Skip to content

"ಇಸ್ಲಾಮ್ ಅಪರಿಚಿತ ಸ್ಥಿತಿಯಲ್ಲಿ ಪ್ರಾರಂಭವಾಯಿತು, ಮತ್ತು ಅದು ಪ್ರಾರಂಭವಾದಂತೆಯೇ ಮತ್ತೆ ಅಪರಿಚಿತ ಸ್ಥಿತಿಗೆ ಮರಳುತ್ತದೆ. ಆದ್ದರಿಂದ, ಆ ಅಪರಿಚಿತರಿಗೆ ಮಂಗಳವಾಗಲಿ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

"ಇಸ್ಲಾಮ್ ಅಪರಿಚಿತ ಸ್ಥಿತಿಯಲ್ಲಿ ಪ್ರಾರಂಭವಾಯಿತು, ಮತ್ತು ಅದು ಪ್ರಾರಂಭವಾದಂತೆಯೇ ಮತ್ತೆ ಅಪರಿಚಿತ ಸ್ಥಿತಿಗೆ ಮರಳುತ್ತದೆ. ಆದ್ದರಿಂದ, ಆ ಅಪರಿಚಿತರಿಗೆ ಮಂಗಳವಾಗಲಿ."

«بَدَأَ الْإِسْلَامُ غَرِيبًا، وَسَيَعُودُ كَمَا بَدَأَ غَرِيبًا، فَطُوبَى لِلْغُرَبَاءِ».

ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
ಸಹೀಹ್
ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಇಸ್ಲಾಮ್ ಕೆಲವೇ ಕೆಲವು ವ್ಯಕ್ತಿಗಳು ಮತ್ತು ಕಡಿಮೆ ಅನುಯಾಯಿಗಳಿರುವ ಸ್ಥಿತಿಯಲ್ಲಿ ಅಪರಿಚಿತವಾಗಿ ಪ್ರಾರಂಭವಾಯಿತು. ಅದು ಪ್ರಾರಂಭವಾದಂತೆಯೇ, ಅದನ್ನು ಜೀವನದಲ್ಲಿ ಅಳವಡಿಸುವವರ ಕೊರತೆಯಿಂದಾಗಿ ಮತ್ತೆ ಅದು ಅಪರಿಚಿತ ಸ್ಥಿತಿಗೆ ಮರಳುತ್ತದೆ. ಆದ್ದರಿಂದ, ಆ ಅಪರಿಚಿತರಿಗೆ ಸಂತೋಷ, ಸುಖ, ಹರ್ಷ ಮತ್ತು ಕಣ್ಣಿಗೆ ತಂಪು (ಖುರ್ರತು ಐನ್) ಇರಲಿ.

ಹದೀಸಿನ ಪ್ರಯೋಜನಗಳು

ಇಸ್ಲಾಮ್ (ಭೂಮಿಯಾದ್ಯಂತ) ಹರಡಿದ ಮತ್ತು ಪ್ರಸಿದ್ಧವಾದ ನಂತರವೂ ಅದಕ್ಕೆ ಅಪರಿಚಿತತೆ ಸಂಭವಿಸುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.

ಇದರಲ್ಲಿ ಪ್ರವಾದಿತ್ವದ ಚಿಹ್ನೆಗಳಲ್ಲಿ ಒಂದು ಚಿಹ್ನೆಯನ್ನು ತಿಳಿಸಲಾಗಿದೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ನಂತರ ಭವಿಷ್ಯದಲ್ಲಿ ಸಂಭವಿಸುವ ಒಂದು ವಿಷಯವನ್ನು ತಿಳಿಸಿದ್ದಾರೆ ಮತ್ತು ಅವರು ತಿಳಿಸಿದಂತೆಯೇ ಅದು ಸಂಭವಿಸಿದೆ.

ಇಸ್ಲಾಮಿಗಾಗಿ ತಮ್ಮ ತಾಯ್ನಾಡು ಮತ್ತು ಬುಡಕಟ್ಟುಗಳನ್ನು ತೊರೆದವರ ಶ್ರೇಷ್ಠತೆಯನ್ನು, ಮತ್ತು ಅವರಿಗೆ ಸ್ವರ್ಗವಿದೆ ಎಂಬುದನ್ನು ತಿಳಿಸಲಾಗಿದೆ.

'ಗುರಬಾಅ್' (ಅಪರಿಚಿತರು) ಯಾರೆಂದರೆ, ಜನರು ದಾರಿತಪ್ಪಿದಾಗ ಸರಿ ದಾರಿಯಲ್ಲಿರುವವರು ಮತ್ತು ಜನರು ಕೆಡಿಸಿದ್ದನ್ನು ಸರಿಪಡಿಸುವವರು.

ಉಲ್ಲೇಖಗಳು

ಸಹೀಹ್ ಮುಸ್ಲಿಮ್. (1/ 130) (145).

ಇನ್ನಷ್ಟು (2)

البحر المحيط الثجاج في شرح صحيح الإمام مسلم بن الحجاج (4/ 142).

إكمال المعلم بفوائد مسلم (1/ 456).