"ನಾನು ಶಪಿಸುವವನಾಗಿ ಕಳುಹಿಸಲ್ಪಟ್ಟಿಲ್ಲ. ಬದಲಾಗಿ, ನಾನು ಕರುಣೆಯಾಗಿ ಕಳುಹಿಸಲ್ಪಟ್ಟಿದ್ದೇನೆ."
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: (ಪ್ರವಾದಿಯವರಿಗೆ) ಹೀಗೆ ಹೇಳಲಾಯಿತು: "ಓ ಅಲ್ಲಾಹನ ಸಂದೇಶವಾಹಕರೇ, ಬಹುದೇವಾರಾಧಕರ ವಿರುದ್ಧ ಪ್ರಾರ್ಥಿಸಿ." ಆಗ ಅವರು (ಪ್ರವಾದಿ) ಹೇಳಿದರು:
"ನಾನು ಶಪಿಸುವವನಾಗಿ ಕಳುಹಿಸಲ್ಪಟ್ಟಿಲ್ಲ. ಬದಲಾಗಿ, ನಾನು ಕರುಣೆಯಾಗಿ ಕಳುಹಿಸಲ್ಪಟ್ಟಿದ್ದೇನೆ."
«إِنِّي لَمْ أُبْعَثْ لَعَّانًا، وَإِنَّمَا بُعِثْتُ رَحْمَةً».
ಅಲ್ಲಾಹನಿಗೆ ಪಾಲುದಾರರನ್ನು ಸೇರಿಸುವವರ (ಬಹುದೇವಾರಾಧಕರ) ವಿರುದ್ಧ ಪ್ರಾರ್ಥಿಸುವಂತೆ (ಅವರನ್ನು ಶಪಿಸುವಂತೆ) ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೋರಲಾಯಿತು. ಆಗ ಅವರು ಹೇಳಿದರು: "ನಾನು ಜನರನ್ನು ಅಲ್ಲಾಹನ ಕರುಣೆಯಿಂದ ದೂರವಾಗುವಂತೆ ಮತ್ತು ಹೊರಹಾಕುವಂತೆ ಪ್ರಾರ್ಥಿಸಲು 'ಶಪಿಸುವವನಾಗಿ' ಅಲ್ಲಾಹನಿಂದ ಕಳುಹಿಸಲ್ಪಟ್ಟಿಲ್ಲ; (ಹಾಗೆ ಮಾಡಿ) ನಾನು ಅವರನ್ನು ಒಳಿತಿನಿಂದ ದೂರಗೊಳಿಸುವುದಿಲ್ಲ. ನಾನು ಇದಕ್ಕಾಗಿ ಕಳುಹಿಸಲ್ಪಟ್ಟಿಲ್ಲ. ಬದಲಾಗಿ, ನಾನು ಸಾಮಾನ್ಯವಾಗಿ ಎಲ್ಲ ಜನರಿಗೂ, ಮತ್ತು ವಿಶೇಷವಾಗಿ ಸತ್ಯವಿಶ್ವಾಸಿಗಳಿಗೆ ಒಳಿತು ಹಾಗೂ ಕರುಣೆಗೆ ಕಾರಣವಾಗಲು ಕಳುಹಿಸಲ್ಪಟ್ಟಿದ್ದೇನೆ."
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪರಿಪೂರ್ಣ ನಡವಳಿಕೆ (ಸ್ವಭಾವ) ಯನ್ನು ತಿಳಿಸಲಾಗಿದೆ.
ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸುತ್ತಾ, ನಾಲಿಗೆಯನ್ನು ಬೈಗುಳ ಮತ್ತು ಶಾಪಗಳಿಂದ ರಕ್ಷಿಸಿಕೊಳ್ಳುವುದರ ಮಹತ್ವವನ್ನು ತಿಳಿಸಲಾಗಿದೆ.
ಶಪಿಸುವುದರ ಬಗ್ಗೆ ಇದರಲ್ಲಿ ನಿಷೇಧವಿದೆ.
ಜನರ ಮೇಲೆ ಕರುಣೆ ತೋರಲು ಪ್ರೋತ್ಸಾಹಿಸಲಾಗಿದೆ.
ಸಹೀಹ್ ಮುಸ್ಲಿಮ್. (4/ 2006) (2599).
ಇನ್ನಷ್ಟು (2)
المفهم لما أشكل من تلخيص كتاب مسلم (6/ 582).
البحر المحيط الثجاج في شرح صحيح الإمام مسلم بن الحجاج (40/ 683).