Skip to content
إبراهِيم /

ಆಯತ್ 18

14 : 18

ಆಯತ್ 18 of إبراهِيم (14 : 18). This page carries the verse in the Uthmani script with a translation of its meaning, at a stable URL that can be cited on its own.

إبراهِيم ಆಯತ್‌ಗಳು 52
ಸೂರ · إبراهِيم
ಕನ್ನಡ · Hamza
14 : 18

مَّثَلُ ٱلَّذِينَ كَفَرُواْ بِرَبِّهِمۡۖ أَعۡمَٰلُهُمۡ كَرَمَادٍ ٱشۡتَدَّتۡ بِهِ ٱلرِّيحُ فِي يَوۡمٍ عَاصِفٖۖ لَّا يَقۡدِرُونَ مِمَّا كَسَبُواْ عَلَىٰ شَيۡءٖۚ ذَٰلِكَ هُوَ ٱلضَّلَٰلُ ٱلۡبَعِيدُ

ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನಿಷೇಧಿಸಿದವರು ಯಾರೋ—ಅವರ ಕರ್ಮಗಳ ಉದಾಹರಣೆಯು ಬೂದಿಯಂತೆ. ಬಿರುಗಾಳಿಯ ದಿನ ಅದಕ್ಕೆ ಬಲವಾದ ಗಾಳಿ ಬೀಸಿತು. ಅವರು ಮಾಡಿದ ಕರ್ಮಗಳಲ್ಲಿ ಯಾವುದರ ಮೇಲೂ (ಅದನ್ನು ಹಿಡಿದಿಟ್ಟುಕೊಳ್ಳಲು) ಅವರಿಗೆ ಸಾಮರ್ಥ್ಯವಿಲ್ಲ. ಅತಿವಿದೂರವಾದ ದುರ್ಮಾರ್ಗವೆಂದರೆ ಇದೇ.

Explanation & meanings · 1
  1. ಬಿರುಗಾಳಿ ಬೀಸಿದರೆ ಬೂದಿಯ ಸ್ಥಿತಿ ಏನಾಗುವುದೋ ಪರಲೋಕಕ್ಕೆ ಬರುವಾಗ ಸತ್ಯನಿಷೇಧಿಗಳ ಕರ್ಮಗಳು ಸ್ಥಿತಿಯೂ ಆದೇ ಆಗುತ್ತದೆ. ಅವರು ಮಾಡಿದ ಯಾವುದೇ ಸತ್ಕರ್ಮಕ್ಕೂ ಅಲ್ಲಿ ಪ್ರತಿಫಲವಿಲ್ಲ. ಎಲ್ಲವೂ ನೀರಿನಲ್ಲಿ ಮಾಡಿದ ಹೋಮದಂತೆ ವ್ಯರ್ಥವಾಗುತ್ತವೆ.