63 : 8
يَقُولُونَ لَئِن رَّجَعۡنَآ إِلَى ٱلۡمَدِينَةِ لَيُخۡرِجَنَّ ٱلۡأَعَزُّ مِنۡهَا ٱلۡأَذَلَّۚ وَلِلَّهِ ٱلۡعِزَّةُ وَلِرَسُولِهِۦ وَلِلۡمُؤۡمِنِينَ وَلَٰكِنَّ ٱلۡمُنَٰفِقِينَ لَا يَعۡلَمُونَ
ಅವರು ಹೇಳುತ್ತಾರೆ: “ನಾವು ಮದೀನಕ್ಕೆ ಮರಳಿದರೆ ಪ್ರತಿಷ್ಠೆಯುಳ್ಳವರು ದೀನರನ್ನು ಅಲ್ಲಿಂದ ಹೊರಗಟ್ಟುವರು.” ಪ್ರತಿಷ್ಠೆಯಿರುವುದು ಅಲ್ಲಾಹನಿಗೆ, ಅವನ ಸಂದೇಶವಾಹಕರಿಗೆ ಮತ್ತು ಸತ್ಯವಿಶ್ವಾಸಿಗಳಿಗೆ. ಆದರೆ ಕಪಟವಿಶ್ವಾಸಿಗಳು ಅದನ್ನು ತಿಳಿಯುವುದಿಲ್ಲ.
Explanation & meanings · 1
- ಇದು ಕಪಟವಿಶ್ವಾಸಿಗಳ ಮುಖಂಡ ಅಬ್ದುಲ್ಲಾ ಬಿನ್ ಉಬೈ ಹೇಳಿದ ಮಾತು. ಅವನ ಪ್ರಕಾರ ಅವನು ಮತ್ತು ಅವನ ಅನುಯಾಯಿಗಳು ಪ್ರತಿಷ್ಠಿತರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಅನುಯಾಯಿಗಳು ದೀನರು.