Skip to content
ಸೂರಗಳ ಪಟ್ಟಿ /

عَبَسَ

عَبَسَ is chapter 80 of the Quran and has 42 verses. This page presents it in full in the Uthmani script, with a verse-by-verse translation of its meaning.

42 ಆಯತ್‌ಗಳು ಸೂರ ಸಂಖ್ಯೆ 80
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

عَبَسَ وَتَوَلَّىٰٓ

ಅವರು (ಪ್ರವಾದಿ) ಮುಖ ಸಿಂಡರಿಸಿದರು ಮತ್ತು ವಿಮುಖರಾದರು.

أَن جَآءَهُ ٱلۡأَعۡمَىٰ

ಒಬ್ಬ ಕುರುಡ ಅವರ ಬಳಿಗೆ ಬಂದರು ಎಂಬ ಕಾರಣದಿಂದ.

Explanation & meanings · 1
  1. ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರೈಷ್ ಮುಖಂಡರಿಗೆ ಧರ್ಮದ ವಿಷಯಗಳನ್ನು ಹೇಳಿಕೊಟ್ಟು ಇಸ್ಲಾಂಗೆ ಆಮಂತ್ರಿಸುತ್ತಿದ್ದಾಗ, ಅವರ ಅನುಯಾಯಿಗಳಲ್ಲಿ ಒಬ್ಬರಾದ ಇಬ್ನ್ ಉಮ್ಮ್ ಮಕ್ತೂಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಲ್ಲಿಗೆ ಬಂದು ಏನೋ ಕೇಳಿದರು. ಅವರು ಕುರುಡರಾಗಿದ್ದರು. ಆದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಡೆಗೆ ಗಮನಹರಿಸದೆ ಕುರೈಷ್ ಮುಖಂಡರಿಗೆ ಆಮಂತ್ರಣ ನೀಡುವುದನ್ನು ಮುಂದುವರಿಸಿದರು. ಇದನ್ನು ಇಲ್ಲಿ ವಿಮರ್ಶಿಸಲಾಗಿದೆ.

وَمَا يُدۡرِيكَ لَعَلَّهُۥ يَزَّكَّىٰٓ

(ಪ್ರವಾದಿಯವರೇ!) ನಿಮಗೇನು ಗೊತ್ತು? ಆ ಕುರುಡರು ಪರಿಶುದ್ಧತೆಯನ್ನು ಪಡೆಯಬಹುದು.

أَوۡ يَذَّكَّرُ فَتَنفَعَهُ ٱلذِّكۡرَىٰٓ

ಅಥವಾ ಉಪದೇಶಕ್ಕೆ ಕಿವಿಗೊಟ್ಟು, ಆ ಉಪದೇಶವು ಅವರಿಗೆ ಪ್ರಯೋಜನವಾಗಬಹುದು.

أَمَّا مَنِ ٱسۡتَغۡنَىٰ

ಆದರೆ ಯಾರು ತನ್ನನ್ನು ತಾನೇ ಸ್ವಯಂ-ಪರ್ಯಾಪ್ತನೆಂದು ಪರಿಗಣಿಸುತ್ತಾನೋ,