Skip to content
المُجَادلة /

ಆಯತ್ 8

58 : 8

ಆಯತ್ 8 of المُجَادلة (58 : 8). This page carries the verse in the Uthmani script with a translation of its meaning, at a stable URL that can be cited on its own.

المُجَادلة ಆಯತ್‌ಗಳು 22
ಸೂರ · المُجَادلة
ಕನ್ನಡ · Hamza
58 : 8

أَلَمۡ تَرَ إِلَى ٱلَّذِينَ نُهُواْ عَنِ ٱلنَّجۡوَىٰ ثُمَّ يَعُودُونَ لِمَا نُهُواْ عَنۡهُ وَيَتَنَٰجَوۡنَ بِٱلۡإِثۡمِ وَٱلۡعُدۡوَٰنِ وَمَعۡصِيَتِ ٱلرَّسُولِۖ وَإِذَا جَآءُوكَ حَيَّوۡكَ بِمَا لَمۡ يُحَيِّكَ بِهِ ٱللَّهُ وَيَقُولُونَ فِيٓ أَنفُسِهِمۡ لَوۡلَا يُعَذِّبُنَا ٱللَّهُ بِمَا نَقُولُۚ حَسۡبُهُمۡ جَهَنَّمُ يَصۡلَوۡنَهَاۖ فَبِئۡسَ ٱلۡمَصِيرُ

ರಹಸ್ಯ ಮಾತುಕತೆ ನಡೆಸುವುದನ್ನು ವಿರೋಧಿಸಲಾದ ಜನರನ್ನು ನೀವು ನೋಡಿಲ್ಲವೇ? ನಂತರ ಅವರಿಗೆ ವಿರೋಧಿಸಲಾದ ಕೆಲಸವನ್ನೇ ಅವರು ಮಾಡುತ್ತಾರೆ. ಅವರು ಪರಸ್ಪರ ಪಾಪ, ಅತಿರೇಕ ಮತ್ತು ಪ್ರವಾದಿಯನ್ನು ಧಿಕ್ಕರಿಸುವ ಕೆಲಸಗಳಿಗಾಗಿ ರಹಸ್ಯ ಮಾತುಕತೆ ಮಾಡುತ್ತಾರೆ. ಅವರು ನಿಮ್ಮ ಬಳಿಗೆ ಬಂದರೆ ಅಲ್ಲಾಹು ನಿಮಗೆ ಸಲಾಂ ಹೇಳಲು ಬಳಸದ ಪದಗಳೊಂದಿಗೆ ಅವರು ನಿಮಗೆ ಸಲಾಂ ಹೇಳುತ್ತಾರೆ. “ನಾವು ಹೇಳುವ ಈ ಮಾತುಗಳಿಗಾಗಿ ಅಲ್ಲಾಹು ನಮ್ಮನ್ನೇಕೆ ಶಿಕ್ಷಿಸುವುದಿಲ್ಲ?” ಎಂದು ಅವರು ಮನಸ್ಸಿನಲ್ಲೇ ಕೇಳುತ್ತಾರೆ. ಅವರಿಗೆ ನರಕಾಗ್ನಿಯೇ ಸಾಕು. ಅವರು ಅದರಲ್ಲಿ ಉರಿಯುವರು. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.

Explanation & meanings · 2
  1. ಅಂದರೆ ಅವರು "ಅಸ್ಸಲಾಮು ಅಲೈಕುಂ" (ನಿಮ್ಮ ಮೇಲೆ ಶಾಂತಿಯಿರಲಿ) ಎಂದು ಹೇಳುವ ಬದಲು "ಅಸ್ಸಾಮು ಅಲೈಕುಂ" (ನಿಮಗೆ ಸಾವು ಬರಲಿ) ಎಂದು ಹೇಳುತ್ತಿದ್ದರು.
  2. ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಜವಾಗಿಯೂ ಒಬ್ಬ ಪ್ರವಾದಿಯಾಗಿದ್ದರೆ ನಾವು ಅವರಿಗೆ ಇಂತಹ ಮಾತನ್ನು ಹೇಳಿಯೂ ಸಹ ಅಲ್ಲಾಹು ನಮ್ಮನ್ನೇಕೆ ಶಿಕ್ಷಿಸುವುದಿಲ್ಲ? ಎಂದು ಅವರು ಪರಸ್ಪರ ಕೇಳುತ್ತಾರೆ.