Skip to content
ಸೂರಗಳ ಪಟ್ಟಿ /

الطُّور

الطُّور is chapter 52 of the Quran and has 49 verses. This page presents it in full in the Uthmani script, with a verse-by-verse translation of its meaning.

49 ಆಯತ್‌ಗಳು ಸೂರ ಸಂಖ್ಯೆ 52
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

وَٱلطُّورِ

ತೂರ್ ಪರ್ವತದ ಮೇಲಾಣೆ!

وَكِتَٰبٖ مَّسۡطُورٖ

ಲಿಖಿತಗೊಳಿಸಿದ ಗ್ರಂಥದ ಮೇಲಾಣೆ!

فِي رَقّٖ مَّنشُورٖ

ತೆರೆದಿಟ್ಟ ತೊಗಲಿನ ಹಾಳೆಗಳಲ್ಲಿ.

وَٱلۡبَيۡتِ ٱلۡمَعۡمُورِ

ಬೈತುಲ್ ಮಅ‌ಮೂರ್‌ನ ಮೇಲಾಣೆ!

Explanation & meanings · 1
  1. ಇದು ಏಳನೇ ಆಕಾಶದಲ್ಲಿರುವ ಆರಾಧನಾಲಯವಾಗಿದ್ದು ದೇವದೂತರುಗಳು ಇಲ್ಲಿ ಆರಾಧನೆ ಮಾಡುತ್ತಾರೆ. ಇದು ದೇವದೂತರುಗಳಿಂದ ತುಂಬಿ ತುಳುಕುತ್ತಿರುತ್ತದೆ. ದಿನನಿತ್ಯ ಎಪ್ಪತ್ತು ಸಾವಿರ ದೇವದೂತರು ಇಲ್ಲಿಗೆ ಭೇಟಿ ನೀಡಿ ಆರಾಧನೆ ಮಾಡುತ್ತಾರೆ. ಇದರ ವಿಶೇಷತೆ ಏನೆಂದರೆ, ಒಮ್ಮೆ ಇಲ್ಲಿ ಆರಾಧನೆ ಮಾಡಿದ ದೇವದೂತರು ಪುನಃ ಇಲ್ಲಿಗೆ ಆರಾಧನೆ ಮಾಡಲು ಬರುವುದಿಲ್ಲ.

وَٱلسَّقۡفِ ٱلۡمَرۡفُوعِ

ಎತ್ತರದ ಛಾವಣಿಯ (ಆಕಾಶದ) ಮೇಲಾಣೆ!