Skip to content
النور /

ಆಯತ್ 2

24 : 2

ಆಯತ್ 2 of النور (24 : 2). This page carries the verse in the Uthmani script with a translation of its meaning, at a stable URL that can be cited on its own.

النور ಆಯತ್‌ಗಳು 64
ಸೂರ · النور
ಕನ್ನಡ · Hamza
24 : 2

ٱلزَّانِيَةُ وَٱلزَّانِي فَٱجۡلِدُواْ كُلَّ وَٰحِدٖ مِّنۡهُمَا مِاْئَةَ جَلۡدَةٖۖ وَلَا تَأۡخُذۡكُم بِهِمَا رَأۡفَةٞ فِي دِينِ ٱللَّهِ إِن كُنتُمۡ تُؤۡمِنُونَ بِٱللَّهِ وَٱلۡيَوۡمِ ٱلۡأٓخِرِۖ وَلۡيَشۡهَدۡ عَذَابَهُمَا طَآئِفَةٞ مِّنَ ٱلۡمُؤۡمِنِينَ

ವ್ಯಭಿಚಾರ ಮಾಡುವ ಸ್ತ್ರೀ-ಪುರುಷರಲ್ಲಿ ಪ್ರತಿಯೊಬ್ಬರಿಗೂ ನೂರು ಚಡಿಯೇಟು ನೀಡಿರಿ. ಅವರ ಮೇಲೆ ಅಲ್ಲಾಹನ ಕಾನೂನನ್ನು ಜಾರಿಗೊಳಿಸುವ ವಿಷಯದಲ್ಲಿ ನೀವು ಸ್ವಲ್ಪವೂ ಅನುಕಂಪ ತೋರಬಾರದು. ನಿಮಗೆ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿದ್ದರೆ. ಅವರಿಗೆ ಶಿಕ್ಷೆ ನೀಡುವಾಗ ಸತ್ಯವಿಶ್ವಾಸಿಗಳ ಒಂದು ಗುಂಪು ಅಲ್ಲಿ ಉಪಸ್ಥಿತರಿರಲಿ.

Explanation & meanings · 1
  1. ವ್ಯಭಿಚಾರ ಮಾಡಿದವರು ಸ್ವಯಂ ತಪ್ಪೊಪ್ಪಿಕೊಂಡರೆ, ಅಥವಾ ಅವರು ವ್ಯಭಿಚಾರ ಮಾಡಿದ್ದನ್ನು ನೋಡಿದ್ದೇವೆಂದು ನಾಲ್ಕು ಮಂದಿ ಸಾಕ್ಷಿ ನುಡಿದರೆ ಮಾತ್ರ ವ್ಯಭಿಚಾರದ ಶಿಕ್ಷೆ ಜಾರಿ ಮಾಡಲಾಗುತ್ತದೆ. ಇಲ್ಲಿ ಹೇಳಿರುವುದು ವ್ಯಭಿಚಾರ ಮಾಡುವ ಅವಿವಾಹಿತ ಪುರುಷ ಮತ್ತು ಮಹಿಳೆಗೆ ನೀಡಲಾಗುವ ಶಿಕ್ಷೆ. ವ್ಯಭಿಚಾರ ಮಾಡಿದವರು ವಿವಾಹಿತರಾಗಿದ್ದರೆ ಅವರನ್ನು ಕಲ್ಲೆಸೆದು ಸಾಯಿಸಲಾಗುತ್ತದೆ.