Skip to content
ಸೂರಗಳ ಪಟ್ಟಿ /

الزُّمَر

الزُّمَر is chapter 39 of the Quran and has 75 verses. This page presents it in full in the Uthmani script, with a verse-by-verse translation of its meaning.

75 ಆಯತ್‌ಗಳು ಸೂರ ಸಂಖ್ಯೆ 39
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

تَنزِيلُ ٱلۡكِتَٰبِ مِنَ ٱللَّهِ ٱلۡعَزِيزِ ٱلۡحَكِيمِ

ಈ ಗ್ರಂಥವು ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನಿಂದ ಅವತೀರ್ಣವಾಗಿದೆ.

إِنَّآ أَنزَلۡنَآ إِلَيۡكَ ٱلۡكِتَٰبَ بِٱلۡحَقِّ فَٱعۡبُدِ ٱللَّهَ مُخۡلِصٗا لَّهُ ٱلدِّينَ

ನಿಶ್ಚಯವಾಗಿಯೂ ನಾವು ಈ ಗ್ರಂಥವನ್ನು ನಿಮಗೆ ಸತ್ಯದೊಂದಿಗೆ ಅವತೀರ್ಣಗೊಳಿಸಿದ್ದೇವೆ. ಆದ್ದರಿಂದ ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಮಾತ್ರ ಆರಾಧಿಸಿರಿ.

أَلَا لِلَّهِ ٱلدِّينُ ٱلۡخَالِصُۚ وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٞ كَفَّارٞ

ತಿಳಿಯಿರಿ! ನಿಷ್ಕಳಂಕವಾದ ಆರಾಧನೆಯು ಅಲ್ಲಾಹನಿಗೆ ಮಾತ್ರವಾಗಿರಬೇಕು. ಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಮಾಡಿಕೊಂಡವರು ಹೇಳುತ್ತಾರೆ: “ನಾವು ಅವರನ್ನು ಆರಾಧಿಸುವುದು ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸುತ್ತಾರೆಂಬ ಕಾರಣದಿಂದಾಗಿದೆ.” ಅವರು ಯಾವ ವಿಷಯದಲ್ಲಿ ಭಿನ್ನಮತದಲ್ಲಿದ್ದಾರೋ ಆ ವಿಷಯದಲ್ಲಿ ನಿಶ್ಚಯವಾಗಿಯೂ ಅಲ್ಲಾಹು ಅವರ ಮಧ್ಯೆ ತೀರ್ಪು ನೀಡುವನು. ನಿಶ್ಚಯವಾಗಿಯೂ ಸುಳ್ಳು ಹೇಳುವ ಮತ್ತು ಕೃತಜ್ಞತಾಭಾವವಿಲ್ಲದ ಯಾರಿಗೂ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.

لَّوۡ أَرَادَ ٱللَّهُ أَن يَتَّخِذَ وَلَدٗا لَّٱصۡطَفَىٰ مِمَّا يَخۡلُقُ مَا يَشَآءُۚ سُبۡحَٰنَهُۥۖ هُوَ ٱللَّهُ ٱلۡوَٰحِدُ ٱلۡقَهَّارُ

ಮಕ್ಕಳಿರಬೇಕೆಂಬುದು ಅಲ್ಲಾಹನ ಉದ್ದೇಶವಾಗಿದ್ದರೆ ಅವನ ಸೃಷ್ಟಿಗಳಲ್ಲಿ ಅವನು ಇಚ್ಛಿಸುವ ಯಾರನ್ನಾದರೂ ಅವನು ಆರಿಸುತ್ತಿದ್ದನು. ಅವನು ಪರಿಶುದ್ಧನು! ಅವನು ಏಕೈಕನು ಮತ್ತು ಸರ್ವಾಧಿಕಾರಿಯಾದ ಅಲ್ಲಾಹನಾಗಿದ್ದಾನೆ.

خَلَقَ ٱلسَّمَٰوَٰتِ وَٱلۡأَرۡضَ بِٱلۡحَقِّۖ يُكَوِّرُ ٱلَّيۡلَ عَلَى ٱلنَّهَارِ وَيُكَوِّرُ ٱلنَّهَارَ عَلَى ٱلَّيۡلِۖ وَسَخَّرَ ٱلشَّمۡسَ وَٱلۡقَمَرَۖ كُلّٞ يَجۡرِي لِأَجَلٖ مُّسَمًّىۗ أَلَا هُوَ ٱلۡعَزِيزُ ٱلۡغَفَّٰرُ

ಅವನು ಭೂಮ್ಯಾಕಾಶಗಳನ್ನು ಸತ್ಯದೊಂದಿಗೆ ಸೃಷ್ಟಿಸಿದನು. ಅವನು ರಾತ್ರಿಯನ್ನು ಹಗಲಿನ ಮೇಲೆ ಸುತ್ತಿ ಹೊದಿಯುತ್ತಾನೆ ಮತ್ತು ಹಗಲನ್ನು ರಾತ್ರಿಯ ಮೇಲೆ ಸುತ್ತಿ ಹೊದಿಯುತ್ತಾನೆ. ಅವನು ಸೂರ್ಯ ಮತ್ತು ಚಂದ್ರನನ್ನು ಅಧೀನಗೊಳಿಸಿದ್ದಾನೆ. ಎಲ್ಲವೂ ಒಂದು ನಿಶ್ಚಿತ ಅವಧಿಯವರೆಗೆ ಚಲಿಸುತ್ತವೆ. ತಿಳಿಯಿರಿ! ಅವನು ಪ್ರಬಲನು ಮತ್ತು ಕ್ಷಮಿಸುವವನಾಗಿದ್ದಾನೆ.