ದಾವೂದ್ (ದಾವೀದ್), ಸುಲೈಮಾನ್ (ಸೊಲೋಮನ್), ಮಸೀಹ್ (ಯೇಸು) (ಅವರೆಲ್ಲರ ಮೇಲೆ ಶಾಂತಿಯಿರಲಿ) ಮುಂತಾದ ಪ್ರವಾದಿಗಳ ತಾತ. ಅವರು ಹೇಳಿದರು: “ಶಿಲೋಹನು ಬರುವ ವರೆಗೆ ರಾಜದಂಡವು ಯೆಹೂದನಿಂದಲೂ ಮುದ್ರೆಯ ಕೋಲು ಅವನ ಪಾದಗಳ ಬಳಿಯಿಂದಲೂ ಕದಲುವುದಿಲ್ಲ. ಜನರು ಅವನ ಬಳಿಗೆ ಕೂಡಿಕೊಳ್ಳುವರು.”[62]
[62] ಆದಿಕಾಂಡ 49:1-2 ಮತ್ತು 10.
ಈ ಪಠ್ಯವು ಮಹಾ ಸುವಾರ್ತೆಯನ್ನು ಮತ್ತು ಶ್ರೇಷ್ಠವಾದ ಒಂದು ಕೆಲಸವನ್ನು ಪ್ರತಿಬಿಂಬಿಸುತ್ತದೆಯೆಂಬ ವಿಷಯದಲ್ಲಿ ಗ್ರಂಥ ನೀಡಲಾದವರ ನಡುವೆ ಯಾವುದೇ ಭಿನ್ನಮತವಿಲ್ಲ.
ಇದು ಭವಿಷ್ಯದಲ್ಲಿ ಒಬ್ಬ ವ್ಯಕ್ತಿ ಆಗಮಿಸಿ, ಅವನಿಗೆ ಪ್ರವಾದಿತ್ವವು ವರ್ಗಾವಣೆಯಾಗುವುದರ ಬಗ್ಗೆ ಮತ್ತು ಅವನಿಗೆ ತೀರ್ಪು ಮತ್ತು ಶಾಸನದ ಅಧಿಕಾರವು ವರ್ಗಾವಣೆಯಾಗುವುದರ ಬಗ್ಗೆ ಇರುವ ಸುವಾರ್ತೆಯಾಗಿದೆ.
“ರಾಜದಂಡವು ಯೆಹೂದನಿಂದ ಕದಲುವುದಿಲ್ಲ”: ರಾಜದಂಡ ಎಂದರೆ ಅಧಿಕಾರದ ದಂಡ. ಅಂದರೆ, ಯೆಹೂದರ ಸಂತಾನದಲ್ಲಿ ಆಡಳಿತಗಾರರಾದ ಪ್ರವಾದಿಗಳಿರುವರು.
ಎಲ್ಲಿಯವರೆಗೆಂದರೆ, ಶಿಲೋಹನು ಬರುವವರೆಗೆ. ಅವನಿಗೆ ಜನರೆಲ್ಲರೂ ವಿಧೇಯರಾಗುವರು. ಪ್ರವಾದಿ ಯಾಕೋಬರು (ಅವರ ಮೇಲೆ ಶಾಂತಿಯಿರಲಿ) ಪ್ರವಾದನೆಯಾಗಿ ನುಡಿದ ಮತ್ತು ಜನರೆಲ್ಲರೂ ವಿಧೇಯತೆ ತೋರುವ ಈ ಶಿಲೋಹ ಯಾರು? ಈ ಪ್ರಶ್ನೆಗೆ ಉತ್ತರಿಸುವ ಮೊದಲು, ಇಸ್ರಾಯೇಲರ ಮಕ್ಕಳಲ್ಲಿ ಕೊನೆಯ ಪ್ರವಾದಿ ಯೇಸು (ಅವರ ಮೇಲೆ ಶಾಂತಿಯಿರಲಿ) ಆಗಿದ್ದರು ಮತ್ತು ಅವರು ಯೆಹೂದರ ವಂಶದವರಾಗಿದ್ದರು ಎಂಬುದನ್ನು ನಾವು ತಿಳಿದಿರಬೇಕಾಗಿದೆ.
ನಂತರ ಇಸ್ರಾಯೇಲರ ಮಕ್ಕಳಲ್ಲಿ ಪ್ರವಾದಿಗಳು ಬರುವುದು ಹಠಾತ್ತನೆ ನಿಂತಿತು!
ಆದ್ದರಿಂದ, ಯಾಕೋಬರ (ಅವರ ಮೇಲೆ ಶಾಂತಿಯಿರಲಿ) ಪ್ರವಾದನೆಯ ಪ್ರಕಾರ, ಇಸ್ರಾಯೇಲರ ಮಕ್ಕಳಲ್ಲಿ ಪ್ರವಾದಿತ್ವವು ನಿಂತ ನಂತರ, ಆಡಳಿತ, ಪ್ರವಾದಿತ್ವ ಮತ್ತು ಶಾಸನದ ಅಧಿಕಾರವು ಯೆಹೂದ ವಂಶದ ಹೊರಗಿನ ವ್ಯಕ್ತಿಗೆ ಹಸ್ತಾಂತರವಾಯಿತು. ಸರಿಯಲ್ಲವೇ?
ಈ ವ್ಯಕ್ತಿ ಯೇಸುವಲ್ಲ ಎಂಬುದು ಸ್ವಯಂ ಸ್ಪಷ್ಟ. ಏಕೆಂದರೆ ಯೇಸು ಯೆಹೂದನ ವಂಶದವರು!
ಯಾಕೋಬರ ಪ್ರವಾದನೆಗೆ ಅನುಗುಣವಾಗಿ ಈ ವ್ಯಕ್ತಿ ಯೆಹೂದರ ಅದೇ ಭೂಮಿಯನ್ನು ವಶಪಡಿಸಿಕೊಳ್ಳುವರು. “ಶಿಲೋಹನು ಬರುವ ವರೆಗೆ ರಾಜದಂಡವು ಯೆಹೂದನಿಂದಲೂ ಮುದ್ರೆಯ ಕೋಲು ಅವನ ಪಾದಗಳ ಬಳಿಯಿಂದಲೂ ಕದಲುವುದಿಲ್ಲ. ಜನರು ಅವನ ಬಳಿಗೆ ಕೂಡಿಕೊಳ್ಳುವರು.” ಆಗಮಿಸುವ ಆ ಪ್ರವಾದಿಯ ಅನುಯಾಯಿಗಳು ಪ್ಯಾಲಸ್ತೀನನ್ನು ವಶಪಡಿಸಿಕೊಳ್ಳುವರು ಮತ್ತು ಮಹಾ ಸಾಮ್ರಾಜ್ಯಗಳು ಅವರಿಗೆ ಶರಣಾಗುವುವು!
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಮ್ಮ ಖಲೀಫತ್ವದ ಕಾಲದಲ್ಲಿ ಯೆಹೂದನ ಭೂಮಿಯನ್ನು (ಪ್ಯಾಲಸ್ತೀನನ್ನು) ವಶಪಡಿಸಿಕೊಂಡರು ಮತ್ತು ಶಾಮ್, ಇರಾಕ್ ಹಾಗೂ ಪರ್ಶಿಯಾ ದೇಶಗಳು ಇಸ್ಲಾಮಿನ ಅಧೀನಕ್ಕೆ ಬಂದವು.
ಇದು ಪರಿಶೀಲನೆ ಅಥವಾ ಸಂಪಾದನೆಯ ಅಗತ್ಯವಿಲ್ಲದ ನಗ್ನ ಸತ್ಯವಾಗಿದೆ!
ಆದ್ದರಿಂದ, ಯಾಕೋಬರು ತಮ್ಮ ಮಕ್ಕಳಿಗೆ ನೀಡಿದ ಉಪದೇಶವಾದ ಈ ಪ್ರವಾದನೆಯು ನಿಜವಾಗಿ ಬಿಟ್ಟಿದೆ ಮತ್ತು ಅದು ಪ್ರವಾದಿ ಮುಹಮ್ಮದ್‌ರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೊರತು ಬೇರೆ ಯಾವುದೇ ಪ್ರವಾದಿಗೂ ಅನ್ವಯವಾಗುವುದಿಲ್ಲ; ಹಾಗೂ ಅದರಲ್ಲಿರುವ ವಿವರಣೆಗಳು ಅವರ ಸಮುದಾಯದ ಹೊರತು ಬೇರೆ ಯಾವುದೇ ಸಮುದಾಯಕ್ಕೂ ಸರಿದೂಗುವುದಿಲ್ಲ ಎಂದು ಇತಿಹಾಸವು ಸ್ಪಷ್ಟಪಡಿಸಿದೆ.
ಆದರೆ ಶಿಲೋಹ ಎಂಬ ಶಬ್ದದ ಅರ್ಥವೇನು?
ಶಿಲೋಹ ಎಂದರೆ: ನೆಮ್ಮದಿಯನ್ನು ನೀಡುವವನು ಅಥವಾ ಸಂಕೋಲೆಗಳನ್ನು ಕಳಚಿ ಹಾಕುವವನು Rest-giver. ಹಳೆಯ ಒಡಂಬಡಿಕೆಯಲ್ಲಿ ಪರಿಣತಿ ಪಡೆದ ಅನೇಕ ಬೈಬಲ್ ಅಧ್ಯಯನ ಜಾಲತಾಣಗಳು ಈ ಅರ್ಥವನ್ನು ಹೇಳಿವೆ.[63]
[63] https://www.christiancourier.com/articles/1101-who-is-the-mysterious-shiloh Rest-giver or peace-bringer. http://www.abideinchrist.com/messages/gen49v8.html Shiloh is the man of rest, the giver of rest or rest-bringer.
ಆದ್ದರಿಂದ ಯಾಕೋಬರು (ಅವರ ಮೇಲೆ ಶಾಂತಿಯಿರಲಿ) ಇಲ್ಲಿ ಅವರ ಮೇಲೆ ಹೇರಲಾದ ಸಂಕೋಲೆಗಳನ್ನು ಕಳಚಿ ಹಾಕುವ ಒಬ್ಬ ವ್ಯಕ್ತಿಯ ಬಗ್ಗೆ ಸುವಾರ್ತೆ ನೀಡುತ್ತಿದ್ದಾರೆ.
ಈಗ ನಾವು ಅಲ್ಲಾಹನ ವಚನವನ್ನು ಓದೋಣ:
“ತಮ್ಮ ಬಳಿಯಿರುವ ತೋರಾ ಮತ್ತು ಸುವಾರ್ತೆ(ಬೈಬಲ್) ನಲ್ಲಿ ದಾಖಲಿಸಿದ್ದಾಗಿ ಅವರು ಕಾಣುವ, ಅವರಿಗೆ ಒಳಿತನ್ನು ಆದೇಶಿಸುವ ಮತ್ತು ಕೆಡುಕನ್ನು ವಿರೋಧಿಸುವ, ಅವರಿಗೆ ಶುದ್ಧ ವಸ್ತುಗಳನ್ನು ಅನುಮತಿಸುವ ಮತ್ತು ಅಶುದ್ಧ ವಸ್ತುಗಳನ್ನು ನಿಷೇಧಿಸುವ ಹಾಗೂ ಅವರ ಮೇಲೆ ಹೇರಲಾಗಿದ್ದ ಹೊರೆಗಳನ್ನು ಮತ್ತು ಸಂಕೋಲೆಗಳನ್ನು ಕಳಚುವ ಅನಕ್ಷರಸ್ಥ ಪ್ರವಾದಿಯಾದ ಸಂದೇಶವಾಹಕರನ್ನು ಅನುಸರಿಸುವವರು...”
[ಸೂರ ಅಅ್‌ರಾಫ್: 157]
“ಅವರ ಮೇಲೆ ಹೇರಲಾಗಿದ್ದ ಹೊರೆಗಳನ್ನು ಮತ್ತು ಸಂಕೋಲೆಗಳನ್ನು ಕಳಚುವ”: ಸಹಿಷ್ಣು ಮತ್ತು ಸರಳ ಇಸ್ಲಾಮೀ ಧರ್ಮಸಂಹಿತೆಯು ಆಗಮಿಸಿ ಈ ಎಲ್ಲಾ ಸಂಕೋಲೆಗಳನ್ನು ಮತ್ತು ಪರಿಮಿತಿಗಳನ್ನು ಕಳಚಿ ಹಾಕಿತು.
ಈಗ ನಾವು ಹಿಂದೂಗಳ ಪವಿತ್ರ ಧರ್ಮಗ್ರಂಥಗಳತ್ತ ಹೊರಳೋಣ.[64]
[64] ಹಿಂದೂಗಳ ಸುವಾರ್ತೆಗಳನ್ನು ವಿವರಿಸುವುದಕ್ಕೆ ಮುಂಚೆ ನಾನು ಯಾಕೋಬರ (ಅವರ ಮೇಲೆ ಶಾಂತಿಯಿರಲಿ) ಸುವಾರ್ತೆಯನ್ನು ವಿವರಿಸಿದ್ದು ಏಕೆಂದರೆ, ಅದು ಇಸ್ಲಾಂ ಧರ್ಮವು ಸತ್ಯವೆನ್ನುವುದಕ್ಕೆ ಇಸ್ಲಾಂ ಧರ್ಮದ ಹೊರಗಿರುವ ಒಂದು ಪುರಾವೆಯಾಗಿದೆ.
ನಾನು ಈಗಾಗಲೇ ಹೇಳಿದಂತೆ, ಹಿಂದೂ ಧರ್ಮವು ಪಾಪಗಳಿಂದ ಶುದ್ಧವಾಗಲು ಮೋಹವನ್ನು ಸುಡುವ ಕಠಿಣ ಆಚರಣೆಗಳನ್ನು ಒಳಗೊಂಡ ಇನ್ನೊಂದು ಧರ್ಮವಾಗಿದೆ. ಅವರ ಮೇಲೆ ಹೇರಲಾಗಿರುವ ಹೊರೆಗಳನ್ನು ಇಳಿಸುವ ಮತ್ತು ಅವರನ್ನು ಪಾಪಗಳಿಂದ ಶುದ್ಧೀಕರಿಸುವ ಒಬ್ಬ ಶ್ರೇಷ್ಠ ಪ್ರವಾದಿಯ ಆಗಮನದ ಬಗ್ಗೆ ಹಿಂದೂಗಳ ಗ್ರಂಥಗಳು ಸುವಾರ್ತೆ ನೀಡುತ್ತವೆ. ಹಿಂದೂ ಗ್ರಂಥಗಳು ಹೇಳುತ್ತವೆ: “ಮಾಧವ ತಿಂಗಳ ಶುಕ್ಲ ಪಕ್ಷದ ಹನ್ನೆರಡನೆಯ ದಿನ ಕಲ್ಕಿ ಜನ್ಮ ತಾಳುವನು.”[65] [65] ಕಲ್ಕಿ ಪುರಾಣ, ಅಧ್ಯಾಯ: 2, ಶ್ಲೋಕ: 15. ಕಲ್ಕಿ ಎಂದರೆ: ಪಾಪಗಳಿಂದ ಶುದ್ಧೀಕರಿಸುವವನು.
ಮಾಧವ ತಿಂಗಳು ಎಂದರೆ: ಮನಸ್ಸಿಗೆ ಆಹ್ಲಾದಕರವಾದ ವಸಂತ ತಿಂಗಳು.
ಆದ್ದರಿಂದ, ಅವರನ್ನು ಪಾಪಗಳಿಂದ ಶುದ್ಧೀಕರಿಸಲು ಆಗಮಿಸುವ ಆ ಪ್ರವಾದಿ ವಸಂತ ತಿಂಗಳ ಹನ್ನೆರಡನೆಯ ದಿನ ಜನಿಸುವನು.
ಬಹುಸಂಖ್ಯಾತ ಮುಸ್ಲಿಮ್ ವಿದ್ವಾಂಸರ ಅಭಿಪ್ರಾಯದಂತೆ, ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಬೀಉಲ್ ಅವ್ವಲ್ (ಮೊದಲನೆಯ ವಸಂತ) ತಿಂಗಳ ಹನ್ನೆರಡನೆಯ ದಿನ ಜನಿಸಿದರು.[66] [66] ಸಹೀಹು ಸ್ಸೀರತಿನ್ನಬವಿಯ್ಯ, ಮುಹಮ್ಮದ್ ಬಿನ್ ನಾಸಿರ್ ಅಲ್ಬಾನಿ, ಪುಟ 13, "ದಅವತುಲ್ ಹಿಂದೂಸಿ ಇಲಲ್ ಇಸ್ಲಾಂ” ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಲೇ: ಡಾ. ಇಬ್ರಾಹೀಂ ಬಿನ್ ಅಬ್ದುಲ್ ಗಫೂರ್, ಪುಟ 198. ಇನ್ನು ಪ್ರವಾದಿಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನ್ಮ ಸ್ಥಳದ ಬಗ್ಗೆ ಹೇಳುವುದಾದರೆ, ಹಿಂದೂಗಳ ಪವಿತ್ರ ಗ್ರಂಥದಲ್ಲಿ ಅದನ್ನೂ ಉಲ್ಲೇಖಿಸಲಾಗಿದೆ: “ಕಲ್ಕಿ ಶಂಭಲ ಗ್ರಾಮದಲ್ಲಿ, ಭವನದ ಸೇವಕರ ಬಳಿ, ವಿಷ್ಣುಯಶ್ ಎಂದು ಕರೆಯಲಾಗುವ ವ್ಯಕ್ತಿಯ ಮನೆಯಲ್ಲಿ ಜನ್ಮ ತಾಳುವನು.”[67]
[67] ಕಲ್ಕಿ ಪುರಾಣ, ಅಧ್ಯಾಯ: 2, ಶ್ಲೋಕ: 4.
ಶಂಭಲ ಗ್ರಾಮ ಎಂದರೆ: ನಿರ್ಭಯ ನಗರ. ನಿರ್ಭಯ ನಗರ ಎಂದರೆ ಮಕ್ಕಾ. “ಮತ್ತು ಓ ನನ್ನ ಸಂರಕ್ಷಕನೇ! ಇದನ್ನು ನಿರ್ಭಯ ನಗರವನ್ನಾಗಿ ಮಾಡು ಎಂದು ಇಬ್ರಾಹೀಮರು ಪ್ರಾರ್ಥಿಸಿದ ಸಂದರ್ಭ.”
[ಸೂರ ಬಕರ: 126]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾದಲ್ಲಿ ಜನಿಸಿದರು.
“ವಿಷ್ಣುಯಶ್ ಎಂದು ಕರೆಯಲಾಗುವ ವ್ಯಕ್ತಿಯ ಮನೆಯಲ್ಲಿ ಜನಿಸುವನು.” ಎಂಬ ವಾಕ್ಯದ ಬಗ್ಗೆ ಹೇಳುವುದಾದರೆ, ವಿಷ್ಣುಯಶ್ ಎಂದರೆ: ದೇವದಾಸ (ಅರಬ್ಬಿ ಭಾಷೆಯಲ್ಲಿ ಅಬ್ದುಲ್ಲ).
ಆಗಮಿಸಲಿರುವ ಆ ಪ್ರವಾದಿಯ ತಾಯಿಯ ಹೆಸರು ಸುಮತಿ. “ಕಲ್ಕಿ ವಿಷ್ಣುಯಶ್ ಎಂದು ಕರೆಯಲಾಗುವ ವ್ಯಕ್ತಿಯ ಮನೆಯಲ್ಲಿ ಸುಮತಿ ಎಂಬ ಹೆಸರಿನ ಅವನ ಪತ್ನಿಯಲ್ಲಿ ಜನಿಸುವನು.”[68] [68] ಕಲ್ಕಿ ಪುರಾಣ, ಅಧ್ಯಾಯ: 2, ಶ್ಲೋಕ: 11. ಸುಮತಿ ಎಂಬುದು ಸುರಕ್ಷೆ ಎಂಬ ಶಬ್ದದಿಂದ ಬಂದಿದೆ. ಇದರ ಅರ್ಥ ಸುರಕ್ಷಿತೆ.
ಎಲ್ಲರಿಗೂ ತಿಳಿದಿರುವಂತೆ, ಪ್ರವಾದಿ ಮುಹಮ್ಮದ್‌ರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾಯಿಯ ಹೆಸರು ಆಮಿನ (ಅರಬ್ಬಿ ಭಾಷೆಯಲ್ಲಿ ಸುರಕ್ಷಿತೆ). ಹಿಂದೂ ಧರ್ಮದ ಪ್ರಕಾರ, ಕಲ್ಕಿ ಶಂಭಲ ಗ್ರಾಮದಿಂದ ಹೊರಟು ಹೋಗುತ್ತಾನೆ, ಪಿಶಾಚಿಯ ವಿರುದ್ಧ ಹೋರಾಡುತ್ತಾನೆ, ಅನ್ಯಾಯಕೋರರು, ಗಲಭೆಕೋರರು, ಮತ್ತು ಅತಿರೇಕಿಗಳನ್ನು ಮಣಿಸುತ್ತಾನೆ, ನಂತರ ತನ್ನ ಕೊನೆಯ ಕಾಲದಲ್ಲಿ ಗ್ರಾಮಕ್ಕೆ ಮರಳುತ್ತಾನೆ. ನಂತರ ಪರಮಾತ್ಮನು ಅವನನ್ನು ಆಕಾಶಕ್ಕೆ ಎತ್ತುತ್ತಾನೆ. ಪ್ರತಿಯೊಬ್ಬ ಮುಸಲ್ಮಾನನೂ ಈ ಸತ್ಯವನ್ನು ತಿಳಿದಿದ್ದಾನೆ. ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾ ತೊರೆದು ಮದೀನಕ್ಕೆ ಹೋದರು. ಅಲ್ಲಿ ಜನರ ಮಧ್ಯೆ ಏಕದೇವತ್ವವನ್ನು ಹಬ್ಬಿಸಿದರು. ನಂತರ ಮರಣಕ್ಕೆ ಸ್ವಲ್ಪ ವರ್ಷಗಳ ಮುಂಚೆ ಮಕ್ಕಾವನ್ನು ಜಯಿಸಿ ಮರಳಿದರು.
ಹಿಂದೂ ಧರ್ಮವು ಆ ಪ್ರವಾದಿಗೆ ನಾವು ಒಪ್ಪಿಕೊಳ್ಳದ ಕೆಲವು ಗುಣಲಕ್ಷಣಗಳನ್ನು ಸೇರಿಸಿದೆ. ಉದಾಹರಣೆಗೆ, ರೂಢಿಯಂತೆ ಅವರ ಪ್ರಕಾರ ಕಲ್ಕಿ ಎಂದರೆ ಪರಮಾತ್ಮನ ಅವತಾರ. ಅಲ್ಲಾಹು ಆ ಆರೋಪದಿಂದ ಎಷ್ಟೋ ಉನ್ನತನಾಗಿದ್ದಾನೆ. ನಾವು ಈಗಾಗಲೇ ಈ ಆರೋಪಕ್ಕೆ ವೇದಗಳ ಮೂಲಕ ಉತ್ತರ ನೀಡಿದ್ದೇವೆ.
ಅಲ್ಲಾಹು ಅವನ ಸೃಷ್ಟಿಗಳಲ್ಲಿ ಅವತರಿಸುವುದಿಲ್ಲ. ಅವನು ಸೃಷ್ಟಿಸಿದ ಆಕಾಶಕ್ಕಾಗಲಿ ಭೂಮಿಗಾಗಲಿ ಅವನನ್ನು ಒಳಗೊಳ್ಳುವಷ್ಟು ಶಕ್ತಿಯಿಲ್ಲ. ಆದರೆ, ಆಗಮಿಸಲಿರುವ ಆ ಪ್ರವಾದಿಯ ಬಗ್ಗೆ ಅವರ ಗ್ರಂಥದಲ್ಲಿ ನನ್ನ ಗಮನ ಸೆಳೆದ ಗುಣಲಕ್ಷಣಗಳಲ್ಲಿ ಒಂದು ಏನೆಂದರೆ, ಆ ಪ್ರವಾದಿ ಬಿಳಿ ಕುದುರೆಯಲ್ಲಿ ಸವಾರಿ ಮಾಡುವರು. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುರ್ತಜಿಝ್ ಎಂಬ ಹೆಸರಿನ ಒಂದು ಬಿಳಿ ಕುದುರೆಯಿತ್ತು.[69] [69] ಇದನ್ನು ಹಾಕಿಂ ಮುಸ್ತದ್ರಕ್‌ನಲ್ಲಿ ವರದಿ ಮಾಡಿ ಈ ಹದೀಸ್ ಅಧಿಕೃತ ವರದಿಗಾರರನ್ನು ಹೊಂದಿದೆ ಎಂದಿದ್ದಾರೆ.
ಆಗಮಿಸಲಿರುವ ಕಲ್ಕಿ ಪ್ರವಾದಿಯನ್ನು ಹಿಂದೂ ಶಿಲ್ಪಗಳು ಹೆಗಲಿನ ಮೇಲೆ ಖಡ್ಗವನ್ನು ಎತ್ತಿ ಹಿಡಿದು ಬಿಳಿ ಕುದುರೆಯ ಮೇಲೆ ಸವಾರಿ ಮಾಡುವ ವ್ಯಕ್ತಿಯಾಗಿ ಚಿತ್ರಿಸಿವೆ. ನಾನು ನೋಡಿದ ಕಲ್ಕಿಯ ಹಿಂದೂ ಚಿತ್ರಗಳು ಮತ್ತು ಮೂರ್ತಿಗಳು ಅವನನ್ನು ಈ ರೂಪದಲ್ಲೇ ಚಿತ್ರಿಸಿವೆ.
ಅವನು ಧರ್ಮಸಮರ ಮಾಡುವ ಪ್ರವಾದಿ. ಇದು ಪ್ರವಾದಿ ಮುಹಮ್ಮದ್‌ರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗುಣಲಕ್ಷಣವಾಗಿದೆ. ಅವರು ಖಡ್ಗ ಹಿಡಿದು ಅಲ್ಲಾಹನ ಶತ್ರುಗಳೊಡನೆ ಯುದ್ಧ ಮಾಡಿದ್ದಾರೆ.
ಆಗಮಿಸಲಿರುವ ಕಲ್ಕಿ ಪ್ರವಾದಿಯ ಬಗ್ಗೆ ಅವರ ಗ್ರಂಥಗಳಲ್ಲಿರುವ ಇನ್ನೊಂದು ಗುಣಲಕ್ಷಣವೇನೆಂದರೆ: ಅವನು ಅಗೋಚರ ವಿಷಯಗಳನ್ನು ತಿಳಿಸುತ್ತಾನೆ, ತನ್ನ ಜನತೆಯಲ್ಲಿ ಶ್ರೇಷ್ಠ ವಂಶದವನಾಗಿದ್ದಾನೆ, ಮಿತ ಮಾತುಗಾರ, ಪರಮ ಉದಾರಿ, ಉತ್ತಮ ದೇಹದಾರ್ಢ್ಯವನ್ನು ಹೊಂದಿರುವ ಬಲಿಷ್ಠ ಮತ್ತು ಉಪಕಾರ ಸ್ಮರಣೆಯುಳ್ಳವನು.
ಆದರೆ, ಅವನ ಒಂದು ವಿಶಿಷ್ಟ ಗುಣಲಕ್ಷಣವೇನೆಂದರೆ: “ಕಲ್ಕಿ ತನ್ನ ನಾಲ್ವರು ಸಂಗಡಿಗರ ಸಹಾಯದಿಂದ ಪಿಶಾಚಿಯನ್ನು ನಾಶ ಮಾಡುವನು.” [70]
[70] ಕಲ್ಕಿ ಪುರಾಣ, ಅಧ್ಯಾಯ: 2, ಶ್ಲೋಕ: 5.
ಈ ವಾಕ್ಯವನ್ನು ಓದುವಾಗ ಮುಸಲ್ಮಾನನ ಮನಸ್ಸಿನಲ್ಲಿ ಅಬೂಬಕರ್ ಸಿದ್ದೀಕ್, ಉಮರ್ ಬಿನ್ ಖತ್ತಾಬ್, ಉಸ್ಮಾನ್ ಬಿನ್ ಅಫ್ಫಾನ್ ಮತ್ತು ಅಲಿ ಬಿನ್ ಅಬೂತಾಲಿಬ್ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಎಂಬ ನಾಲ್ವರಲ್ಲದೆ ಬೇರೆ ಯಾರೂ ಮೂಡಿ ಬರುವುದಿಲ್ಲ. ಇವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಪ್ತ ಸಂಗಡಿಗರಾಗಿದ್ದರು. ಅವರು ಧರ್ಮಪ್ರಚಾರದ ಆರಂಭದಿಂದಲೇ ಅವರಿಗೆ ಬೆಂಬಲವಾಗಿ ನಿಂತಿದ್ದಲ್ಲದೆ ಅವರ ನಿಧನಾನಂತರ ಅವರ ಖಲೀಫರಾದರು. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಲ್ವರು ಅತೀ ವಿಶಿಷ್ಟ ಆಪ್ತ ಸಂಗಡಿಗರಿದ್ದರು ಮತ್ತು ಅವರು ಅವರ ಧರ್ಮಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಅವರ ಮರಣಾನಂತರ ಈ ಕೆಳಗಿನ ಅನುಕ್ರಮದಲ್ಲಿ ಅವರು ಮುಸಲ್ಮಾನರ ಖಲೀಫರಾದರು:
1. ಅಬೂಬಕರ್ ಸಿದ್ದೀಕ್.
2. ಉಮರ್ ಬಿನ್ ಖತ್ತಾಬ್.
3. ಉಸ್ಮಾನ್ ಬಿನ್ ಅಫ್ಫಾನ್.
4. ಅಲಿ ಬಿನ್ ಅಬೂತಾಲಿಬ್. ಅಲಿ ಬಿನ್ ಅಬೂತಾಲಿಬರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಕೊಲೆಯೊಂದಿಗೆ ಸನ್ಮಾರ್ಗಾಧಿಷ್ಠಿತ ಖಲೀಫತ್ವವು ಕೊನೆಗೊಂಡಿತು. ಕಲ್ಕಿಯ ಇನ್ನೊಂದು ಲಕ್ಷಣವೇನೆಂದರೆ ಆಕಾಶದಿಂದ ದೇವದೂತರು ಇಳಿದು ಬಂದು ಅವರಿಗೆ ಯುದ್ಧಗಳಲ್ಲಿ ಸಹಾಯ ಮಾಡುವರು.[71]
[71] ಕಲ್ಕಿ ಪುರಾಣ, ಅಧ್ಯಾಯ: 2, ಶ್ಲೋಕ: 7.
ಈ ಲಕ್ಷಣವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಇಸ್ಲಾಮೀ ಧರ್ಮಸಮರದ ಲಕ್ಷಣವಾಗಿತ್ತು. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನೇಕ ಯುದ್ಧಗಳಲ್ಲಿ ಆಕಾಶದಿಂದ ದೇವದೂತರು ಇಳಿದು ಬಂದಿದ್ದರು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನೀವು ನಿಮ್ಮ ಸಂರಕ್ಷಕನೊಂದಿಗೆ (ಅಲ್ಲಾಹನೊಂದಿಗೆ) ಸಹಾಯ ಬೇಡುತ್ತಿದ್ದ ಮತ್ತು ನಿಶ್ಚಯವಾಗಿಯೂ ನಾನು ಒಬ್ಬರ ಹಿಂದೆ ಒಬ್ಬರಂತೆ ಬರುವ ಒಂದು ಸಾವಿರ ದೇವದೂತರ ಮೂಲಕ ನಿಮಗೆ ಸಹಾಯ ಮಾಡುವೆನು ಎಂದು ಅವನು ನಿಮಗೆ ಉತ್ತರ ನೀಡಿದ ಸಂದರ್ಭವನ್ನು ಸ್ಮರಿಸಿರಿ.”
[ಸೂರ ಅನ್ಫಾಲ್: 9]
ಹಿಂದೂ ಗ್ರಂಥಗಳಲ್ಲಿರುವಂತೆ, ಕಲ್ಕಿ ಪರ್ವತಕ್ಕೆ ಹೋಗಿ “ಪರಶುರಾಮ” ಎಂಬ ಶ್ರೇಷ್ಠ ದೇವದೂತನಿಂದ ಜ್ಞಾನವನ್ನು ಪಡೆಯುವನು. ನಂತರ ಉತ್ತರ ಭಾಗಕ್ಕೆ ತೆರಳಿ, ಪರಮಾತ್ಮನು ಅವನನ್ನು ಆಕಾಶಕ್ಕೆ ಎತ್ತುವುದಕ್ಕೆ ಮುಂಚೆ ತನ್ನ ಸ್ವಗ್ರಾಮಕ್ಕೆ ಮರಳುವನು.[72]
[72] ಕಲ್ಕಿ ಪುರಾಣ, ಅಧ್ಯಾಯ: 3, ಶ್ಲೋಕ: 1-5.
ಹಿಂದೂಗಳ ಪ್ರಕಾರ ಪರಶುರಾಮ ಎಂದರೆ ಸತ್ಯನಿಷೇಧಿಗಳಿಗೆ ಶಿಕ್ಷೆಯನ್ನು ತರುವ ಶ್ರೇಷ್ಠ ದೇವದೂತ. ಮುಸಲ್ಮಾನರ ಪ್ರಕಾರ ಜಿಬ್ರೀಲ್.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿರಾ ಪರ್ವತಕ್ಕೆ ತೆರಳಿದ್ದರು. ಅಲ್ಲಿ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಅವರ ಬಳಿಗೆ ಇಳಿದು ಬಂದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರದ ಕಡೆಗೆ ಮುಖಮಾಡಿ ಹೊರಟು, ಮದೀನಕ್ಕೆ ವಲಸೆ ಹೋದರು. ನಂತರ ಮರಣಕ್ಕೆ ಸ್ವಲ್ಪ ವರ್ಷಗಳ ಮುಂಚೆ ಮಕ್ಕಾ ನಗರವನ್ನು ಜಯಿಸಿ ಮರಳಿದರು.
ಹಿಂದೂಗಳ ಪ್ರಕಾರ ಕಲ್ಕಿ ಕೊನೆಯ ಸಂದೇಶವಾಹಕರು.[73]
[73] ಭಾಗವತ ಪುರಾಣ, ಸ್ಕಂದ: 1, ಅಧ್ಯಾಯ: 3, ಶ್ಲೋಕ: 25 ಎಲ್ಲರಿಗೂ ತಿಳಿದಂತೆ, ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೊನೆಯ ಪ್ರವಾದಿ ಮತ್ತು ಸಂದೇಶವಾಹಕರು. “ಮುಹಮ್ಮದ್ ನಿಮ್ಮ ಪೈಕಿ ಯಾವುದೇ ಪುರುಷರ ತಂದೆಯಲ್ಲ; ಆದರೆ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಪ್ರವಾದಿಗಳಲ್ಲಿ ಕೊನೆಯವರು. ಮತ್ತು ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸರ್ವಜ್ಞನಾಗಿದ್ದಾನೆ.” [ಸೂರ ಅಹ್ಝಾಬ್: 40]
ಹಿಂದೂ ಗ್ರಂಥಗಳಲ್ಲಿ, ಆಗಮಿಸಲಿರುವ ಪ್ರವಾದಿಯ ಇನ್ನೊಂದು ಗುಣಲಕ್ಷಣ ಹೀಗಿದೆ: ಅವರು ಅತ್ಯಧಿಕ ಪ್ರಶಂಸನೀಯರು—ನರಾಶಂಸರು. ನರಾಶಂಸ ಎಂದರೆ ನರರಿಂದ ಪ್ರಶಂಸಿತನಾಗಿರುವವನು (ಅತ್ಯಧಿಕ ಪ್ರಶಂಸನೀಯನು). ಅಂದರೆ, (ಅರಬ್ಬಿ ಭಾಷೆಯಲ್ಲಿ) ಮುಹಮ್ಮದ್ ಅಥವಾ ಅಹ್ಮದ್.
ಇವೆರಡೂ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಸರುಗಳಾಗಿದ್ದವು. ಅವರು ಮುಹಮ್ಮದ್ ಮತ್ತು ಅಹ್ಮದ್ ಆಗಿದ್ದರು.
ನರಾಶಂಸನ ಇನ್ನೊಂದು ಗುಣ ಏನೆಂದರೆ: “ಅವರು ಒಂಟೆಯಲ್ಲಿ ಸವಾರಿ ಮಾಡುವರು, ಅವರಿಗೆ ಹನ್ನೆರಡು ಮಡದಿಗಳಿರುವರು, ಅವರು ತಮ್ಮ ಸವಾರಿಯ ಮೂಲಕ ಆಕಾಶವನ್ನು ಸ್ಪರ್ಶಿಸಿ ಇಳಿದು ಬರುವರು.”[74]
[74] ಅಥರ್ವವೇದ ಕಾಂಡ: 20, ಸೂಕ್ತ: 127, ಮಂತ್ರ: 2.
ಈ ಗುಣಗಳು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗಲ್ಲದೆ ಇನ್ನಾರಿಗೂ ಹೊಂದಿಕೆಯಾಗುವುದಿಲ್ಲ.
ಅವರು ಒಂಟೆಯಲ್ಲಿ ಸವಾರಿ ಮಾಡುತ್ತಿದ್ದರು ಎಂಬುದರ ಬಗ್ಗೆ ಹೇಳುವುದಾದರೆ, ಅದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇಲ್ಲಿ ಸಾಂದರ್ಭಿಕವಾಗಿ ಸೂಚಿಸಬೇಕಾದ ಇನ್ನೊಂದು ಪ್ರಮುಖ ವಿಷಯವೇನೆಂದರೆ, ಹಿಂದೂ ಗ್ರಂಥಗಳಲ್ಲಿ ಅವರು ಕೊನೆಯ ಪ್ರವಾದಿಯಾಗಿರುವರು ಎಂಬ ಉಲ್ಲೇಖವಿರುವುದರೊಂದಿಗೆ, ಅವರನ್ನು ಕಾರುಗಳು ಮತ್ತು ವಿಮಾನಗಳನ್ನು ಆವಿಷ್ಕರಿಸುವುದಕ್ಕೆ ಮುಂಚೆ ಕಳುಹಿಸಲಾಗುವುದು ಎಂಬ ಸೂಚನೆಯೂ ಇದೆ.[75]
[75] ದಅವತುಲ್ ಹಿಂದೂಸಿ ಇಲಲ್ ಇಸ್ಲಾಂ, ಲೇ: ಡಾ. ಇಬ್ರಾಹೀಂ ಬಿನ್ ಅಬ್ದುಲ್ ಗಫೂರ್, ಇದು ಇವರು ಪಿ.ಎಚ್.ಡಿ. ಗಾಗಿ ಮಾಡಿದ ಸಂಶೋಧನೆ, ಪುಟ 215.
ಅದರಲ್ಲಿರುವ ಇನ್ನೊಂದು ಸೂಚನೆಯೇನೆಂದರೆ, ಆಗಮಿಸಲಿರುವ ಈ ಪ್ರವಾದಿ ಹಿಂದೂ ಬ್ರಾಹ್ಮಣನಾಗಿರುವುದಿಲ್ಲ. ಏಕೆಂದರೆ ಅವರು ಒಂಟೆ ಸವಾರಿಯನ್ನು ನಿಷೇಧಿಸುತ್ತಾರೆ. ಅವರಿಗೆ ಹನ್ನೆರಡು ಮಡದಿಗಳಿರುವರು ಎಂಬುದರ ಬಗ್ಗೆ ಹೇಳುವುದಾದರೆ, ಇದು ಕೂಡ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಚರಿತ್ರೆಯಲ್ಲಿದೆ. ಅವರು ತಮ್ಮ ಸವಾರಿಯಲ್ಲಿ ಆಕಾಶವನ್ನು ಸ್ಪರ್ಶಿಸಿ ನಂತರ ಇಳಿದು ಬರುವರು ಎಂಬುದರ ಬಗ್ಗೆ ಹೇಳುವುದಾದರೆ, ಇದು ಪ್ರವಾದಿಯವರು ಆಕಾಶಕ್ಕೇರಿದಾಗ ಉಂಟಾದ ಇಸ್ರಾ ಮತ್ತು ಮಿಅರಾಜ್ ಘಟನೆಯೆಂದು ಪ್ರತಿಯೊಬ್ಬ ಮುಸಲ್ಮಾನನು ನಂಬುತ್ತಾನೆ.
ಪವಿತ್ರ ಹಿಂದೂ ಗ್ರಂಥಗಳು ಅದೇ ಅಧ್ಯಾಯದಲ್ಲಿ ನರಾಶಂಸನ ವಲಸೆಯ ಬಗ್ಗೆ ಮಾತನಾಡುತ್ತವೆ ಮತ್ತು ಅವನನ್ನು ಪ್ರಶಂಸಿಸುತ್ತಾ ಹೇಳುತ್ತವೆ: “ಓ ಜನರೇ! ನರಾಶಂಸನ್ನು ಗೌರವಿಸಿರಿ; ಶಾಂತಿ ಸ್ಥಾಪಕನಾದ ಆ ವಲಸೆಗಾರನನ್ನು ನಾನು ಸಂರಕ್ಷಿಸುತ್ತೇನೆ.”
[76] ಅಥರ್ವವೇದ ಕಾಂಡ: 20, ಸೂಕ್ತ: 127, ಮಂತ್ರ: 1.
ಆ ವಲಸೆಗಾರನನ್ನು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರ ಮಧ್ಯೆ ಶಾಂತಿ ಮತ್ತು ಏಕದೇವತ್ವವನ್ನು ಸ್ಥಾಪಿಸುವುದಕ್ಕಾಗಿ ಮಕ್ಕಾದಿಂದ ಮದೀನಕ್ಕೆ ವಲಸೆ ಹೋದದ್ದು ಪ್ರವಾದಿ ಚರಿತ್ರೆಯ ಪ್ರಮುಖ ಘಟನೆಗಳಲ್ಲೊಂದಾಗಿದೆ. ಅದರ ನಂತರದ ಮಂತ್ರವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧರ್ಮಸಮರದ ಬಗ್ಗೆ ಮಾತನಾಡುತ್ತಾ ಹೇಳುತ್ತದೆ: “ಪರಮಾತ್ಮನನ್ನು ಮಹಿಮೆಪಡಿಸುವವನು ಪರಮಾತ್ಮನನ್ನು ಮಹಿಮೆಪಡಿಸುವ ಇತರರೊಡನೆ ಸೇರಿ ಯುದ್ಧಕ್ಕೆ ಹೊರಡುವನು ಮತ್ತು ಜನರಿಗೆ ಸುರಕ್ಷೆಯನ್ನು ನೀಡುವನು.”[77] [77] ಅಥರ್ವವೇದ ಕಾಂಡ: 20, ಸೂಕ್ತ: 127, ಮಂತ್ರ: 5 ಮತ್ತು ಅದರ ನಂತರದ್ದು. ಅವರು ಧರ್ಮಸಮರ ಮಾಡುವ ಪ್ರವಾದಿಯಾಗಿದ್ದು, ಅಲ್ಲಾಹನ ಮಾರ್ಗದಲ್ಲಿ ಧರ್ಮಸಮರ ಮಾಡುವ ಮೂಲಕ ಜನರ ಮಧ್ಯೆ ಶಾಂತಿಯನ್ನು ಹರಡುವರು. ಹೀಗೆ, ಇಸ್ಲಾಂ ಧರ್ಮದ ಬಗ್ಗೆ, ಇಸ್ಲಾಮಿನ ಪ್ರವಾದಿಯ ಬಗ್ಗೆ, ಅವರ ಚರಿತ್ರೆ, ಧರ್ಮಪ್ರಚಾರ ಮತ್ತು ಮಕ್ಕಾ ನಗರದ ಬಗ್ಗೆ ಸುವಾರ್ತೆ ನೀಡುವ ನೂರಾರು ಶ್ಲೋಕಗಳಿವೆ.
ಆದಾಗ್ಯೂ, ಇವುಗಳ ಪೈಕಿ ಕೆಲವು ಪಠ್ಯಗಳ ವಿಷಯದಲ್ಲಿ ಹಿಂದೂಗಳ ಮಧ್ಯೆ ಭಿನ್ನಮತವಿದೆ. ಅವು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ಪಷ್ಟವಾಗಿ ಸೂಚಿಸುತ್ತವೆ ಎಂಬುದನ್ನು ಅವರು ನಿರಾಕರಿಸುತ್ತಾರೆ. ಆದರೆ ಸತ್ಯಾನ್ವೇಷಿಗಳಾದ ಹಿಂದೂಗಳಿಗೆ ಈ ವಿಷಯಗಳು ಅತಿಶಯವಾಗಿ ಕಾಣಬಾರದು. ಮೂಲಭೂತವಾಗಿ, ಈ ಸುವಾರ್ತೆಗಳಿರುವುದು ಕೇವಲ ಪುಷ್ಟೀಕರಿಸುವುದಕ್ಕಾಗಿಯೇ ವಿನಾ ಬೇರಾವುದಕ್ಕೂ ಅಲ್ಲ. ಆದ್ದರಿಂದ, ಈ ಸುವಾರ್ತೆಗಳು ಅಧಿಕ ಸಂಖ್ಯೆಯಲ್ಲಿ ಮತ್ತು ವಿಭಿನ್ನ ಶೈಲಿಗಳಲ್ಲಿದ್ದೂ ಸಹ ನಾನು ಅವುಗಳನ್ನು ದೀರ್ಘವಾಗಿ ಉಲ್ಲೇಖಿಸುವುದಿಲ್ಲ. ಏಕೆಂದರೆ, ಸ್ವತಃ ಇಸ್ಲಾಮಿನ ಸಂದೇಶ, ಏಕದೇವತ್ವದ ಆಹ್ವಾನ ಮತ್ತು ಸಹಜ ಮನೋಧರ್ಮದ ಕರೆ; ಅದರ ಜೊತೆಗೆ, ಮನುಷ್ಯ ಜೀವನದ ಗುರಿ ಮತ್ತು ಅದರ ಪರಿಣಾಮದ ಬಗ್ಗೆ ತಿಳಿಯುವ ಮನುಷ್ಯನ ಜಿಜ್ಞಾಸೆಗೆ ಉತ್ತರ ನೀಡುವ ಯಾವುದೇ ಧರ್ಮವೂ ಜಗತ್ತಿನಲ್ಲಿಲ್ಲ ಎಂಬ ಸತ್ಯವು ಇಸ್ಲಾಂ ಧರ್ಮವು ಸತ್ಯವೆಂಬುದಕ್ಕೆ ಅತಿದೊಡ್ಡ ಪುರಾವೆಯಾಗಿವೆ.
ಗೊಂದಲಮಯ ವಿಗ್ರಹಾರಾಧನೆ, ಬಹುದೇವತ್ವಗಳು ಮತ್ತು ನಾಸ್ತಿಕತೆಯ ಹೊರತು ಬೇರೇನೂ ಭೂಮಿಯಲ್ಲಿ ಉಳಿದಿಲ್ಲ. ಶುದ್ಧವಾದ ಏಕದೇವತ್ವದಲ್ಲಿ ಮತ್ತು ಪರಮಾತ್ಮನನ್ನು (ಎಲ್ಲಾ ರೀತಿಯ ಅಪವಾದಗಳಿಂದ) ಪರಿಶುದ್ಧಗೊಳಿಸುವುದರಲ್ಲಿ ಇಸ್ಲಾಂ ಧರ್ಮದ ಹೊರತು ಬೇರೆ ಯಾವುದೇ ಧರ್ಮವೂ ಉಳಿದಿಲ್ಲ.
“ಹೇಳಿರಿ: ಅವನು ಅಲ್ಲಾಹು; ಏಕೈಕನು. (1)
ಅವನು ನಿರಪೇಕ್ಷನು. (2)
ಅವನಿಗೆ ಯಾವ ಸಂತಾನವು ಇಲ್ಲ ಮತ್ತು ಅವನು ಯಾರ ಸಂತಾನವೂ ಅಲ್ಲ. (3)
ಮತ್ತು ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ. (4)”
[ಸೂರ ಇಖ್ಲಾಸ್]
18. ಇಸ್ಲಾಂ ಎಂದರೇನು?
ಉತ್ತರ: ಇಸ್ಲಾಂ ಎಂದರೆ ಸರ್ವಶಕ್ತನಾದ ಅಲ್ಲಾಹನಿಗೆ ಸಮರ್ಪಿಸುವುದು, ಶರಣಾಗುವುದು ಮತ್ತು ವಿಧೇಯತೆ ತೋರುವುದು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಒಳಿತು ಮಾಡುವವನಾಗಿದ್ದು ತನ್ನ ಮುಖವನ್ನು ಅಲ್ಲಾಹನಿಗೆ ಶರಣಾಗಿಸುವ ಮತ್ತು ಏಕನಿಷ್ಠರಾದ ಇಬ್ರಾಹೀಮರ ಮಾರ್ಗವನ್ನು ಅನುಸರಿಸುವವನಿಗಿಂತಲೂ ಅತ್ಯುತ್ತಮ ಧರ್ಮಿನಿಷ್ಠೆಯುಳ್ಳವನು ಯಾರು? ಅಲ್ಲಾಹು ಇಬ್ರಾಹೀಮರನ್ನು ಆಪ್ತಮಿತ್ರರನ್ನಾಗಿ ಮಾಡಿಕೊಂಡಿರುವನು.”
[ಸೂರ ನಿಸಾ: 125]
ಮುಖವನ್ನು ಅಲ್ಲಾಹನಿಗೆ ಶರಣಾಗಿಸುವವನು ಎಂದರೆ: ಸರ್ವಶಕ್ತನಾದ ಅಲ್ಲಾಹನಿಗೆ ಸಂಪೂರ್ಣ ಶರಣಾಗಿ ವಿಧೇಯನಾಗಿರುವವನು. ಇವನೇ ಅತ್ಯುತ್ತಮ ಧರ್ಮನಿಷ್ಠೆಯುಳ್ಳವನು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನಿಮ್ಮ ಪರಮಾತ್ಮನು ಏಕೈಕ ಪರಮಾತ್ಮನು. ಆದ್ದರಿಂದ ಅವನಿಗೆ ಶರಣಾಗಿರಿ; ಮತ್ತು ವಿನಯವಂತರಿಗೆ ಸುವಾರ್ತೆ ನೀಡಿರಿ.”
[ಸೂರ ಹಜ್ಜ್: 34]
ಆದ್ದರಿಂದ ಅವನಿಗೆ ಶರಣಾಗಿರಿ ಎಂದರೆ: ಅವನ ತೀರ್ಪಿಗೆ ಶರಣಾಗಿರಿ.
ಇಸ್ಲಾಂ ಎಂದರೆ ಅಲ್ಲಾಹನಿಗೆ ನಿರುಪಾಧಿಕವಾಗಿ ಶರಣಾಗುವುದು, ಅವನಿಗೆ ಸಂಪೂರ್ಣ ವಿಧೇಯತೆ ತೋರುವುದು ಮತ್ತು ಅವನ ಧರ್ಮಸಂಹಿತೆ ಹಾಗೂ ಮಾರ್ಗವಿಧಾನವನ್ನು ಪೂರ್ಣ ಸಂತೃಪ್ತಿಯಿಂದ ಸ್ವೀಕರಿಸುವುದು. ಇದೇ ಇಸ್ಲಾಂ ಧರ್ಮದ ಸಾರ ಮತ್ತು ಸತ್ಯ.
ಇಸ್ಲಾಂ ಎಂದರೆ ಅಲ್ಲಾಹನ ತೀರ್ಪು ಮತ್ತು ಧರ್ಮನಿಯಮಗಳಿಗೆ ಶರಣಾಗುವುದು.
ಇಸ್ಲಾಂ ಮನುಷ್ಯರೆಲ್ಲರಿಗಿರುವ ಅಲ್ಲಾಹನ ಧರ್ಮವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನಿಶ್ಚಯವಾಗಿಯೂ ಅಲ್ಲಾಹನ ಬಳಿ ಸ್ವೀಕಾರವಾಗುವ ಧರ್ಮ ಇಸ್ಲಾಂ ಮಾತ್ರ.”
[ಸೂರ ಆಲು ಇಮ್ರಾನ್: 19]
ಅಲ್ಲಾಹು ಇಸ್ಲಾಂ ಧರ್ಮದ ಹೊರತು ಬೇರೆ ಯಾವುದೇ ಧರ್ಮವನ್ನು ಸ್ವೀಕರಿಸುವುದಿಲ್ಲ.
“ಯಾರಾದರೂ ಇಸ್ಲಾಂ ಅಲ್ಲದ (ಅಲ್ಲಾಹನಿಗಿರುವ ಶರಣಾಗತಿಯಲ್ಲದ) ಬೇರೆ ಧರ್ಮವನ್ನು ಹುಡುಕುವುದಾದರೆ, ಅದನ್ನು ಎಂದಿಗೂ ಅವನಿಂದ ಸ್ವೀಕರಿಸಲಾಗುವುದಿಲ್ಲ; ಮತ್ತು ಅವನು ಪರಲೋಕದಲ್ಲಿ ನಷ್ಟ ಹೊಂದಿದವರಲ್ಲಿ ಸೇರುವನು.”
[ಸೂರ ಆಲು ಇಮ್ರಾನ್: 85]
ಇಸ್ಲಾಂ ಧರ್ಮವು ಅಲ್ಲಾಹು ಎಲ್ಲಾ ಪ್ರವಾದಿಗಳನ್ನು ಮತ್ತು ಸಂದೇಶವಾಹಕರನ್ನು ಕಳುಹಿಸಿದ ಧರ್ಮವಾಗಿದೆ. ಆದ್ದರಿಂದ ಪ್ರವಾದಿಗಳೆಲ್ಲರ ಧರ್ಮವು ಒಂದೇ. ಅದು ಇಸ್ಲಾಂ ಧರ್ಮ. ಎಲ್ಲಾ ಪ್ರವಾದಿಗಳೂ—ಅವರ ಧರ್ಮಸಂಹಿತೆಗಳು ವಿಭಿನ್ನವಾಗಿದ್ದರೂ ಸಹ—ಏಕದೇವತ್ವವನ್ನೇ ಬೋಧಿಸಿದ್ದರು.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನನ್ನ ಹೊರತು ಅನ್ಯ ಆರಾಧ್ಯರಿಲ್ಲ. ಆದ್ದರಿಂದ ನನ್ನನ್ನು ಆರಾಧಿಸಿರಿ ಎಂಬ ದೇವವಾಣಿಯೊಂದಿಗೇ ಹೊರತು ತಮಗಿಂತ ಮುಂಚೆ ನಾವು ಯಾವುದೇ ಸಂದೇಶವಾಹಕರನ್ನೂ ಕಳುಹಿಸಿಲ್ಲ.”
[ಸೂರ ಅಂಬಿಯಾ: 25]
ಇಸ್ಲಾಂ ಧರ್ಮದ ಹೊರತು ಬೇರೆ ಯಾವುದೇ ಧರ್ಮವೂ ಈ ಏಕದೇವತ್ವದಲ್ಲಿ ಬಾಕಿಯುಳಿದಿಲ್ಲ.
ಇಸ್ಲಾಂ ಧರ್ಮವು ಇಂದು ಭೂಮಿಯ ಮೇಲಿರುವ ಏಕೈಕ ಏಕದೇವತ್ವದ ಧರ್ಮವಾಗಿದೆ. ಈ ಮಧ್ಯೆ, ಇತರ ಧರ್ಮಸಂಹಿತೆಗಳೊಂದಿಗೆ ಸೇರಿಕೊಂಡವರಿಗೆ (ಬೇರೆ ಧರ್ಮದವರಿಗೆ) ಬಹುದೇವತ್ವದ ಅಂಶವನ್ನು ಸ್ವಲ್ಪ ಅಥವಾ ದೊಡ್ಡ ಮಟ್ಟದಲ್ಲಿ ಸ್ವೀಕರಿಸಬೇಕಾಗಿ ಬಂದಿದೆ. ಪ್ರವಾದಿಗಳ ನಿಧನಾನಂತರ, ಮತ್ತು ಅವರು ಜನರನ್ನು ಏಕದೇವತ್ವದಲ್ಲಿ ಬಿಟ್ಟು ಹೋದ ನಂತರ, ಕಾಲಾಂತರದಲ್ಲಿ ಜನರು ಬಹುದೇವ ನಂಬಿಕೆಗಳನ್ನು ಸ್ವೀಕರಿಸಿಕೊಂಡರು. ಇಂದು ಭೂಮುಖದ ಮೇಲೆ, ಪ್ರವಾದಿಗಳು ತಂದ ಶುದ್ಧ ಏಕದೇವತ್ವದಲ್ಲಿ ಇಸ್ಲಾಂ ಧರ್ಮದ ಹೊರತು ಯಾವುದೇ ಧರ್ಮವೂ ಬಾಕಿಯುಳಿದಿಲ್ಲ. ಆದ್ದರಿಂದ, ಇಸ್ಲಾಂ ಧರ್ಮದ ಸತ್ಯತೆಯ ಬಗ್ಗೆ ಹಿಂದೂಗಳು ಪರಿಗಣಿಸಬೇಕಾದ ಅತಿದೊಡ್ಡ ಪುರಾವೆಯು ಈ ಧರ್ಮದ ಶುದ್ಧ ಏಕದೇವತ್ವದ ಸಂದೇಶವಾಗಿದೆ.
19. ಬುದ್ಧಿಯನ್ನು ಹೈರಾಣುಗೊಳಿಸುವ ಈ ಕೆಳಗಿನ ಪ್ರಶ್ನೆಗಳಿಗೆ ಇಸ್ಲಾಂ ಧರ್ಮದಲ್ಲಿ ಉತ್ತರವಿದೆಯೇ: ನಾವು ಎಲ್ಲಿಂದ ಬಂದೆವು? ನಾವು ಏಕೆ ಇಲ್ಲಿ ಈ ಜಗತ್ತಿನಲ್ಲಿದ್ದೇವೆ? ನಾವು ಎಲ್ಲಿಗೆ ಮರಳಿ ಹೋಗುತ್ತೇವೆ?
ಉತ್ತರ: ಇಸ್ಲಾಂ ಧರ್ಮವು ಈ ಎಲ್ಲಾ ಪ್ರಶ್ನೆಗಳಿಗೆ ಪವಿತ್ರ ಕುರ್‌ಆನ್‌ನ ಒಂದೇ ಒಂದು ಶ್ಲೋಕದಲ್ಲಿ ಉತ್ತರ ನೀಡಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನನ್ನನ್ನು ಸೃಷ್ಟಿಸಿದವನನ್ನು ಆರಾಧಿಸದಿರಲು ನನಗೇನು ಹಕ್ಕಿದೆ? ನೀವು ಅವನ ಬಳಿಗೆ ಮರಳಿ ಹೋಗುವಿರಿ.”
[ಸೂರ ಯಾಸೀನ್: 22]
ನಾನು ಎಲ್ಲಿಂದ ಬಂದೆ? ಅಲ್ಲಾಹು ನನ್ನನ್ನು ಸೃಷ್ಟಿಸಿದನು. (ನನ್ನನ್ನು ಸೃಷ್ಟಿಸಿದವನವನು).
ನಾನು ಎಲ್ಲಿಗೆ ಹೋಗುತ್ತಿದ್ದೇನೆ? ನಾನು ಅಲ್ಲಾಹನ ಬಳಿಗೆ ನನ್ನ ಕರ್ಮಗಳ ವಿಚಾರಣೆಗಾಗಿ ಹೋಗಲಿದ್ದೇನೆ. (ನೀವು ಅವನ ಬಳಿಗೆ ಮರಳಿ ಹೋಗುವಿರಿ).
ನಾನೇಕೆ ಈ ಜಗತ್ತಿಗೆ ಬಂದೆ? ಅಲ್ಲಾಹನನ್ನು ಆರಾಧಿಸಲು ಮತ್ತು ಪರೀಕ್ಷೆಯನ್ನು ಎದುರಿಸಲು.
ನಾನೇಕೆ ಅಲ್ಲಾಹನನ್ನು ಆರಾಧಿಸಬೇಕು? ಸ್ವಾಭಾವಿಕವಾಗಿ, ನನ್ನನ್ನು ಸೃಷ್ಟಿಸಿದ ಅಲ್ಲಾಹನನ್ನು ನಾನು ಆರಾಧಿಸಬೇಕು. ದಾಸ ಮತ್ತು ಪರಮಾತ್ಮನ ನಡುವಿನ ನೈಸರ್ಗಿಕ ಸಂಬಂಧವು: ದಾಸನು ತನ್ನ ಪರಮಾತ್ಮ ಮತ್ತು ಸೃಷ್ಟಿಕರ್ತನನ್ನು ಆರಾಧಿಸುವುದಾಗಿದೆ. (ನನ್ನನ್ನು ಸೃಷ್ಟಿಸಿದವನನ್ನು ಆರಾಧಿಸದಿರಲು ನನಗೇನು ಹಕ್ಕಿದೆ?)
ಮನುಷ್ಯರನ್ನು ಹೈರಾಣುಗೊಳಿಸುವ ಮೂರು ಪ್ರಮುಖ ಪ್ರಶ್ನೆಗಳಿಗೆ ಏಕೈಕ ಶ್ಲೋಕದಲ್ಲಿ ಉತ್ತರವಿದೆ.
“ನನ್ನನ್ನು ಸೃಷ್ಟಿಸಿದವನನ್ನು ಆರಾಧಿಸದಿರಲು ನನಗೇನು ಹಕ್ಕಿದೆ? ನೀವು ಅವನ ಬಳಿಗೆ ಮರಳಿ ಹೋಗುವಿರಿ.”
[ಸೂರ ಯಾಸೀನ್: 22]
20. ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಕಡೆಯ ಸಂದೇಶವಾಹಕರೆಂದು ನಾನು ತಿಳಿದುಕೊಳ್ಳುವ ಬಗೆ ಹೇಗೆ?
ಉತ್ತರ: (ಪ್ರವಾದಿ ಚರಿತ್ರೆಯಲ್ಲಿರುವ) ಅನೇಕ ಪವಾಡಾತ್ಮಕ ಪುರಾವೆಗಳು ಅರ್ಥದ ರೂಪದಲ್ಲಿರುವ ಸಾಮೂಹಿಕ ಪ್ರಸರಣ ಮತ್ತು ಸಂಪೂರ್ಣ ಖಾತ್ರಿಯನ್ನು ಸೂಚಿಸುತ್ತವೆ.
ಅರಿಸ್ಟಾಟಲ್ ತತ್ವಜ್ಞಾನಿಯಾದದ್ದು ಅವನ ಒಟ್ಟಾರೆ ಕೆಲಸ-ಕಾರ್ಯಗಳಿಂದಲೇ ಹೊರತು, ಅವನು ಹೇಳಿದ ಒಂದು ವಾಕ್ಯದಿಂದ ಅಥವಾ ಅವನು ನಡೆಸಿದ ಒಂದು ತಾತ್ವಿಕ ಪರಿಶೀಲನೆಯಿಂದಲ್ಲ.
ಅಂತೆಯೇ, ಹಿಪ್ಪೊಕ್ರೇಟ್ಸ್ ವೈದ್ಯನಾದದ್ದು ಅವನ ಒಟ್ಟಾರೆ ವೈದ್ಯಕೀಯ ಯೋಜನೆಗಳಿಂದಲೇ ಹೊರತು, ಅವನು ಮಾಡಿದ ಒಂದು ಶಸ್ತ್ರಚಿಕಿತ್ಸೆಯಿಂದಲ್ಲ.
ಅದೇ ರೀತಿ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಗ್ಗೆ ವರದಿಯಾಗಿರುವ ವಿಭಿನ್ನ ಪವಾಡಾತ್ಮಕ ಪುರಾವೆಗಳು ಅವರು ಪ್ರವಾದಿ ಎಂಬುದಕ್ಕೆ ಅರ್ಥದ ರೂಪದಲ್ಲಿರುವ ಸಾಮೂಹಿಕ ಪ್ರಸರಣ ಮತ್ತು ಸಂಪೂರ್ಣ ಖಾತ್ರಿಯನ್ನು ಸೂಚಿಸುತ್ತವೆ.
(ಉದಾಹರಣೆಗೆ), ನೀವು ಪ್ರವಾದಿ ಚರಿತ್ರೆಯನ್ನು ನೋಡಿದಾಗ, ಅದರಲ್ಲಿ ಅವರು ಸತ್ಯವಂತರು ಮತ್ತು ಸತ್ಯನಿಷ್ಠೆಗೆ ಹೆಸರಾದವರು ಎಂಬ ಉಲ್ಲೇಖವನ್ನು, ಮತ್ತು ಅವರ ಕಠಿಣ ಶತ್ರುಗಳು ಕೂಡ ಅದನ್ನು ಒಪ್ಪಿಕೊಂಡಿದ್ದರು ಹಾಗೂ ಯಾರೂ ಅವರನ್ನು ಸುಳ್ಳರು ಅಥವಾ ನೀಚರೆಂದು ಆಪಾದಿಸುತ್ತಿರಲಿಲ್ಲ ಎಂಬುದನ್ನು ಕಾಣುತ್ತೀರಿ. ನಂತರ ಅದೇ ಪ್ರವಾದಿ ಭವಿಷ್ಯದ ಬಗ್ಗೆ ಮಾತನಾಡುವುದು ಮತ್ತು ಅವು ಅಕ್ಷರಶಃ ಅವರು ಹೇಳಿದಂತೆಯೇ ಸಂಭವಿಸುವುದನ್ನು ಕಾಣುತ್ತೀರಿ. ನಂತರ ಅವರು ಯಾವ ನಂಬಿಕೆಯ ಕಡೆಗೆ ಜನರನ್ನು ಕರೆಯುತ್ತಿದ್ದರೋ ಆ ನಂಬಿಕೆಯು ಆರಂಭ ಕಾಲದಿಂದಲೂ ಪ್ರವಾದಿಗಳೆಲ್ಲರೂ ಬೋಧಿಸುತ್ತಿದ್ದ ಅದೇ ನಂಬಿಕೆಯಾಗಿದೆಯೆಂದು ಕಾಣುತ್ತೀರಿ. ನಂತರ ಅವರ ಆಗಮನಕ್ಕೆ ನೂರಾರು ವರ್ಷಗಳ ಹಿಂದೆ ಅವರ ಬಗ್ಗೆ ಇತರ ಪ್ರವಾದಿಗಳು ಸುವಾರ್ತೆ ನೀಡುವುದನ್ನು ಮತ್ತು ಹಿಂದೂಗಳ ಪವಿತ್ರ ಗ್ರಂಥಗಳು ಸುವಾರ್ತೆ ನೀಡುವುದನ್ನು ಕಾಣುತ್ತೀರಿ. ಇವೆಲ್ಲವೂ ಅವರ ಸಂದೇಶದ ಸತ್ಯತೆಯ ಬಗ್ಗೆ ಅರ್ಥರೂಪದಲ್ಲಿರುವ ಸಾಮೂಹಿಕ ಪ್ರಸರಣ ಮತ್ತು ಸಂಪೂರ್ಣ ಖಾತ್ರಿಯನ್ನು ಸೂಚಿಸುತ್ತವೆ.
ನಂತರ ಅವರು ತಂದ ಮಹಾನ್ ಪವಾಡದ ಬಗ್ಗೆ—ಪವಿತ್ರ ಕುರ್‌ಆನ್ ಬಗ್ಗೆ ನೋಡಿ! ಸರ್ವಶಕ್ತನಾದ ಅಲ್ಲಾಹು ಕುರ್‌ಆನಿನ ಮೂಲಕ ವಾಕ್ಚಾತುರ್ಯದ ಜನರಿಗೆ ಅದರಂತಹ ಒಂದು ಪುಸ್ತಕವನ್ನು ಅಥವಾ ಅದರ ಅಧ್ಯಾಯಗಳಂತಹ ಒಂದು ಅಧ್ಯಾಯವನ್ನು ರಚಿಸಿ ತರಲು ಸವಾಲು ಒಡ್ಡುತ್ತಾನೆ. ಆದರೆ ಅವರು ಆ ಸವಾಲನ್ನು ಸ್ವೀಕರಿಸುವುದರಲ್ಲಿ ವಿಫಲರಾಗುತ್ತಾರೆ! “ಅವರು (ಪ್ರವಾದಿಯವರು) ಅದನ್ನು ಸ್ವತಃ ರಚಿಸಿದರು ಎಂದು ಅವರು ಹೇಳುತ್ತಿದ್ದಾರೆಯೇ? (ಓ ಪ್ರವಾದಿಯವರೇ!) ಹೇಳಿರಿ: ಹಾಗಾದರೆ ಅದಕ್ಕೆ ಸಮಾನವಾಗಿರುವ ಒಂದು ಅಧ್ಯಾಯವನ್ನು (ರಚಿಸಿ) ತನ್ನಿರಿ. ಅಲ್ಲಾಹನ ಹೊರತು ನಿಮಗೆ ಸಾಧ್ಯವಾಗುವ ಎಲ್ಲರನ್ನೂ ಕರೆಯಿರಿ. ನೀವು ಸತ್ಯವಂತರಾಗಿದ್ದರೆ!” [ಸೂರ ಯೂನುಸ್: 38]
ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ:
“ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದ (ಕುರ್‌ಆನ್‍ನ) ಬಗ್ಗೆ ನಿಮಗೆ ಸಂಶಯವಿದ್ದರೆ, ಅದಕ್ಕೆ ಸಮಾನವಾಗಿರುವ ಒಂದು ಅಧ್ಯಾಯವನ್ನು ರಚಿಸಿ ತನ್ನಿರಿ. ಅಲ್ಲಾಹನ ಹೊರತು ನಿಮ್ಮ ಸಹಾಯಕರನ್ನು ಕರೆಯಿರಿ. ನೀವು ಸತ್ಯವಂತರಾಗಿದ್ದರೆ! (23)
ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದಲ್ಲಿ—ಅದನ್ನು ಮಾಡಲು ನಿಮಗೆಂದೂ ಸಾಧ್ಯವಾಗದು—ಮನುಷ್ಯರನ್ನು ಮತ್ತು ಕಲ್ಲುಗಳನ್ನು ಇಂಧನವಾಗಿ ಉರಿಸಲಾಗುವ ನರಕಾಗ್ನಿಯನ್ನು ಭಯಪಡಿರಿ. ಅದನ್ನು ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿದೆ. (24)”
[ಸೂರ ಬಕರ]
ಸರ್ವಶಕ್ತನಾದ ಅಲ್ಲಾಹನ ವಚನವನ್ನು ನೋಡಿ:
“ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದಲ್ಲಿ—ಅದನ್ನು ಮಾಡಲು ನಿಮಗೆಂದೂ ಸಾಧ್ಯವಾಗದು.”
[ಸೂರ ಬಕರ: 24]
ಅವರು ಅದನ್ನು ಮಾಡಲೂ ಇಲ್ಲ, ಅವರಿಗೆ ಅದು ಸಾಧ್ಯವಾಗಲೂ ಇಲ್ಲ. ಪವಿತ್ರ ಕುರ್‌ಆನ್ ಈಗಲೂ ಬಹುದೇವತ್ವವಾದಿಗಳಲ್ಲಿರುವ ವಾಕ್ಚಾತುರ್ಯದ ಜನರಿಗೆ ಸವಾಲನ್ನು ಒಡ್ಡುತ್ತಿದೆ. ಆದರೆ, ಅವರು ಈ ಸವಾಲನ್ನು ಎದುರಿಸಲು ಮತ್ತು ಅಂತಹದನ್ನು ರಚಿಸಿ ತರಲು ವಿಫಲರಾಗುತ್ತಿದ್ದಾರೆ. ಡಾ. ಅಬ್ದುಲ್ಲಾ ದಿರಾಜ್ (ಅಲ್ಲಾಹು ಅವರಿಗೆ ಕರುಣೆ ತೋರಲಿ) ಹೇಳುತ್ತಾರೆ: “ಈ ಸವಾಲಿನ ಮೂಲಕ ಅವರ (ಬಹುದೇವವಾದಿಗಳ) ಸಾಹಿತ್ಯಿಕ ಆತ್ಮಾಭಿಮಾನವನ್ನು ಕೆರಳಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಭಯಪಡಲಿಲ್ಲವೇ? ಆಗ ಅವರೆಲ್ಲರೂ ಜಾಗರೂಕರಾಗಿ ಸವಾಲನ್ನು ಎದುರಿಸಲು ಧಾವಿಸುತ್ತಿದ್ದರೆ! ಕುರ್‌ಆನನ್ನು ಹೋಲುವ, ಅಥವಾ ಕನಿಷ್ಠ ಅದರ ಕೆಲವು ಭಾಗಗಳನ್ನು ಹೋಲುವ ಒಂದು ವಚನವನ್ನು ರಚಿಸಲು ಅವರಲ್ಲಿದ್ದ ವಾಕ್ಚಾತುರ್ಯವುಳ್ಳವರು ಗುಂಪುಗೂಡಿ ತೀರ್ಮಾನಿಸಿ ಸಫಲರಾಗಿದ್ದರೆ ಪ್ರವಾದಿಯವರು ಏನು ಮಾಡುತ್ತಿದ್ದರು!
ಮಾತ್ರವಲ್ಲದೆ, ಅವರ ಕಾಲದವರಿಗೆ ಈ ಸವಾಲನ್ನು ಒಡ್ಡಲು ಅವರಿಗೆ ದೈರ್ಯವುಂಟಾಯಿತು ಎಂದಿಟ್ಟುಕೊಂಡರೂ, ಮುಂದಿನ ತಲೆಮಾರುಗಳಿಗೂ ಆ ಸವಾಲನ್ನು ಒಡ್ಡಲು ಅವರು ಧೈರ್ಯಪಡುತ್ತಿದ್ದರೇ?
ಇದೊಂದು ಅಪಾಯಕಾರಿ ಕೆಲಸವಾಗಿದ್ದು, ವಿಧಿಯ ವರ್ತನೆಗಳ ಬಗ್ಗೆ ಸಂಪೂರ್ಣ ಜ್ಞಾನವಿರುವ ಅಥವಾ ಆಕಾಶದಿಂದ ದೇವವಾಣಿ ಸ್ವೀಕರಿಸುವ ವ್ಯಕ್ತಿಯ ಹೊರತು ತನ್ನ ಸಾಮರ್ಥ್ಯದ ಬಗ್ಗೆ ತಿಳುವಳಿಕೆಯಿರುವ ಯಾರೂ ಇದಕ್ಕೆ ಮುಂದಾಗಲಾರರು. ಆದರೆ, ಅವರು ಅದನ್ನು (ಸವಾಲನ್ನು) ಹಾಗೆಯೇ ಜಗತ್ತಿನ ಮುಂದೆ ಎಸೆದರು. ಆಗ ಅದು ಸದೃಢ ವಿಧಿಯಾಗಿ ಬಿಟ್ಟಿತು. ಎಲ್ಲಾ ಕಾಲಗಳಲ್ಲೂ ಅದನ್ನು ಎದುರಿಸಿದವರೆಲ್ಲರೂ ಸ್ಪಷ್ಟ ಅಸಹಾಯಕತೆ ಅಥವಾ ದಯನೀಯ ವೈಫಲ್ಯಕ್ಕೆ ಒಳಗಾದರು.”[78] [78] ಅನ್ನಬಉಲ್ ಅಝೀಮ್, ಡಾ. ಅಬ್ದುಲ್ಲಾ ದಿರಾಜ್ (ಅಲ್ಲಾಹು ಅವರಿಗೆ ಕರುಣೆ ತೋರಲಿ), ಪುಟ 44-45 ಕುರ್‌ಆನನ್ನು ಎದುರಿಸುವುದಕ್ಕಿಂತಲೂ ಮತ್ತು ಸವಾಲನ್ನು ಸ್ವೀಕರಿಸುವುದಕ್ಕಿಂತಲೂ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರುದ್ಧ ಹೋರಾಡಲು ಸೈನ್ಯಗಳನ್ನು ಮತ್ತು ಮಿತ್ರಪಕ್ಷಗಳನ್ನು ಒಟ್ಟುಗೂಡಿಸುವುದು ಸುಲಭವೆಂದು ಆ ಬಹುದೇವತ್ವವಾದಿಗಳು ಭಾವಿಸಿದರು.
“ಸತ್ಯನಿಷೇಧಿಗಳು ಹೇಳಿದರು: ಈ ಕುರ್‌ಆನ್‌ಗೆ ಕಿವಿಗೊಡಬೇಡಿ, ಮತ್ತು (ಅದನ್ನು ಪಠಿಸಲಾಗುವಾಗ) ಗದ್ದಲ ಮಾಡಿರಿ; ನೀವು ಮೇಲುಗೈ ಸಾಧಿಸಲೂಬಹುದು.” [ಸೂರ ಫುಸ್ಸಿಲತ್: 26] ಅರಬ್ಬರೆಲ್ಲರೂ ಜೊತೆಯಾಗಿ, ಅಥವಾ ಯಾರಿಗೆಲ್ಲಾ ಸವಾಲು ತಲುಪಿದೆಯೋ ಆ ಸಮುದಾಯಗಳಲ್ಲಿ ಯಾರೂ ಕೂಡ ನಾಸ್ತಿಕರಿಗೆ ಮತ್ತು ಇತರ ಜನರಿಗೆ ನೆಮ್ಮದಿ ನೀಡುವ ಯಾವುದೇ ಕಾರ್ಯವನ್ನೂ ಮಾಡಲಿಲ್ಲ.
ಆಲೂಸಿ (ಅಲ್ಲಾಹು ಅವರಿಗೆ ಕರುಣೆ ತೋರಲಿ) ಹೇಳುತ್ತಾರೆ: “ನಮ್ಮ ಈ ಕಾಲದವರೆಗೂ ಅವರಲ್ಲಿ ಯಾರೂ ಒಂದೇ ಒಂದು ಮಾತನ್ನು ಉಚ್ಛರಿಸಿಲ್ಲ; ಅಥವಾ ಒಂದೇ ಒಂದು ಗುಣವನ್ನೂ ವ್ಯಕ್ತಪಡಿಸಿಲ್ಲ.”
ಆಗ ಇನ್ನೂ ಮುಸ್ಲಿಂ ಆಗಿರದ ಜುಬೈರ್ ಬಿನ್ ಮುತ್‌ಇಮ್ ಹೇಳಿದರು: “ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಗ್ರಿಬ್ ನಮಾಝ್‌ನಲ್ಲಿ ಸೂರ ತೂರ್ ಪಠಿಸುವುದನ್ನು ನಾನು ಕೇಳಿದೆ. ಅವರು ಈ ಶ್ಲೋಕವನ್ನು ತಲುಪಿದಾಗ:
“ಅವರು ಯಾರಿಂದಲೂ ಸೃಷ್ಟಿಸಲ್ಪಟ್ಟವರಲ್ಲವೇ? ಅಥವಾ ಅವರೇ (ಅವರ) ಸೃಷ್ಟಿಕರ್ತರೇ? (35)
ಅಥವಾ, ಆಕಾಶಗಳನ್ನು ಮತ್ತು ಭೂಮಿಯನ್ನು ಅವರೇ ಸೃಷ್ಟಿಸಿದರೇ? ಬದಲಿಗೆ, ಅವರಿಗೆ ದೃಢವಾದ ನಂಬಿಕೆಯಿಲ್ಲ. (36)
ಅಥವಾ, ತಮ್ಮ ಸಂರಕ್ಷಕನ (ಅಲ್ಲಾಹನ) ಖಜಾನೆಗಳು ಅವರ ಬಳಿಯಿವೆಯೇ? ಅಥವಾ (ಎಲ್ಲವನ್ನೂ) ನಿಯಂತ್ರಿಸುವವರು ಅವರೇ? (37)”
[ಸೂರ ತೂರ್]
ಆಗ ಅವರು ಹೇಳಿದರು: “ಆಗ ನನ್ನ ಹೃದಯವು ಇನ್ನೇನು ಹಾರಿಹೋಗುವುದರಲ್ಲಿತ್ತು.”[79]
[79] ಸಹೀಹ್ ಬುಖಾರಿ. ಹ.ಸಂಖ್ಯೆ: 4854.
ಮಾನವನ ಮನಸ್ಸಿಗೆ ತಲುಪುವ ಅನೇಕ ಅದ್ಭುತ ರಹಸ್ಯಗಳು ಕುರ್‌ಆನ್‌ನಲ್ಲಿವೆ.
ಅಬೂಬಕರ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಕುರ್‌ಆನ್ ಪಠಿಸುವಾಗ ಆ ಪಠಣಕ್ಕೆ ಸಂಪೂರ್ಣ ವಶೀಕೃತರಾಗಿ ಮತ್ತು ಅದರಿಂದ ಪ್ರಭಾವಿತರಾಗಿ, ಕುರೈಷ್ ಪುರುಷರು ಕೂಡ ಭಯಪಡುವಷ್ಟರ ಮಟ್ಟಿಗೆ ಬಹುದೇವತ್ವವಾದಿಗಳ ಮಹಿಳೆಯರು ಅವರ ಮನೆಯ ಸುತ್ತಲೂ ದಟ್ಟವಾಗಿ ನೆರೆಯುತ್ತಿದ್ದುದರ ಬಗ್ಗೆ ಆಲೋಚಿಸಿ ನೋಡಿ.[80] [80] ಸಹೀಹ್ ಬುಖಾರಿ. ಹ.ಸಂಖ್ಯೆ: 3905. ಈ ಕಾರಣದಿಂದಲೇ, (ಮಕ್ಕಾಗೆ ಆಗಮಿಸುತ್ತಿದ್ದ) ಅರಬ್ ನಿಯೋಗಗಳು ಕುರ್‌ಆನ್‌ಗೆ ಕಿವಿಗೊಡದಿರಲು ಮತ್ತು ತಮ್ಮ ಜನರು ಕೂಡ ಅದಕ್ಕೆ ಕಿವಿಗೊಡದಂತೆ ಮಾಡಲು ಸರ್ವಾನುಮತದ ತೀರ್ಮಾನ ಕೈಗೊಂಡರು. ಅವರು ಸತ್ಯನಿಷೇಧದಲ್ಲೇ ಉಳಿಯಲು ಇದು ಅವರಿಗಿದ್ದ ಒಂದೇ ಒಂದು ಮಾರ್ಗವಾಗಿತ್ತು.
ಕುರ್‌ಆನ್‌ನ ಅದ್ಭುತಗಳಲ್ಲಿ—ಅದರ ಅದ್ಭುತಗಳಿಗೆ ಕೊನೆಯೆಂಬುದೇ ಇಲ್ಲ—ಒಂದು ಏನೆಂದರೆ, ಕುರ್‌ಆನ್ ಶ್ಲೋಕಗಳು ಬೇರೆ ಬೇರೆ ಸಮಯಗಳಲ್ಲಿ ಅವತೀರ್ಣವಾದುದರ ಬಗ್ಗೆ, ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವುಗಳನ್ನು ಕೆಲವು ನಿರ್ದಿಷ್ಟ ಅಧ್ಯಾಯಗಳಲ್ಲಿ ಸೇರಿಸಲು ಸೂಚಿಸಿದ್ದರ ಬಗ್ಗೆ, ನಂತರ ಕೊನೆಯಲ್ಲಿ ಎಲ್ಲಾ ಅಧ್ಯಾಯಗಳೂ ಪ್ರತ್ಯೇಕ ಕಟ್ಟಡಗಳಂತೆ ಗೋಚರವಾದುದರ ಬಗ್ಗೆ ವಿವರಿಸುತ್ತಾ ಡಾ. ಅಬ್ದುಲ್ಲಾ ದಿರಾಜ್ (ಅಲ್ಲಾಹು ಅವರಿಗೆ ಕರುಣೆ ತೋರಲಿ) ಹೇಳಿದ ಮಾತುಗಳು. ಅವರು ಹೇಳುತ್ತಾರೆ: “ಕುರ್‌ಆನ್ ಅವತೀರ್ಣವಾಗುವ ಸಮಯ ಕುರ್‌ಆನಿನ ಕೆಲವು ವಿಷಯಗಳು ಇತರ ವಿಷಯಗಳಿಗಿಂತ ಹೆಚ್ಚಾಗುತ್ತಿದ್ದವು. ಇವುಗಳಿಗೆ ನಂತರ ಅವತೀರ್ಣವಾಗುವ ಶ್ಲೋಕಗಳು ಸೇರಿದಾಗ ಇವು ಕ್ರಮೇಣ ಪ್ರತ್ಯೇಕ ಘಟಕಗಳಾಗುತ್ತಿದ್ದವು. ಪವಿತ್ರಾತ್ಮನಿಂದ ದೇವವಾಣಿಯನ್ನು ಸ್ವೀಕರಿಸುವ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞೆಯಂತೆ ಕೆಲವು ಶ್ಲೋಕಗಳು ಆ ಘಟಕಗಳಲ್ಲಿ ಮತ್ತು ಕೆಲವು ಶ್ಲೋಕಗಳು ಈ ಘಟಕಗಳಲ್ಲಿ ಸೇರ್ಪಡೆಯಾಗುತ್ತಿದ್ದವು.
ನಾವು ಆ ಅಸಂಖ್ಯ ದಿನಾಂಕಗಳನ್ನು—ಕುರ್‌ಆನ್ ಶ್ಲೋಕಗಳು ಅವತೀರ್ಣವಾದ ದಿನಾಂಕಗಳನ್ನು—ಗಣನೆಗೆ ತೆಗೆದುಕೊಂಡರೆ, ಮತ್ತು ಈ ದೇವವಾಣಿಯು ಸಾಮಾನ್ಯವಾಗಿ ಕೆಲವು ಸ್ಥಳಗಳು ಮತ್ತು ಸಮಯಗಳೊಂದಿಗೆ ಕೂಡಿಕೊಂಡಿರುವುದನ್ನು ಗಮನಿಸಿದರೆ, ಅದು ಪ್ರತಿಯೊಂದು ಅಧ್ಯಾಯವನ್ನು ಪ್ರತ್ಯೇಕ ಘಟಕಗಳ ರೂಪದಲ್ಲಿ ವ್ಯವಸ್ಥೆಗೊಳಿಸುವ ಕೆಲಸ ನಡೆದ ಸಮಯ ಯಾವುದೆಂಬ ಪ್ರಶ್ನೆಯನ್ನು ನಾವು ಕೇಳುವಂತೆ ಮಾಡುತ್ತದೆ. ಕುರ್‌ಆನ್ ಬಹುಶಃ ಸಣ್ಣ ಸಣ್ಣ ತುಣುಕುಗಳಾಗಿ ಹರಡಿಕೊಂಡಿರುವ, ಮತ್ತು ಆ ತುಣುಕುಗಳನ್ನು ಇನ್ನೊಂದು ಸ್ಥಳದಲ್ಲಿ ಅದೇ ಆಕಾರದಲ್ಲಿ ಮರುನಿರ್ಮಾಣ ಮಾಡಬೇಕಾದ ಒಂದು ಹಳೆಯ ಕಟ್ಟಡದಂತಿದೆ ಎಂದು ಹೇಳಬೇಕಾಗುತ್ತದೆ. ಇಲ್ಲದಿದ್ದರೆ, ಇಷ್ಟೊಂದು ಅಧ್ಯಾಯಗಳನ್ನು ಈ ತಕ್ಷಣದ ಮತ್ತು ಅದೇ ಸಮಯದಲ್ಲಿ ಕ್ರಮಬದ್ಧವಾಗಿ ವ್ಯವಸ್ಥೆಗೊಳಿಸಲಾದ ಈ ಅದ್ಭುತವನ್ನು ನಾವು ಹೇಗೆ ವಿವರಿಸಬಹುದು? ಆದರೆ, ಒಬ್ಬ ವ್ಯಕ್ತಿ ಭವಿಷ್ಯದಲ್ಲಿ ನಡೆಯುವ ಘಟನೆಗಳಿಗೆ, ಅವುಗಳ ಧಾರ್ಮಿಕ ಅವಶ್ಯಕತೆಗಳಿಗೆ, ಮತ್ತು ಅವುಗಳಿಗಿರುವ ಅಪೇಕ್ಷಿತ ಪರಿಹಾರಗಳಿಗೆ—ಈ ಪರಿಹಾರಗಳನ್ನು ಪ್ರಸ್ತುತಪಡಿಸಬೇಕಾದ ಭಾಷಿಕ ರೂಪ ಮತ್ತು ಅವು ಒಂದು ಅಧ್ಯಾಯವನ್ನು ಬಿಟ್ಟು ಇನ್ನೊಂದು ಅಧ್ಯಾಯಕ್ಕೆ ಮಾತ್ರ ಹೊಂದಾಣಿಕೆಯಾಗುವ ಶೈಲಿಯನ್ನು ಗಮನದಲ್ಲಿಟ್ಟು—ಯೋಜನೆಯನ್ನು ರೂಪಿಸುವಾಗ ಆತನಿಗೆ ಯಾವ ರೀತಿಯ ಐತಿಹಾಸಿಕ ಖಾತ್ರಿಯಿರಬಹುದು?
ಈ ಯೋಜನೆಯ ಪೂರ್ತೀಕರಣ ಮತ್ತು ನಿರೀಕ್ಷಿತ ರೂಪದಲ್ಲಿ ಅದರ ಕಾರ್ಯಸಾಧನೆ ನಡೆಯಬೇಕಾದರೆ, ಈ ಅಪೇಕ್ಷಿತ ವ್ಯವಸ್ಥೆಯನ್ನು ನಿರ್ವಹಿಸುವ ಶಕ್ತಿಯಿರುವ ಒಬ್ಬ ಶ್ರೇಷ್ಠ ಸೃಷ್ಟಿಕರ್ತನ ಮಧ್ಯಪ್ರವೇಶದ ಅವಶ್ಯಕತೆಯಿರಲಾರದೇ?”[81]
[81] ಕಿತಾಬ್ ಮದ್ಖಲ್ ಇಲಲ್ ಕುರ್‌ಆನಿಲ್ ಕರೀಮ್, ಡಾ. ಅಬ್ದುಲ್ಲಾ ದಿರಾಜ್.
ಕುರ್‌ಆನ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿತ್ವವು ಸತ್ಯವೆಂಬುಕ್ಕಿರುವ ಪ್ರತ್ಯೇಕ ಪವಾಡವಾಗಿದೆ.
ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಕೈಯಲ್ಲಿ ಅಸಂಖ್ಯ ಪವಾಡಗಳು ಜರುಗಿದ್ದು, ಅವುಗಳ ಸಂಖ್ಯೆ ಒಂದು ಸಾವಿರಕ್ಕಿಂತಲೂ ಹೆಚ್ಚಿವೆ. ಅವು ಜರುಗಿದ ಕಾಲವು ಬಹಳ ಹತ್ತಿರದಲ್ಲೇ ಇದೆ. ಅತ್ಯಂತ ಸತ್ಯವಂತರು ಹಾಗೂ ಸಜ್ಜನರಾದ ಜನರು ಅವುಗಳನ್ನು ನಮ್ಮ ಬಳಿಗೆ ಪ್ರಸರಿಸಿದ್ದಾರೆ.
ಈ ಪವಾಡಗಳನ್ನು ನಮ್ಮ ಬಳಿಗೆ ಪ್ರಸರಿಸಿದ ಈ ವರದಿಗಾರರು ಅತೀ ಸಣ್ಣ ವಿಷಯಗಳಲ್ಲೂ ಸುಳ್ಳು ಹೇಳುತ್ತಿರಲಿಲ್ಲ. ಹಾಗಿರುವಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದಂತೆ, ಅವರ ಹೆಸರಲ್ಲಿ ಉದ್ದೇಶಪೂರ್ವಕ ಸುಳ್ಳು ಹೇಳಿದವರು ನರಕಾಗ್ನಿಯಲ್ಲಿ ತನ್ನ ಆಸನವನ್ನು ಸಿದ್ಧಪಡಿಸುವನು ಎಂದು ತಿಳಿದಿದ್ದೂ ಅವರ ಹೆಸರಲ್ಲಿ ಸುಳ್ಳು ಹೇಳುವರೇ?
ಅವರ ಕೆಲವು ಪವಾಡಗಳನ್ನು ಅವರ ಸುತ್ತಲೂ ನೆರೆದಿದ್ದ ಸಾವಿರಾರು ಸಂಗಡಿಗರು ಕಂಡಿದ್ದರು. ಅವುಗಳಲ್ಲಿ ಕೆಲವನ್ನು ಹಲವಾರು ಮಂದಿ ವರದಿ ಮಾಡಿದ್ದರು. ಹಾಗಿರುವಾಗ, ಇವೆಲ್ಲವುಗಳ ಬಗ್ಗೆ ಸುಳ್ಳು ಹೇಳಲು ಅವರೆಲ್ಲರೂ ಸರ್ವಾನುಮತದಿಂದ ನಿರ್ಧರಿಸುವುದು ಹೇಗೆ?
ಉದಾಹರಣೆಗೆ, ಒಂದು ದೊಡ್ಡ ಸಂಖ್ಯೆಯ ಜನರು ಸಾಕ್ಷಿಯಾದ ಒಂದು ಪವಾಡವೇನೆಂದರೆ: ಮರದ ಕಾಂಡವು ಅವರಿಗಾಗಿ ಹಾತೊರೆದ ಘಟನೆ. ಇದು ಬಹಳ ಪ್ರಸಿದ್ಧವಾದ ಮತ್ತು ಸಾಮೂಹಿಕವಾಗಿ ಪ್ರಸರಣವಾದ ಹದೀಸ್. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಮರದ ಕಾಂಡದ ಮೇಲೆ ನಿಂತು ಪ್ರವಚನ ನೀಡುತ್ತಿದ್ದರು. ಆದರೆ, ಅವರಿಗೆ ಪ್ರವಚನ ಪೀಠವನ್ನು ಸಿದ್ಧಪಡಿಸಲಾದ ನಂತರ, ಅವರು ಅದರ ಮೇಲೇರಿ ಪ್ರವಚನ ನೀಡಲು ಆರಂಭಿಸಿದರು. ಆಗ ಮರದ ಕಾಂಡವು ಚಿಕ್ಕ ಮಗುವಿನಂತೆ ಅವರಿಗಾಗಿ ಹಾತೊರೆದು ಅಳುತ್ತಿತ್ತು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಅಪ್ಪಿ ಹಿಡಿಯುವ ತನಕ ಅದು ಅಳುತ್ತಲೇ ಇದ್ದು, ನಂತರ ಅಳುವನ್ನು ನಿಲ್ಲಿಸಿತು.
ಈ ಹದೀಸನ್ನು ಸಹಾಬಾಗಳಲ್ಲಿ (ಪ್ರವಾದಿಯ ಸಂಗಡಿಗರಲ್ಲಿ) ಸೇರಿದ: ಅನಸ್ ಇಬ್ನ್ ಮಾಲಿಕ್, ಜಾಬಿರ್ ಬಿನ್ ಅಬ್ದುಲ್ಲಾ, ಅಬ್ದುಲ್ಲಾ ಬಿನ್ ಅಬ್ಬಾಸ್, ಅಬ್ದುಲ್ಲಾ ಬಿನ್ ಉಮರ್, ಉಬೈ ಬಿನ್ ಕಅಬ್, ಅಬೂ ಸಈದ್, ಸಹ್ಲ್ ಬಿನ್ ಸಅದ್, ಆಯಿಶ ಬಿಂತ್ ಅಬೂಬಕರ್ ಮತ್ತು ಉಮ್ಮು ಸಲಮಾ ವರದಿ ಮಾಡಿದ್ದಾರೆ.
ಇಂತಹ ಸುದ್ದಿಯನ್ನು ವರದಿ ಮಾಡುವುದರಲ್ಲಿ ಇಷ್ಟು ಸಂಖ್ಯೆಯ ಸಂಗಡಿಗರು ಸರ್ವಾನುಮತದಿಂದ ಸುಳ್ಳು ಹೇಳುವರೇ?
ಬದಲಿಗೆ, ಅವರ ಕೆಲವು ಪವಾಡಗಳನ್ನು ಸಾವಿರಾರು ಸಂಗಡಿಗರು ಕಣ್ಣಾರೆ ನೋಡಿದ್ದರು. ಉದಾಹರಣೆಗೆ, ಅವರ ಪವಿತ್ರ ಬೆರಳುಗಳ ನಡುವಿನಿಂದ ನೀರು ಹರಿದು ಬಂದು ಅದರಿಂದ ಒಂದು ಸಾವಿರದ ಐದು ನೂರು ಸಂಗಡಿಗರು ಅಂಗಸ್ನಾನ ಮಾಡಿದ ಮತ್ತು ದಾಹವನ್ನು ತಣಿಸಿದ ಘಟನೆ. ಇದು ಸಾಮೂಹಿಕವಾಗಿ ಪ್ರಸರಣವಾದ ಹದೀಸ್ ಆಗಿದ್ದು ಬುಖಾರಿ ಮತ್ತು ಮುಸ್ಲಿಂ ಇದನ್ನು ವರದಿ ಮಾಡಿದ್ದಾರೆ.
ಅದೇ ರೀತಿ, ಸ್ವಲ್ಪ ಆಹಾರದಿಂದ ಒಂದು ದೊಡ್ಡ ಸೈನ್ಯವು ಆಹಾರ ಸೇವಿಸಿದ ಘಟನೆ. ಇದು ಕೂಡ ಸಂಗಡಿಗರಿಂದ ಸಾಮೂಹಿಕವಾಗಿ ಪ್ರಸರಣವಾದ ಹದೀಸ್ ಆಗಿದ್ದು, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೈಯಲ್ಲಿ ಜರುಗಿದ ಆಹಾರ ಹೆಚ್ಚಾಗುವ ಈ ಪವಾಡವನ್ನು ಬುಖಾರಿ ಒಬ್ಬರೇ ತಮ್ಮ ಸಹೀಹ್ ಗ್ರಂಥದ ಐದು ಕಡೆಗಳಲ್ಲಿ ಉಲ್ಲೇಖಿಸಿದ್ದಾರೆ.[82]
[82] ಬುಖಾರಿ (1217), ಬುಖಾರಿ (2618), ಬುಖಾರಿ (3578), ಬುಖಾರಿ (4101), ಬುಖಾರಿ (6452). ಇವೆಲ್ಲವೂ ವಿಭಿನ್ನ ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ಜರುಗಿದ ಘಟನೆಗಳಾಗಿವೆ. ಇಲ್ಲಿ ಹೇಳಿದ್ದು ಬುಖಾರಿಯಲ್ಲಿ ಉಲ್ಲೇಖವಾದ ಘಟನೆ ಮಾತ್ರ!
ಸತ್ಯವಂತಿಕೆಯ ಪುರಾವೆಗಳು ಸ್ಪಷ್ಟವಾಗಿ ಸಾಬೀತಾಗಿರುವಾಗ ಮತ್ತು ಅವರ ಪ್ರವಾದಿತ್ವಕ್ಕೆ ಸಾಕ್ಷಿಯಾಗಿ ಹಲವಾರು ಪವಾಡಗಳಿರುವಾಗ, ಒಬ್ಬ ಬುದ್ಧಿಯಿರುವ ವ್ಯಕ್ತಿಗೆ ಇವೆಲ್ಲವನ್ನೂ ಹೇಗೆ ನಿಷೇಧಿಸಲು ಸಾಧ್ಯ?
ಇಲ್ಲಿ ಅವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪವಾಡಗಳ ಬಗ್ಗೆ ಕೆಲವು ಬೇರೆ ಉದಾಹರಣೆಗಳಿವೆ:
ಒಂದು ರಾತ್ರಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಾಳಿ ರಭಸವಾಗಿ ಬೀಸುವುದೆಂದು ಹೇಳಿ, ಯಾರೂ ನಿಂತುಕೊಳ್ಳಬಾರದೆಂದು ಹೇಳಿದರು. ಆದರೆ, ಒಬ್ಬ ವ್ಯಕ್ತಿ ನಿಂತುಕೊಂಡನು. ಆಗ ಗಾಳಿ ಅವನನ್ನು ಒಯ್ದು ಬೇರೊಂದು ಸ್ಥಳದಲ್ಲಿ ಎಸೆಯಿತು.[83]
[83] ಸಹೀಹ್ ಮುಸ್ಲಿಂ. ಹ.ಸಂಖ್ಯೆ: 3319.
ನೇಗಸ್ ದೊರೆ ನಿಧನರಾದ ದಿನದಂದೇ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ನಿಧನ ವಾರ್ತೆಯನ್ನು ತಿಳಿಸಿ, ಅವರಿಗೆ ನಾಲ್ಕು ತಕ್ಬೀರ್‌ಗಳನ್ನು ಹೇಳಿದರು.[84]
[84] ಸಹೀಹ್ ಬುಖಾರಿ. ಹ.ಸಂಖ್ಯೆ: 1333.
ಉಮರ್, ಉಸ್ಮಾನ್, ಅಲಿ, ತಲ್ಹ, ಝುಬೈರ್ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಮುಂತಾದವರು ಹುತಾತ್ಮರಾಗುವರೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು. ಇವರಲ್ಲಿ ಯಾರೂ ಇತರರು ನಿಧನರಾಗುವಂತೆ ತಮ್ಮ ಹಾಸಿಗೆಗಳಲ್ಲಿ ನಿಧನರಾಗಲಿಲ್ಲ. ಒಂದು ದಿನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉಮರ್, ಉಸ್ಮಾನ್, ಅಲಿ, ತಲ್ಹ ಮತ್ತು ಝುಬೈರ್‌ರೊಂದಿಗೆ ಒಂದು ಪರ್ವತವನ್ನು ಏರಿದರು. ಆಗ ಬಂಡೆಯು ಅಲುಗಾಡತೊಡಗಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂಡೆಗೆ ಹೇಳಿದರು: “ಶಾಂತವಾಗು, ನಿನ್ನ ಮೇಲಿರುವುದು ಪ್ರವಾದಿ, ಅಥವಾ ಸತ್ಯವಂತ, ಅಥವಾ ಹುತಾತ್ಮರಲ್ಲದೆ ಇನ್ನಾರೂ ಅಲ್ಲ.”[85] [85] ಸಹೀಹ್ ಮುಸ್ಲಿಂ. ಹ.ಸಂಖ್ಯೆ: 2417. ಅವರು ತಮ್ಮನ್ನು ಪ್ರವಾದಿಯೆಂದು, ಅಬೂಬಕರ್ ರನ್ನು ಸತ್ಯವಂತರೆಂದು ಮತ್ತು ಉಳಿದವರು ಹುತಾತ್ಮರಾಗುವರೆಂದು ದೃಢೀಕರಿಸಿದರು. ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದಂತೆಯೇ ನಡೆಯಿತು.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಲ್ಲಿ ಪ್ರಾರ್ಥಿಸಿದ ಮತ್ತು ಜನರು ಸಾಕ್ಷಿಯಾಗಿರುವಂತೆಯೇ ಅವರಿಗೆ ತಕ್ಷಣ ಉತ್ತರ ಸಿಕ್ಕಿದ 150 ಹದೀಸ್‌ಗಳಿವೆ.[86]
[86] ಈ ಹದೀಸ್‌ಗಳನ್ನು ಸಈದ್ ಬಿನ್ ಅಬ್ದುಲ್ ಕಾದಿರ್ ಬಾಶನ್‌ಫರ್ ತಮ್ಮ ದಲಾಇಲು ನ್ನುಬುವ್ವ ಎಂಬ ಪುಸ್ತಕದಲ್ಲಿ ಸಂಗ್ರಹಿಸಿದ್ದಾರೆ. ಈ ಪುಸ್ತಕವನ್ನು ದಾರ್ ಇಬ್ನ್ ಹಝ್ಮ್ ಪ್ರಕಟಿಸಿದೆ. ಮಕ್ಕಾ ನಿವಾಸಿಗಳು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಒಂದು ಪವಾಡವನ್ನು ತೋರಿಸಿಕೊಡಬೇಕೆಂದು ಕೇಳಿಕೊಂಡಾಗ, ಅವರು ಚಂದ್ರನನ್ನು ಇಬ್ಭಾಗ ಮಾಡಿ ತೋರಿಸಿದರು. ಅವೆರಡು ಎಷ್ಟು ದೂರವಾಗಿದ್ದವು ಎಂದರೆ ಜನರು ಅವುಗಳ ನಡುವೆ ಹಿರಾ ಪರ್ವತವನ್ನು ಕಂಡರು. ಈ ಹದೀಸ್ ಸಾಮೂಹಿಕವಾಗಿ ಪ್ರಸರಣವಾದ ಹದೀಸ್ ಆಗಿದೆ. ಅಂದರೆ, ಇದು ಅಧಿಕೃತತೆಯಲ್ಲಿ ಉಚ್ಛ ಸ್ಥಾನದಲ್ಲಿದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚಂದ್ರ ಇಬ್ಭಾಗವಾದ ಪವಾಡವಿರುವ ಸೂರ ಕಮರ್ ಅನ್ನು ಜುಮಾ, ಈದ್ ಮುಂತಾದ ದೊಡ್ಡ ದೊಡ್ಡ ಜನಕೂಟಗಳಲ್ಲಿ ಪಠಿಸುವ ಮೂಲಕ, ಅದರಲ್ಲಿರುವ ತಮ್ಮ ಪವಾಡಗಳಿಗೆ ಜನರು ಕಿವಿಗೊಡುವಂತೆ ಮಾಡುತ್ತಿದ್ದರು. ಅವರು ತಮ್ಮ ಪ್ರವಾದಿತ್ವದ ಸತ್ಯತೆಗೆ ಇವುಗಳನ್ನು ಪುರಾವೆಯಾಗಿ ತೋರಿಸುತ್ತಿದ್ದರು.
ಆದಮ್ ಜೀವಂತ ಸೃಷ್ಟಿಗಳಲ್ಲಿ ಕೊನೆಯ ಸೃಷ್ಟಿಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು. “ಆದಮ್‌ರನ್ನು ಶುಕ್ರವಾರ ಸಂಜೆಯ ಬಳಿಕ ಕೊನೆಯ ಸೃಷ್ಟಿಯಾಗಿ ಸೃಷ್ಟಿಸಲಾಯಿತು.”[87] [87] ಸಹೀಹುಲ್ ಜಾಮಿಅ್. ಹ.ಸಂಖ್ಯೆ: 8188. ಈ ಸತ್ಯವು ಈಗ ವೈಜ್ಞಾನಿಕವಾಗಿ ರುಜುವಾತಾಗಿದೆ. ಮನುಷ್ಯರು ಭೂಮಿಯಲ್ಲಿ ಗೋಚರವಾದ ಕೊನೆಯ ಸೃಷ್ಟಿಗಳೆಂದು ವಿಜ್ಞಾನವು ದೃಢೀಕರಿಸಿದೆ. ಸಸ್ಯಗಳು ಮತ್ತು ಪ್ರಾಣಿಗಳ ಸೃಷ್ಟಿಯ ನಂತರ ಆದಮ್ (ಅವರ ಮೇಲೆ ಶಾಂತಿಯಿರಲಿ) ಭೂಮಿಯಲ್ಲಿ ಗೋಚರವಾದ ಕೊನೆಯ ಸೃಷ್ಟಿಯೆಂದು ಅವರಿಗೆ ಹೇಗೆ ತಿಳಿಯಿತು?
ಸರ್ವಶಕ್ತನಾದ ಅಲ್ಲಾಹನ ವಚನವನ್ನು ನೋಡಿ:
“ನಾವು ರಾತ್ರಿ ಮತ್ತು ಹಗಲನ್ನು ಎರಡು ದೃಷ್ಟಾಂತಗಳನ್ನಾಗಿ ಮಾಡಿದೆವು. ನಂತರ ನಾವು ರಾತ್ರಿಯ ದೃಷ್ಟಾಂತವನ್ನು ಅಳಿಸಿ, ಹಗಲಿನ ದೃಷ್ಟಾಂತವನ್ನು ಬೆಳಗುವಂತದ್ದಾಗಿ ಮಾಡಿದೆವು.”
[ಸೂರ ಇಸ್ರಾಅ್: 12]
ನಂತರ ನಾವು ರಾತ್ರಿಯ ದೃಷ್ಟಾಂತವನ್ನು ಅಳಿಸಿದೆವು: ಅಂದರೆ, ಚಂದ್ರ ರಾತ್ರಿಯ ದೃಷ್ಟಾಂತವಾಗಿದೆ. ಅದು ಹೊಳೆಯುತ್ತಿತ್ತು. ನಂತರ ನಾವು ಅದರ ಹೊಳಪನ್ನು ಅಳಿಸಿದೆವು.
ಈ ಆದರಣೀಯ ವಚನವನ್ನು ಪ್ರವಾದಿಯ ಸಂಗಡಿಗರು ಸ್ಪಷ್ಟವಾಗಿ ವಿವರಿಸಿದ್ದಾರೆ. ಇಮಾಂ ಇಬ್ನ್ ಕಸೀರ್ ತಮ್ಮ ಕುರ್‌ಆನ್ ವ್ಯಾಖ್ಯಾನದಲ್ಲಿ ಅಬ್ದುಲ್ಲಾ ಬಿನ್ ಅಬ್ಬಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೀಗೆ ಹೇಳಿದರೆಂದು ವರದಿ ಮಾಡಿದ್ದಾರೆ: “ಸೂರ್ಯ ಹೊಳೆಯುವಂತೆ ಚಂದ್ರವೂ ಹೊಳೆಯುತ್ತಿತ್ತು. ಅದು ರಾತ್ರಿಯ ದೃಷ್ಟಾಂತವಾಗಿದೆ. ನಂತರ ಅದನ್ನು ಅಳಿಸಲಾಯಿತು.” ಅಚ್ಚರಿಯೇನೆಂದರೆ, ಇದು ಇಂದು ವಿಜ್ಞಾನವು ತಲುಪಿದ ನಿಗಮನವಾಗಿದೆ. ನಾಸಾ ತನ್ನ ಅಧಿಕೃತ ಜಾಲತಾಣದಲ್ಲಿ ಮತ್ತು ಅಧಿಕೃತ ವಾಹಿನಿಯಲ್ಲಿ ಇದನ್ನು ಪ್ರಕಟಿಸಿದೆ: “ಚಂದ್ರ ಅದರ ಆಯುಷ್ಯದ ಪ್ರಥಮ ಯುಗದಲ್ಲಿ ಪ್ರಜ್ವಲವಾಗಿ ಹೊಳೆಯುತ್ತಿತ್ತು.”[88] [88] http://www.nasa.gov/mission_pages/LRO/news/vid-tour.html https://www.youtube.com/watch?v=UIKmSQqp8wY
ಒಬ್ಬ ವ್ಯಕ್ತಿಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಖಾಂತರ ಅನೇಕ ಪವಾಡಗಳು ಸಂಭವಿಸಿವೆಯೆಂದು ಮತ್ತು ಭವಿಷ್ಯವಾಣಿಗಳನ್ನು ಹಾಗೂ ಭೂಮ್ಯಾಕಾಶಗಳ ನಿಗೂಢ ಸಂಗತಿಗಳನ್ನು ಅವರು ತಿಳಿಸಿದ್ದಾರೆಂದು ಸಾಮೂಹಿಕ ಪ್ರಸರಣದ ಮೂಲಕ ಸಾಬೀತಾಗಿದೆ. ಯಾರಿಗೆ ಕುರ್‌ಆನ್ ಅವತೀರ್ಣವಾಯಿತೋ, ಯಾರು ಹಿಂದಿನ ಪ್ರವಾದಿಗಳು ತಂದ ಅದೇ ಸಂದೇಶದೊಂದಿಗೆ ಬಂದರೋ ಮತ್ತು ಅಲ್ಲಾಹನ ಬೆಂಬಲದೊಂದಿಗೆ ಇಸ್ಲಾಮಿ ಧರ್ಮಸಂಹಿತೆ ಪೂರ್ಣಗೊಳ್ಳುವ ತನಕ ನಿಧನರಾಗಲಿಲ್ಲವೋ ಅವರೇ ಆ ವ್ಯಕ್ತಿ. ಅವರು ಪ್ರವಾದಿಯಾಗಿದ್ದರು ಎಂದು ಖಚಿತವಾಗಿ ಹೇಳುವುದೇ ವೈಚಾರಿಕತೆಯಾಗಿದೆ! ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪವಾಡಗಳು ಒಂದು ಸಾವಿರಕ್ಕಿಂತಲೂ ಹೆಚ್ಚಿವೆ.
ಅವರ ಪವಾಡಗಳನ್ನು ಪ್ರಸರಣ ಮಾಡಿದ್ದು ಅವರ ನಂತರ ಮನುಷ್ಯರಲ್ಲೇ ಅತಿದೊಡ್ಡ ಸತ್ಯವಂತರು ಮತ್ತು ಸಜ್ಜನರಾಗಿದ್ದ ಅವರ ಸಂಗಡಿಗರು.
ಅಚ್ಚರಿಯೇನೆಂದರೆ, ಅವರ ಹಿರಿಯ ಸಂಗಡಿಗರು ಈ ಪವಾಡಗಳನ್ನು ಕಾಣುವುದಕ್ಕೆ ಮುಂಚೆಯೇ ಇಸ್ಲಾಂ ಧರ್ಮ ಸ್ವೀಕರಿಸಿದ್ದರು. ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಂತರು ಮತ್ತು ಒಮ್ಮೆಯೂ ಸುಳ್ಳು ಹೇಳದವರು ಎಂಬುದೇ ಅವರು ಇಸ್ಲಾಂ ಧರ್ಮ ಸ್ವೀಕರಿಸಲು ಕಾರಣವಾಗಿತ್ತು.
ಹಿರಿಯ ಸಂಗಡಿಗರ ಈ ನಿಲುವು ಜಾಣ ಬುದ್ಧಿವಂತನ ನಿಲುವಾಗಿದೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿತ್ವವು ಸತ್ಯವೆಂದು ಸಾಬೀತುಪಡಿಸಲು ಅವರ ಸತ್ಯವಂತಿಕೆಯೇ ಒಂದು ಪ್ರತ್ಯೇಕ ಪರ್ಯಾಪ್ತ ಪುರಾವೆಯಾಗಿದೆ. ಇದೇಕೆಂದರೆ, ಪ್ರವಾದಿತ್ವವನ್ನು ವಾದಿಸುವ ವ್ಯಕ್ತಿ ಜನರಲ್ಲೇ ಅತಿದೊಡ್ಡ ಸತ್ಯವಂತನಾಗಿರಬೇಕು. ಏಕೆಂದರೆ ಅವನು ಪ್ರವಾದಿಯಾಗಿದ್ದಾನೆ... ಪ್ರವಾದಿಯವರು ಜನರಲ್ಲೇ ಅತಿದೊಡ್ಡ ಸತ್ಯವಂತರಾಗಿದ್ದರು. ಅಥವಾ, ಅವನು ಜನರಲ್ಲೇ ಅತಿದೊಡ್ಡ ಸುಳ್ಳನಾಗಿರಬೇಕು. ಏಕೆಂದರೆ, ಅವನು ಅತ್ಯಂತ ಪ್ರಮುಖ ವಿಷಯದಲ್ಲೇ ಸುಳ್ಳು ಹೆಣೆಯುತ್ತಿದ್ದಾನೆ. ಜನರಲ್ಲೇ ಅತಿದೊಡ್ಡ ಅವಿವೇಕಿಯ ಹೊರತು ಇನ್ನಾರೂ ಅತಿದೊಡ್ಡ ಸತ್ಯವಂತ ಮತ್ತು ಅತಿದೊಡ್ಡ ಸುಳ್ಳ ಯಾರೆಂಬ ಬಗ್ಗೆ ಗೊಂದಲಪಡಲಾರರು.[89]
[89] ಸುಬೂತು ನ್ನುಬುವ್ವಾತ್ ಅಕ್ಲನ್ ವನಕ್ಲನ್, ಇಬ್ನ್ ತೈಮಿಯ್ಯ, ದಾರ್ ಇಬ್ನುಲ್ ಜೌಝಿ, ಪುಟ 573; ಇದೇ ರೀತಿಯ ಉಲ್ಲೇಖವು ಇದೇ ಪುಸ್ತಕದ 318ನೇ ಪುಟದಲ್ಲೂ ಕಾಣಬಹುದು.
ಒಬ್ಬ ಬುದ್ಧಿವಂತನಿಗೆ ಅತಿದೊಡ್ಡ ಸತ್ಯವಂತ ಮತ್ತು ಅತಿದೊಡ್ಡ ಸುಳ್ಳನನ್ನು ಬೇರ್ಪಡಿಸಿ ತಿಳಿಯಲು ಕಷ್ಟವೇ ಇಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿಯಾದ ಆರಂಭಕಾಲದಲ್ಲಿ ಬಹುದೇವತ್ವವಾದಿಗಳು ಅವರು ಒಮ್ಮೆಯೂ ಸುಳ್ಳು ಹೇಳಿಲ್ಲವೆಂಬುದನ್ನು ಒಪ್ಪಿಕೊಂಡಿದ್ದರು. “ನೀವು ಯಾವುದೇ ಸುಳ್ಳು ಹೇಳುವುದನ್ನು ನಾವು ಕೇಳಿಲ್ಲ.”[90] [90] ಸಹೀಹ್ ಬುಖಾರಿ. ಹ.ಸಂಖ್ಯೆ: 4971.
ಅಬೂ ಸುಫ್ಯಾನ್ ಇಸ್ಲಾಂ ಧರ್ಮ ಸ್ವೀಕರಿಸುವುದಕ್ಕೆ ಮುಂಚೆ ಹೆರ್ಕುಲಿಸ್ ದೊರೆ ಅವರೊಡನೆ, “ಪ್ರವಾದಿತ್ವ ವಾದಿಸುವುದಕ್ಕೆ ಮುಂಚೆ ಅವರು ಸುಳ್ಳು ಹೇಳುತ್ತಿದ್ದರೆಂದು ನೀವು ಅವರ ಮೇಲೆ ಅಪವಾದ ಹೊರಿಸುತ್ತಿದ್ದಿರಾ?” ಎಂದು ಕೇಳಿದಾಗ,
ಅಬೂ ಸುಫ್ಯಾನ್ ಉತ್ತರಿಸಿದರು: “ಇಲ್ಲ.”
ಆಗ ಹೆರ್ಕುಲಿಸ್ ಹೇಳಿದನು: “ಅವರು ಮನುಷ್ಯರ ವಿಷಯದಲ್ಲಿ ಸುಳ್ಳು ಹೇಳುವುದಿಲ್ಲವಾದರೆ, ಅವರು ಪರಮಾತ್ಮನ ವಿಷಯದಲ್ಲೂ ಸುಳ್ಳು ಹೇಳಲಾರರು.”
ನಂತರ ಸಂಭಾಷಣೆಯನ್ನು ಕೊನೆಗೊಳಿಸುತ್ತಾ ಹೆರ್ಕುಲಿಸ್ ತಮ್ಮ ಪ್ರಸಿದ್ಧ ಹೇಳಿಕೆಯನ್ನು ನೀಡಿದರು: “ನಾನು ಅವರ ಬಳಿಯಿದ್ದರೆ ಅವರ ಎರಡು ಪಾದಗಳನ್ನು ತೊಳೆಯುತ್ತಿದ್ದೆ.”[91]
[91] ಸಹೀಹ್ ಬುಖಾರಿ. ಹ.ಸಂಖ್ಯೆ: 7. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಪೂರ್ಣ ಜೀವನದಲ್ಲಿ ಅವರು ಒಂದು ಸುಳ್ಳು ಹೇಳಿದ್ದನ್ನು ತೋರಿಸಲು ಸತ್ಯನಿಷೇಧಿಗಳು ಅಶಕ್ತರಾದರು. ಆದ್ದರಿಂದ, ಪ್ರವಾದಿತ್ವಕ್ಕೆ ಮುಂಚಿನ ಅವರ ಜೀವನದ ಬಗ್ಗೆ ತಿಳುವಳಿಕೆಯಿದ್ದೂ ಅವರನ್ನು ನಿಷೇಧಿಸಿದ ಜನರಿಗೆ ಛೀಮಾರಿ ಹಾಕುತ್ತಾ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: “ಅಥವಾ, ಅವರು ಅವರ ಸಂದೇಶವಾಹಕರನ್ನು ತಿಳಿದಿಲ್ಲದ್ದರಿಂದ ಅವರು ಅವರನ್ನು ನಿರಾಕರಿಸುತ್ತಿರುವರೇ?”
[ಸೂರ ಮೂಮಿನೂನ್: 69] ಆದ್ದರಿಂದ ಪ್ರವಾದಿಯವರು ಪ್ರವಾದಿಯೆನ್ನುವುದಕ್ಕೆ ಅವರ ಜೀವನ ಚರಿತ್ರೆಯೇ ಪುರಾವೆಯಾಗಿದೆ. ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ.
ಅವರ ಸತ್ಯವಂತಿಕೆಯು ಅವರ ಪ್ರವಾದಿತ್ವಕ್ಕೆ ಅನಿರ್ದಿಷ್ಟವಾದ ಮತ್ತು ಪರಸ್ಪರ ಬೆಂಬಲಿಸುವ ಪುರಾವೆಗಳನ್ನು ಒದಗಿಸುತ್ತಿರುವಾಗ, ಒಬ್ಬ ಬುದ್ಧಿವಂತ ಹಿಂದೂಗೆ ಇವೆಲ್ಲವನ್ನೂ ಹೇಗೆ ನಿಷೇಧಿಸಲು ಸಾಧ್ಯ?
21. ಕೆಲವು ಹಿಂದೂಗಳು ಮಾಡುವಂತೆ ಪರಮಾತ್ಮನಲ್ಲಿ ನಂಬಿಕೆಯಿಟ್ಟು ಪ್ರವಾದಿಗಳನ್ನು ನಿಷೇಧಿಸಬಹುದೇ? ಉತ್ತರ: ಇಲ್ಲ. ಮನುಷ್ಯನು ಪರಮಾತ್ಮನಿಗೆ ಸಂಪೂರ್ಣ ಶರಣಾಗಬೇಕಾದರೆ ಅವನು ಪ್ರವಾದಿಗಳಲ್ಲಿ ನಂಬಿಕೆಯಿಡದೆ ಕೇವಲ ಪರಮಾತ್ಮನ ಅಸ್ತಿತ್ವದಲ್ಲಿ ಮಾತ್ರ ನಂಬಿಕೆಯಿಟ್ಟರೆ ಸಾಲದು. ಪರಮಾತ್ಮನನ್ನು ಸೃಷ್ಟಿಕರ್ತ, ಅನ್ನದಾತ ಮತ್ತು ಕಾರ್ಯನಿರ್ವಾಹಕ ಎಂದು ನಂಬಿಕೆಯಿಟ್ಟು ಅವನ ವಾಣಿಯನ್ನು ನಿಷೇಧಿಸುವುದರ ಮತ್ತು ಅವನ ಸಂದೇಶವಾಹಕರನ್ನು ನಿರಾಕರಿಸುವುದರ ಅರ್ಥವೇನು?
ಇದು ಅತಿದೊಡ್ಡ ಸತ್ಯನಿಷೇಧವಾಗಿದೆ.
ಅಷ್ಟೇ ಅಲ್ಲ, ಪರಮಾತ್ಮನ ವಾಣಿಯನ್ನು ತಿರಸ್ಕರಿಸುವುದಕ್ಕಿಂತಲೂ ದೊಡ್ಡ ಅಪರಾಧ ಬೇರೆಯಿಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನಿಶ್ಚಯವಾಗಿಯೂ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರುಗಳನ್ನು ನಿಷೇಧಿಸುವವರು, ಅಲ್ಲಾಹು ಮತ್ತು ಅವನ ಸಂದೇಶವಾಹಕರುಗಳ ಮಧ್ಯೆ ವ್ಯತ್ಯಾಸ ಮಾಡಲು ಬಯಸುವವರು, ನಾವು ಕೆಲವರನ್ನು ನಂಬುತ್ತೇವೆ ಮತ್ತು ನಾವು ಕೆಲವರನ್ನು ನಂಬುವುದಿಲ್ಲ ಎಂದು ಹೇಳುವವರು ಮತ್ತು ಅದರ ಮಧ್ಯೆ ಒಂದು ಮಾರ್ಗವನ್ನು ಸ್ವೀಕರಿಸಲು ಬಯಸುವವರು. (150) ಅವರೇ ನಿಜವಾದ ಸತ್ಯನಿಷೇಧಿಗಳು. ಮತ್ತು ನಾವು ಸತ್ಯನಿಷೇಧಿಗಳಿಗೆ ಅಪಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ. (151)” [ಸೂರ ನಿಸಾ]
ಅಲ್ಲಾಹನಲ್ಲಿ ನಂಬಿಕೆಯಿಟ್ಟು, ಪ್ರವಾದಿಗಳನ್ನು ನಿಷೇಧಿಸುವವನು ನಿಜವಾದ ಸತ್ಯನಿಷೇಧಿಯಾಗಿದ್ದಾನೆ.
ಆದ್ದರಿಂದ, ಪ್ರವಾದಿಗಳ ಪೈಕಿ ಯಾರಾದರೂ ಒಬ್ಬ ಪ್ರವಾದಿಯನ್ನು ನಿಷೇಧಿಸುವವನು ಅಲ್ಲಾಹನನ್ನು ನಿಷೇಧಿಸಿದವನಾಗಿದ್ದಾನೆ. ಏಕೆಂದರೆ, ಅವನು ಅಲ್ಲಾಹನ ವಾಣಿಯನ್ನು ಅಲ್ಲಗಳೆದಿದ್ದಾನೆ. ಈ ಕಾರಣದಿಂದಲೇ ಗ್ರಂಥದವರಲ್ಲಿ ಸೇರಿದ ಯಹೂದಿಗಳು ಮತ್ತು ಕ್ರಿಶ್ಚಿಯನ್ನರು ಸತ್ಯನಿಷೇಧಿಗಳಾಗಿದ್ದಾರೆ. ಏಕೆಂದರೆ, ಅವರು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಪ್ರವಾದಿತ್ವವನ್ನು ನಿಷೇಧಿಸಿದ್ದಾರೆ.
“ನಿಶ್ಚಯವಾಗಿಯೂ ಗ್ರಂಥದವರಲ್ಲಿ ಸೇರಿದ ಸತ್ಯನಿಷೇಧಿಗಳು ಮತ್ತು ಬಹುದೇವತ್ವವಾದಿಗಳು ನರಕವಾಸಿಗಳಾಗಿದ್ದಾರೆ. ಅವರು ಅದರಲ್ಲಿ ಶಾಶ್ವತವಾಗಿರುತ್ತಾರೆ. ಅವರೇ ಸೃಷ್ಟಿಗಳಲ್ಲಿ ಅತಿನಿಕೃಷ್ಟರು.”
[ಸೂರ ಬಯ್ಯಿನ: 6]
ಅವರು ನರಕವಾಸಿಗಳಾಗುತ್ತಾರೆಂಬ ಅಲ್ಲಾಹನ ಎಚ್ಚರಿಕೆಯು ಸತ್ಯವಾಗಿದೆ. “ಮತ್ತು ನನ್ನ ಎಚ್ಚರಿಕೆಯು ಸತ್ಯವಾಗಿದೆ.” [ಸೂರ ಕಾಫ್: 14]
ಪರಮಾತ್ಮನನ್ನು ಸೃಷ್ಟಿಕರ್ತ, ಅನ್ನದಾತ, ಜೀವ ನೀಡುವವ, ಮರಣ ನೀಡುವವ ಎಂದು ಮಾತ್ರ ದೃಢೀಕರಿಸಿದರೆ ಯಾರೂ ಮುಸಲ್ಮಾನರಾಗುವುದಿಲ್ಲ ಅಥವಾ ಮೋಕ್ಷ ಪಡೆಯುವುದಿಲ್ಲ. ಬದಲಿಗೆ, ಅವನ ಸಂದೇಶವಾಹಕರುಗಳಲ್ಲೂ ನಂಬಿಕೆಯಿಡಬೇಕಾಗಿದೆ. ಆದ್ದರಿಂದ, ಪರಮಾತ್ಮನ ಅಸ್ತಿತ್ವದಲ್ಲಿ ನಂಬಿಕೆಯಿಟ್ಟು, ಪ್ರವಾದಿಗಳನ್ನು ನಿಷೇಧಿಸಿದರೆ ಅದು ಸಾಲುವುದಿಲ್ಲ. ಅದು ಪುನರುತ್ಥಾನ ದಿನ ಪರಮಾತ್ಮನ ಮುಂದೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಪರಮಾತ್ಮನನ್ನು ಆರಾಧಿಸುವುದು ಮತ್ತು ಅವನ ಎಲ್ಲಾ ಸಂದೇಶವಾಹಕರುಗಳಲ್ಲಿ ನಂಬಿಕೆಯಿಡುವುದು ಅನಿವಾರ್ಯವಾಗಿದೆ. ಪರಮಾತ್ಮನಲ್ಲಿ ಮಾತ್ರ ನಂಬಿಕೆಯಿಡುವುದು ಸಾಕಾಗುತ್ತಿದ್ದರೆ, ಅವನು ಸಂದೇಶವಾಹಕರುಗಳನ್ನು ಕಳುಹಿಸುತ್ತಿರಲಿಲ್ಲ ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸುತ್ತಿರಲಿಲ್ಲ. ಏಕೆಂದರೆ, ಎಲ್ಲಾ ಮನುಷ್ಯರೂ ಸಹಜ ಮನೋಧರ್ಮದಿಂದ ಪರಮಾತ್ಮನಿದ್ದಾನೆಂದು ತಿಳಿದಿದ್ದಾರೆ.
ನಿನ್ನನ್ನು ಸೃಷ್ಟಿಸಿದ್ದು, ನಿನಗೆ ಮಾರ್ಗದರ್ಶನ ಮಾಡಿದ್ದು ಮತ್ತು ನಿನಗೆ ಆಹಾರವನ್ನು ನೀಡಿದ್ದು ಅಲ್ಲಾಹು ಆಗಿದ್ದಾನೆ. ನಿನ್ನ ಆರಾಧನೆಗೆ ಅವನು ಮಾತ್ರ ಅರ್ಹನು. ಅವನು ಅವನ ಸಂದೇಶವಾಹಕರು ಮತ್ತು ಪ್ರವಾದಿಗಳ ಮೂಲಕ ನಿರ್ದೇಶಿಸಿದ ನಿಯಮಗಳ ಪ್ರಕಾರ ನೀನು ಅವನನ್ನು ಆರಾಧಿಸಬೇಕಾಗಿದೆ.
ಆದ್ದರಿಂದ, ಎಲ್ಲಾ ಪ್ರವಾದಿಗಳಲ್ಲೂ ಮತ್ತು ಅವರಲ್ಲಿ ಕೊನೆಯವರಾದ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಲ್ಲೂ ನಂಬಿಕೆಯಿಡುವುದು ಅತ್ಯಾವಶ್ಯಕವಾಗಿದೆ.
22. ಪರಮಾತ್ಮನು ಕೆಡುಕನ್ನು ಸೃಷ್ಟಿಸಿದ್ದೇಕೆ? ಬೇರೆ ಅರ್ಥದಲ್ಲಿ ಹೇಳುವುದಾದರೆ: “ಕೆಡುಕಿನ ಸಮಸ್ಯೆಗೆ” ಮುಸ್ಲಿಮರ ಪ್ರತಿಕ್ರಿಯೆಯೇನು?
ಉತ್ತರ: ಕೆಡುಕಿನ ಪರೀಕ್ಷೆಯು ಹಿಂದೂ ಧರ್ಮದ ಅತಿದೊಡ್ಡ ತೊಡಕಾಗಿದೆ. ಕೆಡುಕಿನಿಂದ ಮುಕ್ತಿ ಪಡೆಯಲು ಮನುಷ್ಯನು ಪಾಳು ಭೂಮಿಯಲ್ಲಿ ವಾಸಿಸಬೇಕೆಂಬ ಸಿದ್ಧಾಂತದ ಮೇಲೆ ಹಿಂದೂ ತತ್ವಶಾಸ್ತ್ರವು ನಿಂತಿದೆ. ನಿರಂತರ ಮರುಹುಟ್ಟಿಗೆ ಕಾರಣ ಮನುಷ್ಯನು ತನ್ನ ಹಿಂದಿನ ಜನ್ಮದಲ್ಲಿ ಮಾಡಿದ ಕೆಡುಕು ಎಂದು ಹಿಂದೂ ಧರ್ಮವು ಪರಿಗಣಿಸುತ್ತದೆ.
ಇವೆಲ್ಲವೂ ತಪ್ಪು. ಸರಳವಾಗಿ ಹೇಳುವುದಾದರೆ, ನಾವು ಉತ್ತರದಾಯಿಗಳಾಗಿರುವುದೇ ಜಗತ್ತಿನಲ್ಲಿ ಕೆಡುಕು ಅಸ್ತಿತ್ವದಲ್ಲಿರಲು ಕಾರಣ.
ಏಕೆಂದರೆ, ನಾವು ಪರೀಕ್ಷೆಯ ಲೋಕದಲ್ಲಿದ್ದೇವೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನಾವು ನಿಮ್ಮನ್ನು ಒಳಿತು ಮತ್ತು ಕೆಡುಕುಗಳ ಮೂಲಕ ಒಂದು ಪರೀಕ್ಷೆಯಾಗಿ ಪರೀಕ್ಷಿಸುವೆವು.”
[ಸೂರ ಅಂಬಿಯಾ: 35]
ನೀನು ಉತ್ತರದಾಯಿಯಾಗಿರುವುದರಿಂದಲೇ ಒಳಿತು ಮತ್ತು ಕೆಡುಕುಗಳಿವೆ. ಉತ್ತರದಾಯಿತ್ವವು ನಿನ್ನ ಅಸ್ತಿತ್ವದ ಉದ್ದೇಶವಾಗಿದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನಿಮ್ಮ ಪೈಕಿ ಯಾರು ಕರ್ಮವೆಸಗುವುದರಲ್ಲಿ ಅತ್ಯುತ್ತಮನು ಎಂದು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿದನು.”
[ಸೂರ ಮುಲ್ಕ್: 2]
ಎಲ್ಲಿಯವರೆಗೆ ನಾವು ಉತ್ತರದಾಯಿಗಳಾಗಿರುತ್ತೇವೆಯೋ, ಅಲ್ಲಿಯವರೆಗೆ ಸ್ವಾಭಾವಿಕವಾಗಿ ಪರೀಕ್ಷೆ ಮತ್ತು ವಿಪತ್ತುಗಳಿರುತ್ತವೆ; ನಾವು ಕೆಡುಕಿನಿಂದ ಆವೃತ್ತವಾಗಿರುವುದು ಸ್ವಾಭಾವಿಕವಾಗಿದೆ.
ಕೆಡುಕು, ಕೆಲವು ನೋವುಗಳು, ಪಾಪ ಮಾಡುವ ಸಾಮರ್ಥ್ಯ ಇವೆಲ್ಲವೂ ನೈಸರ್ಗಿಕ ಅವಶ್ಯಕತೆಗಳಾಗಿದ್ದು, ಇಚ್ಛಾ ಸ್ವಾತಂತ್ರ್ಯದ ಫಲಿತಾಂಶ ಮತ್ತು ದೈವಿಕ ಉತ್ತರದಾಯಿತ್ವವಾಗಿದೆ.
ಕೆಡುಕು, ಪರೀಕ್ಷೆ, ವಿಪತ್ತುಗಳು ಮತ್ತು ಮೋಹಗಳು ಇವೆಲ್ಲವೂ ಸಜ್ಜನನಲ್ಲಿರುವ ಉತ್ಕೃಷ್ಟತೆಯನ್ನು ಮತ್ತು ದುರ್ಜನನಲ್ಲಿರುವ ನಿಕೃಷ್ಟತೆಯನ್ನು ಹೊರಹೊಮ್ಮಿಸುತ್ತದೆ.
ಕೆಡುಕಿನ ಹೊರತಾಗಿಯೂ ನಾವು ಅಸಂಖ್ಯ ಒಳಿತಿನಲ್ಲಿದ್ದೇವೆ.
ಅಸಂಖ್ಯ ಅನುಗ್ರಹಗಳಲ್ಲಿದ್ದೇವೆ.
ನಾವು ಬದುಕುತ್ತಿರುವ ಹೇರಳ ಒಳಿತಿಗೆ ಹೋಲಿಸಿದರೆ ಕೆಡುಕುಗಳಿರುವುದು ಕೆಲವು ಮತ್ತು ಸ್ವಲ್ಪ ಮಾತ್ರ.
ಜಗತ್ತಿನಲ್ಲಿ ಕೆಡುಕು ಇಲ್ಲದಿರುತ್ತಿದ್ದರೆ ನೀನು ಹುಟ್ಟಿದ ಸ್ಥಳದಿಂದ ನೀನು ಕದಲುತ್ತಿರಲಿಲ್ಲ!
ನಾಗರಿಕತೆಯು ಅಸ್ತಿತ್ವದಲ್ಲಿರುತ್ತಿರಲಿಲ್ಲ; ನಗರಗಳನ್ನು, ಕಾರ್ಖಾನೆಗಳನ್ನು ಮತ್ತು ಮನೆಗಳನ್ನು ನಿರ್ಮಿಸಲಾಗುತ್ತಿರಲಿಲ್ಲ; ಮನುಷ್ಯರಿಗೆ ಕೆಲಸ ಮಾಡಬೇಕಾದ ಅಗತ್ಯವಿರಲಿಲ್ಲ; ರೋಗವನ್ನು ನಿಗ್ರಹಿಸುವುದು ಹೇಗೆಂದು ಮನುಷ್ಯರು ಯೋಚಿಸುತ್ತಿರಲಿಲ್ಲ; ಸಮಸ್ಯೆಗೆ ಪರಿಹಾರ ಹುಡುಕುತ್ತಿರಲಿಲ್ಲ; ಅಥವಾ ನೆಮ್ಮದಿಯನ್ನು ತರುವ ಕಲ್ಪನೆಯನ್ನು ಆವಿಷ್ಕರಿಸುತ್ತಿರಲಿಲ್ಲ!
ಮೂಲವಾಗಿ, ಮನುಷ್ಯನು ತಾನು ಹುಟ್ಟಿದ ಸ್ಥಳದಿಂದ ಕದಲುತ್ತಿರಲಿಲ್ಲ.
ಏಕೆಂದರೆ, ಪರಿಹಾರಗಳನ್ನು ಹುಡುಕಬೇಕಾದ ಯಾವುದೇ ಕೆಡುಕು, ಬಳಲಿಕೆ, ಪರೀಕ್ಷೆ, ಸುಸ್ತು ಮತ್ತು ಸಮಸ್ಯೆಗಳಿರುತ್ತಿರಲಿಲ್ಲ!
ಸುಸ್ತಾಗುವುದು, ನಿದ್ದೆಗೆಡುವುದು, ಆಲೋಚಿಸುವುದು, ಕೆಲಸ ಮಾಡುವುದು ಇವೆಲ್ಲಾ ಏಕೆ?
ಆದ್ದರಿಂದ, ಕೆಡುಕು ಅತ್ಯಗತ್ಯ. ಅದು ಜಗತ್ತಿಗೆ ಅನಿವಾರ್ಯ!
ಆಲೋಚಿಸಿ ನೋಡಿ!
ಅನೇಕ ಜನರಿಗೆ ವಿಪತ್ತು ಮತ್ತು ಕೆಡುಕು ಎದುರಾದಾಗ ಅವರು ಪರಮಾತ್ಮನ ಕಡೆಗೆ ಮರಳುತ್ತಾರೆ ಮತ್ತು ಸಜ್ಜನರಾಗುತ್ತಾರೆ. ಎಲ್ಲಾ ಸ್ತುತಿಗಳು ಮತ್ತು ಸ್ತೋತ್ರಗಳು ಪರಮ ಪರಿಶುದ್ಧನಾದ ಅಲ್ಲಾಹನಿಗೆ ಮೀಸಲು.
ಆದ್ದರಿಂದ, ಅಲ್ಲಾಹನ ಎಲ್ಲಾ ವಿಧಿಗಳಲ್ಲೂ ಯುಕ್ತಿ ಮತ್ತು ಒಳಿತಿದೆ; ಕೆಲವು ವಿಧಿಗಳಲ್ಲಿ ಬಾಹ್ಯವಾಗಿ ಕೆಡುಕು, ಇಕ್ಕಟ್ಟು ಮತ್ತು ತೊಂದರೆಗಳು ಅನುಭವವಾದರೂ ಸಹ. ಅಂತಿಮವಾಗಿ ಅವೆಲ್ಲವೂ ಮಹಾ ಒಳಿತನ್ನು ಮತ್ತು ಶ್ರೇಷ್ಠ ದೈವಿಕ ಜಾಣ್ಮೆಯನ್ನು ಒಳಗೊಂಡಿರುತ್ತವೆ.
ಒಟ್ಟಿನಲ್ಲಿ, ಕೆಡುಕು ಇರುವುದು ನೀನು ಉತ್ತರದಾಯಿಯಾಗಿರುವುದರಿಂದ; ಹಿಂದಿನ ಜನ್ಮದಲ್ಲಿ ನೀನು ಪಾಪ ಮಾಡಿದ ಕಾರಣದಿಂದಲ್ಲ.
23. ಪರಮಾತ್ಮನಿಗೆ ಶರಣಾಗುವ ಪ್ರಕಟಣೆಗಳು ಯಾವುವು? ಅಥವಾ ಬೇರೆ ಶೈಲಿಯಲ್ಲಿ ಹೇಳುವುದಾದರೆ: ನೀನು ಪರಮಾತ್ಮನಿಗೆ ಪೂರ್ಣವಾಗಿ ಶರಣಾಗಿರುವೆ ಎಂದು ನೀನು ತಿಳಿದುಕೊಳ್ಳುವುದು ಹೇಗೆ?
ಉತ್ತರ: ಸರ್ವಶಕ್ತನಾದ ಅಲ್ಲಾಹನಿಗೆ ಶರಣಾಗುವುದಕ್ಕೆ ನಾಲ್ಕು ಚಿಹ್ನೆಗಳಿವೆ:
ಮೊದಲನೆಯದು: ನಿನ್ನ ಜೀವನದ ಚಿಕ್ಕ ಮತ್ತು ದೊಡ್ಡದಾದ ಎಲ್ಲಾ ವಿಷಯಗಳಲ್ಲೂ ನೀನು ಅಲ್ಲಾಹನ ದಾಸನಾಗಿರುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಹೇಳಿರಿ: ನನ್ನ ನಮಾಝ್, ಬಲಿಕರ್ಮ, ಜೀವನ ಮತ್ತು ಮರಣ ಎಲ್ಲವೂ ಸರ್ವಲೋಕಗಳ ಸಂರಕ್ಷಕನಾಗಿರುವ ಅಲ್ಲಾಹನಿಗೆ ಮೀಸಲು. (162)
ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಇದನ್ನೇ ನನಗೆ ಆದೇಶಿಸಲಾಗಿದೆ. ಮತ್ತು ನಾನು ಮುಸಲ್ಮಾನರಲ್ಲಿ (ಅವನಿಗೆ ಶರಣಾದವರಲ್ಲಿ) ಮೊತ್ತಮೊದಲಿಗನಾಗಿದ್ದೇನೆ” (163)
[ಸೂರ ಅನ್‌ಆಮ್]
ನನ್ನ ನಮಾಝ್, ಬಲಿಕರ್ಮ, ಜೀವನ ಮತ್ತು ಮರಣ ಎಲ್ಲವೂ ಸರ್ವಲೋಕಗಳ ಸಂರಕ್ಷಕನಾಗಿರುವ ಅಲ್ಲಾಹನಿಗೆ ಮೀಸಲು: ನಾನು ಮಾಡುವುದೆಲ್ಲವೂ ಅಲ್ಲಾಹನಿಗೆ; ಇದು ಎಲ್ಲಾ ಕೆಲಸಗಳಲ್ಲಿ ಅಲ್ಲಾಹನಿಗೆ ದಾಸನಾಗುವುದಾಗಿದೆ. ಇದು ಅಲ್ಲಾಹನಿಗೆ ಶರಣಾಗುವುದರ ಪ್ರಪ್ರಥಮ ಪ್ರಕಟಣೆ ಮತ್ತು ಚಿಹ್ನೆಯಾಗಿದೆ.
ಅಲ್ಲಾಹನಿಗೆ ಶರಣಾಗುವುದರ ಎರಡನೇ ಚಿಹ್ನೆಯು ಅಲ್ಲಾಹನಿಗೆ ಪೂರ್ಣವಾಗಿ ಶರಣಾಗುವುದು. ಅಂದರೆ, ಅವನು ಆದೇಶಿಸಿದ ಕಾರ್ಯಗಳನ್ನು ನಿರ್ವಹಿಸುವುದು ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಾಗುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ವಿಧೇಯತೆ ತೋರಿರಿ. ನೀವು (ಅವನ ಆಜ್ಞೆಗೆ) ಕಿವಿಗೊಟ್ಟ ಬಳಿಕ ಅವನಿಂದ ವಿಮುಖರಾಗಬೇಡಿ.”
[ಸೂರ ಅನ್ಫಾಲ್: 20]
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಓ ಸತ್ಯವಿಶ್ವಾಸಿಗಳೇ! ಸಿಲ್ಮ್‌ನಲ್ಲಿ ಪೂರ್ಣವಾಗಿ ಪ್ರವೇಶಿಸಿರಿ.”
[ಸೂರ ಬಕರ: 208]
ಸಿಲ್ಮ್‌ನಲ್ಲಿ ಎಂದರೆ ಇಸ್ಲಾಂನಲ್ಲಿ.
ಸಿಲ್ಮ್‌ನಲ್ಲಿ ಪೂರ್ಣವಾಗಿ ಪ್ರವೇಶಿಸಿರಿ ಎಂದರೆ: ಅಲ್ಲಾಹು ಆದೇಶಿಸಿದ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿರಿ ಮತ್ತು ಅವನು ವಿರೋಧಿಸಿದ ಎಲ್ಲಾ ಕಾರ್ಯಗಳಿಂದ ದೂರವಿರಿ.
ಅಲ್ಲಾಹು ಕುರ್‌ಆನ್‌ನಲ್ಲಿ ನನಗೆ ಒಂದು ಕಾರ್ಯವನ್ನು ಆಜ್ಞಾಪಿಸಿದರೆ, ಅಥವಾ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಚರ್ಯೆಯಲ್ಲಿ ನನಗೆ ಒಂದು ಕಾರ್ಯವನ್ನು ಆಜ್ಞಾಪಿಸಿದರೆ ನಾನು ಅದನ್ನು ಮಾಡುತ್ತೇನೆ. ಅವರು ನನಗೆ ಒಂದು ಕಾರ್ಯವನ್ನು ವಿರೋಧಿಸಿದರೆ ನಾನು ಅದರಿಂದ ದೂರವಾಗುತ್ತೇನೆ. ಇದು ಅಲ್ಲಾಹನಿಗೆ ಪೂರ್ಣವಾಗಿ ಶರಣಾಗುವುದರ ಮತ್ತು ವಿಧೇಯತೆ ತೋರುವುದರ ರೂಪ.
ಅಲ್ಲಾಹನಿಗೆ ಶರಣಾಗುವುದರ ಮೂರನೇ ಚಿಹ್ನೆ ಏನೆಂದರೆ: ಅಲ್ಲಾಹು ತನ್ನ ತೀರ್ಪಿನ ಮೂಲಕ ಏನನ್ನು ಶಾಸನವನ್ನಾಗಿ ಮಾಡಿದ್ದಾನೋ ಅದಕ್ಕೆ ಶರಣಾಗುವುದು; ಅವನ ಶಾಸನವನ್ನು ತೃಪ್ತಿಯಿಂದ ಸ್ವೀಕರಿಸುವುದು.
ಕುರ್‌ಆನ್ ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚರ್ಯೆಯಲ್ಲಿರುವ ಎಲ್ಲಾ ದೈವಿಕ ಶಾಸನಗಳನ್ನೂ ನಾವು ಸ್ವೀಕರಿಸುತ್ತೇವೆ. ಏಕೆಂದರೆ, ತನ್ನ ಸೃಷ್ಟಿಗಳಿಗೆ ಯಾವುದು ಉತ್ತಮ ಎಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ.
“(ಎಲ್ಲವನ್ನೂ) ಸೃಷ್ಟಿಸಿದವನಿಗೆ (ಅದು) ತಿಳಿಯದೇ? ಮತ್ತು ಅವನು ಅತ್ಯಂತ ಸೂಕ್ಷ್ಮಜ್ಞಾನಿಯೂ ಎಲ್ಲವನ್ನು ತಿಳಿದವನೂ ಆಗಿದ್ದಾನೆ.”
[ಸೂರ ಮುಲ್ಕ್: 14]
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಅಲ್ಲಾಹನಿಗಿಂತಲೂ ಉತ್ತಮವಾಗಿ ತೀರ್ಪು ನೀಡುವವನು ಯಾರು?”
[ಸೂರ ಮಾಇದ: 50]
ಮನುಷ್ಯರಿಗೆ ಅವರ ಇಹಲೋಕ ಮತ್ತು ಪರಲೋಕ ಜೀವನದಲ್ಲಿ ಯಾವುದು ಉತ್ತಮವೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ.
ಅಲ್ಲಾಹನ ಶಾಸನಗಳ ಅನುಷ್ಟಾನವು ಮನುಷ್ಯರನ್ನು ಶುದ್ಧೀಕರಿಸುತ್ತದೆ ಮತ್ತು ಅವರು ನೆಮ್ಮದಿಯಿಂದ ಬದುಕುವಂತೆ ಮಾಡುತ್ತದೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಮತ್ತು ಅಲ್ಲಾಹನ ಅನುಮತಿಯ ಪ್ರಕಾರ ಅನುಸರಿಸಲ್ಪಡಬೇಕು ಎಂಬುದಕ್ಕಲ್ಲದೆ ನಾವು ಯಾವುದೇ ಸಂದೇಶವಾಹಕರನ್ನೂ ಕಳುಹಿಸಿಲ್ಲ.”
[ಸೂರ ನಿಸಾ: 64]
ಅಲ್ಲಾಹು ಸಂದೇಶವಾಹಕರುಗಳನ್ನು ಕಳುಹಿಸಿರುವುದು ನಾವು ಅವರ ಶಾಸನಗಳನ್ನು ತೊರೆದು ಬೇರೆಯವರ ಶಾಸನಗಳನ್ನು ಸ್ವೀಕರಿಸುವುದಕ್ಕಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಇಲ್ಲ; ತಮ್ಮ ಸಂರಕ್ಷಕನ ಮೇಲಾಣೆ! ಅವರ ನಡುವಿನ ವಿವಾದಗಳಿಗೆ ಅವರು ತಮ್ಮನ್ನು ತೀರ್ಪುಗಾರನನ್ನಾಗಿ ಮಾಡಿ, ನಂತರ ತಾವು ನೀಡುವ ತೀರ್ಪಿಗೆ ಅವರು ಅವರ ಮನಸ್ಸುಗಳಲ್ಲಿ ಯಾವುದೇ ಅತೃಪ್ತಿಯನ್ನು ಅನುಭವಿಸದೆ, (ಆ ತೀರ್ಪಿಗೆ) ಸಂಪೂರ್ಣ ಶರಣಾಗುವ ತನಕ ಅವರು ಸತ್ಯವಿಶ್ವಾಸಿಗಳಾಗಲಾರರು.”
[ಸೂರ ನಿಸಾ: 65] ಆದ್ದರಿಂದ, ಅಲ್ಲಾಹನ ಶಾಸನಗಳಿಗೆ ಸಂಪೂರ್ಣ ಶರಣಾಗುವುದು ಅನಿವಾರ್ಯ. ಅಲ್ಲಾಹನ ಶಾಸನಗಳಿಗೆ ಶರಣಾಗುವುದು ಇಸ್ಲಾಂ ಧರ್ಮಕ್ಕೆ ವಿಧೇಯವಾಗಿರುವುದರ ಚಿಹ್ನೆಯಾಗಿದೆ!
ಅಲ್ಲಾಹನಿಗೆ ಶರಣಾಗುವುದರ ನಾಲ್ಕನೇ ಚಿಹ್ನೆ ಏನೆಂದರೆ: ಅಲ್ಲಾಹನ ವಿಧಿ-ನಿರ್ಣಯಗಳಿಗೆ ಶರಣಾಗುವುದು. ಪ್ರತಿಯೊಂದು ವಸ್ತುವನ್ನೂ ಅಲ್ಲಾಹು ತನ್ನ ಯುಕ್ತಿಯಿಂದಲೇ ನಿರ್ಣಯಿಸಿದ್ದಾನೆ. ಹಾಗಾಗಿ, ಒಬ್ಬ ಮುಸಲ್ಮಾನ ಅಲ್ಲಾಹನ ಎಲ್ಲಾ ವಿಧಿ-ನಿರ್ಣಯಗಳಲ್ಲೂ ಅವನಿಗೆ ಶರಣಾಗುತ್ತಾನೆ. ಅದು ಒಳಿತಾಗಿದ್ದರೂ ಕೆಡುಕಾಗಿದ್ದರೂ.
ಮುಸಲ್ಮಾನನಿಗೆ ಸಂತೋಷವಾದರೆ ಅವನು ಕೃತಜ್ಞತೆ ಸಲ್ಲಿಸುತ್ತಾನೆ. ಅವನಿಗೆ ಅನಿಷ್ಟ ಸಂಭವಿಸಿದರೆ ಅವನು ತಾಳ್ಮೆಯಿಂದಿರುತ್ತಾನೆ.
ಎಲ್ಲಾ ವಿಪತ್ತುಗಳೂ ಒಂದು ಜಾಣ ಉದ್ದೇಶಕ್ಕಾಗಿ ಮತ್ತು ಒಂದು ಕರ್ತವ್ಯಕ್ಕಾಗಿದೆ.
ಆರೋಗ್ಯ, ಅನಾರೋಗ್ಯ, ಶ್ರೀಮಂತಿಕೆ, ಬಡತನ ಎಲ್ಲವೂ ಸರ್ವಶಕ್ತನಾದ ಅಲ್ಲಾಹನ ವಿಧಿ-ನಿರ್ಣಯದಂತೆ ಜರುಗುತ್ತವೆ. ಎಲ್ಲವೂ ಅವನ ವಿಧಿ-ನಿರ್ಣಯ ಮತ್ತು ಅವನ ಯುಕ್ತಿಗೆ ಅನುಗುಣವಾಗಿ ಜರುಗುತ್ತವೆ. ವಿಧಿ-ನಿರ್ಣಯಗಳಿಗೆ ಸಂತೃಪ್ತಿ ಸೂಚಿಸುವುದು ಮುಸಲ್ಮಾನನಿಗೆ ಕಡ್ಡಾಯ. ಏಕೆಂದರೆ, ಅವುಗಳನ್ನು ನಿರ್ಣಯಿಸುವುದು ಅಲ್ಲಾಹನಾಗಿದ್ದಾನೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನಿಶ್ಚಯವಾಗಿಯೂ ನಾವು ಎಲ್ಲವನ್ನೂ ಒಂದು ನಿರ್ಣಯದೊಂದಿಗೆ ಸೃಷ್ಟಿಸಿದ್ದೇವೆ.”
[ಸೂರ ಕಮರ್: 49]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
“ಹೇಳಿರಿ: ಅಲ್ಲಾಹು ನಮಗೆ ವಿಧಿಸಿದ್ದಲ್ಲದೆ ಬೇರೇನೂ ನಮಗೆ ಬಾಧಿಸುವುದಿಲ್ಲ.”
[ಸೂರ ತೌಬ: 51]
ಅಲ್ಲಾಹು ನಮಗೆ ನಿರ್ಣಯಿಸಿದ್ದಲ್ಲದೆ ಬೇರೇನೂ ನಮಗೆ ಬಾಧಿಸುವುದಿಲ್ಲ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಮತ್ತು ಅಲ್ಲಾಹನ ಅನುಮತಿಯಿಲ್ಲದೆ ಯಾವುದೇ ಆತ್ಮವೂ ಸಾವನ್ನಪ್ಪುವುದಿಲ್ಲ.”
[ಸೂರ ಆಲು ಇಮ್ರಾನ್: 145]
ಆಯುಷ್ಯವನ್ನು ಅಲ್ಲಾಹು ನಿರ್ಣಯಿಸುತ್ತಾನೆ.
ಜಗತ್ತಿನಲ್ಲಿ ಸಂಭವಿಸುವ ಎಲ್ಲವೂ, ಜಗತ್ತಿನಲ್ಲಿ ಚಲಿಸುವ ಎಲ್ಲಾ ಅಣುಗಳೂ, ಸಂಭವಿಸುವ ಎಲ್ಲಾ ಘಟನೆಗಳೂ, ಅಲ್ಲಾಹನ ಜ್ಞಾನ, ಅಲ್ಲಾಹನ ಇಚ್ಛೆ, ಅಲ್ಲಾಹನ ವಿಧಿ-ನಿರ್ಣಯ, ಅಲ್ಲಾಹನ ಯುಕ್ತಿ ಮತ್ತು ಅಲ್ಲಾಹನ ಸಾಮರ್ಥ್ಯದಿಂದಲೇ ಸಂಭವಿಸುತ್ತವೆ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ಮತ್ತು ಅವನು ಎಲ್ಲವನ್ನು ಸೃಷ್ಟಿಸಿ (ಅವುಗಳನ್ನು) ಅತ್ಯಂತ ನಿಖರವಾಗಿ ನಿರ್ಣಯಿಸಿದನು.”
[ಸೂರ ಫುರ್ಕಾನ್: 2]
ಪರಮ ಪರಿಶುದ್ಧನಾದ ಅವನು ಎಲ್ಲವನ್ನೂ ಸೃಷ್ಟಿಸಿದನು ಮತ್ತು ಎಲ್ಲವನ್ನೂ ನಿರ್ಣಯಿಸಿದನು. ಅವನು ಇಚ್ಛಿಸುವುದು ಸಂಭವಿಸುತ್ತದೆ ಮತ್ತು ಅವನು ಇಚ್ಛಿಸದಿರುವುದು ಸಂಭವಿಸುವುದಿಲ್ಲ.
ನಾನೊಬ್ಬ ಮುಸಲ್ಮಾನನಾಗಿ, ಸರ್ವಶಕ್ತನಾದ ಅಲ್ಲಾಹನ ಎಲ್ಲಾ ವಿಧಿ-ನಿರ್ಣಯಗಳಿಗೆ ಶರಣಾಗಬೇಕಾದುದು ಅತ್ಯಾವಶ್ಯಕವಾಗಿದೆ.
ಇದರ ಮೂಲಕ ಮನುಷ್ಯನು ಅಲ್ಲಾಹನಿಗೆ ಶರಣಾದವನಾಗುತ್ತಾನೆ.
ಕೊನೆಯದಾಗಿ ಒಂದು ಪ್ರಶ್ನೆ! ನಾನು ಮುಸಲ್ಮಾನನಾಗುವುದು ಹೇಗೆ?
ಇಸ್ಲಾಂ ಮನುಷ್ಯರೆಲ್ಲರಿಗಿರುವ ಅಲ್ಲಾಹನ ಧರ್ಮವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
“ನಿಶ್ಚಯವಾಗಿಯೂ ಅಲ್ಲಾಹನ ಬಳಿ ಸ್ವೀಕಾರವಾಗುವ ಧರ್ಮ ಇಸ್ಲಾಂ ಮಾತ್ರ.”
[ಸೂರ ಆಲು ಇಮ್ರಾನ್: 19]
ಅಲ್ಲಾಹು ಇಸ್ಲಾಂ ಧರ್ಮದ ಹೊರತು ಬೇರೆ ಯಾವುದೇ ಧರ್ಮವನ್ನು ಸ್ವೀಕರಿಸುವುದಿಲ್ಲ.
“ಯಾರಾದರೂ ಇಸ್ಲಾಮಿಗೆ (ಅಲ್ಲಾಹನಿಗಿರುವ ಶರಣಾಗತಿಗೆ) ಹೊರತಾಗಿರುವುದನ್ನು ಧರ್ಮವಾಗಿ ಅರಸುವುದಾದರೆ ಅದನ್ನು ಅವನಿಂದ ಎಂದಿಗೂ ಸ್ವೀಕರಿಸಲಾಗದು. ಪರಲೋಕದಲ್ಲಿ ಅವನು ನಷ್ಟ ಹೊಂದಿದದವರ ಪೈಕಿ ಸೇರಿದವನಾಗುವನು.”
[ಸೂರ ಆಲು ಇಮ್ರಾನ್: 85]
ಆದ್ದರಿಂದ ಹಿಂದೂಗಳು ಮತ್ತು ಹಿಂದೂಗಳಲ್ಲದ ಎಲ್ಲಾ ಮನುಷ್ಯರೂ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕು.
ನರಕದಿಂದ ಮೋಕ್ಷ ಮತ್ತು ಅಲ್ಲಾಹನ ಸಂತೃಪ್ತಿ ಮತ್ತು ಸ್ವರ್ಗವಿರುವುದು ಇಸ್ಲಾಂ ಧರ್ಮದಲ್ಲಿ ಮಾತ್ರ.
ಇಸ್ಲಾಂ ಧರ್ಮವನ್ನು ಸ್ವೀಕರಿಸುವುದು ಅತಿಶ್ರೇಷ್ಠ ಅನುಗ್ರಹವಾಗಿದೆ. ಬದಲಿಗೆ, ಅದು ನಿನ್ನ ಅಸ್ತಿತ್ವದ ಅತಿದೊಡ್ಡ ಮತ್ತು ಅತಿಪ್ರಮುಖ ವಿಷಯವಾಗಿದೆ.
ವಾಸ್ತವವಾಗಿ, ಇಸ್ಲಾಂ ಧರ್ಮವನ್ನು ಸ್ವೀಕರಿಸುವುದು ಎಂದರೆ ಸಹಜ ಮನೋಧರ್ಮಕ್ಕೆ, ಬುದ್ಧಿಗೆ ಮತ್ತು ವೇದಗಳಿಗೆ ಹಿಂದಿರುಗುವುದಾಗಿದೆ!
ಇಸ್ಲಾಂ ಸ್ವೀಕರಿಸುವುದು ಬಹಳ ಸುಲಭ. ಅದಕ್ಕೆ ಯಾವುದೇ ಔಪಚಾರಿಕ ಆಚಾರ ಅಥವಾ ಸಂಪ್ರದಾಯದ ಅಗತ್ಯವಿಲ್ಲ. ಮನುಷ್ಯನು ಎರಡು ಸಾಕ್ಷಿ ವಚನಗಳನ್ನು ಉಚ್ಛರಿಸಿದರೆ ಸಾಕು. ಆ ಸಾಕ್ಷಿವಚನಗಳು ಹೀಗಿವೆ: ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ನಾನು ಸಾಕ್ಷಿ ನುಡಿಯುತ್ತೇನೆ.
ಇಷ್ಟು ಹೇಳಿದರೆ ಆ ವ್ಯಕ್ತಿ ಮುಸಲ್ಮಾನನಾಗುತ್ತಾನೆ.
ನಂತರ ಅವನು ಇಸ್ಲಾಂ ಧರ್ಮದ ಆಚಾರಗಳನ್ನು ಆಚರಿಸಬೇಕು.
ಇಸ್ಲಾಂ ಧರ್ಮವನ್ನು ಆಚರಿಸುವುದು ಹೇಗೆ ಎಂದು ತಿಳಿಯಲು ಎಲ್ಲಾ ನವ ಮುಸಲ್ಮಾನರು ಇಸ್ಲಾಂಹೌಸ್ ಜಾಲತಾಣವನ್ನು ಸಂದರ್ಶಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ಅದರಲ್ಲಿ ಎಲ್ಲವೂ ನಿಮ್ಮ ಭಾಷೆಯಲ್ಲೇ ಲಭ್ಯವಿದೆ.
ಜಾಲತಾಣದ ಕೊಂಡಿ: https://islamhouse.com/kn/