Skip to content
ಸೂರಗಳ ಪಟ್ಟಿ /

الرُّوم

الرُّوم is chapter 30 of the Quran and has 60 verses. This page presents it in full in the Uthmani script, with a verse-by-verse translation of its meaning.

60 ಆಯತ್‌ಗಳು ಸೂರ ಸಂಖ್ಯೆ 30
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

الٓمٓ

ಅಲಿಫ್-ಲಾಮ್-ಮೀಮ್.

غُلِبَتِ ٱلرُّومُ

ರೋಮನ್ನರು ಪರಾಜಿತರಾದರು.

فِيٓ أَدۡنَى ٱلۡأَرۡضِ وَهُم مِّنۢ بَعۡدِ غَلَبِهِمۡ سَيَغۡلِبُونَ

ಸಮೀಪದ ಪ್ರದೇಶದಲ್ಲಿ. ತಮ್ಮ ಪರಾಜಯದ ಬಳಿಕ ಅವರು ಸದ್ಯವೇ ವಿಜಯಿಗಳಾಗುವರು.

Explanation & meanings · 1
  1. ಪ್ರವಾದಿ ಮುಹಮ್ಮದರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಎರಡು ಮಹಾ ಸಾಮ್ರಾಜ್ಯಗಳು ಅಸ್ತಿತ್ವದಲ್ಲಿದ್ದವು. ರೋಮನ್ ಸಾಮ್ರಾಜ್ಯ ಮತ್ತು ಪರ್ಶಿಯನ್ ಸಾಮ್ರಾಜ್ಯ. ಪರ್ಶಿಯನ್ನರು ಅಗ್ನಿಪೂಜಕರಾಗಿದ್ದರು ಮತ್ತು ರೋಮನ್ನರು ಅಹ್ಲೆ ಕಿತಾಬ್ (ಗ್ರಂಥ ನೀಡಲಾದವರು) ಆಗಿದ್ದರು. ಮಕ್ಕಾದ ಬಹುದೇವಾರಾಧಕರು ಪರ್ಶಿಯನ್ನರನ್ನು ಬೆಂಬಲಿಸುತ್ತಿದ್ದರು. ಏಕೆಂದರೆ ಅವರು ವಿಶ್ವಾಸ-ಆಚಾರಗಳಲ್ಲಿ ಸಾಮ್ಯತೆಯಿತ್ತು. ಮುಸಲ್ಮಾನರು ರೋಮನ್ನರ ಪರವಾಗಿದ್ದರು. ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿಯಾದ ಕೆಲವೇ ವರ್ಷಗಳಲ್ಲಿ ಪರ್ಶಿಯನ್ನರು ರೋಮನ್ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಅವರನ್ನು ಸೋಲಿಸಿದರು. ಇದರಿಂದ ಮಕ್ಕಾದ ಬಹುದೇವರಾಧಕರು ಹಿರಿ-ಹಿರಿ ಹಿಗ್ಗುತ್ತಾ ಮುಸ್ಲಿಮರನ್ನು ಮೂದಲಿಸತೊಡಗಿದರು. ಆಗ ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದನು.

فِي بِضۡعِ سِنِينَۗ لِلَّهِ ٱلۡأَمۡرُ مِن قَبۡلُ وَمِنۢ بَعۡدُۚ وَيَوۡمَئِذٖ يَفۡرَحُ ٱلۡمُؤۡمِنُونَ

ಕೆಲವೇ ವರ್ಷಗಳಲ್ಲಿ. ಅದರ ಮುಂದಿನ ಮತ್ತು ಹಿಂದಿನ ಸಂಗತಿಗಳ ನಿಯಂತ್ರಣವು ಅಲ್ಲಾಹನ ಕೈಯಲ್ಲಿದೆ. ಅಂದು ಸತ್ಯವಿಶ್ವಾಸಿಗಳು ಸಂಭ್ರಮಿಸುವರು.

Explanation & meanings · 1
  1. ಅಂದರೆ ಮೂರರಿಂದ ಒಂಬತ್ತು ವರ್ಷಗಳೊಳಗೆ. ಕುರ್‌ಆನ್‌ನ ಈ ಭವಿಷ್ಯ ನುಡಿ ಸತ್ಯವಾಯಿತು. ಏಳು ವರ್ಷಗಳಲ್ಲಿ ರೋಮನ್ನರು ಪರ್ಶಿಯನ್ನರನ್ನು ಸೋಲಿಸಿ ತಮ್ಮ ಪ್ರದೇಶಗಳನ್ನು ಮರಳಿ ವಶಪಡಿಸಿದರು.

بِنَصۡرِ ٱللَّهِۚ يَنصُرُ مَن يَشَآءُۖ وَهُوَ ٱلۡعَزِيزُ ٱلرَّحِيمُ

ಅಲ್ಲಾಹನ ಸಹಾಯದಿಂದ. ಅಲ್ಲಾಹು ಅವನು ಬಯಸುವವರಿಗೆ ಸಹಾಯ ಮಾಡುತ್ತಾನೆ. ಅವನು ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.