Skip to content
المَائدة /

ಆಯತ್ 47

5 : 47

ಆಯತ್ 47 of المَائدة (5 : 47). This page carries the verse in the Uthmani script with a translation of its meaning, at a stable URL that can be cited on its own.

المَائدة ಆಯತ್‌ಗಳು 120
ಸೂರ · المَائدة
ಕನ್ನಡ · Hamza
5 : 47

وَلۡيَحۡكُمۡ أَهۡلُ ٱلۡإِنجِيلِ بِمَآ أَنزَلَ ٱللَّهُ فِيهِۚ وَمَن لَّمۡ يَحۡكُم بِمَآ أَنزَلَ ٱللَّهُ فَأُوْلَٰٓئِكَ هُمُ ٱلۡفَٰسِقُونَ

ಇಂಜೀಲ್‍ನ ಅನುಯಾಯಿಗಳು ಅಲ್ಲಾಹು ಅದರಲ್ಲಿ ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ತೀರ್ಪು ನೀಡಲಿ. ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ದುಷ್ಕರ್ಮಿಗಳು.

Explanation & meanings · 1
  1. ಈಸಾರ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿತ್ವದ ಅವಧಿಯು ಊರ್ಜಿತದಲ್ಲಿದ್ದ ಕಾಲದಲ್ಲಿ ಅವರ ಅನುಯಾಯಿಗಳು ಇಂಜೀಲ್‌ನಲ್ಲಿರುವ ನಿಯಮಗಳ ಪ್ರಕಾರ ತೀರ್ಪು ನೀಡಬೇಕಾಗಿತ್ತು. ಆದರೆ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಪ್ರವಾದಿಯಾದಾಗ ಈಸಾರ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿತ್ವ ಮುಗಿಯುತ್ತದೆ ಮತ್ತು ಇಂಜೀಲ್‌ನ ನಿಯಮಗಳು ರದ್ದಾಗುತ್ತವೆ. ನಂತರ ಅವರ ಅನುಯಾಯಿಗಳು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೆ ಅವತೀರ್ಣವಾದ ಕುರ್‌ಆನ್ ಪ್ರಕಾರ ತೀರ್ಪು ನೀಡಬೇಕಾಗಿದೆ.