Skip to content
ಸೂರಗಳ ಪಟ್ಟಿ /

المُنَافِقُونَ

المُنَافِقُونَ is chapter 63 of the Quran and has 11 verses. This page presents it in full in the Uthmani script, with a verse-by-verse translation of its meaning.

11 ಆಯತ್‌ಗಳು ಸೂರ ಸಂಖ್ಯೆ 63
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

إِذَا جَآءَكَ ٱلۡمُنَٰفِقُونَ قَالُواْ نَشۡهَدُ إِنَّكَ لَرَسُولُ ٱللَّهِۗ وَٱللَّهُ يَعۡلَمُ إِنَّكَ لَرَسُولُهُۥ وَٱللَّهُ يَشۡهَدُ إِنَّ ٱلۡمُنَٰفِقِينَ لَكَٰذِبُونَ

ಕಪಟವಿಶ್ವಾಸಿಗಳು ನಿಮ್ಮ ಬಳಿಗೆ ಬಂದರೆ, “ಖಂಡಿತವಾಗಿಯೂ ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ ಎಂದು ನಾವು ಸಾಕ್ಷಿ ನುಡಿಯುತ್ತೇವೆ” ಎಂದು ಹೇಳುತ್ತಾರೆ. ನೀವು ಅಲ್ಲಾಹನ ಸಂದೇಶವಾಹಕರು ಎಂದು ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ನಿಶ್ಚಯವಾಗಿಯೂ ಕಪಟವಿಶ್ವಾಸಿಗಳು ಸುಳ್ಳು ಹೇಳುವವರಾಗಿದ್ದಾರೆ ಎಂದು ಅಲ್ಲಾಹು ಸಾಕ್ಷಿ ನುಡಿಯುತ್ತಾನೆ.

ٱتَّخَذُوٓاْ أَيۡمَٰنَهُمۡ جُنَّةٗ فَصَدُّواْ عَن سَبِيلِ ٱللَّهِۚ إِنَّهُمۡ سَآءَ مَا كَانُواْ يَعۡمَلُونَ

ಅವರು ತಮ್ಮ ಆಣೆಗಳನ್ನು ಗುರಾಣಿಯಾಗಿ ಮಾಡಿಕೊಂಡಿದ್ದಾರೆ. ಇದರ ಮೂಲಕ ಅವರು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಅವರು ಮಾಡುವ ಈ ಕೃತ್ಯವು ಬಹಳ ನಿಕೃಷ್ಟವಾಗಿದೆ.

ذَٰلِكَ بِأَنَّهُمۡ ءَامَنُواْ ثُمَّ كَفَرُواْ فَطُبِعَ عَلَىٰ قُلُوبِهِمۡ فَهُمۡ لَا يَفۡقَهُونَ

ಅದೇಕೆಂದರೆ, ಅವರು ಮೊದಲು ವಿಶ್ವಾಸವಿಟ್ಟು ನಂತರ ನಿಷೇಧಿಸಿದರು. ಆದ್ದರಿಂದ ಅವರ ಹೃದಯಗಳಿಗೆ ಮೊಹರು ಹಾಕಲಾಯಿತು. ಆದ್ದರಿಂದ ಅವರು (ಸತ್ಯವನ್ನು) ಅರ್ಥಮಾಡಿಕೊಳ್ಳುವುದಿಲ್ಲ.

۞ وَإِذَا رَأَيۡتَهُمۡ تُعۡجِبُكَ أَجۡسَامُهُمۡۖ وَإِن يَقُولُواْ تَسۡمَعۡ لِقَوۡلِهِمۡۖ كَأَنَّهُمۡ خُشُبٞ مُّسَنَّدَةٞۖ يَحۡسَبُونَ كُلَّ صَيۡحَةٍ عَلَيۡهِمۡۚ هُمُ ٱلۡعَدُوُّ فَٱحۡذَرۡهُمۡۚ قَٰتَلَهُمُ ٱللَّهُۖ أَنَّىٰ يُؤۡفَكُونَ

ನೀವು ಅವರನ್ನು ನೋಡಿದರೆ ಅವರ ಅಂಗಸೌಷ್ಟವವು ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಅವರು ಮಾತನಾಡ ತೊಡಗಿದರೆ ನೀವು ಅವರ ಮಾತನ್ನು ಕೇಳುವಿರಿ. ಅವರು ಗೋಡೆಗೆ ಒರಗಿ ನಿಲ್ಲಿಸಲಾದ ಮರದ ದಿಮ್ಮಿಗಳಂತೆ. ಪ್ರತಿಯೊಂದು ಶಬ್ದವನ್ನೂ ಅವರಿಗೆ ವಿರುದ್ಧವಾದುದೆಂದು ಅವರು ಭಾವಿಸುತ್ತಾರೆ. ಅವರೇ ನಿಜವಾದ ವೈರಿಗಳು. ಅವರ ಬಗ್ಗೆ ಜಾಗರೂಕರಾಗಿರಿ. ಅಲ್ಲಾಹು ಅವರನ್ನು ನಾಶ ಮಾಡಲಿ. ಅವರನ್ನು ಹೇಗೆ ತಪ್ಪಿಸಿಬಿಡಲಾಗುತ್ತಿದೆ?

وَإِذَا قِيلَ لَهُمۡ تَعَالَوۡاْ يَسۡتَغۡفِرۡ لَكُمۡ رَسُولُ ٱللَّهِ لَوَّوۡاْ رُءُوسَهُمۡ وَرَأَيۡتَهُمۡ يَصُدُّونَ وَهُم مُّسۡتَكۡبِرُونَ

“ಬನ್ನಿ, ಅಲ್ಲಾಹನ ಸಂದೇಶವಾಹಕರು ನಿಮಗೋಸ್ಕರ ಅಲ್ಲಾಹನಲ್ಲಿ ಕ್ಷಮೆಯಾಚನೆ ಮಾಡುತ್ತಾರೆ” ಎಂದು ಅವರೊಡನೆ ಹೇಳಲಾದರೆ ಅವರು ತಲೆಯನ್ನು ಅಲ್ಲಾಡಿಸುತ್ತಾರೆ. ಅವರು ಅಹಂಕಾರ ತೋರುತ್ತಾ ನುಣುಚಿಕೊಳ್ಳುವುದು ನಿಮಗೆ ಕಾಣಬಹುದು.