Skip to content
آل عِمران /

ಆಯತ್ 144

3 : 144

ಆಯತ್ 144 of آل عِمران (3 : 144). This page carries the verse in the Uthmani script with a translation of its meaning, at a stable URL that can be cited on its own.

آل عِمران ಆಯತ್‌ಗಳು 200
ಸೂರ · آل عِمران
ಕನ್ನಡ · Hamza
3 : 144

وَمَا مُحَمَّدٌ إِلَّا رَسُولٞ قَدۡ خَلَتۡ مِن قَبۡلِهِ ٱلرُّسُلُۚ أَفَإِيْن مَّاتَ أَوۡ قُتِلَ ٱنقَلَبۡتُمۡ عَلَىٰٓ أَعۡقَٰبِكُمۡۚ وَمَن يَنقَلِبۡ عَلَىٰ عَقِبَيۡهِ فَلَن يَضُرَّ ٱللَّهَ شَيۡـٔٗاۚ وَسَيَجۡزِي ٱللَّهُ ٱلشَّٰكِرِينَ

ಮುಹಮ್ಮದ್ ಒಬ್ಬ ಸಂದೇಶವಾಹಕರು ಮಾತ್ರ. ಅವರಿಗಿಂತ ಮೊದಲು ಅನೇಕ ಸಂದೇಶವಾಹಕರುಗಳು ಬಂದು ಹೋಗಿದ್ದಾರೆ. ಅವರೇನಾದರೂ ಅಸುನೀಗಿದರೆ ಅಥವಾ ಕೊಲೆಯಾದರೆ, ನೀವು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳುವಿರಾ? ಯಾರು ಹಿಂದಕ್ಕೆ ಮರಳುತ್ತಾನೋ ಅವನು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಕೃತಜ್ಞರಾಗಿರುವವರಿಗೆ ಅಲ್ಲಾಹು ಸದ್ಯವೇ ಸೂಕ್ತ ಪ್ರತಿಫಲವನ್ನು ನೀಡುವನು.

Explanation & meanings · 1
  1. ಉಹುದ್ ಯುದ್ಧದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೊಲೆಯಾದರೆಂದು ವೈರಿಗಳನ್ನು ವದಂತಿ ಹಬ್ಬಿಸಿದರು. ಮುಸ್ಲಿಮರಲ್ಲಿ ಕೆಲವರು ಈ ವದಂತಿಯನ್ನು ನಂಬಿ ಸಂಪೂರ್ಣ ನಿರಾಶರಾಗಿ ಯುದ್ಧದಿಂದ ಹಿಂದೆ ಸರಿದರು. ಇವರ ಬಗ್ಗೆ ಈ ವಚನವು ಅವತೀರ್ಣವಾಯಿತು. ಪ್ರವಾದಿಗಳು ಮರಣಹೊಂದುವುದು ಅಥವಾ ವೈರಿಗಳು ಪ್ರವಾದಿಗಳನ್ನು ಕೊಲೆ ಮಾಡುವುದು ಹೊಸದೇನಲ್ಲ. ಹಿಂದೆಯೂ ಅನೇಕ ಪ್ರವಾದಿಗಳು ವೈರಿಗಳ ಕೈಯಿಂದ ಕೊಲೆಯಾಗಿದ್ದಾರೆ. ಅದೇ ರೀತಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಸುನೀಗಿದರೆ ಅಥವಾ ಕೊಲೆಯಾದರೆ ನೀವು ನಿಮ್ಮ ಧರ್ಮದಿಂದ ಹಿಂದೆ ಸರಿಯುತ್ತೀರಾ? ಯಾರಾದರೂ ಹಿಂದೆ ಸರಿದರೆ ಅದರಿಂದ ಅಲ್ಲಾಹನಿಗೇನೂ ನಷ್ಟವಿಲ್ಲ.