6 : 38
وَمَا مِن دَآبَّةٖ فِي ٱلۡأَرۡضِ وَلَا طَٰٓئِرٖ يَطِيرُ بِجَنَاحَيۡهِ إِلَّآ أُمَمٌ أَمۡثَالُكُمۚ مَّا فَرَّطۡنَا فِي ٱلۡكِتَٰبِ مِن شَيۡءٖۚ ثُمَّ إِلَىٰ رَبِّهِمۡ يُحۡشَرُونَ
ಭೂಮಿಯಲ್ಲಿರುವ ಯಾವುದೇ ಜೀವಿಯಾಗಲಿ ಅಥವಾ (ಆಕಾಶದಲ್ಲಿ) ಎರಡು ರೆಕ್ಕೆಗಳಿಂದ ಹಾರಾಡುವ ಹಕ್ಕಿಗಳಾಗಲಿ, ಅವೆಲ್ಲವೂ ನಿಮ್ಮಂತಿರುವ ಸಮುದಾಯಗಳಾಗಿವೆ. ನಾವು ಗ್ರಂಥದಲ್ಲಿ ಏನನ್ನೂ ದಾಖಲಿಸದೆ ಬಿಟ್ಟಿಲ್ಲ. ನಂತರ ಅವರನ್ನು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಒಟ್ಟುಗೂಡಿಸಲಾಗುತ್ತದೆ.
Explanation & meanings · 1
- ಗ್ರಂಥದಲ್ಲಿ ಎಂದರೆ ಅಲ್ಲಾಹನ ಬಳಿಯಿರುವ ಲೌಹುಲ್ ಮಹ್ಫೂಝ್ (ಸುರಕ್ಷಿತ ಫಲಕ) ನಲ್ಲಿ. ಅದರಲ್ಲಿ ಎಲ್ಲಾ ಜೀವಿಗಳ ಸಂಪೂರ್ಣ ಮಾಹಿತಿಗಳನ್ನು ದಾಖಲಿಸಲಾಗಿದೆ.