Skip to content
المَائدة /

ಆಯತ್ 93

5 : 93

ಆಯತ್ 93 of المَائدة (5 : 93). This page carries the verse in the Uthmani script with a translation of its meaning, at a stable URL that can be cited on its own.

المَائدة ಆಯತ್‌ಗಳು 120
ಸೂರ · المَائدة
ಕನ್ನಡ · Hamza
5 : 93

لَيۡسَ عَلَى ٱلَّذِينَ ءَامَنُواْ وَعَمِلُواْ ٱلصَّٰلِحَٰتِ جُنَاحٞ فِيمَا طَعِمُوٓاْ إِذَا مَا ٱتَّقَواْ وَّءَامَنُواْ وَعَمِلُواْ ٱلصَّٰلِحَٰتِ ثُمَّ ٱتَّقَواْ وَّءَامَنُواْ ثُمَّ ٱتَّقَواْ وَّأَحۡسَنُواْۚ وَٱللَّهُ يُحِبُّ ٱلۡمُحۡسِنِينَ

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಈ ಹಿಂದೆ ಏನು ಸೇವಿಸಿದ್ದಾರೋ ಅದರಲ್ಲಿ ಅವರಿಗೆ ದೋಷವಿಲ್ಲ—ಅವರು ಅಲ್ಲಾಹನನ್ನು ಭಯಪಟ್ಟು, ವಿಶ್ವಾಸವಿಟ್ಟು, ಸತ್ಕರ್ಮವೆಸಗಿದರೆ, ನಂತರ ಪುನಃ ಅಲ್ಲಾಹನನ್ನು ಭಯಪಟ್ಟು ವಿಶ್ವಾಸವಿಟ್ಟರೆ ಮತ್ತು ನಂತರ ಪುನಃ ಅಲ್ಲಾಹನನ್ನು ಭಯಪಟ್ಟು ಒಳಿತು ಮಾಡಿದರೆ. ಒಳಿತು ಮಾಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.

Explanation & meanings · 1
  1. ಇಸ್ಲಾಮ್ ಮದ್ಯಪಾನವನ್ನು ಹಂತ ಹಂತವಾಗಿ ನಿಷೇಧಿಸಿತು. ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಮೊದಲು ಅದರ ಹಾನಿಗಳ ಬಗ್ಗೆ ಎಚ್ಚರಿಸಲಾಯಿತು. ಪಾನಮತ್ತರಾದ ಸ್ಥಿತಿಯಲ್ಲಿ ನಮಾಝ್ ಮಾಡುವುದನ್ನು ವಿರೋಧಿಸಲಾಯಿತು. ಇನ್ನಾದರೂ ನೀವು ಅದನ್ನು ನಿಲ್ಲಿಸುವಿರಾ ಎಂಬ ವಚನದ (91) ಮೂಲಕ ಸಂಪೂರ್ಣ ಪಾನನಿಷೇಧ ಜಾರಿಗೆ ಬಂತು. ಪಾನನಿಷೇಧ ಸಂಪೂರ್ಣ ಜಾರಿಯಾಗುವ ಮೊದಲು ಮದ್ಯಪಾನ ಮಾಡಿದವರಿಗೆ ಶಿಕ್ಷೆಯಿಲ್ಲ ಎಂದು ಈ ವಚನವು ಸ್ಪಷ್ಟಪಡಿಸುತ್ತದೆ.