47 : 16
وَمِنۡهُم مَّن يَسۡتَمِعُ إِلَيۡكَ حَتَّىٰٓ إِذَا خَرَجُواْ مِنۡ عِندِكَ قَالُواْ لِلَّذِينَ أُوتُواْ ٱلۡعِلۡمَ مَاذَا قَالَ ءَانِفًاۚ أُوْلَٰٓئِكَ ٱلَّذِينَ طَبَعَ ٱللَّهُ عَلَىٰ قُلُوبِهِمۡ وَٱتَّبَعُوٓاْ أَهۡوَآءَهُمۡ
ಅವರಲ್ಲಿ ಕೆಲವರು ನೀವು ಹೇಳುವುದನ್ನು ಕಿವಿಗೊಟ್ಟು ಕೇಳುತ್ತಾರೆ. ಎಲ್ಲಿಯವರೆಗೆಂದರೆ, ಅವರು ನಿಮ್ಮ ಬಳಿಯಿಂದ ಹೊರಟರೆ ಜ್ಞಾನಿಗಳೊಂದಿಗೆ (ಸಹಾಬಿಗಳೊಂದಿಗೆ) ಕೇಳುತ್ತಾರೆ: “ಅವರು ಈಗ ಹೇಳಿದ್ದೇನು?” ಅವರ ಹೃದಯಗಳ ಮೇಲೆ ಅಲ್ಲಾಹು ಮೊಹರು ಹಾಕಿದ್ದಾನೆ ಮತ್ತು ಅವರು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸುತ್ತಾರೆ.