Skip to content
المؤمنُون /

ಆಯತ್ 91

23 : 91

ಆಯತ್ 91 of المؤمنُون (23 : 91). This page carries the verse in the Uthmani script with a translation of its meaning, at a stable URL that can be cited on its own.

المؤمنُون ಆಯತ್‌ಗಳು 118
ಸೂರ · المؤمنُون
ಕನ್ನಡ · Hamza
23 : 91

مَا ٱتَّخَذَ ٱللَّهُ مِن وَلَدٖ وَمَا كَانَ مَعَهُۥ مِنۡ إِلَٰهٍۚ إِذٗا لَّذَهَبَ كُلُّ إِلَٰهِۭ بِمَا خَلَقَ وَلَعَلَا بَعۡضُهُمۡ عَلَىٰ بَعۡضٖۚ سُبۡحَٰنَ ٱللَّهِ عَمَّا يَصِفُونَ

ಅಲ್ಲಾಹನಿಗೆ ಯಾವುದೇ ಸಂತಾನವಿಲ್ಲ. ಅವನ ಜೊತೆಗೆ ಬೇರೆ ದೇವರುಗಳೂ ಇಲ್ಲ. ಇರುತ್ತಿದ್ದರೆ ಎಲ್ಲಾ ದೇವರುಗಳೂ ಅವರು ಸೃಷ್ಟಿಸಿದ್ದನ್ನು ತೆಗೆದುಕೊಂಡು ಹೋಗುತ್ತಿದ್ದರು. ಅವರು ಪ್ರಾಬಲ್ಯ ಪಡೆಯುವುದಕ್ಕಾಗಿ ಪರಸ್ಪರ ಹೊಡೆದಾಡುತ್ತಿದ್ದರು. ಅವರು ಆರೋಪಿಸುವ ಎಲ್ಲಾ ಸುಳ್ಳುಗಳಿಂದಲೂ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.

Explanation & meanings · 1
  1. ಅಲ್ಲಾಹನ ಹೊರತು ಬೇರೆ ಸೃಷ್ಟಿಕರ್ತರು ಇರುತ್ತಿದ್ದರೆ ಪ್ರತಿಯೊಬ್ಬ ಸೃಷ್ಟಿಕರ್ತನೂ ತಾನು ಸೃಷ್ಟಿಸಿದ್ದನ್ನು ತಾನೇ ನಿಯಂತ್ರಿಸುತ್ತಿದ್ದನು. ಅಷ್ಟೇ ಅಲ್ಲ, ಅವರು ಪರಸ್ಪರ ಮೇಲುಗೈ ಸಾಧಿಸಲು ಹೊಡೆದಾಡುತ್ತಿದ್ದರು. ಇದರಿಂದ ಸಂಪೂರ್ಣ ವಿಶ್ವದ ವ್ಯವಸ್ಥೆಯು ಕುಸಿಯುತ್ತಿತ್ತು.