ಯಾರು ಒಳಿತನ್ನು ತೋರಿಸಿಕೊಡುತ್ತಾರೋ ಅವನಿಗೆ ಆ ಒಳಿತು ಮಾಡಿದ ವ್ಯಕ್ತಿಗೆ ದೊರಕುವಷ್ಟೇ ಪ್ರತಿಫಲ ದೊರಕುತ್ತದೆ
ಅಬೂ ಮಸ್‌ಊದ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನನ್ನ ಒಂಟೆ ಸುಸ್ತಾಗಿಬಿಟ್ಟಿದೆ. ಆದ್ದರಿಂದ ನನಗೆ ಸವಾರಿ ಮಾಡುವ ಒಂದು ಒಂಟೆಯನ್ನು ಕೊಡಿ." ಅವರು ಹೇಳಿದರು: "ನನ್ನ ಬಳಿ ಒಂಟೆಯಿಲ್ಲ." ಆಗ ಆ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವನಿಗೆ ಒಂಟೆ ಕೊಡುವ ವ್ಯಕ್ತಿಯನ್ನು ನಾನು ತೋರಿಸುತ್ತೇನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಒಳಿತನ್ನು ತೋರಿಸಿಕೊಡುತ್ತಾರೋ ಅವನಿಗೆ ಆ ಒಳಿತು ಮಾಡಿದ ವ್ಯಕ್ತಿಗೆ ದೊರಕುವಷ್ಟೇ ಪ್ರತಿಫಲ ದೊರಕುತ್ತದೆ."
جَاءَ رَجُلٌ إِلَى النَّبِيِّ صَلَّى اللهُ عَلَيْهِ وَسَلَّمَ فَقَالَ: إِنِّي أُبْدِعَ بِي فَاحْمِلْنِي، فَقَالَ: «مَا عِنْدِي»، فَقَالَ رَجُلٌ: يَا رَسُولَ اللهِ، أَنَا أَدُلُّهُ عَلَى مَنْ يَحْمِلُهُ، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «مَنْ دَلَّ عَلَى خَيْرٍ فَلَهُ مِثْلُ أَجْرِ فَاعِلِهِ».
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನನ್ನ ಒಂಟೆ ಸತ್ತಿದೆ. ನನ್ನನ್ನು ನನ್ನ ಊರಿಗೆ ತಲುಪಿಸುವ ಒಂದು ಒಂಟೆಯನ್ನು ಕೊಡಿ." ಆದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತನ್ನಲ್ಲಿ ಸವಾರಿ ಮಾಡುವ ಒಂಟೆಯಿಲ್ಲವೆಂದು ಹೇಳಿದರು. ಆಗ ಅಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವನಿಗೆ ಒಂಟೆಯನ್ನು ನೀಡುವ ವ್ಯಕ್ತಿಯನ್ನು ನಾನು ತೋರಿಸುತ್ತೇನೆ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಒಂಟೆಯನ್ನು ದಾನ ಮಾಡುವ ವ್ಯಕ್ತಿಗೆ ಸಿಗುವ ಪ್ರತಿಫಲದಲ್ಲಿ ಇವನೂ ಭಾಗಿಯಾಗುತ್ತಾನೆಂದು ಹೇಳಿದರು. ಏಕೆಂದರೆ ಅವನು ಒಂಟೆಯ ಅಗತ್ಯವಿರುವ ಆ ವ್ಯಕ್ತಿಗೆ ಒಂಟೆ ನೀಡುವ ವ್ಯಕ್ತಿಯನ್ನು ತೋರಿಸಿಕೊಟ್ಟಿದ್ದಾನೆ.
...:
ಒಳಿತನ್ನು ತೋರಿಸಿಕೊಡಲು ಈ ಹದೀಸ್ ಪ್ರೇರೇಪಿಸುತ್ತದೆ.
ಒಳಿತು ಮಾಡಲು ಪ್ರೋತ್ಸಾಹಿಸುವುದು ಮುಸ್ಲಿಂ ಸಮುದಾಯದ ಒಗ್ಗಟ್ಟು ಮತ್ತು ಏಕೀಕರಣಕ್ಕೆ ಕಾರಣವಾಗುತ್ತದೆ.
ಸರ್ವಶಕ್ತನಾದ ಅಲ್ಲಾಹನ ಮಹಾ ಉದಾರತೆಯನ್ನು ಈ ಹದೀಸ್ ತಿಳಿಸುತ್ತದೆ.
ಈ ಹದೀಸ್ ಒಂದು ಸಾಮಾನ್ಯ ನಿಯಮವನ್ನು ಹೊಂದಿದ್ದು, ಒಳಿತಿನ ಕಾರ್ಯಗಳೆಲ್ಲವೂ ಅದರಲ್ಲಿ ಒಳಪಡುತ್ತವೆ.
ಅಗತ್ಯದಲ್ಲಿರುವವನ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದಿದ್ದರೆ, ಅದನ್ನು ಈಡೇರಿಸುವವರನ್ನು ತೋರಿಸಿಕೊಡಬೇಕೆಂದು ಈ ಹದೀಸ್ ತಿಳಿಸುತ್ತದೆ.
ಸಹೀಹ್ ಮುಸ್ಲಿಮ್. (3/ 1506) (1893).
ಇನ್ನಷ್ಟು (5)
شرح النووي على مسلم (11/ 166).
توضيح الأحكام من بلوغ المرام.
للبسام (7/ 349).
فتح ذي الجلال والاكرام بشرح بلوغ المرام.
لابن عثيمين (6/ 298).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
6 ಗ್ರಂಥಗಳುಇನ್ನಷ್ಟು (6)
- التحقيق والإيضاح لكثير من مسائل الحج والعمرة والزيارة على ضوء الكتاب والسنةالتحقيق والإيضاح لكثير من مسائل الحج والعمرة والزيارة - النسخة المعتمدة«مَنْ دَلَّ عَلَى خَيْرٍ فَلَهُ مِثْلُ أَجْرِ فَاعِلِهِ» [104]
- الدعوة إلى الله وأخلاق الدعاة«مَنْ دَلَّ عَلَى خَيْرٍ فَلَهُ مِثْلُ أَجْرِ فَاعِلِهِ »
- المنتقى من المتجر الرابح في ثواب العمل الصالح - المعتمدالمنتقى من المتجر الرابح في ثواب العمل الصالح“من دل على خير فله مثل أجر فاعله”.
- تحفة الأخيار تحفة الأخيار (ببيان جملة نافعة مما ورد في الكتاب والسنة من الأدعية والأذكار)«مَنْ دَلَّ عَلَى خَيْرٍ فَلَهُ مِثْلُ أَجْرِ فَاعِلِهِ» [102]
- رياض الصالحينرياض الصالحين مع فوائد وهدايات - 1 «مَنْ دَلَّ عَلَىٰ خَيْرٍ فَلَهُ مِثْلُ أَجْرِ فَاعِلِهِ»،
- رياض الصالحينرياض الصالحين مع فوائد وهدايات - 2«مَنْ دَلَّ عَلَىٰ خَيْر فَلَهُ مِثْلُ أَجْرِ فَاعِلِهِ».