"ಖಂಡಿತವಾಗಿಯೂ ಸಮಾಧಿಯು ಪರಲೋಕದ ಹಂತಗಳಲ್ಲಿ ಮೊದಲ ಹಂತವಾಗಿದೆ. ಒಬ್ಬನು ಅದರಿಂದ ಪಾರಾದರೆ, ಅದರ ನಂತರ ಬರುವುದು ಅದಕ್ಕಿಂತ ಸುಲಭವಾಗಿರುತ್ತದೆ. ಒಂದು ವೇಳೆ ಅವನು ಅದರಿಂದ ಪಾರಾಗದಿದ್ದರೆ, ಅದರ ನಂತರ ಬರುವುದು ಅದಕ್ಕಿಂತ ಕಠಿಣವಾಗಿರುತ್ತದೆ".
ಉಸ್ಮಾನ್‌ರ ವಿಮೋಚಿತ ಗುಲಾಮರಾದ ಹಾನಿಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಸಮಾಧಿಯ ಬಳಿ ನಿಂತಾಗ, ತಮ್ಮ ಗಡ್ಡವು ಒದ್ದೆಯಾಗುವವರೆಗೆ ಅಳುತ್ತಿದ್ದರು. ಆಗ ಅವರೊಡನೆ ಕೇಳಲಾಯಿತು: "ನೀವು ಮುಂದೆ ಸ್ವರ್ಗ ಮತ್ತು ನರಕವನ್ನು ನೆನಪಿಸಿಕೊಳ್ಳುತ್ತೀರಿ. ಆಗ ನೀವು ಅಳುವುದಿಲ್ಲ. ಆದರೆ ಇದರ (ಸಮಾಧಿಯ) ಕಾರಣದಿಂದ ಅಳುತ್ತೀರೇಕೆ?" ಅದಕ್ಕೆ ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದಾರೆ:
"ಖಂಡಿತವಾಗಿಯೂ ಸಮಾಧಿಯು ಪರಲೋಕದ ಹಂತಗಳಲ್ಲಿ ಮೊದಲ ಹಂತವಾಗಿದೆ. ಒಬ್ಬನು ಅದರಿಂದ ಪಾರಾದರೆ, ಅದರ ನಂತರ ಬರುವುದು ಅದಕ್ಕಿಂತ ಸುಲಭವಾಗಿರುತ್ತದೆ. ಒಂದು ವೇಳೆ ಅವನು ಅದರಿಂದ ಪಾರಾಗದಿದ್ದರೆ, ಅದರ ನಂತರ ಬರುವುದು ಅದಕ್ಕಿಂತ ಕಠಿಣವಾಗಿರುತ್ತದೆ".
«إِنَّ الْقَبْرَ أَوَّلُ مَنْزِلٍ مِنْ مَنَازِلِ الْآخِرَةِ، فَإِنْ نَجَا مِنْهُ فَمَا بَعْدَهُ أَيْسَرُ مِنْهُ، وَإِنْ لَمْ يَنْجُ مِنْهُ فَمَا بَعْدَهُ أَشَدُّ مِنْهُ».
ಸತ್ಯವಿಶ್ವಾಸಿಗಳ ನಾಯಕ (ಅಮೀರುಲ್-ಮುಅ್‌ಮಿನೀನ್) ಉಸ್ಮಾನ್ ಬಿನ್ ಅಫ್ಫಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಸಮಾಧಿಯ ಬಳಿ ನಿಂತಾಗ, ತಮ್ಮ ಕಣ್ಣೀರಿನಿಂದ ಗಡ್ಡವು ಒದ್ದೆಯಾಗುವವರೆಗೆ ಅಳುತ್ತಿದ್ದರು. ಆಗ ಅವರೊಡನೆ ಕೇಳಲಾಯಿತು: ನೀವು ಮುಂದೆ ಸ್ವರ್ಗ ಮತ್ತು ನರಕವನ್ನು ನೆನಪಿಸಿಕೊಳ್ಳುತ್ತೀರಿ. ಆಗ ಸ್ವರ್ಗದ ಹಂಬಲದಿಂದ ಅಥವಾ ನರಕದ ಭಯದಿಂದ ಅಳುವುದಿಲ್ಲ! ಆದರೆ ಸಮಾಧಿಯ ಕಾರಣದಿಂದ ಅಳುತ್ತೀರೇಕೆ? ಅದಕ್ಕೆ ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದಾರೆ: ಸಮಾಧಿಯು ಪರಲೋಕದ ಹಂತಗಳಲ್ಲಿ ಮೊದಲ ಹಂತವಾಗಿದೆ. ಒಬ್ಬನು ಅದರಿಂದ ಪಾರಾಗಿ ವಿಮೋಚನೆಗೊಂಡರೆ, ಅದರ ನಂತರದ ಹಂತಗಳು ಅದಕ್ಕಿಂತ ಸುಲಭವಾಗಿರುತ್ತವೆ. ಒಂದು ವೇಳೆ ಅವನು ಅದರ ಶಿಕ್ಷೆಯಿಂದ ಪಾರಾಗದಿದ್ದರೆ; ಅದರ ನಂತರ ಬರುವ ಶಿಕ್ಷೆಯು ಅದರಲ್ಲಿರುವುದಕ್ಕಿಂತ ಕಠಿಣವಾಗಿರುತ್ತದೆ.
ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಸ್ವರ್ಗದ ಶುಭವಾರ್ತೆ ನೀಡಲ್ಪಟ್ಟವರಲ್ಲಿ ಒಬ್ಬರಾಗಿದ್ದರೂ ಸಹ, ಅಲ್ಲಾಹುವಿನ ಬಗ್ಗೆ ಅವರಿಗಿದ್ದ ಭಯವನ್ನು ವಿವರಿಸಲಾಗಿದೆ.
ಸಮಾಧಿ ಮತ್ತು ಪುನರುತ್ಥಾನ ದಿನದ ಭಯಾನಕತೆಗಳನ್ನು ನೆನಪಿಸಿಕೊಂಡಾಗ ಅಳುವುದನ್ನು ನಿಯಮಗೊಳಿಸಲಾಗಿದೆ.
ಸಮಾಧಿಯ ಸುಖ ಮತ್ತು ಶಿಕ್ಷೆಯನ್ನು ದೃಢೀಕರಿಸಲಾಗಿದೆ.
ಸಮಾಧಿಯ ಶಿಕ್ಷೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಸುನನು ತ್ತಿರ್ಮಿದಿ. (4/ 130) (2308).
ಸುನನ್ ಇಬ್ನ್ ಮಾಜ. (5/ 333) (4267).
ಇನ್ನಷ್ಟು (6)
مشكاة المصابيح.
للتبريزي (1/ 48).
تحفة الأحوذي بشرح جامع الترمذي.
المباركفوري (6/ 490).
مرقاة المفاتيح شرح مشكاة المصابيح.
لعلي القاري (1/ 215).