Skip to content
الأنبيَاء /

ಆಯತ್ 87

21 : 87

ಆಯತ್ 87 of الأنبيَاء (21 : 87). This page carries the verse in the Uthmani script with a translation of its meaning, at a stable URL that can be cited on its own.

الأنبيَاء ಆಯತ್‌ಗಳು 112
ಸೂರ · الأنبيَاء
ಕನ್ನಡ · Hamza
21 : 87

وَذَا ٱلنُّونِ إِذ ذَّهَبَ مُغَٰضِبٗا فَظَنَّ أَن لَّن نَّقۡدِرَ عَلَيۡهِ فَنَادَىٰ فِي ٱلظُّلُمَٰتِ أَن لَّآ إِلَٰهَ إِلَّآ أَنتَ سُبۡحَٰنَكَ إِنِّي كُنتُ مِنَ ٱلظَّٰلِمِينَ

ದುನ್ನೂನರನ್ನು (ಯೂನುಸ್) ಕೂಡ ನೆನಪಿಸಿಕೊಳ್ಳಿ! ಅವರು ಕೋಪದಿಂದ ಹೊರಟುಹೋದ ಸಂದರ್ಭ. ನಮಗೆ ಅವರನ್ನು ಹಿಡಿಯಲು ಸಾಧ್ಯವಿಲ್ಲವೆಂದು ಅವರು ಭಾವಿಸಿದ್ದರು. ನಂತರ ಅವರು ಅಂಧಕಾರಗಳ ಒಳಗಿನಿಂದ ಕೂಗಿ ಕರೆದರು: “ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವನಿಲ್ಲ. ನೀನು ಪರಿಶುದ್ಧನು! ನಿಶ್ಚಯವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿದ್ದೆ.”

Explanation & meanings · 1
  1. ದನ್ನೂನ್ ಎಂದರೆ ಮೀನಿನವನು ಎಂದರ್ಥ. ಪ್ರವಾದಿ ಯೂನುಸ್ (ಅವರ ಮೇಲೆ ಶಾಂತಿಯಿರಲಿ) ಕೋಪದಿಂದ ಊರು ಬಿಟ್ಟು ಹೊರಟು ಒಂದು ನಾವೆಯನ್ನೇರಿದರು. ನಾವೆಯಿಂದ ಹೊರಗೆಸೆಯಲಾದ ಯೂನುಸ್‌ರನ್ನು (ಅವರ ಮೇಲೆ ಶಾಂತಿಯಿರಲಿ) ಒಂದು ದೊಡ್ಡ ಮೀನು ನುಂಗಿತು. ಮೀನಿನ ಹೊಟ್ಟೆ ಸೇರಿದ ಅವರು ಆ ಕತ್ತಲೆಯಲ್ಲಿ ಅಲ್ಲಾಹನನ್ನು ಕರೆದು ಪ್ರಾರ್ಥಿಸಿದಾಗ ಅಲ್ಲಾಹು ಅವರನ್ನು ಅದರಿಂದ ರಕ್ಷಿಸಿದನು.