Skip to content
ಸೂರಗಳ ಪಟ್ಟಿ /

الأحزَاب

الأحزَاب is chapter 33 of the Quran and has 73 verses. This page presents it in full in the Uthmani script, with a verse-by-verse translation of its meaning.

73 ಆಯತ್‌ಗಳು ಸೂರ ಸಂಖ್ಯೆ 33
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

يَٰٓأَيُّهَا ٱلنَّبِيُّ ٱتَّقِ ٱللَّهَ وَلَا تُطِعِ ٱلۡكَٰفِرِينَ وَٱلۡمُنَٰفِقِينَۚ إِنَّ ٱللَّهَ كَانَ عَلِيمًا حَكِيمٗا

ಓ ಪ್ರವಾದಿಯವರೇ! ಅಲ್ಲಾಹನನ್ನು ಭಯಪಡಿರಿ. ಸತ್ಯನಿಷೇಧಿಗಳನ್ನು ಮತ್ತು ಕಪಟವಿಶ್ವಾಸಿಗಳನ್ನು ಅನುಸರಿಸಬೇಡಿ. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

وَٱتَّبِعۡ مَا يُوحَىٰٓ إِلَيۡكَ مِن رَّبِّكَۚ إِنَّ ٱللَّهَ كَانَ بِمَا تَعۡمَلُونَ خَبِيرٗا

ನಿಮಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ನೀಡಲಾಗುವ ದೇವವಾಣಿಗಳನ್ನು ಅನುಸರಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ಸೂಕ್ಷ್ಮವಾಗಿ ತಿಳಿಯುತ್ತಾನೆ.

وَتَوَكَّلۡ عَلَى ٱللَّهِۚ وَكَفَىٰ بِٱللَّهِ وَكِيلٗا

ಅಲ್ಲಾಹನಲ್ಲಿ ಭರವಸೆಯಿಡಿ. ಕಾರ್ಯನಿರ್ವಾಹಕನಾಗಿ ಅಲ್ಲಾಹು ಸಾಕು.

مَّا جَعَلَ ٱللَّهُ لِرَجُلٖ مِّن قَلۡبَيۡنِ فِي جَوۡفِهِۦۚ وَمَا جَعَلَ أَزۡوَٰجَكُمُ ٱلَّٰٓـِٔي تُظَٰهِرُونَ مِنۡهُنَّ أُمَّهَٰتِكُمۡۚ وَمَا جَعَلَ أَدۡعِيَآءَكُمۡ أَبۡنَآءَكُمۡۚ ذَٰلِكُمۡ قَوۡلُكُم بِأَفۡوَٰهِكُمۡۖ وَٱللَّهُ يَقُولُ ٱلۡحَقَّ وَهُوَ يَهۡدِي ٱلسَّبِيلَ

ಅಲ್ಲಾಹು ಯಾವುದೇ ವ್ಯಕ್ತಿಗೂ ಅವನ ದೇಹದೊಳಗೆ ಎರಡು ಹೃದಯಗಳನ್ನು ಉಂಟುಮಾಡಿಲ್ಲ. ನೀವು ಝಿಹಾರ್ ಮಾಡುವ ನಿಮ್ಮ ಪತ್ನಿಯರನ್ನು ಅವನು ನಿಮಗೆ ತಾಯಿಯಾಗಿ ಮಾಡಿಲ್ಲ. ನಿಮ್ಮ ದತ್ತುಪುತ್ರರನ್ನು ಅವನು ನಿಮಗೆ ಪುತ್ರರಾಗಿ ಮಾಡಿಲ್ಲ. ಇವೆಲ್ಲವೂ ನೀವು ನಿಮ್ಮ ಬಾಯಿಯಿಂದ ಹೇಳುವ ಮಾತುಗಳಾಗಿವೆ. ಅಲ್ಲಾಹು ಸತ್ಯವನ್ನೇ ಹೇಳುತ್ತಾನೆ. ಅವನು ಸನ್ಮಾರ್ಗವನ್ನು ತೋರಿಸಿಕೊಡುತ್ತಾನೆ.

Explanation & meanings · 3
  1. ಕಪಟವಿಶ್ವಾಸಿಗಳಲ್ಲಿ ಕೆಲವರು ಹೇಳುತ್ತಿದ್ದರು: “ನಮಗೆ ಎರಡು ಹೃದಯಗಳಿವೆ. ಒಂದು ಹೃದಯದಲ್ಲಿ ಮುಸಲ್ಮಾನರ ಬಗ್ಗೆ ಪ್ರೀತಿಯಿದೆ ಮತ್ತು ಇನ್ನೊಂದು ಹೃದಯದಲ್ಲಿ ಸತ್ಯನಿಷೇಧಿಗಳ ಬಗ್ಗೆ ಪ್ರೀತಿಯಿದೆ.” ಆದರೆ ಅಲ್ಲಾಹು ಇದನ್ನು ನಿರಾಕರಿಸಿ, ಮನುಷ್ಯನಿಗೆ ಇರುವುದು ಒಂದೇ ಹೃದಯ. ಆ ಹೃದಯದಲ್ಲಿ ಅಲ್ಲಾಹನಲ್ಲಿರುವ ಪ್ರೀತಿ ಮತ್ತು ಅಲ್ಲಾಹನ ವೈರಿಗಳಲ್ಲಿರುವ ಪ್ರೀತಿ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾನೆ.
  2. ಝಿಹಾರ್ ಎಂದರೆ ಹೆಂಡತಿಯನ್ನು “ನೀನು ನನಗೆ ನನ್ನ ತಾಯಿ ಸಮಾನ” ಎಂದು ಹೇಳಿ ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನು ಕಡಿದುಕೊಳ್ಳುವುದು. ಆದರೆ ಇದು ವಿಚ್ಛೇದನವಲ್ಲ. ಆದ್ದರಿಂದ ಹೆಂಡತಿಗೆ ಅತ್ತ ಗಂಡನೊಂದಿಗೆ ಬದುಕಲೂ ಆಗದೆ ಇತ್ತ ಬೇರೊಬ್ಬನನ್ನು ವಿವಾಹವಾಗಲೂ ಆಗದೆ ಅಡಕತ್ತರಿಯಲ್ಲಿ ಸಿಲುಕಿದ ಪರಿಸ್ಥಿತಿಯನ್ನು ಅನುಭವಿಸಬೇಕಾಗಿ ಬರುತ್ತಿತ್ತು. ಇಸ್ಲಾಮಿ ಪೂರ್ವ ಕಾಲದಲ್ಲಿ ವ್ಯಾಪಕವಾಗಿದ್ದ ಇಂತಹ ಅನೇಕ ಮಹಿಳಾ ವಿರೋಧಿ ಸಂಪ್ರದಾಯಗಳನ್ನು ಇಸ್ಲಾಂ ಕೊನೆಗೊಳಿಸಿತು.
  3. ಮಕ್ಕಳನ್ನು ದತ್ತು ಪಡೆಯುವುದನ್ನು ಇಸ್ಲಾಂ ವಿರೋಧಿಸುವುದಿಲ್ಲ. ಆದರೆ ದತ್ತು ಪಡೆದ ಮಕ್ಕಳು ದತ್ತು ಪುತ್ರರಾಗಿರುತ್ತಾರೆಯೇ ವಿನಾ ದತ್ತು ಪಡೆದವನ ಸ್ವಂತ ಮಕ್ಕಳ ಸ್ಥಾನಮಾನಕ್ಕೇರುವುದಿಲ್ಲ. ದತ್ತು ಪಡೆದ ವ್ಯಕ್ತಿ ಕೇವಲ ಸಂರಕ್ಷಕನಾಗುತ್ತಾನೆಯೇ ಹೊರತು ನೈಜ ತಂದೆಯಾಗುವುದಿಲ್ಲ.

ٱدۡعُوهُمۡ لِأٓبَآئِهِمۡ هُوَ أَقۡسَطُ عِندَ ٱللَّهِۚ فَإِن لَّمۡ تَعۡلَمُوٓاْ ءَابَآءَهُمۡ فَإِخۡوَٰنُكُمۡ فِي ٱلدِّينِ وَمَوَٰلِيكُمۡۚ وَلَيۡسَ عَلَيۡكُمۡ جُنَاحٞ فِيمَآ أَخۡطَأۡتُم بِهِۦ وَلَٰكِن مَّا تَعَمَّدَتۡ قُلُوبُكُمۡۚ وَكَانَ ٱللَّهُ غَفُورٗا رَّحِيمًا

ನೀವು ಅವರನ್ನು (ದತ್ತುಪುತ್ರರನ್ನು) ಅವರ ತಂದೆಯ ಹೆಸರಿಗೆ ಸೇರಿಸಿ ಕರೆಯಿರಿ. ಅದು ಅಲ್ಲಾಹನ ಬಳಿ ಅತ್ಯಂತ ನ್ಯಾಯಯುತವಾಗಿದೆ. ನಿಮಗೆ ಅವರ ತಂದೆ ಯಾರೆಂದು ಗೊತ್ತಿಲ್ಲದಿದ್ದರೆ ಅವರು ನಿಮ್ಮ ಧಾರ್ಮಿಕ ಸಹೋದರರು ಮತ್ತು ಮಿತ್ರರಾಗಿದ್ದಾರೆ. ನೀವು ಪ್ರಮಾದದಿಂದ ಏನಾದರೂ ತಪ್ಪುಗಳನ್ನು ಮಾಡಿದರೆ ಅದರಿಂದ ನಿಮಗೆ ದೋಷವಿಲ್ಲ. ಆದರೆ ನೀವು ಉದ್ದೇಶಪೂರ್ವಕ ಮಾಡುವ ತಪ್ಪುಗಳಿಗೆ ಶಿಕ್ಷೆಯಿದೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.