۞ إِنَّ قَٰرُونَ كَانَ مِن قَوۡمِ مُوسَىٰ فَبَغَىٰ عَلَيۡهِمۡۖ وَءَاتَيۡنَٰهُ مِنَ ٱلۡكُنُوزِ مَآ إِنَّ مَفَاتِحَهُۥ لَتَنُوٓأُ بِٱلۡعُصۡبَةِ أُوْلِي ٱلۡقُوَّةِ إِذۡ قَالَ لَهُۥ قَوۡمُهُۥ لَا تَفۡرَحۡۖ إِنَّ ٱللَّهَ لَا يُحِبُّ ٱلۡفَرِحِينَ
ನಿಶ್ಚಯವಾಗಿಯೂ ಕಾರೂನ್ ಮೂಸಾರ ಜನರಲ್ಲಿ ಸೇರಿದವನಾಗಿದ್ದನು. ಅವನು ಅವರ ಮೇಲೆ ಅತಿರೇಕವೆಸಗುತ್ತಿದ್ದನು. ನಾವು ಅವನಿಗೆ ಎಷ್ಟು ದೊಡ್ಡ ದೊಡ್ಡ ಖಜಾನೆಗಳನ್ನು ನೀಡಿದ್ದೇವೆಂದರೆ, ಬಲಿಷ್ಠರಾದ ಹಲವಾರು ಜನರು ಕೂಡ ಬಹಳ ಕಷ್ಟದಿಂದಲೇ ಅವುಗಳ ಕೀಲಿಕೈಗಳನ್ನು ಹೊತ್ತು ಸಾಗುತ್ತಿದ್ದರು. ಅವನ ಜನರು ಅವನೊಡನೆ ಹೇಳಿದ ಸಂದರ್ಭ: “ಅಟ್ಟಹಾಸ ಮೆರೆಯಬೇಡ. ಖಂಡಿತನಾಗಿಯೂ ಅಟ್ಟಹಾಸ ಮೆರೆಯುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.
- ಕಾರೂನ್ ಇಸ್ರಾಯೇಲ್ ಜನಾಂಗದಲ್ಲಿ ಸೇರಿದವನು. ಅಲ್ಲಾಹು ಅವನಿಗೆ ಅಪಾರ ಐಶ್ವರ್ಯವನ್ನು ನೀಡಿದಾಗ ಅವನು ಅಲ್ಲಾಹನನ್ನು ಮರೆತು ಜನರ ಮೇಲೆ ಅತಿರೇಕವೆಸಗತೊಡಗಿದನು.