عربي - Arabic English Qafár af - Afar Afrikaans - Afrikanns Akan Shqip - Albanian አማርኛ - Amharic Հայերեն - Armenian অসমীয়া - Assamese Azərbaycanca - Azerbaijani Bamanankan - Bambara Bassa Bemba বাংলা - Bengali Bosanski - Bosnian Български - Bulgarian မြန်မာဘာသာ - Burmese Bisaya - Cebuano Cham Нохчий - Chechen chiCheŵa - Chewa 中文 - Chinese Адыгэбзэ - Circassian Hrvatski - Croatian Česky - Czech Dagbani Dansk - Danish فارسی دری - Dari Dendi ދިވެހި ބަސް - Dhivehi Nederlands - Dutch إستوني - Estonian Suomi - Finnish Français - French Fulfulde - Fula ქართული - Georgian Deutsch - German Ελληνικά - Greek ગુજરાતી - Gujrati Kreyòl ayisyen - Haitian Creole Hausa हिन्दी - Hindi Magyar - Hungarian Igbo Indonesia - Indonesian Italiano - Italian 日本語 - Japanese Jóola - Jola ಕನ್ನಡ - Kannada Қазақша - Kazakh ភាសាខ្មែរ - Khmer Kikuyu Ikinyarwanda - Kinyarwanda Ikirundi - Kirundi 한국어 - Korean كوردی سۆرانی - kurdish كوردي kurmancî - Kurmanji Kyrgyz ລາວ - Lao latviešu - Latvian Lingala lietuvių - Lithuanian Luganda Македонски - Macedonian Maguindanaon Malagasy - Malagasy Bahasa Melayu - Malay മലയാളം - Malayalam Mandinka मराठी - Marathi Mõõré - Moore नेपाली - Nepali أنكو - NKo Norwegian ଓଡ଼ିଆ - Odia oromoo - Oromo پښتو - Pashto فارسی - Persian Polski - Polish Portuguese ਪੰਜਾਬੀ - Punjabi Română - Romanian Русский - Russian Српски - Serbian Shona සිංහල - Sinhala Slovenščina - Slovenian Soomaaliga - Somali Soninke Sesotho - Sotho Español - Spanish Kiswahili - Swahili Svenska - Swedish Tagalog Тоҷикӣ - Tajik தமிழ் - Tamil తెలుగు - Telugu ไทย - Thai ትግረኛ - Tigrinya Türkçe - Turkish Ukrainian اردو - Urdu ئۇيغۇرچە - Uyghur Ўзбек - Uzbek Việt Nam - Vietnamese Wolof Yao Yorùbá - Yoruba Zarma زولو - Zulu
839 ಹದೀಸ್ಗಳು
ಪ್ರವಾದಿ ವಚನಗಳ (ಹದೀಸ್) ವಿಶ್ವಕೋಶ
ವರ್ಗಗಳು
ಹದೀಸ್ನ ದರ್ಜೆ
ವರದಿಯಾದ ಗ್ರಂಥ
ವರದಿಗಾರ
ಎಲ್ಲಾ ವರದಿಗಾರರನ್ನು ತೋರಿಸಿ (234)
ಒಮ್ಮೆ ಉಫೈರ್ ಎಂಬ ಹೆಸರಿನ ಒಂದು ಕತ್ತೆಯ ಮೇಲೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂದೆ ಕುಳಿತು ಪ್ರಯಾಣ ಮಾಡುತ್ತಿದ್ದೆ. ಆಗ ಅವರು ಹೇಳಿದರು: "ಓ ಮುಆದ್! ದಾಸರ ಮೇಲಿರುವ ಅಲ್ಲಾಹನ ಹಕ್ಕು ಏನೆಂದು ಮತ್ತು ಅಲ್ಲಾಹನ ಮೇಲಿರುವ ದಾಸರ ಹಕ್ಕು ಏನೆಂದು ನಿನಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದಿರುವುದು ದಾಸರ ಮೇಲಿರುವ ಅಲ್ಲಾಹನ ಹಕ್ಕಾಗಿದೆ. ತನ್ನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದವರನ್ನು ಶಿಕ್ಷಿಸದಿರುವುದು ಅಲ್ಲಾಹನ ಮೇಲಿರುವ ದಾಸರ ಹಕ್ಕಾಗಿದೆ." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಜನರಿಗೆ ಈ ಸಿಹಿಸುದ್ದಿಯನ್ನು ತಿಳಿಸಲೇ?" ಅವರು ಉತ್ತರಿಸಿದರು: "ಬೇಡ, ಅವರಿಗೆ ಸಿಹಿ ಸುದ್ದಿ ತಿಳಿಸಬೇಡ. ಅವರು ಅದರ ಮೇಲೆ ಅವಲಂಬಿತರಾಗಬಹುದು."
ಸಹೀಹ್ ಬುಖಾರಿ ಮತ್ತು ಮುಸ್ಲಿಂ.
"ಖಂಡಿತವಾಗಿಯೂ ನೀನು ಒಂದು ಮಹತ್ತರವಾದ ವಿಷಯದ ಬಗ್ಗೆ ಕೇಳಿದ್ದೀಯಾ. ಖಂಡಿತವಾಗಿಯೂ ಅಲ್ಲಾಹು ಯಾರಿಗೆ ಅದನ್ನು ಸುಲಭಗೊಳಿಸುತ್ತಾನೋ ಅವನಿಗೆ ಅದು ಸುಲಭವಾಗಿದೆ: ನೀನು ಅಲ್ಲಾಹನನ್ನು ಆರಾಧಿಸು, ಅವನೊಂದಿಗೆ ಯಾವುದನ್ನೂ ಸಹಭಾಗಿಯಾಗಿ ಮಾಡಬೇಡ (ಶಿರ್ಕ್ ಮಾಡಬೇಡ). ನಮಾಝ್ ಅನ್ನು ಸಂಸ್ಥಾಪಿಸು. ಝಕಾತ್ ಅನ್ನು ನೀಡು. ರಮದಾನ್ನಲ್ಲಿ ಉಪವಾಸ ಆಚರಿಸು. ಮತ್ತು ಹಜ್ಜ್ ಮಾಡು". ನಂತರ ಅವರು ಹೇಳಿದರು: "ನಾನು ನಿನಗೆ ಒಳಿತಿನ ದ್ವಾರಗಳನ್ನು ತೋರಿಸಬೇಡವೇ? ಉಪವಾಸವು ಒಂದು ಗುರಾಣಿಯಾಗಿದೆ. ನೀರು ಬೆಂಕಿಯನ್ನು ನಂದಿಸುವಂತೆ, ಸದಕಾ (ದಾನ) ಪಾಪವನ್ನು ನಂದಿಸುತ್ತದೆ. ಒಬ್ಬ ವ್ಯಕ್ತಿ ರಾತ್ರಿಯ ಮಧ್ಯದಲ್ಲಿ ಮಾಡುವ ನಮಾಝ್". ನಂತರ ಅವರು (ಕುರ್ಆನ್ನ ಈ ವಚನವನ್ನು) ಪಠಿಸಿದರು: "ಅವರ ಪಾರ್ಶ್ವಗಳು ಹಾಸಿಗೆಗಳಿಂದ ದೂರವಿರುತ್ತವೆ..." [ಸೂರಃ ಅಸ್ಸಜ್ದಾ: 16] "...ಅವರು ಮಾಡುತ್ತಿದ್ದ (ಕಾರ್ಯಗಳಿಗಾಗಿ)." [ಸೂರಃ ಅಸ್ಸಜ್ದಾ: 17] ವರೆಗೆ. ನಂತರ ಅವರು ಹೇಳಿದರು: "ನಾನು ನಿನಗೆ ವಿಷಯದ ಶಿರಸ್ಸು, ಅದರ ಸ್ತಂಭ, ಮತ್ತು ಅದರ ಉನ್ನತ ಶಿಖರದ ಬಗ್ಗೆ ತಿಳಿಸಬೇಡವೇ?" ನಾನು ಹೇಳಿದೆನು: "ಖಂಡಿತವಾಗಿ, ಓ ಅಲ್ಲಾಹನ ಸಂದೇಶವಾಹಕರೇ!" ಅವರು ಹೇಳಿದರು: "ವಿಷಯದ ಶಿರಸ್ಸು ಇಸ್ಲಾಂ ಆಗಿದೆ, ಅದರ ಸ್ತಂಭವು ನಮಾಝ್ ಆಗಿದೆ, ಮತ್ತು ಅದರ ಉನ್ನತ ಶಿಖರವು ಜಿಹಾದ್ ಆಗಿದೆ". ನಂತರ ಅವರು ಹೇಳಿದರು: "ನಾನು ನಿನಗೆ ಅದೆಲ್ಲವನ್ನೂ ನಿಯಂತ್ರಿಸುವ ವಿಷಯದ ಬಗ್ಗೆ ತಿಳಿಸಬೇಡವೇ?" ನಾನು ಹೇಳಿದೆನು: "ಖಂಡಿತವಾಗಿ, ಓ ಅಲ್ಲಾಹನ ಸಂದೇಶವಾಹಕರೇ!" ಆಗ ಅವರು ತಮ್ಮ ನಾಲಿಗೆಯನ್ನು ಹಿಡಿದುಕೊಂಡು ಹೇಳಿದರು: "ಇದನ್ನು ನಿಯಂತ್ರಿಸು". ನಾನು ಹೇಳಿದೆನು: "ಓ ಅಲ್ಲಾಹನ ಪ್ರವಾದಿಯವರೇ! ನಾವು ಮಾತನಾಡಿದ ವಿಷಯಗಳಿಗಾಗಿ ನಮ್ಮನ್ನು ಶಿಕ್ಷಿಸಲಾಗುವುದೇ?" ಆಗ ಅವರು ಹೇಳಿದರು: "ನಿನ್ನ ತಾಯಿ ನಿನ್ನನ್ನು ಕಳೆದುಕೊಳ್ಳಲಿ (ಇದು ಅರಬ್ಬರ ಒಂದು ನುಡಿಗಟ್ಟು, ಅಕ್ಷರಶಃ ಅರ್ಥವಲ್ಲ)! ಜನರ ನಾಲಿಗೆಗಳ ಕೊಯ್ಲುಗಳಲ್ಲದೆ ಬೇರೆ ಯಾವುದಾದರೂ ಅವರನ್ನು ಅವರ ಮುಖಗಳ ಮೇಲೆ (ಅಥವಾ ಅವರು ಹೇಳಿದರು: ಅವರ ಮೂಗುಗಳ ಮೇಲೆ) ನರಕದಲ್ಲಿ ಕೆಡವುತ್ತದೆಯೇ?!"
ಸಹೀಹ್ ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕೈ ಹಿಡಿದು ಹೇಳಿದರು: "ಓ ಮುಆದ್, ಅಲ್ಲಾಹನಾಣೆ! ಖಂಡಿತವಾಗಿಯೂ ನಾನು ನಿನ್ನನ್ನು ಪ್ರೀತಿಸುತ್ತೇನೆ." ನಂತರ ಅವರು ಹೇಳಿದರು: "ಓ ಮುಆದ್, ನಾನು ನಿನಗೆ ಉಪದೇಶ ಮಾಡುತ್ತಿದ್ದೇನೆ. ಎಲ್ಲಾ ನಮಾಝ್ಗಳ ನಂತರ ಹೀಗೆ ಹೇಳುವುದನ್ನು ಬಿಟ್ಟುಬಿಡಬೇಡ: ಓ ಅಲ್ಲಾಹ್! ನಿನ್ನನ್ನು ಸ್ಮರಿಸಲು, ನಿನಗೆ ಕೃತಜ್ಞತೆ ಸಲ್ಲಿಸಲು ಮತ್ತು ಉತ್ತಮವಾದ ರೀತಿಯಲ್ಲಿ ನಿನ್ನ ಆರಾಧನೆ ಮಾಡಲು ನನಗೆ ಸಹಾಯ ಮಾಡು."
ಸಹೀಹ್ ಇದನ್ನು ಅಬೂದಾವೂದ್, ನಸಾಈ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು (ಮುಆದ್ ರನ್ನು) ಯಮನ್ಗೆ ಕಳುಹಿಸಿದಾಗ, ಹಸುಗಳ ಝಕಾತ್ ಆಗಿ, ಪ್ರತಿ ಮೂವತ್ತು ಹಸುಗಳಿಗೆ ಒಂದು ಗಂಡು ಅಥವಾ ಹೆಣ್ಣು ಕರುವನ್ನು (ಒಂದು ವರ್ಷ ಪ್ರಾಯದ್ದು), ಮತ್ತು ಪ್ರತಿ ನಲ್ವತ್ತು ಹಸುಗಳಿಗೆ ಒಂದು ಹಸುವನ್ನು (ಎರಡು ವರ್ಷ ಪ್ರಾಯದ್ದು) ತೆಗೆದುಕೊಳ್ಳಲು ಆದೇಶಿಸಿದರು. ಮತ್ತು (ತೆರಿಗೆಯ ವಿಷಯದಲ್ಲಿ) ಪ್ರತಿಯೊಬ್ಬ ಪ್ರೌಢಾವಸ್ಥೆಗೆ ತಲುಪಿದವನಿಂದ ಒಂದು ದೀನಾರ್, ಅಥವಾ ಅದಕ್ಕೆ ಸಮನಾದ ಮೌಲ್ಯದ ಯಮನ್ನ ಬಟ್ಟೆಯಾದ 'ಮಆಫಿರ್' ಅನ್ನು ತೆಗೆದುಕೊಳ್ಳಲು ಆದೇಶಿಸಿದರು.
ಇತರ ಸಾಕ್ಷಿ ಹದೀಸ್ಗಳ ಆಧಾರದಿಂದ ಸಹೀಹ್. ಇದನ್ನು ಅಬೂದಾವೂದ್, ತಿರ್ಮಿದಿ, ನಸಾಈ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.
ಒಮ್ಮೆ ನಾನು ಒಂದು ಯಾತ್ರೆಯಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆ. ಹೀಗಿರುವಾಗ, ಒಂದಿನ ಬೆಳಗ್ಗೆ ನಾನು ಅವರಿಗೆ ಸಮೀಪದಲ್ಲಿದ್ದು ಸವಾರಿ ಮಾಡುತ್ತಿದ್ದೆ. ಆಗ ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನ್ನನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವ ಮತ್ತು ನನ್ನನ್ನು ನರಕದಿಂದ ದೂರವಿರಿಸುವ ಒಂದು ಕರ್ಮದ ಬಗ್ಗೆ ತಿಳಿಸಿಕೊಡಿ." ಅವರು ಹೇಳಿದರು: "ನೀನು ನನ್ನೊಂದಿಗೆ ಬಹಳ ದೊಡ್ಡ ವಿಷಯವನ್ನೇ ಕೇಳಿರುವೆ. ಆದರೆ ಅಲ್ಲಾಹು ಯಾರಿಗೆ ಅದನ್ನು ಸುಲಭಗೊಳಿಸುತ್ತಾನೋ ಅವನಿಗೆ ಅದು ಸುಲಭವಾಗಿದೆ. ನೀನು ಅಲ್ಲಾಹನನ್ನು ಆರಾಧಿಸು ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡಬೇಡ, ನಮಾಝ್ ಸಂಸ್ಥಾಪಿಸು, ಝಕಾತ್ ನೀಡು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸು ಮತ್ತು ಅಲ್ಲಾಹನ ಭವನಕ್ಕೆ ಹಜ್ಜ್ ನಿರ್ವಹಿಸು." ನಂತರ ಅವರು ಕೇಳಿದರು: "ನಾನು ನಿನಗೆ ಒಳಿತಿನ ಬಾಗಿಲುಗಳ ಬಗ್ಗೆ ತಿಳಿಸಿಕೊಡಲೇ? ಉಪವಾಸವು ಗುರಾಣಿಯಾಗಿದೆ, ನೀರು ಬೆಂಕಿಯನ್ನು ನಂದಿಸುವಂತೆ ದಾನಧರ್ಮವು ಪಾಪಗಳನ್ನು ನಂದಿಸುತ್ತದೆ ಮತ್ತು ಮನುಷ್ಯನು ರಾತ್ರಿಯ ಅಂತ್ಯ ಯಾಮದಲ್ಲಿ ನಿರ್ವಹಿಸುವ ನಮಾಝ್." ನಂತರ ಅವರು: "ಅವರ ಪಾರ್ಶ್ವಗಳು ಹಾಸಿಗೆಗಳಿಂದ ದೂರವಾಗುತ್ತವೆ" ಎಂಬಲ್ಲಿಂದ ಕೊನೆಯವರೆಗೆ ಕುರ್ಆನ್ ವಚನವನ್ನು ಪಠಿಸಿದರು. ನಂತರ ಅವರು ಕೇಳಿದರು: "ನಾನು ನಿನಗೆ ಈ ಸಂಪೂರ್ಣ ವಿಷಯದ (ಧರ್ಮದ) ಶಿರೋಭಾಗ, ಸ್ತಂಭಗಳು ಮತ್ತು ಶಿಖರಾಗ್ರಗಳ ಬಗ್ಗೆ ತಿಳಿಸಿಕೊಡಲೇ?" ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ತಿಳಿಸಿಕೊಡಿ." ಅವರು ಹೇಳಿದರು: "ವಿಷಯದ (ಧರ್ಮದ) ಶಿರೋಭಾಗವು ಇಸ್ಲಾಂ, ಅದರ ಸ್ತಂಭಗಳು ನಮಾಝ್ ಮತ್ತು ಅವರ ಶಿಖರಾಗ್ರವು ಜಿಹಾದ್ ಆಗಿದೆ." ನಂತರ ಅವರು ಕೇಳಿದರು: "ನಾನು ನಿನಗೆ ಇವೆಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುವ ಒಂದರ ಬಗ್ಗೆ ತಿಳಿಸಿಕೊಡಲೇ?" ನಾನು ಹೇಳಿದೆ: "ಓ ಪ್ರವಾದಿಯವರೇ! ತಿಳಿಸಿಕೊಡಿ." ಆಗ ಅವರು ತಮ್ಮ ನಾಲಿಗೆಯನ್ನು ಹಿಡಿದು ಹೇಳಿದರು: "ಇದನ್ನು ನಿಯಂತ್ರಣದಲ್ಲಿಡು." ನಾನು ಕೇಳಿದೆ: "ಓ ಅಲ್ಲಾಹನ ಪ್ರವಾದಿಯವರೇ! ನಾವು ಹೇಳಿದ ಮಾತುಗಳ ಕಾರಣದಿಂದ ನಮ್ಮನ್ನು ಶಿಕ್ಷಿಸಲಾಗುವುದೇ?" ಅವರು ಉತ್ತರಿಸಿದರು: "ಓ ಮುಆದ್! ನಿನ್ನ ತಾಯಿ ನಿನ್ನನ್ನು ಕಳೆದುಕೊಳ್ಳಲಿ! ಮನುಷ್ಯರನ್ನು ಅವರ ಮುಖದ ಮೇಲೆ ಅಥವಾ ಅವರ ಮೂಗುಗಳ ಮೇಲೆ ನರಕದಲ್ಲಿ ಬೀಳಿಸುವುದು ಅವರ ನಾಲಗೆಯ ಕೊಯ್ಲುಗಳೇ ಹೊರತು ಬೇರೇನಾದರೂ ಆಗಿವೆಯೇ?"
ಎಲ್ಲಾ ವರದಿಗಳ ಆಧಾರದಿಂದ ಸಹೀಹ್. ಇದನ್ನು ತಿರ್ಮಿದಿ, ಇಬ್ನ್ ಮಾಜ ಮತ್ತು ಅಹ್ಮದ್ ವರದಿ ಮಾಡಿದ್ದಾರೆ.