Skip to content

"ನೀನು ಖಂಡಿತವಾಗಿಯೂ ಒಂದು ಶಬ್ದವನ್ನು ಹೇಳಿದ್ದೀಯೆ, ಅದನ್ನು ಸಮುದ್ರದ ನೀರಿನೊಂದಿಗೆ ಬೆರೆಸಿದರೆ, ಅದು ಅದನ್ನು ಕಲುಷಿತಗೊಳಿಸುವುದು."

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:

ನಾನು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದೆ: "ಸಫಿಯ್ಯಳ ಬಗ್ಗೆ ನಿಮಗೆ ಇಷ್ಟು ಸಾಕು, ಅಂದರೆ ಅವಳು ಹೀಗೆ ಹೀಗೆ ಇದ್ದಾಳೆ." (ವರದಿಗಾರರಲ್ಲಿ ಒಬ್ಬರು ಹೇಳಿದರು: ಇದರರ್ಥ 'ಅವಳು ಕುಳ್ಳಗಿದ್ದಾಳೆ' ಎಂದು). ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀನು ಖಂಡಿತವಾಗಿಯೂ ಒಂದು ಶಬ್ದವನ್ನು ಹೇಳಿದ್ದೀಯೆ, ಅದನ್ನು ಸಮುದ್ರದ ನೀರಿನೊಂದಿಗೆ ಬೆರೆಸಿದರೆ, ಅದು ಅದನ್ನು ಕಲುಷಿತಗೊಳಿಸುವುದು." ಆಯಿಷಾ (ಅಲ್ಲಾಹು ಆಕೆಯ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ನಾನು ಅವರ ಮುಂದೆ ಒಬ್ಬ ವ್ಯಕ್ತಿಯನ್ನು (ಅವಮಾನಿಸುವ ರೀತಿಯಲ್ಲಿ) ಅನುಕರಿಸಿ ತೋರಿಸಿದೆ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನಗೆ ಇಷ್ಟಿಷ್ಟು (ಪ್ರಾಪಂಚಿಕ ಲಾಭ) ಸಿಕ್ಕರೂ ಸಹ, ನಾನು ಒಬ್ಬ ವ್ಯಕ್ತಿಯನ್ನು (ಅವಮಾನಿಸುವ ರೀತಿಯಲ್ಲಿ) ಅನುಕರಿಸುವುದನ್ನು ಇಷ್ಟಪಡುವುದಿಲ್ಲ."

قُلْتُ لِلنَّبِيِّ صَلَّى اللهُ عَلَيْهِ وَسَلَّمَ: حَسْبُكَ مِنْ صَفِيَّةَ كَذَا وَكَذَا، -قَالَ أَحدُ الرُّوَاةِ: تَعْنِي قَصِيرَةً- فَقَالَ: «لَقَدْ قُلْتِ كَلِمَةً لَوْ مُزِجَتْ بِمَاءِ الْبَحْرِ لَمَزَجَتْهُ» قَالَتْ: وَحَكَيْتُ لَهُ إِنْسَانًا، فَقَالَ: «مَا أُحِبُّ أَنِّي حَكَيْتُ إِنْسَانًا وَأَنَّ لِي كَذَا وَكَذَا».

ಇದನ್ನು ಅಬೂದಾವೂದ್, ತಿರ್ಮಿದಿ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಸಹೀಹ್
ವಿವರಣೆ

ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಆಕೆಯ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಸಫಿಯ್ಯಳ - ಅಂದರೆ ಸತ್ಯವಿಶ್ವಾಸಿಗಳ ಮಾತೆ (ಅಲ್ಲಾಹು ಆಕೆಯ ಬಗ್ಗೆ ಸಂಪ್ರೀತನಾಗಲಿ) - ದೈಹಿಕ ದೋಷಗಳಲ್ಲಿ ಅವಳು ಕುಳ್ಳಗಿದ್ದಾಳೆ ಎಂಬುದು ನಿಮಗೆ ಸಾಕು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನೀನು ಖಂಡಿತವಾಗಿಯೂ ಒಂದು ಶಬ್ದವನ್ನು ಹೇಳಿದ್ದೀಯೆ, ಅದನ್ನು ಸಮುದ್ರದ ನೀರಿನೊಂದಿಗೆ ಬೆರೆಸಿದ್ದರೆ, ಅದು ಅದನ್ನು ಸ್ವಾಮ್ಯಕ್ಕೊಳಪಡಿಸಿ, ಬದಲಾಯಿಸಿ, ಕೆಡಿಸುತ್ತಿತ್ತು. ಆಯಿಷಾ (ಅಲ್ಲಾಹು ಆಕೆಯ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಮತ್ತು ನಾನು ಒಬ್ಬ ವ್ಯಕ್ತಿಯನ್ನು ಕೀಳಾಗಿಸುವ ಉದ್ದೇಶದಿಂದ ಅವನಂತೆ ಮಾಡಿ ತೋರಿಸಿದೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನ ದೋಷದ ಬಗ್ಗೆ ಮಾತನಾಡುವುದು, ಅಥವಾ ಅವನನ್ನು ಅನುಕರಿಸುವುದು, ಅಥವಾ ಅವನು ಮಾಡುವಂತೆ ಮಾಡುವುದು, ಅಥವಾ ಅವನ ಮಾತನಾಡುವಂತೆ ಅವಮಾನಿಸುವ ರೀತಿಯಲ್ಲಿ ಮಾತನಾಡುವುದು, ಅದಕ್ಕಾಗಿ ನನಗೆ ಪ್ರಪಂಚದ ಬಹಳಷ್ಟು ವಸ್ತುಗಳನ್ನು ನೀಡಲಾದರೂ ಸಹ ನನಗೆ ಸಂತೋಷವನ್ನು ನೀಡುವುದಿಲ್ಲ.

ಹದೀಸಿನ ಪ್ರಯೋಜನಗಳು

ಪರನಿಂದೆ (ಗೀಬತ್) ಯ ಬಗ್ಗೆ ತೀವ್ರ ಎಚ್ಚರಿಕೆ ಮತ್ತು ಭಯ ಹುಟ್ಟಿಸಲಾಗಿದೆ.

ಕೀಳಾಗಿಸುವ ಮತ್ತು ಅವಮಾನಿಸುವ ರೀತಿಯಲ್ಲಿ ಜನರ ವರ್ತನೆಗಳನ್ನು ಅನುಕರಿಸುವುದು ಮತ್ತು ಅಣಕಿಸುವುದು ನಿಷಿದ್ಧವಾದ ಪರನಿಂದೆಯ ಭಾಗವಾಗಿದೆ.

ದೈಹಿಕ ದೋಷಗಳನ್ನು ವಿವರಿಸುವುದು ಪರನಿಂದೆಯ ಒಂದು ಭಾಗವಾಗಿದೆ.

ಖಾದಿ ಹೇಳುತ್ತಾರೆ: 'ಮಝ್ಜ್' (مزج) ಎಂದರೆ ಬೆರೆಸುವುದು ಮತ್ತು ಇತರ ವಸ್ತುಗಳನ್ನು ಸೇರಿಸುವ ಮೂಲಕ ಬದಲಾಯಿಸುವುದು. ಇದರ ಅರ್ಥವೇನೆಂದರೆ, ಈ ಪರನಿಂದೆಯ ಮಾತು ಒಂದು ವೇಳೆ ಸಮುದ್ರದೊಂದಿಗೆ ಬೆರೆಸಬಹುದಾದ ವಸ್ತುವಾಗಿದ್ದರೆ, ಅದರ (ಸಮುದ್ರದ) ಅಗಾಧತೆ ಮತ್ತು ವಿಸ್ತಾರದ ಹೊರತಾಗಿಯೂ ಅದು ಅದರ ಸ್ಥಿತಿಯನ್ನು ಬದಲಾಯಿಸುತ್ತಿತ್ತು. ಹಾಗಾದರೆ, ಅದನ್ನು ಅತ್ಯಲ್ಪ ಕರ್ಮಗಳೊಂದಿಗೆ ಬೆರೆಸಿದರೆ ಆ ಕರ್ಮಗಳ ಗತಿಯೇನು?

ಸವತಿಯರ ನಡುವೆ ಉಂಟಾಗಬಹುದಾದ ಹೊಟ್ಟೆಕಿಚ್ಚಿನ ಒಂದು ಉದಾಹರಣೆಯನ್ನು ನೀಡಲಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೆಡುಕನ್ನು ಎಂದಿಗೂ ಒಪ್ಪುತ್ತಿರಲಿಲ್ಲ.

ಅಲ್ಲಾಹುವಿನ ತೃಪ್ತಿ ಮತ್ತು ಅವನ ಕೋಪ ಇನ್ನಿಲ್ಲವಾಗುವುದರೊಂದಿಗೆ ಹೋಲಿಸಿದರೆ, ಈ ಪ್ರಪಂಚ ಮತ್ತು ಅದರಲ್ಲಿರುವ ವಸ್ತುಗಳಿಗೆ ಎಳ್ಳಷ್ಟೂ ಬೆಲೆಯಿಲ್ಲ ಎಂದು ತಿಳಿಸಲಾಗಿದೆ.

ಇಸ್ಲಾಂ ಉತ್ತಮ ನಡವಳಿಕೆಯ ಧರ್ಮವಾಗಿದೆ. ಮಾತು ಅಥವಾ ಕೃತ್ಯದ ಮೂಲಕ ಯಾರ ಗೌರವಕ್ಕೂ ಧಕ್ಕೆಯಾಗದಂತೆ ರಕ್ಷಿಸಲು ಅದು ಆದೇಶಿಸಿದೆ. ಏಕೆಂದರೆ ಇದು ಮುಸ್ಲಿಮರ ನಡುವೆ ದ್ವೇಷ ಮತ್ತು ವೈಷಮ್ಯವನ್ನು ಹುಟ್ಟುಹಾಕುತ್ತದೆ.

ಉಲ್ಲೇಖಗಳು

ಸುನನ್ ಅಬೂ ದಾವೂದ್. (7/ 237) (4875).

ಸುನನು ತ್ತಿರ್ಮಿದಿ. (4/ 275) (2502).

ಮುಸ್ನದ್ ಅಹ್ಮದ್. (41/ 433) (24964).

ಇನ್ನಷ್ಟು (8)

بهجة الناظرين شرح رياض الصالحين.

لسليم الهلالي (3/ 25).

مرقاة المفاتيح شرح مشكاة المصابيح.

للقاري (7/ 3046).

التيسير بشرح الجامع الصغير.

للمناوي (2/ 339).

فيض القدير شرح الجامع الصغير.

للمناوي (5/ 411).