Skip to content
ಸೂರಗಳ ಪಟ್ಟಿ /

غَافِر

غَافِر is chapter 40 of the Quran and has 85 verses. This page presents it in full in the Uthmani script, with a verse-by-verse translation of its meaning.

85 ಆಯತ್‌ಗಳು ಸೂರ ಸಂಖ್ಯೆ 40
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

تَنزِيلُ ٱلۡكِتَٰبِ مِنَ ٱللَّهِ ٱلۡعَزِيزِ ٱلۡعَلِيمِ

ಈ ಗ್ರಂಥವು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ಕಡೆಯಿಂದ ಅವತೀರ್ಣವಾಗಿದೆ.

غَافِرِ ٱلذَّنۢبِ وَقَابِلِ ٱلتَّوۡبِ شَدِيدِ ٱلۡعِقَابِ ذِي ٱلطَّوۡلِۖ لَآ إِلَٰهَ إِلَّا هُوَۖ إِلَيۡهِ ٱلۡمَصِيرُ

ಅವನು ಪಾಪವನ್ನು ಕ್ಷಮಿಸುವವನು, ಪಶ್ಚಾತ್ತಾಪವನ್ನು ಸ್ವೀಕರಿಸುವವನು, ಕಠಿಣವಾಗಿ ಶಿಕ್ಷಿಸುವವನು ಮತ್ತು ಅಪಾರ ಸಾಮರ್ಥ್ಯವುಳ್ಳವನಾಗಿದ್ದಾನೆ. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಗಮ್ಯಸ್ಥಾನವು ಅವನ ಬಳಿಗೇ ಆಗಿದೆ.

مَا يُجَٰدِلُ فِيٓ ءَايَٰتِ ٱللَّهِ إِلَّا ٱلَّذِينَ كَفَرُواْ فَلَا يَغۡرُرۡكَ تَقَلُّبُهُمۡ فِي ٱلۡبِلَٰدِ

ಅಲ್ಲಾಹನ ವಚನಗಳ ಬಗ್ಗೆ ಸತ್ಯನಿಷೇಧಿಗಳು ಮಾತ್ರ ತರ್ಕಿಸುತ್ತಾರೆ. ಅವರು ಊರುಗಳಲ್ಲಿ ಸ್ವೇಚ್ಛವಾಗಿ ವಿಹರಿಸುವುದು ನಿಮ್ಮನ್ನು ಮರುಳುಗೊಳಿಸದಿರಲಿ.

كَذَّبَتۡ قَبۡلَهُمۡ قَوۡمُ نُوحٖ وَٱلۡأَحۡزَابُ مِنۢ بَعۡدِهِمۡۖ وَهَمَّتۡ كُلُّ أُمَّةِۭ بِرَسُولِهِمۡ لِيَأۡخُذُوهُۖ وَجَٰدَلُواْ بِٱلۡبَٰطِلِ لِيُدۡحِضُواْ بِهِ ٱلۡحَقَّ فَأَخَذۡتُهُمۡۖ فَكَيۡفَ كَانَ عِقَابِ

ಅವರಿಗಿಂತ ಮೊದಲು ನೂಹರ ಜನರು ಮತ್ತು ಅವರ ನಂತರದ ಪಂಗಡಗಳು (ಪ್ರವಾದಿಗಳನ್ನು) ನಿಷೇಧಿಸಿದ್ದರು. ಎಲ್ಲಾ ಸಮುದಾಯಗಳ ಜನರೂ ತಮ್ಮ ಸಂದೇಶವಾಹಕರನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದರು. ಸತ್ಯವನ್ನು ನಾಶ ಮಾಡಲು ಅವರು ಅಸತ್ಯದ ಮೂಲಕ ತರ್ಕಿಸಿದರು. ಆದ್ದರಿಂದ ನಾನು ಅವರನ್ನು ಹಿಡಿದು ಶಿಕ್ಷಿಸಿದೆನು. ಆಗ ನನ್ನ ಶಿಕ್ಷೆಯು ಹೇಗಿತ್ತು!