Skip to content
ಸೂರಗಳ ಪಟ್ಟಿ /

الحَشر

الحَشر is chapter 59 of the Quran and has 24 verses. This page presents it in full in the Uthmani script, with a verse-by-verse translation of its meaning.

24 ಆಯತ್‌ಗಳು ಸೂರ ಸಂಖ್ಯೆ 59
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

سَبَّحَ لِلَّهِ مَا فِي ٱلسَّمَٰوَٰتِ وَمَا فِي ٱلۡأَرۡضِۖ وَهُوَ ٱلۡعَزِيزُ ٱلۡحَكِيمُ

ಭೂಮ್ಯಾಕಾಶಗಳಲ್ಲಿರುವ ಎಲ್ಲಾ ವಸ್ತುಗಳೂ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುತ್ತಿವೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

هُوَ ٱلَّذِيٓ أَخۡرَجَ ٱلَّذِينَ كَفَرُواْ مِنۡ أَهۡلِ ٱلۡكِتَٰبِ مِن دِيَٰرِهِمۡ لِأَوَّلِ ٱلۡحَشۡرِۚ مَا ظَنَنتُمۡ أَن يَخۡرُجُواْۖ وَظَنُّوٓاْ أَنَّهُم مَّانِعَتُهُمۡ حُصُونُهُم مِّنَ ٱللَّهِ فَأَتَىٰهُمُ ٱللَّهُ مِنۡ حَيۡثُ لَمۡ يَحۡتَسِبُواْۖ وَقَذَفَ فِي قُلُوبِهِمُ ٱلرُّعۡبَۚ يُخۡرِبُونَ بُيُوتَهُم بِأَيۡدِيهِمۡ وَأَيۡدِي ٱلۡمُؤۡمِنِينَ فَٱعۡتَبِرُواْ يَٰٓأُوْلِي ٱلۡأَبۡصَٰرِ

ಅವನೇ ಪ್ರಥಮ ಗಡೀಪಾರಿನಲ್ಲಿ ಗ್ರಂಥದವರಲ್ಲಿ ಸೇರಿದ ಸತ್ಯನಿಷೇಧಿಗಳನ್ನು ಅವರ ಮನೆಗಳಿಂದ ಹೊರದಬ್ಬಿದವನು. ಅವರು ಹೊರಹೋಗುವರೆಂದು ನೀವು ಊಹಿಸಿಯೂ ಇರಲಿಲ್ಲ. ಅವರ ಕೋಟೆಗಳು ಅವರನ್ನು ಅಲ್ಲಾಹನ ಶಿಕ್ಷೆಯಿಂದ ಕಾಪಾಡುತ್ತವೆ ಎಂದು ಅವರು ಭಾವಿಸಿದ್ದರು. ಆದರೆ ಅವರು ನಿರೀಕ್ಷಿಸಿಯೇ ಇರದ ಕಡೆಯಿಂದ ಅಲ್ಲಾಹನ ಶಿಕ್ಷೆಯು ಅವರ ಬಳಿಗೆ ಬಂತು. ಅಲ್ಲಾಹು ಅವರ ಹೃದಯದಲ್ಲಿ ಭೀತಿಯನ್ನು ಬಿತ್ತಿದನು. ಅವರು ಅವರ ಕೈಗಳಿಂದಲೇ ಅವರ ಮನೆಗಳನ್ನು ನಾಶ ಮಾಡುತ್ತಿದ್ದರು. ಸತ್ಯವಿಶ್ವಾಸಿಗಳ ಕೈಗಳು ಕೂಡ (ಅವುಗಳನ್ನು ನಾಶ ಮಾಡಿಸುತ್ತಿದ್ದವು). ಆದ್ದರಿಂದ ಓ ದೃಷ್ಟಿಯುಳ್ಳವರೇ, ಇದರಿಂದ ಪಾಠ ಕಲಿತುಕೊಳ್ಳಿರಿ.

Explanation & meanings · 1
  1. ಮದೀನದ ಆಸುಪಾಸಿನಲ್ಲಿ ಮೂರು ಯಹೂದಿ ಗೋತ್ರಗಳು ವಾಸವಾಗಿದ್ದವು. ಬನೂ ನದೀರ್, ಬನೂ ಕುರೈಝ ಮತ್ತು ಬನೂ ಕೈನುಕಾ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಬಂದಾಗ ಇವರೊಡನೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅವಕಾಶ ದೊರೆತಾಗಲೆಲ್ಲಾ ಇವರು ರಹಸ್ಯ ಮಾತುಕತೆ ನಡೆಸಿ ಮುಸ್ಲಿಮರ ವಿರುದ್ಧ ವೈರಿಗಳೊಡನೆ ಕೈ ಜೋಡಿಸುತ್ತಿದ್ದರು. ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬನೂ ನದೀರ್ ಗೋತ್ರದವರ ಬಳಿಗೆ ಹೋದಾಗ ಅವರು ಒಂದು ದೊಡ್ಡ ಕಲ್ಲನ್ನು ಉರುಳಿಸಿ ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೊಲೆ ಮಾಡುವ ಸಂಚು ನಡೆಸಿದ್ದರು. ದಿವ್ಯವಾಣಿಯ ಮೂಲಕ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದರ ಬಗ್ಗೆ ತಿಳಿದು ಮದೀನಕ್ಕೆ ಮರಳಿದರು. ಒಪ್ಪಂದವನ್ನು ಮುರಿದ ಕಾರಣ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಮೇಲೆ ದಾಳಿ ಮಾಡಿದರು. ಅವರು ತಮ್ಮ ಕೋಟೆಗಳಲ್ಲಿ ಆಶ್ರಯಪಡೆದರು. ಹಲವು ದಿನಗಳ ಕಾಲ ಕೋಟೆಯೊಳಗಿದ್ದು ನಂತರ ಗತ್ಯಂತರವಿಲ್ಲದೆ ಅವರು ಶರಣಾಗಿ ಪ್ರಾಣವನ್ನು ಉಳಿಸಿಕೊಳ್ಳಲು ಮದೀನದಿಂದ ಹೊರಹೋಗುತ್ತೇವೆಂದರು. ಇದನ್ನು ಪ್ರಥಮ ಗಡೀಪಾರು ಎಂದು ಕರೆಯಲಾಗುತ್ತದೆ. ಅವರು ಮದೀನದಿಂದ ಹೊರಹೋಗಿ ಖೈಬರ್‌ನಲ್ಲಿ ಆಶ್ರಯಪಡೆದರು. ಎರಡನೇ ಖಲೀಫ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಮ್ಮ ಆಡಳಿತಕಾಲದಲ್ಲಿ ಇವರು ಅಲ್ಲಿಂದ ಶಾಮ್ (ಸಿರಿಯಾ ಜೋರ್ಡಾನ್ ಪ್ರದೇಶ)ಗೆ ಗಡೀಪಾರ ಮಾಡಿದರು.

وَلَوۡلَآ أَن كَتَبَ ٱللَّهُ عَلَيۡهِمُ ٱلۡجَلَآءَ لَعَذَّبَهُمۡ فِي ٱلدُّنۡيَاۖ وَلَهُمۡ فِي ٱلۡأٓخِرَةِ عَذَابُ ٱلنَّارِ

ಅಲ್ಲಾಹು ಅವರಿಗೆ ಊರು ಬಿಡುವುದನ್ನು ವಿಧಿಸದಿರುತ್ತಿದ್ದರೆ ಭೂಲೋಕದಲ್ಲೇ ಅವರನ್ನು ಶಿಕ್ಷಿಸುತ್ತಿದ್ದನು. ಪರಲೋಕದಲ್ಲಿ ಅವರಿಗೆ ನರಕಾಗ್ನಿಯ ಶಿಕ್ಷೆಯಿದೆ.

ذَٰلِكَ بِأَنَّهُمۡ شَآقُّواْ ٱللَّهَ وَرَسُولَهُۥۖ وَمَن يُشَآقِّ ٱللَّهَ فَإِنَّ ٱللَّهَ شَدِيدُ ٱلۡعِقَابِ

ಅದೇಕೆಂದರೆ ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ಸಾಗಿದರು. ಯಾರು ಅಲ್ಲಾಹನಿಗೆ ವಿರುದ್ಧವಾಗಿ ಸಾಗುತ್ತಾರೋ—ಅವರಿಗೆ ಅಲ್ಲಾಹು ಅತಿಕಠೋರ ಶಿಕ್ಷೆಯನ್ನು ನೀಡುತ್ತಾನೆ.

مَا قَطَعۡتُم مِّن لِّينَةٍ أَوۡ تَرَكۡتُمُوهَا قَآئِمَةً عَلَىٰٓ أُصُولِهَا فَبِإِذۡنِ ٱللَّهِ وَلِيُخۡزِيَ ٱلۡفَٰسِقِينَ

ನೀವು ಖರ್ಜೂರದ ಮರಗಳಲ್ಲಿ ಯಾವುದನ್ನೆಲ್ಲಾ ಕಡಿದಿದ್ದೀರೋ ಮತ್ತು ಯಾವುದನ್ನೆಲ್ಲಾ ಅದರ ಕಾಂಡದ ಮೇಲೆ ನಿಲ್ಲುವಂತೆ ಹಾಗೆಯೇ ಬಿಟ್ಟಿದ್ದೀರೋ—ಇವೆಲ್ಲವೂ ಅಲ್ಲಾಹನ ಅಪ್ಪಣೆಯಿಂದಲೇ ಆಗಿತ್ತು. ಅದು ಅಲ್ಲಾಹು ಆ ದುಷ್ಕರ್ಮಿಗಳನ್ನು ಅವಮಾನಿಸುವುದಕ್ಕಾಗಿತ್ತು.