Skip to content

"ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಕುಟುಂಬದವರು ಮದೀನಕ್ಕೆ ಬಂದಾಗಿನಿಂದ, ಅವರು (ಪ್ರವಾದಿ) ಮರಣ ಹೊಂದುವವರೆಗೂ, ಸತತವಾಗಿ ಮೂರು ರಾತ್ರಿಗಳ ಕಾಲ ಗೋಧಿಯ ಆಹಾರದಿಂದ ಹೊಟ್ಟೆ ತುಂಬಿಸಿಲ್ಲ."

ಉಮ್ಮುಲ್ ಮೂಮಿನೀನ್ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:

"ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಕುಟುಂಬದವರು ಮದೀನಕ್ಕೆ ಬಂದಾಗಿನಿಂದ, ಅವರು (ಪ್ರವಾದಿ) ಮರಣ ಹೊಂದುವವರೆಗೂ, ಸತತವಾಗಿ ಮೂರು ರಾತ್ರಿಗಳ ಕಾಲ ಗೋಧಿಯ ಆಹಾರದಿಂದ ಹೊಟ್ಟೆ ತುಂಬಿಸಿಲ್ಲ."

مَا شَبِعَ آلُ مُحَمَّدٍ صَلَّى اللهُ عَلَيْهِ وَسَلَّمَ مُنْذُ قَدِمَ المَدِينَةَ مِنْ طَعَامِ البُرِّ ثَلاَثَ لَيَالٍ تِبَاعًا، حَتَّى قُبِضَ.

ಬುಖಾರಿ ಮತ್ತು ಮುಸ್ಲಿಂ.
ಸಹೀಹ್
ವಿವರಣೆ

ಉಮ್ಮುಲ್ ಮೂಮಿನೀನ್ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ತಿಳಿಸುವುದೇನೆಂದರೆ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಯವರು ಮದೀನಕ್ಕೆ ಬಂದಾಗಿನಿಂದ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದುವವರೆಗೂ, ಸತತವಾಗಿ ಮೂರು ದಿನಗಳ ಕಾಲ ಗೋಧಿಯ ಆಹಾರವನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿಲ್ಲ.

ಹದೀಸಿನ ಪ್ರಯೋಜನಗಳು

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಕುಟುಂಬದವರು ಎಂತಹ ಬಡತನದ ಸ್ಥಿತಿಯಲ್ಲಿದ್ದರು ಎಂಬುದನ್ನು ಇದು ವಿವರಿಸುತ್ತದೆ. ಖಂಡಿತವಾಗಿಯೂ (ನಿಜವಾದ) ಜೀವನವೆಂದರೆ ಪರಲೋಕದ ಜೀವನವಾಗಿದೆ.

ಇಬ್ನ್ ಹಜರ್ ಹೇಳುತ್ತಾರೆ: "ಹೆಚ್ಚಿನ ಸಂದರ್ಭಗಳಲ್ಲಿ ಅವರ ಬಳಿ ಆಹಾರದ ಕೊರತೆ ಇರುತ್ತಿದ್ದ ಕಾರಣದಿಂದಾಗಿಯೇ ಅವರು ಹೊಟ್ಟೆತುಂಬ ಊಟ ಮಾಡುತ್ತಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದರೂ, ಕೆಲವೊಮ್ಮೆ ಅವರ ಬಳಿ ಆಹಾರವಿದ್ದರೂ, ಅವರು (ಅದನ್ನು ತಿನ್ನುವ ಬದಲು) ತಮಗಿಂತ ಹೆಚ್ಚಾಗಿ ಇತರರಿಗೆ ಆದ್ಯತೆ ನೀಡುತ್ತಿದ್ದರು (ದಾನ ಮಾಡುತ್ತಿದ್ದರು)."

ಉಲ್ಲೇಖಗಳು

ಸಹೀಹುಲ್ ಬುಖಾರಿ. (7/ 75) (5416).

ಸಹೀಹ್ ಮುಸ್ಲಿಮ್. (4/ 2282) (2970).

ಇನ್ನಷ್ಟು (2)

المفهم لما أشكل من تلخيص كتاب مسلم (7/ 129).

البحر المحيط الثجاج في شرح صحيح الإمام مسلم بن الحجاج (45/ 129).