ನಮಾಝ್ (ಅನ್ನು ಸಂರಕ್ಷಿಸಿ) ಮತ್ತು ನಿಮ್ಮ ಬಲಗೈಗಳು ಅಧೀನದಲ್ಲಿಟ್ಟಿರುವವರ (ಹಕ್ಕುಗಳನ್ನು ಪೂರೈಸಿರಿ)!
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಅಲ್ಲಾಹುವಿನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮರಣವು ಸಮೀಪಿಸಿದಾಗ, ಅವರ ಅತ್ಯಂತ ಪ್ರಮುಖ ಉಪದೇಶ ಇದಾಗಿತ್ತು: "ನಮಾಝ್ (ಅನ್ನು ಸಂರಕ್ಷಿಸಿ) ಮತ್ತು ನಿಮ್ಮ ಬಲಗೈಗಳು ಅಧೀನದಲ್ಲಿಟ್ಟಿರುವವರ (ಹಕ್ಕುಗಳನ್ನು ಪೂರೈಸಿರಿ)! ನಮಾಝ್ (ಅನ್ನು ಸಂರಕ್ಷಿಸಿ) ಮತ್ತು ನಿಮ್ಮ ಬಲಗೈಗಳು ಅಧೀನದಲ್ಲಿಟ್ಟಿರುವವರ (ಹಕ್ಕುಗಳನ್ನು ಪೂರೈಸಿರಿ)!" ಎಲ್ಲಿಯವರೆಗೆಂದರೆ, ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಹೇಳುವಾಗ ಅವರ ಎದೆಯಲ್ಲಿ ಘರ್‌ಘರ್ ಶಬ್ದ ಬರುತ್ತಿತ್ತು, ಮತ್ತು ಅವರ ನಾಲಿಗೆಗೆ ಅದನ್ನು ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗುತ್ತಿರಲಿಲ್ಲ.
كَانَتْ عَامَّةُ وَصِيَّةِ رَسُولِ اللهِ صَلَّى اللهُ عَلَيْهِ وَسَلَّمَ حِينَ حَضَرَهُ الْمَوْتُ: «الصَّلَاةَ وَمَا مَلَكَتْ أَيْمَانُكُمْ، الصَّلَاةَ وَمَا مَلَكَتْ أَيْمَانُكُمْ»، حَتَّى جَعَلَ رَسُولُ اللهِ صَلَّى اللهُ عَلَيْهِ وَسَلَّمَ يُغَرْغِرُ بِهَا صَدْرُهُ، وَمَا يَكَادُ يُفِيضُ بِهَا لِسَانُهُ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮರಣ ವೇದನೆಯಲ್ಲಿದ್ದಾಗ ತಮ್ಮ ಸಮುದಾಯಕ್ಕೆ ನೀಡಿದ ಅತ್ಯಂತ ಪ್ರಮುಖ ವಸಿಯ್ಯತ್ ಇದಾಗಿತ್ತು: ನಮಾಝ್‌ಗೆ ಬದ್ಧರಾಗಿರಿ, ಅದನ್ನು ಸಂರಕ್ಷಿಸಿರಿ ಮತ್ತು ಅದರ ಬಗ್ಗೆ ಉದಾಸೀನತೆ ತೋರಬೇಡಿರಿ. ಹಾಗೆಯೇ, ನಿಮ್ಮ ಬಲಗೈಗಳು ಅಧೀನದಲ್ಲಿಟ್ಟಿರುವ ದಾಸದಾಸಿಯರ ಹಕ್ಕುಗಳನ್ನು ಪೂರೈಸಿರಿ ಮತ್ತು ಅವರೊಂದಿಗೆ ಉತ್ತಮವಾಗಿ ವರ್ತಿಸಿರಿ. ಅವರು ಇದನ್ನು ಪುನರಾವರ್ತಿಸುತ್ತಲೇ ಇದ್ದರು. ಎಲ್ಲಿಯವರೆಗೆಂದರೆ ಅವರ ಗಂಟಲು ಅದರಿಂದ ಘರ್‌ಗುಟ್ಟಲು ಪ್ರಾರಂಭಿಸಿತು, ಮತ್ತು ಅವರ ನಾಲಿಗೆಯು ಅದನ್ನು ಸ್ಪಷ್ಟವಾಗಿ ಉಚ್ಚರಿಸಲು ಕಷ್ಟಪಡುತ್ತಿತ್ತು.
ನಮಾಝ್ ಮತ್ತು ಬಲಗೈಯ ಅಧೀನದಲ್ಲಿರುವವರ (ಗುಲಾಮರು/ಸೇವಕರು) ಹಕ್ಕಿನ ಮಹಾ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಅಂತಿಮ ಉಪದೇಶಗಳಲ್ಲಿ ಇವೆರಡರ ಬಗ್ಗೆ ಉಪದೇಶಿಸಿದರು.
ನಮಾಝ್ ಅಲ್ಲಾಹು ತನ್ನ ದಾಸರ ಮೇಲೆ ಕಡ್ಡಾಯಗೊಳಿಸಿರುವ ಹಕ್ಕುಗಳಲ್ಲಿ ಅತ್ಯಂತ ಶ್ರೇಷ್ಠವಾದುದಾಗಿದೆ. ಸೃಷ್ಟಿಗಳ ಹಕ್ಕನ್ನು ಪೂರೈಸುವುದು – ವಿಶೇಷವಾಗಿ ದುರ್ಬಲರು ಮತ್ತು ತಮ್ಮ ಸಂತತಿಯಲ್ಲದ, ತಮ್ಮ ಅಧೀನದಲ್ಲಿರುವವರ ಹಕ್ಕುಗಳನ್ನು ಪೂರೈಸುವುದು – ಸೃಷ್ಟಿಗಳ ಹಕ್ಕುಗಳಲ್ಲಿ ಅತ್ಯಂತ ಶ್ರೇಷ್ಠವಾದುದಾಗಿದೆ.
ನಸಾಈಯವರ 'ಅಸ್ಸುನನುಲ್ ಕುಬ್ರಾ'. (6/ 387) (7058).
ಸುನನ್ ಇಬ್ನ್ ಮಾಜ. (4/ 6) (2697).
ಮುಸ್ನದ್ ಅಹ್ಮದ್. (19/ 209) (12169).
ಇನ್ನಷ್ಟು (1)
النهاية في غريب الحديث والأثر (668).