Skip to content
النِّسَاء /

ಆಯತ್ 102

4 : 102

ಆಯತ್ 102 of النِّسَاء (4 : 102). This page carries the verse in the Uthmani script with a translation of its meaning, at a stable URL that can be cited on its own.

النِّسَاء ಆಯತ್‌ಗಳು 176
ಸೂರ · النِّسَاء
ಕನ್ನಡ · Hamza
4 : 102

وَإِذَا كُنتَ فِيهِمۡ فَأَقَمۡتَ لَهُمُ ٱلصَّلَوٰةَ فَلۡتَقُمۡ طَآئِفَةٞ مِّنۡهُم مَّعَكَ وَلۡيَأۡخُذُوٓاْ أَسۡلِحَتَهُمۡۖ فَإِذَا سَجَدُواْ فَلۡيَكُونُواْ مِن وَرَآئِكُمۡ وَلۡتَأۡتِ طَآئِفَةٌ أُخۡرَىٰ لَمۡ يُصَلُّواْ فَلۡيُصَلُّواْ مَعَكَ وَلۡيَأۡخُذُواْ حِذۡرَهُمۡ وَأَسۡلِحَتَهُمۡۗ وَدَّ ٱلَّذِينَ كَفَرُواْ لَوۡ تَغۡفُلُونَ عَنۡ أَسۡلِحَتِكُمۡ وَأَمۡتِعَتِكُمۡ فَيَمِيلُونَ عَلَيۡكُم مَّيۡلَةٗ وَٰحِدَةٗۚ وَلَا جُنَاحَ عَلَيۡكُمۡ إِن كَانَ بِكُمۡ أَذٗى مِّن مَّطَرٍ أَوۡ كُنتُم مَّرۡضَىٰٓ أَن تَضَعُوٓاْ أَسۡلِحَتَكُمۡۖ وَخُذُواْ حِذۡرَكُمۡۗ إِنَّ ٱللَّهَ أَعَدَّ لِلۡكَٰفِرِينَ عَذَابٗا مُّهِينٗا

(ಓ ಪ್ರವಾದಿಯವರೇ!) ನೀವು ಅವರ ಜೊತೆಯಲ್ಲಿರುವಾಗ ಮತ್ತು ಅವರಿಗೆ ಇಮಾಂ ನಿಂತು ನಮಾಝ್ ನಿರ್ವಹಿಸುತ್ತಿರುವಾಗ, ಅವರಲ್ಲೊಂದು ಗುಂಪು ತಮ್ಮ ಜೊತೆಗೆ ನಮಾಝ್ ಮಾಡಲಿ. ಅವರು ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡಿರಲಿ. ಅವರು ಸುಜೂದ್ ಮಾಡಿದ ನಂತರ ತಮ್ಮ ಹಿಂಭಾಗಕ್ಕೆ ಸರಿದು, ನಮಾಝ್ ನಿರ್ವಹಿಸದ ಇನ್ನೊಂದು ಗುಂಪು ಬಂದು ನಿಮ್ಮೊಂದಿಗೆ ನಮಾಝ್ ನಿರ್ವಹಿಸಲಿ. ಅವರು ಎಚ್ಚರವಾಗಿರಲಿ ಮತ್ತು ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡಿರಲಿ. ನೀವು ನಿಮ್ಮ ಶಸ್ತ್ರಗಳನ್ನು ಮತ್ತು ನಿಮ್ಮ ಸಾಮಗ್ರಿಗಳನ್ನು ನಿರ್ಲಕ್ಷಿಸಿದರೆ, ನಿಮ್ಮ ಮೇಲೆ ಒಮ್ಮೆಲೇ ದಾಳಿ ಮಾಡಬಹುದೆಂದು ಸತ್ಯನಿಷೇಧಿಗಳು ಬಯಸುತ್ತಾರೆ. ಆದರೆ ನೀವು ಮಳೆಯಿಂದ ತೊಂದರೆ ಅನುಭವಿಸುತ್ತಿದ್ದರೆ, ಅಥವಾ ನೀವು ಅನಾರೋಗ್ಯದಲ್ಲಿದ್ದರೆ, ನಿಮ್ಮ ಶಸ್ತ್ರಗಳನ್ನು ಕೆಳಗಿಡುವುದರಲ್ಲಿ ದೋಷವಿಲ್ಲ. ಆದರೆ ಪೂರ್ಣ ಎಚ್ಚರಿಕೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳಿಗೆ ಅವಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ.

Explanation & meanings · 1
  1. ಇದು ಯುದ್ಧ ಮಾಡುವ ಸಂದರ್ಭದಲ್ಲಿ ನಮಾಝ್ ಹೇಗೆ ನಿರ್ವಹಿಸಬೇಕು ಎಂಬುದರ ವಿವರಣೆಯಾಗಿದೆ. ಇದನ್ನು ಸಲಾತುಲ್ ಖೌಫ್ (ಭಯದ ನಮಾಝ್) ಎಂದು ಕರೆಯಲಾಗುತ್ತದೆ.