Skip to content
يُونس /

ಆಯತ್ 87

10 : 87
يُونس ಆಯತ್‌ಗಳು 109
ಸೂರ · يُونس
ಕನ್ನಡ · Hamza
10 : 87

وَأَوۡحَيۡنَآ إِلَىٰ مُوسَىٰ وَأَخِيهِ أَن تَبَوَّءَا لِقَوۡمِكُمَا بِمِصۡرَ بُيُوتٗا وَٱجۡعَلُواْ بُيُوتَكُمۡ قِبۡلَةٗ وَأَقِيمُواْ ٱلصَّلَوٰةَۗ وَبَشِّرِ ٱلۡمُؤۡمِنِينَ

ಮೂಸಾ ಮತ್ತು ಅವರ ಸಹೋದರನಿಗೆ ನಾವು ದೇವವಾಣಿಯನ್ನು ನೀಡಿದೆವು: “ನೀವು ನಿಮ್ಮ ಜನರಿಗೆ ಈಜಿಪ್ಟಿನಲ್ಲಿ ವಾಸ್ತವ್ಯಗಳನ್ನು ಮಾಡಿಕೊಡಿ, ಮತ್ತು ನಿಮ್ಮ ಮನೆಗಳನ್ನು ಆರಾಧನಾಲಯಗಳಾಗಿ ಮಾಡಿ ನಮಾಝನ್ನು ಸಂಸ್ಥಾಪಿಸಿರಿ. ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ತಿಳಿಸಿ.”

Explanation & meanings · 1
  1. ನಿಮ್ಮ ಮನೆಗಳನ್ನು ನಮಾಝ್ ಮಾಡುವ ಸ್ಥಳಗಳನ್ನಾಗಿ ಮಾಡಿ ಮತ್ತು ಅವುಗಳನ್ನು ಬೈತುಲ್ ಮುಕದ್ದಸ್‌ನ ದಿಕ್ಕಿಗೆ ತಿರುಗಿಸಿ. ಹೀಗೆ ಮಾಡುವುದರಿಂದ ನಿಮಗೆ ಹೊರಗಿನ ಆರಾಧನಾಲಯಗಳಿಗೆ ಹೋಗಿ ನಮಾಝ್ ಮಾಡಬೇಕಾದ ಅಗತ್ಯ ಬರುವುದಿಲ್ಲ. ಹೊರಗೆ ಹೋದರೆ ಅಲ್ಲಿ ಫರೋಹನ ಜನರು ನಿಮ್ಮನ್ನು ಹಿಂಸಿಸುವ ಸಾಧ್ಯತೆಯಿದೆ.