40 : 29
يَٰقَوۡمِ لَكُمُ ٱلۡمُلۡكُ ٱلۡيَوۡمَ ظَٰهِرِينَ فِي ٱلۡأَرۡضِ فَمَن يَنصُرُنَا مِنۢ بَأۡسِ ٱللَّهِ إِن جَآءَنَاۚ قَالَ فِرۡعَوۡنُ مَآ أُرِيكُمۡ إِلَّا مَآ أَرَىٰ وَمَآ أَهۡدِيكُمۡ إِلَّا سَبِيلَ ٱلرَّشَادِ
ಓ ನನ್ನ ಜನರೇ! ನೀವು ಭೂಮಿಯಲ್ಲಿ ಪ್ರಾಬಲ್ಯ ಪಡೆದಿರುವ ಕಾರಣ ಇಂದು ಇದರ ಸಾರ್ವಭೌಮತ್ವವು ನಿಮ್ಮ ವಶದಲ್ಲಿದೆ. ಆದರೆ ಅಲ್ಲಾಹನ ಶಿಕ್ಷೆ ನಮ್ಮ ಬಳಿಗೆ ಬಂದರೆ ನಮಗೆ ಸಹಾಯ ಮಾಡುವವರು ಯಾರು?” ಫರೋಹ ಹೇಳಿದನು: “ನಾನು ಸ್ವತಃ ನನಗಾಗಿ ಸರಿಯೆಂದು ಕಾಣುವ ಮಾರ್ಗವನ್ನೇ ನಿಮಗೆ ತಿಳಿಸುತ್ತಿದ್ದೇನೆ. ನಾನು ನಿಮಗೆ ಒಳಿತಿನ ಮಾರ್ಗವನ್ನೇ ತೋರಿಸಿಕೊಡುತ್ತಿದ್ದೇನೆ.”