20 : 96
قَالَ بَصُرۡتُ بِمَا لَمۡ يَبۡصُرُواْ بِهِۦ فَقَبَضۡتُ قَبۡضَةٗ مِّنۡ أَثَرِ ٱلرَّسُولِ فَنَبَذۡتُهَا وَكَذَٰلِكَ سَوَّلَتۡ لِي نَفۡسِي
ಅವನು ಹೇಳಿದನು: “ಜನರಿಗೆ ಕಾಣಲು ಸಾಧ್ಯವಾಗದ ಒಂದನ್ನು ನಾನು ನೋಡಿದೆ. ನಾನು ಆ ದೇವದೂತನ ಹೆಜ್ಜೆ ಗುರುತಿನಿಂದ ಒಂದು ಹಿಡಿ ಮಣ್ಣು ತೆಗೆದು ಅದಕ್ಕೆ ಹಾಕಿದೆ. ಹೀಗೆ ಮಾಡಲು ನನ್ನ ಮನಸ್ಸು ನನ್ನನ್ನು ಪ್ರೇರೇಪಿಸಿತು.”
Explanation & meanings · 1
- ಇಲ್ಲಿ ದೇವದೂತರು ಎಂದರೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ). ಜಿಬ್ರೀಲರ ಕುದುರೆ ಹಾದುಹೋಗುವುದು ಕಂಡಾಗ ಸಾಮಿರಿ ಅದರ ಕಾಲುಗಳ ಅಡಿಯಿಂದ ಮಣ್ಣನ್ನು ತೆಗೆದು ಜೋಪಾನವಾಗಿಟ್ಟಿದ್ದನು. ಆ ಮಣ್ಣನ್ನು ಅವನು ಆಭರಣಗಳಿಂದ ನಿರ್ಮಿಸಿದ ಕರುವಿನ ಮೂರ್ತಿಗೆ ಹಾಕಿದಾಗ ಅದರಿಂದ ಒಂದು ಶಬ್ದ ಹೊರಬರಲು ಶುರುವಾಯಿತು.