Skip to content
ಸೂರಗಳ ಪಟ್ಟಿ /

المُدثر

المُدثر is chapter 74 of the Quran and has 56 verses. This page presents it in full in the Uthmani script, with a verse-by-verse translation of its meaning.

56 ಆಯತ್‌ಗಳು ಸೂರ ಸಂಖ್ಯೆ 74
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

يَٰٓأَيُّهَا ٱلۡمُدَّثِّرُ

ಓ ಹೊದಿಕೆಯನ್ನು ಹೊದ್ದುಕೊಂಡವರೇ!

Explanation & meanings · 1
  1. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೊಟ್ಟಮೊದಲು ಸೂರ ಅಲಕ್‌ನ ಪ್ರಥಮ 5 ವಚನಗಳು ಅವತೀರ್ಣವಾದವು. ನಂತರ ದೀರ್ಘ ಸಮಯದ ತನಕ ಅವರಿಗೆ ಕುರ್‌ಆನ್ ಅವತೀರ್ಣವಾಗಲಿಲ್ಲ. ಒಂದಿನ ಇದ್ದಕ್ಕಿದ್ದಂತೆ ಹಿರಾ ಗುಹೆಯಲ್ಲಿ ನೋಡಿದ ಅದೇ ದೇವದೂತರು ಆಕಾಶ ಮತ್ತು ಭೂಮಿಯ ಮಧ್ಯೆ ಸಂಪೂರ್ಣ ದಿಗಂತವನ್ನು ಮುಚ್ಚುವ ರೀತಿಯಲ್ಲಿ ಕುಳಿತಿರುವುದನ್ನು ಕಂಡರು. ಅವರು ಭಯದಿಂದ ಮನೆಗೆ ಓಡಿ ನನ್ನನ್ನು ಹೊದಿಯಿರಿ; ನನ್ನನ್ನು ಹೊದಿಯಿರಿ ಎಂದರು. ಅವರನ್ನು ಹೊದಿಕೆಯಿಂದ ಹೊದಿಯಲಾಯಿತು. ಆಗ ಈ ವಚನಗಳು ಅವತೀರ್ಣವಾದವು.

قُمۡ فَأَنذِرۡ

ಎದ್ದೇಳಿರಿ ಮತ್ತು ಎಚ್ಚರಿಕೆ ನೀಡಿರಿ.

وَرَبَّكَ فَكَبِّرۡ

ನಿಮ್ಮ ಪರಿಪಾಲಕನ (ಅಲ್ಲಾಹನ) ಮಹಾತ್ಮೆಯನ್ನು ಕೊಂಡಾಡಿರಿ.

وَثِيَابَكَ فَطَهِّرۡ

ನಿಮ್ಮ ಬಟ್ಟೆಗಳನ್ನು ಶುದ್ಧವಾಗಿಡಿರಿ.

وَٱلرُّجۡزَ فَٱهۡجُرۡ

ಅಶುದ್ಧವನ್ನು ವರ್ಜಿಸಿರಿ.