Skip to content
غَافِر /

ಆಯತ್ 11

40 : 11
غَافِر ಆಯತ್‌ಗಳು 85
ಸೂರ · غَافِر
ಕನ್ನಡ · Hamza
40 : 11

قَالُواْ رَبَّنَآ أَمَتَّنَا ٱثۡنَتَيۡنِ وَأَحۡيَيۡتَنَا ٱثۡنَتَيۡنِ فَٱعۡتَرَفۡنَا بِذُنُوبِنَا فَهَلۡ إِلَىٰ خُرُوجٖ مِّن سَبِيلٖ

ಅವರು ಹೇಳುವರು: “ನಮ್ಮ ಪರಿಪಾಲಕನೇ! ನೀನು ನಮ್ಮನ್ನು ಎರಡು ಬಾರಿ ಸಾವನ್ನಪ್ಪುವಂತೆ ಮಾಡಿದೆ ಮತ್ತು ನಮಗೆ ಎರಡು ಬಾರಿ ಜೀವವನ್ನು ನೀಡಿದೆ. ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದೇವೆ. ಆದ್ದರಿಂದ ಹೊರಹೋಗಲು ಯಾವುದಾದರೂ ದಾರಿಯಿದೆಯೇ?”

Explanation & meanings · 1
  1. ಮೊದಲನೇ ಸಾವು ಎಂದರೆ ಜನನಕ್ಕೆ ಮುನ್ನ ಇದ್ದಂತಹ ನಿರ್ಜೀವ ಸ್ಥಿತಿ. ಎರಡನೇ ಸಾವು ಮನುಷ್ಯನ ಸ್ವಾಭಾವಿಕ ಮರಣ. ಮೊದಲನೇ ಜೀವನವು ಇಹಲೋಕ ಜೀವನ ಮತ್ತು ಎರಡನೇ ಜೀವನವು ಪರಲೋಕ ಜೀವನ.