Skip to content
ಸೂರಗಳ ಪಟ್ಟಿ /

قٓ

قٓ is chapter 50 of the Quran and has 45 verses. This page presents it in full in the Uthmani script, with a verse-by-verse translation of its meaning.

45 ಆಯತ್‌ಗಳು ಸೂರ ಸಂಖ್ಯೆ 50
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

قٓۚ وَٱلۡقُرۡءَانِ ٱلۡمَجِيدِ

ಕ್ವಾಫ್. ಈ ಮಹತ್ವಪೂರ್ಣ ಕುರ್‌ಆನಿನ ಮೇಲಾಣೆ.

بَلۡ عَجِبُوٓاْ أَن جَآءَهُم مُّنذِرٞ مِّنۡهُمۡ فَقَالَ ٱلۡكَٰفِرُونَ هَٰذَا شَيۡءٌ عَجِيبٌ

ಅವರಿಂದಲೇ ಅವರಿಗೆ ಒಬ್ಬ ಮುನ್ನೆಚ್ಚರಿಕೆಗಾರ (ಪ್ರವಾದಿ) ಬಂದಿರುವುದನ್ನು ಕಂಡು ಅವರು ಆಶ್ಚರ್ಯಪಡುತ್ತಾರೆ. ಸತ್ಯನಿಷೇಧಿಗಳು ಹೇಳುತ್ತಾರೆ: “ಇದೊಂದು ಆಶ್ಚರ್ಯಕರ ಸಂಗತಿಯಾಗಿದೆ.

أَءِذَا مِتۡنَا وَكُنَّا تُرَابٗاۖ ذَٰلِكَ رَجۡعُۢ بَعِيدٞ

ನಾವು ಸತ್ತು ಮಣ್ಣಾಗಿ ಬಿಟ್ಟ ಬಳಿಕ (ಪುನಃ ಜೀವ ಪಡೆಯುವೆವೇ)? ಈ ಮರಳುವಿಕೆ ಬಹಳ ದೂರದ (ಅಸಂಭವ್ಯ) ಸಂಗತಿಯಾಗಿದೆ.”

قَدۡ عَلِمۡنَا مَا تَنقُصُ ٱلۡأَرۡضُ مِنۡهُمۡۖ وَعِندَنَا كِتَٰبٌ حَفِيظُۢ

ನಿಶ್ಚಯವಾಗಿಯೂ ಭೂಮಿಯು ಅವರಿಂದ ಏನನ್ನು ಕಡಿಮೆ ಮಾಡುತ್ತಿದೆಯೆಂದು ನಮಗೆ ತಿಳಿದಿದೆ. ನಮ್ಮ ಬಳಿ ಎಲ್ಲವನ್ನೂ ನೆನಪಿಡುವ ಒಂದು ಗ್ರಂಥವಿದೆ.

Explanation & meanings · 1
  1. ಮನುಷ್ಯನು ಸಮಾಧಿಗೆ ಸೇರಿದ ಬಳಿಕ ಅವನ ಮಾಂಸ ಮತ್ತು ಮೂಳೆಗಳನ್ನು ಭೂಮಿ ತಿನ್ನುತ್ತದೆ. ಅಂದರೆ ಅವನು ಭೂಮಿಯಲ್ಲಿ ಜೀರ್ಣವಾಗಿ ಬಿಡುತ್ತಾನೆ. ಅವನ ಮಾಂಸ, ಮೂಳೆಗಳು ಸೇರಿದಂತೆ ದೇಹದ ವಿವಿಧ ಭಾಗಗಳನ್ನು ಭೂಮಿ ತಿನ್ನುವುದನ್ನು ಅಲ್ಲಾಹು ತಿಳಿಯುತ್ತಾನೆ. ಅವೆಲ್ಲವೂ ಒಂದು ಗ್ರಂಥದಲ್ಲಿ ದಾಖಲಾಗಿರುತ್ತದೆ. ಆದ್ದರಿಂದ ಅವನನ್ನು ಪುನಃ ಸೃಷ್ಟಿಸುವುದು ಅಲ್ಲಾಹನಿಗೆ ಕಷ್ಟವೇ ಅಲ್ಲ.

بَلۡ كَذَّبُواْ بِٱلۡحَقِّ لَمَّا جَآءَهُمۡ فَهُمۡ فِيٓ أَمۡرٖ مَّرِيجٍ

ವಾಸ್ತವವಾಗಿ, ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದ್ದರಿಂದ ಅವರು ಗೊಂದಲಪೂರ್ಣ (ಅನಿಶ್ಚಿತ) ಸ್ಥಿತಿಯಲ್ಲಿದ್ದಾರೆ.