Skip to content
ಸೂರಗಳ ಪಟ್ಟಿ /

قُرَيش

قُرَيش is chapter 106 of the Quran and has 4 verses. This page presents it in full in the Uthmani script, with a verse-by-verse translation of its meaning.

4 ಆಯತ್‌ಗಳು ಸೂರ ಸಂಖ್ಯೆ 106
ಆಯತ್‌ಗೆ ಹೋಗಿ
ಕನ್ನಡ · Hamza
بِسْمِ ٱللَّهِ ٱلرَّحْمَٰنِ ٱلرَّحِيمِ

لِإِيلَٰفِ قُرَيۡشٍ

ಕುರೈಷರನ್ನು ಪರಿಚಿತಗೊಳಿಸುವುದಕ್ಕಾಗಿ.

Explanation & meanings · 1
  1. ಕುರೈಷ್ ಗೋತ್ರವು ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿತ್ತು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಗೋತ್ರದ ಬನೂ ಹಾಶಿಮ್ ಕುಟುಂಬದಲ್ಲಿ ಹುಟ್ಟಿದ್ದರು. ಕುರೈಷರು ಪವಿತ್ರ ಕಅಬಾಲಯದ ಪರಿಪಾಲಕರಾಗಿದ್ದರಿಂದ ಅರೇಬಿಯನ್ ಪರ್ಯಾಯ ದ್ವೀಪದ ಎಲ್ಲಾ ಗೋತ್ರಗಳು ಅವರನ್ನು ಗೌರವಿಸುತ್ತಿದ್ದವು. ಈ ಕಾರಣದಿಂದ ಅವರ ವ್ಯಾಪಾರ ಪ್ರಯಾಣಗಳು ಸುರಕ್ಷಿತವಾಗಿದ್ದವು. ವ್ಯಾಪಾರವು ಕುರೈಷರ ಪ್ರಮುಖ ವೃತ್ತಿಯಾಗಿದ್ದು ಅವರು ಬೇಸಿಗೆಗಾಲದಲ್ಲಿ ಶಾಮ್ (ಈಗಿನ ಸಿರಿಯಾ-ಜೋರ್ಡಾನ್-ಪ್ಯಾಲಸ್ತೀನ್) ಗೆ ಮತ್ತು ಚಳಿಗಾಲದಲ್ಲಿ ಯಮನ್‌ಗೆ ವ್ಯಾಪಾರ ನಿಮಿತ್ತ ಪ್ರಯಾಣ ಮಾಡುತ್ತಿದ್ದರು.

إِۦلَٰفِهِمۡ رِحۡلَةَ ٱلشِّتَآءِ وَٱلصَّيۡفِ

ಅಂದರೆ ಅವರಿಗೆ ಚಳಿ ಮತ್ತು ಬೇಸಿಗೆಯ ಪ್ರಯಾಣಗಳನ್ನು ಪರಿಚಿತಗೊಳಿಸುವುದಕ್ಕಾಗಿ.

فَلۡيَعۡبُدُواْ رَبَّ هَٰذَا ٱلۡبَيۡتِ

ಆದ್ದರಿಂದ ಅವರು ಈ ಭವನದ (ಕಅಬಾಲಯದ) ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಲಿ.

ٱلَّذِيٓ أَطۡعَمَهُم مِّن جُوعٖ وَءَامَنَهُم مِّنۡ خَوۡفِۭ

ಅವನು ಯಾರೆಂದರೆ ಅವರು ಹಸಿದಿರುವಾಗ ಅವರಿಗೆ ಆಹಾರವನ್ನು ಒದಗಿಸಿದವನು ಮತ್ತು ಅವರು ಭಯದಲ್ಲಿದ್ದಾಗ ಅವರಿಗೆ ನಿರ್ಭಯವನ್ನು ನೀಡಿದವನು.