Skip to content
طه /

ಆಯತ್ 97

20 : 97

ಆಯತ್ 97 of طه (20 : 97). This page carries the verse in the Uthmani script with a translation of its meaning, at a stable URL that can be cited on its own.

طه ಆಯತ್‌ಗಳು 135
ಸೂರ · طه
ಕನ್ನಡ · Hamza
20 : 97

قَالَ فَٱذۡهَبۡ فَإِنَّ لَكَ فِي ٱلۡحَيَوٰةِ أَن تَقُولَ لَا مِسَاسَۖ وَإِنَّ لَكَ مَوۡعِدٗا لَّن تُخۡلَفَهُۥۖ وَٱنظُرۡ إِلَىٰٓ إِلَٰهِكَ ٱلَّذِي ظَلۡتَ عَلَيۡهِ عَاكِفٗاۖ لَّنُحَرِّقَنَّهُۥ ثُمَّ لَنَنسِفَنَّهُۥ فِي ٱلۡيَمِّ نَسۡفًا

ಮೂಸಾ ಹೇಳಿದರು: “ಹೊರಟು ಹೋಗು! ನೀನು ನಿರಂತರ “ನನ್ನನ್ನು ಮುಟ್ಟಬೇಡಿ” ಎಂದು ಹೇಳುತ್ತಿರುವುದೇ ಇಹಲೋಕದಲ್ಲಿ ನಿನಗಿರುವ ಶಿಕ್ಷೆ. ನಿನಗೆ ಒಂದು ನಿಶ್ಚಿತ ಅವಧಿಯಿದೆ. ಅದನ್ನು ಉಲ್ಲಂಘಿಸಲು ನಿನಗೆ ಸಾಧ್ಯವಿಲ್ಲ. ನೀನು ಧ್ಯಾನ ಮಾಡುತ್ತಿದ್ದ ನಿನ್ನ ದೇವರನ್ನು (ಕರುವನ್ನು) ನೋಡು. ನಾವು ಅದನ್ನು ಖಂಡಿತ ಸುಟ್ಟು ಬಿಡುವೆವು. ನಂತರ ಅದನ್ನು ನುಚ್ಚುನೂರು ಮಾಡಿ ಕಡಲಿಗೆ ಎಸೆಯುವೆವು.

Explanation & meanings · 1
  1. ಇದರ ನಂತರ ಅವನು ಜೀವನವಿಡೀ ಜನರನ್ನು ಕಂಡೊಡನೆ ನನ್ನನ್ನು ಮುಟ್ಟಬೇಡಿ, ನನ್ನಿಂದ ದೂರವಿರಿ ಎಂದು ಹೇಳುತ್ತಲೇ ಇದ್ದ. ಏಕೆಂದರೆ ಅವನನ್ನು ಯಾರಾದರೂ ಮುಟ್ಟಿದರೆ, ಅವನಿಗೂ ಮುಟ್ಟಿದವನಿಗೂ ಜ್ವರ ಬರುತ್ತಿತ್ತು. ನಂತರ ಅವನು ಜನವಾಸದಿಂದ ೂದೂರವಾಗಿ ಅಡವಿಗೆ ಹೋಗಿ ಮೃಗಗಳೊಡನೆ ವಾಸಿಸತೊಡಗಿದನು.