Skip to content
ಆಲು ಇಮ್ರಾನ್ /

ಆಯತ್ 72

3 : 72

ಆಯತ್ 72 of ಆಲು ಇಮ್ರಾನ್ (3 : 72). This page carries the verse in the Uthmani script with a translation of its meaning, at a stable URL that can be cited on its own.

ಆಲು ಇಮ್ರಾನ್ ಆಯತ್‌ಗಳು 200
3 : 72

وَقَالَت طَّآئِفَةٞ مِّنۡ أَهۡلِ ٱلۡكِتَٰبِ ءَامِنُواْ بِٱلَّذِيٓ أُنزِلَ عَلَى ٱلَّذِينَ ءَامَنُواْ وَجۡهَ ٱلنَّهَارِ وَٱكۡفُرُوٓاْ ءَاخِرَهُۥ لَعَلَّهُمۡ يَرۡجِعُونَ

ಗ್ರಂಥದವರ ಒಂದು ಪಂಗಡವು (ಪರಸ್ಪರ) ಹೇಳುತ್ತಾರೆ: “ಹಗಲಿನ ಆರಂಭದಲ್ಲಿ (ಬೆಳಗ್ಗೆ) ಸತ್ಯವಿಶ್ವಾಸಿಗಳಿಗೆ ಅವತೀರ್ಣವಾದ ಸಂದೇಶದಲ್ಲಿ ವಿಶ್ವಾಸವಿಡಿ ಮತ್ತು ಹಗಲಿನ ಕೊನೆಯಲ್ಲಿ (ಸಂಜೆಯಾಗುವಾಗ) ನಿಷೇಧಿಸಿ ಬಿಡಿ. ಆಗ ಅವರು ಮರಳಿಬರಲೂಬಹುದು.”

Explanation & meanings · 1
  1. ಇದು ಯಹೂದಿಗಳ ಒಂದು ಕುತಂತ್ರ. ಇದರಿಂದ ಅವರು ಮುಸಲ್ಮಾನರನ್ನು ದಾರಿತಪ್ಪಿಸಲು ಬಯಸುತ್ತಿದ್ದರು. ಅವರಲ್ಲೊಬ್ಬರು ಬೆಳಗ್ಗೆ ಇಸ್ಲಾಂ ಸ್ವೀಕರಿಸಿ ಮುಸಲ್ಮಾನರಾಗುತ್ತಿದ್ದರು. ಆದರೆ ಸಂಜೆಯಾಗುತ್ತಿದ್ದಂತೆ ಪುನಃ ಯಹೂದಿ ಧರ್ಮಕ್ಕೆ ಮರಳುತ್ತಿದ್ದರು. ಬೆಳಗ್ಗೆ ಮುಸಲ್ಮಾನರಾದವರು ಸಂಜೆ ಇಸ್ಲಾಂನಿಂದ ಹೊರಹೋಗಬೇಕಾದರೆ ಇಸ್ಲಾಂ ಧರ್ಮದಲ್ಲಿ ನಾವು ತಿಳಿಯದ ಏನೋ ಕೊರತೆಯಿದೆ ಎಂದು ಮುಸಲ್ಮಾನರು ಭಾವಿಸುವಂತಾಗಲು ಅವರು ಹೀಗೆ ಮಾಡುತ್ತಿದ್ದರು.