Skip to content
المَائدة /

ಆಯತ್ 75

5 : 75

ಆಯತ್ 75 of المَائدة (5 : 75). This page carries the verse in the Uthmani script with a translation of its meaning, at a stable URL that can be cited on its own.

المَائدة ಆಯತ್‌ಗಳು 120
ಸೂರ · المَائدة
ಕನ್ನಡ · Hamza
5 : 75

مَّا ٱلۡمَسِيحُ ٱبۡنُ مَرۡيَمَ إِلَّا رَسُولٞ قَدۡ خَلَتۡ مِن قَبۡلِهِ ٱلرُّسُلُ وَأُمُّهُۥ صِدِّيقَةٞۖ كَانَا يَأۡكُلَانِ ٱلطَّعَامَۗ ٱنظُرۡ كَيۡفَ نُبَيِّنُ لَهُمُ ٱلۡأٓيَٰتِ ثُمَّ ٱنظُرۡ أَنَّىٰ يُؤۡفَكُونَ

ಮರ್ಯಮರ ಮಗ ಮಸೀಹರು ಒಬ್ಬ ಸಂದೇಶವಾಹಕರು ಮಾತ್ರ. ಅವರಿಗಿಂತ ಮೊದಲು ಅನೇಕ ಸಂದೇಶವಾಹಕರು ಬಂದು ಹೋಗಿದ್ದಾರೆ. ಅವರ ತಾಯಿ ಸತ್ಯವಂತೆ. ಅವರಿಬ್ಬರೂ ಆಹಾರ ಸೇವಿಸುತ್ತಿದ್ದರು. ನಾವು ಅವರಿಗೆ ಹೇಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆಂದು ನೋಡಿ. ನಂತರ ಅವರು ಹೇಗೆ (ಸತ್ಯದಿಂದ) ತಪ್ಪಿಹೋಗುತ್ತಿದ್ದಾರೆಂದು ನೋಡಿ.

Explanation & meanings · 1
  1. ಈಸಾ (ಯೇಸು) ದೇವರಲ್ಲ ಎನ್ನುವುದಕ್ಕೆ ಇದು ಸ್ಪಷ್ಟ ಸಾಕ್ಷ್ಯವಾಗಿದೆ. ದೇವನು ನಿರಪೇಕ್ಷ. ಅವನು ಹಸಿವೆ, ನಿದ್ದೆ ಮುಂತಾದ ಮನುಷ್ಯ ಗುಣಗಳಿಂದ ಮುಕ್ತನಾಗಿದ್ದಾನೆ. ಹಸಿವೆಯಿರುವವನು, ಆಹಾರ ಸೇವಿಸುವವನು ದೇವನಾಗಲು ಸಾಧ್ಯವಿಲ್ಲ. ಏಕೆಂದರೆ ಅದು ದೈವಿಕ ಗುಣಕ್ಕೆ ವಿರುದ್ಧವಾಗಿದೆ.